ಸ್ವರ್ಗದಂತಹ ಈ ಸುಂದರ ಸ್ಥಳದಲ್ಲಿ ಹುಟ್ಟೋದು, ಸಾಯೋದು ಎರಡೂ ಕಾನೂನು ಬಾಹಿರ!

First Published | Feb 14, 2024, 5:39 PM IST

ಇವತ್ತೊಂದು ವಿಶೇಷ ಸ್ಥಳದ ಬಗ್ಗೆ ಹೇಳ್ತೀವಿ. ಈ ತಾಣವು ತುಂಬಾ ಸುಂದರವಾಗಿದೆ, ಈ ತಾಣವು ಖಂಡಿತವಾಗಿಯೂ ಸ್ವರ್ಗಕ್ಕಿಂತ ಕಡಿಮೆ ಇಲ್ಲ ಅನ್ನಬಹುದೇನೋ. ಆದರೆ ಇಂತಹ ಸುಂದರ ತಾಣದಲ್ಲಿ ವಾಸಿಸುವುದು ಮಾತ್ರ ಸುಲಭವಲ್ಲ ಏಕೆಂದರೆ ಈ ಸ್ಥಳದಲ್ಲಿ ನಿಮಗೆ ಅರ್ಥವಾಗದ ಕೆಲವು ಕಾನೂನುಗಳಿವೆ.

ಜಗತ್ತಿನಲ್ಲಿ ತಿರುಗಾಡಲು ಸಾಕಷ್ಟು ತಾಣಗಳು ಇವೆ, ಆದರೆ ಎಲ್ಲರಿಗೂ ಇಡೀ ಜಗತ್ತನ್ನು ಸುತ್ತಲು ಸಾಕಷ್ಟು ಸಮಯ ಅಥವಾ ಸಾಕಷ್ಟು ಹಣ ಇರೋದೆ ಇಲ್ಲ. ನಾವು ನಿಮಗೆ ಕೆಲವು ವಿಶಿಷ್ಟ ಸ್ಥಳಗಳ ಬಗ್ಗೆ  ಹೇಳುತ್ತಲೇ ಇರುತ್ತೇವೆ, ಅಲ್ಲಿ ಹೋಗುವುದು ಅಷ್ಟು ಸುಲಭವಲ್ಲ, ಆದರೆ ಈ ಸ್ಥಳಗಳ ಬಗ್ಗೆ ತಿಳಿದುಕೊಳ್ಳೋದು ಮಾತ್ರ ತುಂಬಾನೆ ಇಂಟರೆಸ್ಟಿಂಗ್ ಆಗಿರುತ್ತೆ. ಅಂತಹ ಒಂದು ದ್ವೀಪವಿದೆ, ಅಲ್ಲಿ ಮನುಷ್ಯನ ಸಾವು ಮತ್ತು ಜನನ ಎರಡೂ ಕಾನೂನುಬಾಹಿರವಾಗಿದೆ.

ಹೌದು ಅಂತಹುದು ಒಂದು ತಾಣ ನಮ್ಮ ಭೂಮಿ ಮೇಲಿದೆ. ಈ ಸ್ಥಳವು ತುಂಬಾ ಸುಂದರವಾಗಿದೆ, ನೀವು ಇದನ್ನು ಭೂಮಿ ಮೇಲಿನ ಸ್ವರ್ಗ (heaven on earth) ಅಂತಾನೆ ಕರಿಯಬಹುದು. ಒಮ್ಮೆ ನೋಡಿದರೆ ಮತ್ತೆ ಮತ್ತೆ ನೋಡುವಂತಹ ಅದ್ಭುತ ಸೌಂದರ್ಯದಿಂದಲೇ ಈ ನಾಡು ಕೂಡಿದೆ. ಆದರೆ, ಇಲ್ಲಿ ವಾಸಿಸುವುದು ಸುಲಭವಲ್ಲ . 

Tap to resize

ಅಂತಹ ಸುಂದರವಾದ, ಅದ್ಭುತವಾದ ನಾಡಿನಲ್ಲಿ ಯಾಕೆ ವಾಸಿಸೋದು ಸುಲಭ ಅಲ್ಲ ಅಂದ್ರೆ, ಈ ಸ್ಥಳದಲ್ಲಿ ನಿಮಗೆ ಅರ್ಥವಾಗದ ಕೆಲವು ಕಾನೂನುಗಳಿವೆ. ಡೈಲಿ ಸ್ಟಾರ್ ವರದಿಯ ಪ್ರಕಾರ, ಸ್ವಾಲ್ಬಾರ್ಡ್ ಎಂಬ ದ್ವೀಪವಿದೆ, ಅಲ್ಲಿ ಮನುಷ್ಯರಿಗಿಂತ ಹೆಚ್ಚು ಹಿಮಕರಡಿಗಳು ವಾಸಿಸುತ್ತವೆ ಮತ್ತು ಇಲ್ಲಿ ವಾಸಿಸುವ ವ್ಯವಸ್ಥೆಯ ಬಗ್ಗೆ ಕೇಳಿದ್ರೆ ಶಾಕ್ ಆಗೋದು ಖಚಿತ. 

