ಚಾರ್ಧಾಮ್ ಯಾತ್ರೆಯ ಮಧ್ಯೆ ಒಂದು ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ವೈರಲ್ ವೀಡಿಯೊದಲ್ಲಿ, ಶಿವ-ಪಾರ್ವತಿಯರ ಆಕೃತಿಗಳು ಕೈಲಾಸ ಪರ್ವತದಲ್ಲಿ ರೂಪುಗೊಳ್ಳುತ್ತಿರುವುದನ್ನು ಕಾಣಬಹುದು. ಕೈಲಾಸ ಪರ್ವತದ (Kailas Parvat)ಮೇಲೆ ಮೋಡಗಳಲ್ಲಿ ರೂಪುಗೊಂಡಿರುವ ಶಿವ ಪಾರ್ವತಿಯರನ್ನು ನೋಡಿ ಭಕ್ತರು ಹರ್ ಹರ್ ಮಹಾದೇವ್ ಎನ್ನುತ್ತಿದ್ದಾರೆ. ಆ ವಿಡಿಯೋ ಬಗ್ಗೆ ನಾವೇನು ಹೇಳೋದಿಲ್ಲ, ಆದರೆ ಕೈಲಾಸ ಪರ್ವತದ ಬಗ್ಗೆ ಅದರ ಮಹತ್ವ ಮತ್ತು ರಹಸ್ಯದ ಬಗ್ಗೆ ನಿಮಗೆ ಹೇಳ್ತೀವಿ. ಕೈಲಾಸ ಪರ್ವತವನ್ನು ಶಿವನ ವಾಸ ಸ್ಥಳವೆಂದು ಪರಿಗಣಿಸಲಾಗಿದೆ. ಶಿವ ಪುರಾಣ, ಸ್ಕಂದ ಪುರಾಣ ಮತ್ತು ಮತ್ಸ್ಯ ಪುರಾಣಗಳಲ್ಲಿ ಕೈಲಾಸ ಖಾಂಡ್ ಎಂಬ ಪ್ರತ್ಯೇಕ ಅಧ್ಯಾಯಗಳಿವೆ, ಇದರಲ್ಲಿ ಶಿವನ ಈ ಅದ್ಭುತ ವಾಸಸ್ಥಾನದ ಉಲ್ಲೇಖವಿದೆ.