ಲಾಂಗ್‌ ವೀಕೆಂಡ್‌ನಲ್ಲಿ ಹೆಚ್ಚು ಬುಕ್ಕಿಂಗ್‌ ಆಗಿರುವ ಸ್ಥಳ ಯಾವ್ದು?, MakeMyTrip ವರದಿಯಲ್ಲಿ ಮಾಹಿತಿ ಬಹಿರಂಗ

Published : Jan 24, 2026, 01:42 PM IST

Long weekend travel: ಈ ಅವಧಿಯಲ್ಲಿ ಜನ ಯಾವ ಸ್ಥಳಗಳಿಗೆ ಹೆಚ್ಚು ಇಷ್ಟಪಟ್ಟು ತೆರಳುತ್ತಾರೆ ಎಂಬ ಆಸಕ್ತಿದಾಯಕ ಮಾಹಿತಿ ಹಂಚಿಕೊಳ್ಳಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಜನರು ಹೆಚ್ಚು ಸ್ಥಳಗಳಿಗೆ ಭೇಟಿ ನೀಡಲು ಆಸಕ್ತಿವಹಿಸಿದ್ದಾರೆಂದು ಮೇಕ್‌ ಮೈ ಟ್ರಿಪ್‌ನ ಸಹ-ಸಂಸ್ಥಾಪಕ ತಿಳಿಸಿದ್ದಾರೆ. 

PREV
17
ಈ ಬಗ್ಗೆ ಮೇಕ್‌ ಮೈ ಟ್ರಿಪ್ ವರದಿ ಬಹಿರಂಗ

ಗಣರಾಜ್ಯೋತ್ಸವದ ಪ್ರಯುಕ್ತ ಸಿಕ್ಕಿರುವ ಲಾಂಗ್‌ ವೀಕೆಂಡ್‌ನಲ್ಲಿ ಜನರು ಯಾವೆಲ್ಲಾ ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾರೆ ಎಂಬ ಕುತೂಹಲವೇ? ಮೇಕ್‌ ಮೈ ಟ್ರಿಪ್ ಈ ಬಗ್ಗೆ ವರದಿ ಬಹಿರಂಗ ಪಡಿಸಿದೆ.

27
ವಿಶ್ರಾಂತಿ ಹಾಗೂ ಮನರಂಜನೆ ಪಡೆಯಲು

ಈ ಕುರಿತು ಮಾತನಾಡಿದ ಮೇಕ್‌ ಮೈ ಟ್ರಿಪ್‌ನ ಸಹ-ಸಂಸ್ಥಾಪಕ ಮತ್ತು ಗ್ರೂಪ್ ಸಿಇಒ ರಾಜೇಶ್ ಮಾಗೋವ್, ಲಾಂಗ್‌ ವೀಕೆಂಡ್‌ ಸಂದರ್ಭದಲ್ಲಿ ವಿಶ್ರಾಂತಿ ಹಾಗೂ ಮನರಂಜನೆ ಪಡೆಯಲು ಜನ ತಮ್ಮ ಇಷ್ಟದ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅದಕ್ಕಾಗಿಯೇ ಮೇಕ್‌ ಮೈ ಟ್ರಿಪ್‌ ಹೆಚ್ಚು ಸಹಕಾರಿಯಾಗಿ ಕೆಲಸ ಮಾಡುತ್ತಿದೆ. ಈ ಅವಧಿಯಲ್ಲಿ ಜನ ಯಾವೆಲ್ಲಾ ಸ್ಥಳಗಳಿಗೆ ಹೆಚ್ಚು ಇಷ್ಟಪಟ್ಟು ತೆರಳುತ್ತಾರೆ ಎಂಬ ಆಸಕ್ತಿದಾಯಕ ಮಾಹಿತಿಯನ್ನು ಇಲ್ಲಿ ಹಂಚಿಕೊಳ್ಳಲಾಗಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ, ಈ ಬಾರಿ ಜನರು ಹೆಚ್ಚು ಸ್ಥಳಗಳಿಗೆ ಭೇಟಿ ನೀಡಲು ಆಸಕ್ತಿ ವಹಿಸಿದ್ದಾರೆ ಎಂದು ಹೇಳಿದ್ದಾರೆ.

37
ಗೋವಾ, ಥೈಲ್ಯಾಂಡ್‌ಗೆ ಹೆಚ್ಚು ಬುಕ್ಕಿಂಗ್‌

ಹೌದು, ಈ ಮೂರು ದಿನಗಳ ಲಾಂಗ್‌ ವೀಕೆಂಡ್‌ಗಾಗಿ ಜನರು ದೇಶೀಯವಾಗಿ ಗೋವಾ ಆಯ್ದುಕೊಂಡರೆ, ಅಂತರಾಷ್ಟ್ರೀಯ ಟ್ರಿಪ್‌ನಲ್ಲಿ ಥೈಲ್ಯಾಂಡ್‌ಗೆ ಹೆಚ್ಚು ಬುಕ್ಕಿಂಗ್‌ ಮಾಡಿಕೊಂಡಿದ್ದಾರೆ.