ಸಾಯುವುದು ಮತ್ತು ಮಕ್ಕಳನ್ನು ಹೊಂದುವುದು ಇಲ್ಲಿ ಕಾನೂನುಬಾಹಿರ: ಸ್ವಾಲ್ಬಾರ್ಡ್ ನಾರ್ವೇಜಿಯನ್ (Svalbard Norwegian) ದ್ವೀಪವಾಗಿದ್ದು, ಇದು ಆರ್ಕ್ಟಿಕ್ ಮಹಾಸಾಗರದ ಪ್ರದೇಶದಲ್ಲಿ ಬರುತ್ತದೆ. ವೀಸಾ ಇಲ್ಲದೆ ಭೇಟಿ ನೀಡಬಹುದಾದ ವಿಶ್ವದ ಕೆಲವೇ ಸ್ಥಳಗಳಲ್ಲಿ ಇದು ಒಂದಾಗಿದೆ. ಆದಾಗ್ಯೂ, ಇಲ್ಲಿಗೆ ಬಂದ ನಂತರ, ನೀವು ಇಲ್ಲಿ ನಿಯಮಗಳು ಮತ್ತು ನಿಬಂಧನೆಗಳನ್ನು ಅನುಸರಿಸಬೇಕು. 

ಈ ಪ್ರದೇಶ ವಿಚಿತ್ರ ಕಾನೂನುಗಳನ್ನು ಜನರು ಪಾಲಿಸಲೇಬೇಕು. ಮುಖ್ಯವಾಗಿ ಜನರು ಇಲ್ಲಿ ಸಾಯುವುದು ಕಾನೂನುಬಾಹಿರ (prohibited) ಏಕೆಂದರೆ ಅವರನ್ನು ಸಮಾಧಿ ಮಾಡಲು ಇಲ್ಲಿ ಸಾಧ್ಯವಿಲ್ಲ. ಕಾರಣ ಇಲ್ಲಿನ ಶೀತ, ಇದು ದೇಹವನ್ನು ಕೊಳೆಯಲು ಬಿಡುವುದಿಲ್ಲ. ಎರಡನೆಯದಾಗಿ, ಇಲ್ಲಿ ಜನ್ಮ ನೀಡುವುದು ಸಹ ಕಾನೂನುಬಾಹಿರವಾಗಿದೆ ಮತ್ತು ಮಹಿಳೆ ಗರ್ಭಿಣಿಯಾಗಿದ್ದರೆ, ಅವಳು ಹೆರಿಗೆಗೆ ಮೊದಲು ಆ ಜಾಗದಿಂದ ಬೇರೆ ಜಾಗಕ್ಕೆ ಹೊರಡಬೇಕು. 

ಇನ್ನು ಇಲ್ಲಿ ಮದ್ಯಪಾನ ಮಾಡಲು ಸಹ ಕಠಿಣ ನಿಯಮಗಳಿವೆ. ಇಲ್ಲಿನ ಪರಿಸರ ಸಚಿವರ ಪ್ರಕಾರ, ಈ ಪ್ರದೇಶವನ್ನು ಸುರಕ್ಷಿತವಾಗಿಡಲು ಇದು ಅವಶ್ಯಕ. ಹಾಗಾಗಿ ಮದ್ಯಪಾನ ಮಾಡಲು ಎಲ್ಲಾ ಕಾನೂನು ನಿಯಮಗಳನ್ನು ಪಾಲಿಸಲೇಬೇಕಾಗುತ್ತದೆ. 

ಮನುಷ್ಯರಿಗಿಂತ ಹೆಚ್ಚು ಕರಡಿಗಳಿವೆ: ಈ ಸ್ಥಳದಲ್ಲಿ ಒಟ್ಟು 2500 ಜನರು ವಾಸಿಸುತ್ತಿದ್ದಾರೆ, ಆದರೆ ಜನರಿಗಿಂತ ಹೆಚ್ಚು ಹಿಮಕರಡಿಗಳು (polar bear) ಇಲ್ಲಿವೆ. ಒಟ್ಟು 3000 ಪೋಲಾರ್ ಬಿಯರ್ಗಳಿರುವ ಈ ಸ್ಥಳದಿಂದ ಹೊರಬರಲು ಬಯಸಿದರೆ, ನೀವು ನಿಮ್ಮ ಕೈಯಲ್ಲಿ ಬಂದೂಕನ್ನು ಒಯ್ಯಲೇಬೇಕು. ಡ್ರೋನ್ಗಳು ಮತ್ತು ಸ್ನೋಮೊಬೈಲ್ಗಳನ್ನು ಸಹ ಇಲ್ಲಿ ನಿಷೇಧಿಸಲಾಗಿದೆ. ಬೆಕ್ಕುಗಳನ್ನು ಇಲ್ಲಿ ನಿಷೇಧಿಸಲಾಗಿದೆ ಏಕೆಂದರೆ ಅವು ಸೋಂಕುಗಳನ್ನು ಹರಡಬಹುದು. ಇದರ ಹೊರತಾಗಿಯೂ, ಈ ಸ್ಥಳವು ತುಂಬಾ ಸುಂದರವಾಗಿದೆ.

Latest Videos

click me!