ಪ್ರಪಂಚದ ಅಪಾಯಕಾರಿ ತಾಣಗಳಿವು, ಒಂದ್ಸಲ ಹೋದ್ರೆ ರಿಟರ್ನ್ ಬರುವುದೇ ಡೌಟು!

First Published Jun 26, 2024, 3:24 PM IST

ಕೆಲವರು ಮೋಜು ಮತ್ತು ಸಾಹಸಕ್ಕಾಗಿ ವಿಶಿಷ್ಟ, ಭಯಾನಕ, ಸಾಹಸಮಯ ತಾಣಗಳಲ್ಲಿ ತಿರುಗಾಡಲು ಇಷ್ಟಪಡ್ತಾರೆ. ಅಂತಹ ಕೆಲವೊಂದು ಸಾಹಸಮಯ ಭಯಾನಕ ತಾಣದ ಬಗ್ಗೆ ಹೇಳ್ತೀವಿ. ಈ ತಾಣಗಳಿಗೆ ಹೋದ್ರೆ ಮತ್ತೆ ಬದುಕಿ ಬರ್ತೀವಿ ಅಂತ ಹೇಳೋಕೆ ಸಾಧ್ಯ ಇಲ್ಲ. 
 

ಟ್ರಾವೆಲ್ ಥೆರಪಿ (Travel Therapy) ಪ್ರಪಂಚದಾದ್ಯಂತ ಬಹಳ ಪ್ರಸಿದ್ಧವಾಗುತ್ತಿದೆ. ಅದೇ ಕೆಲಸ, ಅದೇ ಜೀವನದ ನೀರಸ ಕ್ಷಣಗಳನ್ನು ತಪ್ಪಿಸಲು ಜನರು ಟ್ರಾವೆಲ್ ಮಾಡ್ತಾರೆ. ಅದರಲ್ಲೂ ಅಡ್ವೆಂಚರಸ್ ಟ್ರಾವೆಲ್ ಎಂದು ಜನ ಪರ್ವತಗಳು, ಕಾಡುಗಳು, ಜಲಪಾತಗಳು ಮತ್ತು ಕಡಲತೀರಗಳಿಗೆ ಹೋಗಲು ಇಷ್ಟಪಡ್ತಾರೆ. ಕೆಲವರು ಇವೆಲ್ಲವನ್ನೂ ಹೊರತುಪಡಿಸಿ ಯಾರೂ ಹೋಗದಿರುವಂತಹ ತಾಣಗಳಿಗೆ ಹೋಗೋ ಪ್ರಯತ್ನ ಮಾಡ್ತಾರೆ. ಈ ಸ್ಥಳಗಳಲ್ಲಿ ಸಾಕಷ್ಟು ಮೋಜು ಮತ್ತು ಸಾಹಸವಿದೆ, ಆದರೆ ಇಲ್ಲಿ ಅನೇಕ ಅನಿರೀಕ್ಷಿತ ಅಪಾಯಗಳಿವೆ. 
 

ಭೂತ, ಪ್ರೇತ ಇರುವ ಜಾಗಗಳು ಖಂಡಿತಾ ಅಲ್ಲ, ಆದರೆ ಈ ತಾಣಗಳು ನಿಮ್ಮ ಜೀವದ ಬಗ್ಗೆ ಯಾವುದೇ ಗ್ಯಾರಂಟಿ ನೀಡೋದಿಲ್ಲ. ಆದ್ದರಿಂದ ಅನಾರೋಗ್ಯ ಮತ್ತು ದುರ್ಬಲ ಹೃದಯ (weak heart) ಹೊಂದಿರುವ ಜನರು ಇಲ್ಲಿಗೆ ಹೋಗುವುದನ್ನು ಅವಾಯ್ಡ್ ಮಾಡಲೇಬೇಕು. ಇಲ್ಲಿ ನಾವು ಅಪಾಯದಿಂದ ತುಂಬಿದ್ದರೂ, ಪ್ರವಾಸಿಗರಲ್ಲಿ ಬಹಳ ಜನಪ್ರಿಯವಾಗಿರುವ ವಿಶ್ವದ ಅಪಾಯಕಾರಿ ಪ್ರವಾಸಿ ತಾಣಗಳ ಬಗ್ಗೆ ಹೇಳ್ತಿದ್ದೀವಿ. ಅವುಗಳ ಬಗ್ಗೆ ನಿಮಗೆ ತಿಳಿದಿರಲಿ… 
 

