Rashmika & Vijay Deverakonda Honeymoon: Top 7 Destinations List ಹಲವು ವರ್ಷಗಳ ಡೇಟಿಂಗ್ ನಂತರ ಹಸೆಮಣೆ ಏರಿರುವ ರಶ್ಮಿಕಾ ಮತ್ತು ವಿಜಯ್ ಜೋಡಿ, ತಮ್ಮ ಹನಿಮೂನ್‌ಗೆ ಯಾವ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಬಹುದು ಎಂಬ ಕುತೂಹಲ ಎಲ್ಲರಲ್ಲಿದೆ.
ಹಲವು ವರ್ಷಗಳ ಡೇಟಿಂಗ್ ನಂತರ ರಶ್ಮಿಕಾ ಮತ್ತು ವಿಜಯ್ ಹಸೆಮಣೆ ಏರಿದ್ದಾರೆ. ಪ್ರಯಾಣ ಮತ್ತು ವಿಭಿನ್ನ ಸಂಸ್ಕೃತಿಗಳನ್ನು ಅನ್ವೇಷಿಸುವ ಹವ್ಯಾಸ ಹೊಂದಿರುವ ಈ ಜೋಡಿ ಹನಿಮೂನ್‌ಗೆ ಯಾವ ಸ್ಥಳಕ್ಕೆ ಹೋಗಬಹುದು ಅನ್ನೋ ಚರ್ಚೆ ಶುರುವಾಗಿದೆ.ಇವರಿಬ್ಬರ ಆಸಕ್ತಿಯ ಪ್ರಕಾರ, ಇಲ್ಲಿರುವ ಏಳು ಸ್ಥಳಗಳ ಪೈಕಿ ಯಾವುದಾದರೂ ಒಂದು ಸ್ಥಳಕ್ಕೆ ಹನಿಮೂನ್‌ಗೆ ಹೋಗುವ ಸಾಧ್ಯತೆ ಇದೆ.
28
ದಕ್ಷಿಣ ಕೊರಿಯಾ (South Korea)
ರಶ್ಮಿಕಾ ಮಂದಣ್ಣ ಅವರಿಗೆ ದಕ್ಷಿಣ ಕೊರಿಯಾ ಎಂದರೆ ಎಲ್ಲಿಲ್ಲದ ಪ್ರೀತಿ. ಭಾರತದಲ್ಲಿ 'ಕೊರಿಯನ್ ಹಾರ್ಟ್' ಸಿಂಬಲ್ ಜನಪ್ರಿಯಗೊಳಿಸಿದ ಕೀರ್ತಿಯೂ ಅವರಿಗಿದೆ. ರಶ್ಮಿಕಾ ಅವರ ಬಕೆಟ್ ಲಿಸ್ಟ್‌ನಲ್ಲಿರುವ ಪ್ರಮುಖ ನಗರಗಳಲ್ಲಿ ಕೊರಿಯಾದ ರಾಜಧಾನಿ ಸೋಲ್ (Seoul) ಕೂಡ ಒಂದು.
38
ಜಪಾನ್ (Japan)
ರಶ್ಮಿಕಾ ಅವರಿಗೆ ಜಪಾನ್ ಸಂಸ್ಕೃತಿ ಮತ್ತು ಅಲ್ಲಿನ ಆ್ಯನಿಮೆ (Anime) ಎಂದರೆ ಅತೀವ ವ್ಯಾಮೋಹ. ಆ್ಯನಿಮೆ ಮೇಲಿನ ಪ್ರೀತಿಯಿಂದಾಗಿ ಅವರು 'ಕ್ರಂಚಿರೋಲ್' (Crunchyroll) ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ನ ರಾಯಭಾರಿಯೂ ಆಗಿದ್ದಾರೆ. ಹೀಗಾಗಿ ಜಪಾನ್ ಕೂಡ ಅವರ ಹನಿಮೂನ್ ಪಟ್ಟಿಯಲ್ಲಿರಬಹುದು.
ಇಂಡೋನೇಷ್ಯಾದ ಬಾಲಿ ದ್ವೀಪವು ರಶ್ಮಿಕಾ ಅವರ ಮನಗೆದ್ದಿರುವ ಮತ್ತೊಂದು ತಾಣ. ಅಲ್ಲಿನ ಸುಂದರ ಸಮುದ್ರ ತೀರಗಳು ಮತ್ತು ಪ್ರಕೃತಿ ಸೌಂದರ್ಯವು ಈ ಜೋಡಿಯನ್ನು ಆಕರ್ಷಿಸಬಹುದು.
58
ದುಬೈ (Dubai)
ದಂಪತಿಗಳಿಗೆ ಅತ್ಯಂತ ಪ್ರಿಯವಾದ ಪ್ರವಾಸಿ ತಾಣ ದುಬೈ. ಸುಂದರ ಸಮುದ್ರ ತೀರಗಳಿಂದ ಹಿಡಿದು ಮರುಭೂಮಿಯ ಸಫಾರಿವರೆಗೆ ದುಬೈನಲ್ಲಿ ನೋಡುವುದು ಸಾಕಷ್ಟು ಇದೆ.
68
ಪ್ಯಾರಿಸ್ (Paris)
ಪ್ಯಾರಿಸ್ ಅನ್ನು 'ಪ್ರೀತಿಯ ನಗರ' (City of Love) ಎಂದೇ ಕರೆಯಲಾಗುತ್ತದೆ. ಅಲ್ಲಿನ ಕಲೆ, ಸಂಸ್ಕೃತಿ ಮತ್ತು ಬೇಕರಿ ಉತ್ಪನ್ನಗಳ ಬಗ್ಗೆ ರಶ್ಮಿಕಾ ಈ ಹಿಂದೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಹೀಗಾಗಿ ಹನಿಮೂನ್‌ಗೆ ಪ್ಯಾರಿಸ್ ಕೂಡ ಉತ್ತಮ ಆಯ್ಕೆ.
78
ಇಟಲಿ (Italy)
ವರದಿಗಳ ಪ್ರಕಾರ, ರಶ್ಮಿಕಾ ಮತ್ತು ವಿಜಯ್ ಅವರು ತಮ್ಮ ಸ್ನೇಹಿತರೊಂದಿಗೆ 2026ರ ಹೊಸ ವರ್ಷವನ್ನು ಆಚರಿಸಲು ಇಟಲಿಗೆ ಭೇಟಿ ನೀಡಿದ್ದರು. ಆ ಸುಂದರ ನೆನಪುಗಳ ಕಾರಣಕ್ಕಾಗಿ ಅವರು ಮತ್ತೊಮ್ಮೆ ಅಲ್ಲಿಗೆ ಹೋಗುವ ಸಾಧ್ಯತೆಯಿದೆ.
88
ಸೆಶೆಲ್ಸ್ (Seychelles)
ಆಫ್ರಿಕಾದ ಅತಿ ಸಣ್ಣ ದೇಶವಾದ ಸೆಶೆಲ್ಸ್ 115 ಸುಂದರ ದ್ವೀಪಗಳನ್ನು ಹೊಂದಿದೆ. ಇದು ನವಜೋಡಿಗಳಿಗೆ ಅತ್ಯಂತ ಖಾಸಗಿ ಮತ್ತು ಪ್ರಶಾಂತ ವಾತಾವರಣವನ್ನು ಒದಗಿಸುವ ಕಾರಣದಿಂದ ಅನೇಕ ಸೆಲೆಬ್ರಿಟಿಗಳ ಮೊದಲ ಆಯ್ಕೆಯಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.