ಮೌಂಟ್ ಕಿಲಿಮಂಜಾರೊ:
ಮೌಂಟ್ ಕಿಲಿಮಂಜಾರೊ ಆಫ್ರಿಕಾದ ಅತಿ ಎತ್ತರದ (5,895 ಮೀ) ಪರ್ವತ. ಹಿಮದಿಂದ ಆವೃತವಾದ ಶಿಖರ ಮತ್ತು ಮಳೆಕಾಡುಗಳಿಂದ ಹಿಮನದಿಗಳವರೆಗಿನ ವೈವಿಧ್ಯಮಯ ಪರಿಸರಕ್ಕೆ ಫೇಮಸ್ ಇದು.
ಮೌಂಟ್ ಎವರೆಸ್ಟ್:
ಭೂಮಿಯ ಅತಿ ಎತ್ತರದ (8, 848ಮೀ) ಶಿಖರ ಎವರೆಸ್ಟ್. ಈ ಪರ್ವತವು ಅತಿ ಎತ್ತರದ ಕಠಿಣ ಹವಾಮಾನ ಮತ್ತು ತಾಂತ್ರಿಕ ಮಾರ್ಗಗಳೊಂದಿಗೆ ಪರ್ವತಾರೋಹಿಗಳಿಗೆ ರೋಮಾಂಚನ ಎನಿಸುವ ಅನುಭವ ನೀಡುತ್ತದೆ. ಎವರೆಸ್ಟ್ ನೇಪಾಳ/ ಟಿಬೆಟ್‌ನಲ್ಲಿದೆ.
ಮೌಂಟ್ ಪ್ಯೂಜಿ:
ಜಪಾನ್‌ನ ಐಕಾನಿಕ್ ಜ್ವಾಲಾಮುಖಿ (3,776 ಮೀ) ಮೌಂಟ್ ಫ್ಯೂಜಿ. ಅದರ ಶಿಖರ ಕೋನಾಕಾರದಲ್ಲಿದೆ. ಇದು ಸಾಂಸ್ಕೃತಿಕ ಪ್ರಾಮುಖ್ಯತೆಗಾಗಿ ಹೆಚ್ಚು ಗೌರವಿಸಲ್ಪಟ್ಟಿದೆ. ಜುಲೈನಿಂದ ಸೆಪ್ಟೆಂಬರ್ ಅವಧಿಯು ಇಲ್ಲಿ ಟ್ರೆಕ್ಕಿಂಗ್ ಮಾಡಲು ಬೆಸ್ಟ್ ಟೈಮ್.
ಮೌಂಟ್ ರೈನಿಯರ್:
ಮೌಂಟ್ ರೈನಿಯರ್ (4,392m) USA ವಾಷಿಂಗ್ಟನ್‌ನಲ್ಲಿ ಪ್ರಮುಖವಾದದ್ದು. ಇದು ಹಿಮನದಿ ಶಿಖರಗಳು ಮತ್ತು ಕ್ಯಾಸ್ಕೇಡ್ ಶ್ರೇಣಿಯ ಮಧ್ಯೆ ತಾಂತ್ರಿಕ ಆರೋಹಣಗಳಿಗೆ ಹೆಸರುವಾಸಿ.
ಮೌಂಟ್ ಬ್ಲಾಂಕ್:
ಆಲ್ಪ್ಸ್‌ನಲ್ಲಿರುವ ಮೌಂಟ್ ಬ್ಲಾಂಕ್ (4,809ಮೀ) ಯುರೋಪ್‌ನ ಅತಿ ಎತ್ತರದ ಶಿಖರವಾಗಿದೆ. ಇದು ಫ್ರಾನ್ಸ್ ಮತ್ತು ಇಟಲಿಯಿಂದ ದೃಶ್ಯಾವಳಿ ಮತ್ತು ಸವಾಲಿನ ಮಾರ್ಗಗಳನ್ನು ನೀಡುತ್ತದೆ.
ಮೌಂಟ್ ಅಕೊನ್ಕಾಗುವಾ:
ದಕ್ಷಿಣ ಆಫ್ರಿಕಾದ ಅತ್ಯುನ್ನತ ಎತ್ತರ ಪರ್ವತ ಶಿಖರ ಮೌಂಟ್ ಅಕೊನ್ಕಾಗುವಾ (6,960 ಮೀ). ಇದು ಎತ್ತರ ಮತ್ತು ಹವಾಮಾನದ ಕಾರಣದಿಂದಾಗಿ ಟ್ರಕ್ಕರ್ಸ್ ವಿಶೇಷ ಅನುಭವ ನೀಡುತ್ತದೆ.
ಮೌಂಟ್ ಡೆನಾಲಿ:
ಉತ್ತರ ಅಮೆರಿಕದ ಅಲಾಸ್ಕಾದಲ್ಲಿ ಮೌಂಟ್ ಡೆನಾಲಿ (6,190 ಮೀ) ಅತ್ಯುನ್ನತ ಎತ್ತರದ ಶಿಖರ. ಇದು ತೀವ್ರ ಚಳಿ ಮತ್ತು ಊಹಿಸಲಾಗದ ಆರೋಹಣ ಹಾಗೂ ಹವಾಮಾನದ ಕಾರಣದಿಂದ ಚಾರಣಿಗರಿಗೆ ಪ್ರಿಯವಾದ ಸ್ಥಳ.