Latest Videos


ಡೆತ್ ವ್ಯಾಲಿ, ಯುಎಸ್ಎ (Death Valley USA)
ಅಮೆರಿಕದಲ್ಲಿರುವ ಡೆತ್ ವ್ಯಾಲಿಯನ್ನು ಭೂಮಿಯ ಕುಲುಮೆ ಎಂದೂ ಕರೆಯಲಾಗುತ್ತದೆ, ಅಲ್ಲಿ ಮಾನವರು 14 ಗಂಟೆಗಳಿಗಿಂತ ಹೆಚ್ಚು ಕಾಲ ಬದುಕಲು ಸಾಧ್ಯವಿಲ್ಲ. ಈ ವಿಶಿಷ್ಟ ಮರುಭೂಮಿಯಲ್ಲಿ ಭೂಮಿಯ ಅತ್ಯಂತ ಬಿಸಿಯಾದ ತಾಪಮಾನವಿರುತ್ತೆ. ಇದರ ಹೊರತಾಗಿಯೂ, ಜನರು ವಿವಿಧ ಸೀಸನ್ ಗಳಲ್ಲಿ ಡೆತ್ ವ್ಯಾಲಿಯನ್ನು ನೋಡಲು ಹೋಗುತ್ತಾರೆ.  

ಡಾನಾಕ್ವಿಲ್ ಮರುಭೂಮಿ, ಎರಿಟ್ರಿಯಾ (Danakil Desert)
ಆಫ್ರಿಕಾದ ಡಾನಾಕ್ವಿಲ್ ಮರುಭೂಮಿಯಲ್ಲಿನ ಜೀವನವನ್ನು ಊಹಿಸುವುದು ಸಹ ಕಷ್ಟ. ಸಕ್ರಿಯ ಜ್ವಾಲಾಮುಖಿಗಳು ಮತ್ತು ವಿಷಕಾರಿ ಅನಿಲಗಳನ್ನು ಹೊರಸೂಸುವ ಈ ಮರುಭೂಮಿಯು ಭೂಮಿಯ ಮೇಲಿನ ನರಕ ಅಂತಾನೇ ಹೇಳಬಹುದು. ಇದರ ಹೊರತಾಗಿಯೂ, ಜನರು ಈ ಮರುಭೂಮಿಯಲ್ಲಿ ತಿರುಗಾಡುವ ಗೀಳನ್ನು ಹೊಂದಿದ್ದಾರೆ. ಆದರೆ ಗೈಡ್ ಇಲ್ಲದೆ ಈ ಮರುಭೂಮಿಗೆ ಭೇಟಿ ನೀಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.  
 

ಇಲ್ಹಾ ಡಾ ಕ್ವಿಮಾಡಾ ಗ್ರಾಂಡೆ (ಸ್ನೇಕ್ ಐಲ್ಯಾಂಡ್), ಬ್ರೆಜಿಲ್ (Snake Island)
ಸ್ನೇಕ್ ಐಲ್ಯಾಂಡ್ ಎಂದೂ ಕರೆಯಲ್ಪಡುವ ಈ ದ್ವೀಪವು ಬ್ರೆಜಿಲ್ ಕರಾವಳಿಯಿಂದ ಸ್ವಲ್ಪ ದೂರದಲ್ಲಿ ಸಮುದ್ರದ ಮಧ್ಯದಲ್ಲಿದೆ. ಇದು ವಿಶ್ವದ ಅತ್ಯಂತ ವಿಷಕಾರಿ ಹಾವುಗಳ ಭದ್ರಕೋಟೆ. ಕೆಲವೊಮ್ಮೆ ಜನರು ಸಾಹಸದ ಹೆಸರಿನಲ್ಲಿ ಈ ದ್ವೀಪದ ಕಾಡುಗಳಲ್ಲಿ ತಿರುಗಾಡುತ್ತಿದ್ದರು, ಆದರೆ ಇಲ್ಲಿ ಹಾವಿನ ಸಂಖ್ಯೆ ಹೆಚ್ಚಾದ ನಂತರ, ಹಲವು ಜನರಿಗೆ ಅಪಾಯ ಉಂಟಾಗಿದ್ದು, ನಂತರ ಈ ದ್ವೀಪ ಪ್ರವೇಶ ನಿಷೇಧಿಸಲಾಯಿತು. 

ಬಿಕಿನಿ ಅಟೋಲ್, ಮಾರ್ಷಲ್ ಐಲ್ಯಾಂಡ್ಸ್ (Bikini Atoll, Marshall Island)
ಸಮುದ್ರದ ಅಲೆಗಳಲ್ಲಿ ಎಲ್ಲೋ ಕಳೆದು ಹೋದ ಈ ದ್ವೀಪವು ದೂರದಿಂದ ಸಾಕಷ್ಟು ಸುಂದರವಾಗಿ ಕಾಣುತ್ತದೆ. ಇಲ್ಲಿನ ಬಿಳಿ ಮರಳು ಮತ್ತು ಹಸಿರು ಪ್ರವಾಸಿಗರನ್ನು ಮತ್ತಷ್ಟು ಆಕರ್ಷಿಸುತ್ತದೆ, ಆದರೆ ಈ ದ್ವೀಪವು ಭಯಾನಕ ಅನ್ನೋದು ನಿಜ. ಯಾಕಂದ್ರೆ ಈ ದ್ವೀಪದಲ್ಲಿ ಹಲವು ಪರಮಾಣು ಪರೀಕ್ಷಾ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಈ ದ್ವೀಪದಲ್ಲಿ ಹೆಚ್ಚಿನ ಮಟ್ಟದ ವಿಕಿರಣವನ್ನು ದಾಖಲಿಸಲಾಗಿದೆ, ಇದು ಕ್ಯಾನ್ಸರ್‌ಗೆ ಕಾರಣವಾಗಬಹುದು. ಈ ದ್ವೀಪವು ಮಾನವರು ಮತ್ತು ಪ್ರಾಣಿಗಳಿಗೆ ಜೀವಿಸಲು ಯೋಗ್ಯವೇ ಅಲ್ಲದ ತಾಣ. 

ಮದಿದಿ ರಾಷ್ಟ್ರೀಯ ಉದ್ಯಾನ, ಬೊಲಿವಿಯಾ (Madidi National Park)
ವಿಶ್ವದ ಬಹುತೇಕ ಪ್ರತಿಯೊಂದು ದೇಶವು ತಮ್ಮ ಪ್ರಾಣಿಗಳಿಗಾಗಿ ಸಂರಕ್ಷಿತ ರಾಷ್ಟ್ರೀಯ ಉದ್ಯಾನವನಗಳನ್ನು ಹೊಂದಿರೋದು ಸಾಮಾನ್ಯ, ಇದು ಪ್ರವಾಸಿಗರ ಆಕರ್ಷಣೆಯ ಕೇಂದ್ರ. ಆದರೆ ಬೊಲಿವಿಯಾದ ಮಡಿದಿ ರಾಷ್ಟ್ರೀಯ ಉದ್ಯಾನವನದಲ್ಲಿ ಇದು ಹಾಗಲ್ಲ. ನೋಡೋದಕ್ಕೆ ಹಚ್ಚ ಹಸಿರಿನಿಂದ ತುಂಬಿರುವ ಸುಂದರ ರಾಷ್ಟ್ರೀಯ ಉದ್ಯಾನವನ ಇದು. ಆದರೆ ಈ ಪಾರ್ಕ್ ಈಗ ವಿಷಕಾರಿ ಮತ್ತು ಆಕ್ರಮಣಕಾರಿ ಜೀವಿಗಳಿಗೆ ನೆಲೆಯಾಗಿದೆ. ಇಲ್ಲಿನ ಮರಗಳು ಮತ್ತು ಸಸ್ಯಗಳ ಸಂಪರ್ಕದಿಂದಾಗಿಯೂ ಸೋಂಕು ಉಂಟಾಗೋ ಸಾಧ್ಯತೆ ಇದೆ, ಆದ್ದರಿಂದ ಈ ಸ್ಥಳವು ಪ್ರವಾಸಿಗರಿಗೆ ಅಪಾಯಕಾರಿಯಾಗಿದೆ. 
 

click me!