47
ಎಲ್ಲಿ ತೆರಳಬೇಕು? ಯಾವ ಪ್ರದೇಶ ಉತ್ತಮ?

ಸಾಮಾನ್ಯವಾಗಿ ಲಾಂಗ್‌ ವೀಕೆಂಡ್‌ ದೊರೆತರೆ ವಿಶ್ರಾಂತಿಗಾಗಿ ಜನ ಪ್ರಯಾಣ ಬೆಳೆಸುವುದು ಸಾಮಾನ್ಯ. ಆದರೆ, ಎಲ್ಲಿ ತೆರಳಬೇಕು? ಯಾವ ಪ್ರದೇಶ ಉತ್ತಮ ಎಂದು ಹುಡುಕುವುದೇ ಕಷ್ಟ. ಜನರ ಎಲ್ಲಿಗೆ ಹೆಚ್ಚಾಗಿ ಭೇಟಿ ನೀಡುತ್ತಾರೆ ಎಂಬುದನ್ನು ಸಹ ಇತರರು ಆಸಕ್ತಿ ವಹಿಸುತ್ತಾರೆ. ಇದಕ್ಕಾಗಿಯೇ, ಹೆಚ್ಚಾಗಿ ಎಲ್ಲೆಲ್ಲಿ ಪ್ರಯಾಣ ಬೆಳೆಸುತ್ತಿದ್ದಾರೆ ಎಂಬುದರ ಬಗ್ಗೆ ಮೇಕ್‌ ಮೈ ಟ್ರಿಪ್‌ ಆಸಕ್ತಿದಾಯಕ ಮಾಹಿತಿ ಹಂಚಿಕೊಂಡಿದೆ.

57
ಜೈಪುರ, ಉದಯಪುರ, ಮನಾಲಿ

ಜನವರಿ 24 ರಿಂದ26ರವರೆಗೆ ಲಾಂಗ್‌ ವೀಕೆಂಡ್‌ ದೊರೆತಿರುವ ಹಿನ್ನೆಲೆಯಲ್ಲಿ, ಜನರು ಹೆಚ್ಚಾಗಿ ಗೋವಾ ಬುಕ್ಕಿಂಗ್‌ ಮಾಡಿದ್ದಾರೆ. ಇದಲ್ಲದೆ, ಇತರ ಜನಪ್ರಿಯ ದೇಶೀಯ ತಾಣಗಳಾದ ಜೈಪುರ, ಉದಯಪುರ, ಮನಾಲಿ, ಪಾಂಡಿಚೇರಿ ಮತ್ತು ಮುನ್ನಾರ್‌ಗೆ ಕೂಡ ತಮ್ಮ ಟ್ರಿಪ್‌ ಪ್ಲಾನ್‌ ಮಾಡಿದ್ದಾರೆ.

67
ಪುರಿ, ವಾರಣಾಸಿ, ಅಮೃತಸರ, ಅಯೋಧ್ಯೆ

ಇನ್ನು, ಈ ಅವಧಿಯಲ್ಲಿ ದೇವಸ್ಥಾನಕ್ಕೆ ತೆರಳುವವರು ಸಹ ಹೆಚ್ಚಿದ್ದು, ಪುರಿ, ವಾರಣಾಸಿ, ಅಮೃತಸರ, ಅಯೋಧ್ಯೆ, ತಿರುಪತಿ, ಉಜ್ಜಯಿನಿ ಮತ್ತು ದ್ವಾರಕಾದಂತಹ ಆಧ್ಯಾತ್ಮಿಕ ತಾಣಗಳಿಗೂ ಸಾಕಷ್ಟು ಬುಕ್ಕಿಂಗ್‌ ಆಗಿವೆ.

77
ಯುಎಇ, ಮಲೇಷ್ಯಾ ಮತ್ತು ಸಿಂಗಾಪುರ

ಅಂತಾರಾಷ್ಟ್ರೀಯ ಮಟ್ಟದ ಪ್ರಯಾಣ ತಾಣಗಳಲ್ಲಿ ಥೈಲ್ಯಾಂಡ್‌ಗೆ ಹೆಚ್ಚು ಬುಕ್ಕಿಂಗ್‌ ಆಗಿವೆ. ಇದರೊಟ್ಟಿಗೆ, ವಿಯೆಟ್ನಾಂಗೂ ಸಹ ಈ ಅವಧಿಯಲ್ಲಿ ಹೆಚ್ಚು ಬಿಕ್ಕಿಂಗ್‌ ಆಗಿದೆ. ಜೊತೆಗೆ, ಯುಎಇ, ಮಲೇಷ್ಯಾ ಮತ್ತು ಸಿಂಗಾಪುರ ದಂತ ಸ್ಥಳಗಳಿಗೂ ಹೆಚ್ಚು ಬುಕ್ಕಿಂಗ್‌ ಪಡೆದುಕೊಂಡಿವೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories