ರೈಲು ಪ್ರಯಾಣಿಕರ ಗಮನಕ್ಕೆ: ಬೆಂಗಳೂರು, ಹುಬ್ಬಳ್ಳಿ ಸೇರಿ ಕೆಲ ಜಿಲ್ಲೆಗಳ ರೈಲು ರದ್ದು, ಸಂಚಾರ ಬದಲು

Published : May 14, 2026, 06:55 PM IST

ರೈಲು ಮಾರ್ಗದ ಕಾಮಗಾರಿಯಿಂದಾಗಿ, ವಿಜಯಪುರ-ಹುಬ್ಬಳ್ಳಿ ವಿಶೇಷ ರೈಲು, ಪಂಚಗಂಗಾ ಎಕ್ಸ್‌ಪ್ರೆಸ್ ಮತ್ತು ಮುರುಡೇಶ್ವರ-ಬೆಂಗಳೂರು ಎಕ್ಸ್‌ಪ್ರೆಸ್ ಸೇರಿದಂತೆ ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಕೆಲವು ರೈಲುಗಳನ್ನು ಭಾಗಶಃ ರದ್ದುಪಡಿಸಲಾಗಿದೆ. ಡಿಟೇಲ್ಸ್​ ಇಲ್ಲಿದೆ.

PREV
15
ವಿಜಯಪುರ–SSS ಹುಬ್ಬಳ್ಳಿ ವಿಶೇಷ ರೈಲು

ರೈಲು ಮಾರ್ಗದಲ್ಲಿ ಕಾಮಗಾರಿ ಹಿನ್ನೆಲೆಯಲ್ಲಿ ಕೆಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಕೆಲವು ರೈಲುಗಳನ್ನು ರದ್ದು ಮಾಡಲಾಗಿದೆ. ಅದರ ಡಿಟೇಲ್ಸ್​ ಇಲ್ಲಿ ನೀಡಲಾಗಿದೆ. ರೈಲು ಸಂಖ್ಯೆ 66502 ವಿಜಯಪುರ–SSS ಹುಬ್ಬಳ್ಳಿ ವಿಶೇಷ ರೈಲು ನಾಳೆ ಅಂದರೆ 15 ಮೇ 2026ರಂದು ವಿಜಯಪುರ (BJP)–ಕುಡಗಿ (KDGI )ನಡುವೆ ಭಾಗಶಃ ರದ್ದುಪಡಿಸಲಾಗುತ್ತದೆ ಹಾಗೂ ಇದು ವಿಜಯಪುರ ಬದಲಿಗೆ ಕುಡಗಿ ನಿಂದ (KDGI) ನಿಗದಿತ ವೇಳೆಗೆ ಪ್ರಾರಂಭವಾಗುತ್ತದೆ.

25
ಪಂಚಗಂಗಾ ಎಕ್ಸ್‌ಪ್ರೆಸ್ ರೈಲು

ಜುಲೈ 31 ರಿಂದ ಆಗಸ್ಟ್ 2 ರವರೆಗೆ ಬೆಂಗಳುರಿನ ಕೆಎಸ್‌ಆರ್ ರೈಲು ನಿಲ್ದಾಣಗಳಿಗೆ ಬರುವ ರೈಲುಗಳು ರದ್ದಾಗಿವೆ. ಕಾರವಾರ-ಕೆಎಸ್‌ಆರ್ ಬೆಂಗಳೂರು ಪಂಚಗಂಗಾ ಎಕ್ಸ್‌ಪ್ರೆಸ್ ರೈಲು (16596) ಜುಲೈ 31 ರಿಂದ ಆಗಸ್ಟ್ 2 ರವರೆಗೆ ( ಯಶವಂತಪುರದಲ್ಲಿಯೇ ತನ್ನ ಸಂಚಾರ ಕೊನೆಗೊಳಿಸುತ್ತದೆ. ಜೊತೆಗೆ ಇದೇ ಅವಧಿಯಲ್ಲಿ, ಯಶವಂತಪುರ ಮತ್ತು ಕೆಎಸ್‌ಆರ್ ಬೆಂಗಳೂರು ನಡುವಿನ ಇದರ ಸೇವೆ ಸಂಪೂರ್ಣವಾಗಿ ರದ್ದಾಗಲಿದೆ.

35
ಯಶವಂತಪುರದಿಂದ ಪ್ರಯಾಣ

ಕೆಎಸ್‌ಆರ್ ಬೆಂಗಳೂರು-ಕಾರವಾರ ಪಂಚಗಂಗಾ ಎಕ್ಸ್‌ಪ್ರೆಸ್ ರೈಲು (16595) ಆಗಸ್ಟ್ 1 ರಿಂದ ಆಗಸ್ಟ್ 3 ರವರೆಗೆ ಯಶವಂತಪುರದಿಂದಲೇ ತನ್ನ ಪ್ರಯಾಣವನ್ನು ಆರಂಭಿಸಲಿದೆ. ಈ ರೈಲು ಕೆಎಸ್‌ಆರ್ ಬೆಂಗಳೂರು ಮತ್ತು ಯಶವಂತಪುರ ನಡುವಿನ ತನ್ನ ಸಂಚಾರ ರದ್ದಾಗಿದೆ.

45
ರೈಲು ಮಾರ್ಗ ಬದಲಾವಣೆ

ಮುರಡೇಶ್ವರ -ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು (ಎಸ್‌ಎಂವಿಟಿಬಿ)-ಮುರ್ಡೇಶ್ವರ ಎಕ್ಸ್‌ಪ್ರೆಸ್‌ಗಳ ರೈಲುಗಳ ಸಂಚಾರ ಮಾರ್ಗದಲ್ಲಿಯೂ ಬದಲಾವಣೆ ಆಗಿದೆ. ಮುರಡೇಶ್ವರ-ಎಸ್‌ಎಂವಿಟಿಬಿ ಬೆಂಗಳೂರು ಎಕ್ಸ್‌ಪ್ರೆಸ್ ರೈಲು (16586) ಜುಲೈ 16 ಮತ್ತು 17 ರಂದು ಹಾಗೂ ಎಸ್‌ಎಂವಿಟಿಬಿ ಬೆಂಗಳೂರು-ಮುರಡೇಶ್ವರ ಎಕ್ಸ್‌ಪ್ರೆಸ್ ಜುಲೈ 17 ರಿಂದ ಜುಲೈ 19 ರವರೆಗೆ ಯಶವಂತಪುರ-ಹೆಬ್ಬಾಳ-ಬಾಣಸವಾಡಿ ಮೂಲಕ ಚಲಿಸುತ್ತದೆ. ಈ ರೈಲುಗಳು ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣದಲ್ಲಿ ನಿಲುಗಡೆಯನ್ನು ರದ್ದುಪಡಿಸಲಾಗಿದೆ.

55
ರೈಲು ಸಂಚಾರ 60 ನಿಮಿಷ ವಿಳಂಬ

ಇನ್ನೂ ಆಗಸ್ಟ್ 3 ರಂದು ಮುರಡೇಶ್ವರದಿಂದ ಹೊರಡುವ ಮುರಡೇಶ್ವರ-ಎಸ್‌ಎಂವಿಟಿಬಿ ಬೆಂಗಳೂರು ಎಕ್ಸ್‌ಪ್ರೆಸ್‌ನ ರೈಲು (16586) ಪ್ರಯಾಣದ ಸಮಯವನ್ನು ಒಂದು ಗಂಟೆ ನಿಯಂತ್ರಿಸಲಾಗುತ್ತದೆ. ಅಂದರೆ ಈ ರೈಲು ನಿಗದಿತ ಸಮಯಕ್ಕಿಂತ ಒಂದು ಗಂಟೆ ತಡವಾಗಿ ನಿಲ್ದಾಣದಿಂದ ಹೊರಡುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories