ಭಯೋತ್ಪಾದನೆ (terrorism) ಮಾಡೋದ್ರಲ್ಲಿ, ನಮ್ಮ ನೆರೆ ರಾಷ್ಟ್ರ ಪಾಕಿಸ್ತಾನ ಸದಾ ಸುದ್ದಿಯಲ್ಲಿರುತ್ತೆ. ಆದ್ರೆ ಅಲ್ಲಿನ ಜನರ ಪರಿಸ್ಥಿತಿ ಹೇಗಿರುತ್ತೆ ಎಂದು ನೀವು ಅಂದುಕೊಂಡಿರಬಹುದು. ಹಾಗೆ ನೋಡಿದ್ರೆ ಅದು ತುಂಬಾನೆ ಕೆಟ್ಟದಾಗಿದೆ. ಪಾಕ್ ನಲ್ಲಿ ಆಹಾರ ಪದಾರ್ಥಗಳ ಬೆಲೆಗಳು ತೀವ್ರವಾಗಿ ಏರಿಕೆಯಾಗಿವೆ. ಜನರ ಆರ್ಥಿಕ ಸ್ಥಿತಿ ತುಂಬಾ ಹದಗೆಟ್ಟಿದೆ. ಈ ಎಲ್ಲದರ ನಡುವೆ, ಸಾರ್ವತ್ರಿಕ ಚುನಾವಣೆಗಳು (Pakistan Election 2024) ಫೆಬ್ರವರಿ 8 ರಂದು ನಡೆಯಲಿವೆ. ಈ ಹಿನ್ನೆಯಲ್ಲಿ ಇಂದು ನಾವು ಅಲ್ಲಿನ 7 ಅತ್ಯಂತ ವಿಚಿತ್ರ ಕಾನೂನುಗಳ ಬಗ್ಗೆ ನಿಮಗೆ ಹೇಳಲಿದ್ದೇವೆ, ಅವು ಕಾನೂನುಬದ್ಧವಾಗಿ ಮಾನ್ಯವಾಗಿವೆ. ಆದರೆ ಇದ್ರ ಬಗ್ಗೆ ತಿಳಿದ್ರೆ ನಿಮಗೆ ಅಚ್ಚರಿಯಾಗೋದು ಖಚಿತ.
ಗರ್ಲ್ ಫ್ರೆಂಡ್/ಬಾಯ್ ಫ್ರೆಂಡ್ ಹೊಂದಲು ಅನುಮತಿ ಇಲ್ಲ
ಭಾರತದಲ್ಲಿ, ನ್ಯಾಯಾಲಯವು ವಯಸ್ಕ ಹುಡುಗರು ಮತ್ತು ಹುಡುಗಿಯರಿಗೆ ತಮ್ಮ ಆಯ್ಕೆಯ ಸ್ವತಂತ್ರ್ಯ ನೀಡಿದೆ. ಹೆಚ್ಚಿನ ಎಲ್ಲಾ ದೇಶಗಳಲ್ಲೂ ಯುವಕರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿರುತ್ತೆ. ಆದರೆ, ಗರ್ಲ್ ಫ್ರೆಂಡ್ (girlfriend) ಅಥವಾ ಬಾಯ್ ಫ್ರೆಂಡ್ ಹೊಂದಲು ಅನುಮತಿ ನೀಡದ ದೇಶದ ಬಗ್ಗೆ ನೀವು ಎಂದಾದರೂ ಕೇಳಿದ್ದೀರಾ? ಪಾಕಿಸ್ತಾನದಲ್ಲಿ ಇದಕ್ಕೆ ಅನುಮತಿ ಇಲ್ಲ. ಲಿವ್ ಇನ್ ರಿಲೇಶನ್ ಶಿಪ್ ಗಂತೂ ಕಾನೂನು ಒಪ್ಪೋದೆ ಇಲ್ಲ.
ಅನುಮತಿಯಿಲ್ಲದೆ ಫೋನ್ ಸ್ಪರ್ಶಿಸುವುದು ಅಪರಾಧ
ನಮ್ಮಲ್ಲಿ ಹೇಗೆ ಅಂದ್ರೆ ಅನೇಕ ಬಾರಿ ನಾವು ಹೇಳದೇ ಕೇಳದೆ ಇತರರ ಫೋನ್ ಗಳನ್ನು ಮುಟ್ಟುತ್ತೇವೆ. ಅಥವಾ ಅದನ್ನು ಅವರ ಬಳಿ ಕೆಳದೆಯೇ ಬಳಸುತ್ತೇವೆ. ಆದರೆ ಪಾಕಿಸ್ತಾನದಲ್ಲಿ, ಅನುಮತಿಯಿಲ್ಲದೆ ಇನ್ನೊಬ್ಬರ ಫೋನ್ ಸ್ಪರ್ಶಿಸುವುದು ಕಾನೂನುಬಾಹಿರವೆಂದು (touching others phone is illeagal) ಪರಿಗಣಿಸಲಾಗುತ್ತದೆ. ನೀವು ಆಕಸ್ಮಿಕವಾಗಿ ಬೇರೊಬ್ಬರ ಫೋನ್ ಮುಟ್ಟಿದ್ರೆ, ಶಿಕ್ಷೆಗೆ ಒಳಗಾಗುವ ಅವಕಾಶವಿದೆ. ಆರೋಪಿಗೆ 6 ತಿಂಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದು.
ಶಿಕ್ಷಣದ ಮೇಲೂ ತೆರಿಗೆ (education tax)
ಜನರ ಶಿಕ್ಷಣಕ್ಕೂ ತೆರಿಗೆ ವಿಧಿಸುವ ವಿಶ್ವದ ಏಕೈಕ ದೇಶ ಪಾಕಿಸ್ತಾನ. ಒಬ್ಬ ವಿದ್ಯಾರ್ಥಿಯು ಅಧ್ಯಯನಕ್ಕಾಗಿ 2 ಲಕ್ಷ ರೂ.ಗಿಂತ ಹೆಚ್ಚು ಖರ್ಚು ಮಾಡಿದರೆ, ಶೇಕಡಾ 5 ರಷ್ಟು ತೆರಿಗೆ ಪಾವತಿಸುವುದು ಕಡ್ಡಾಯ. ಆದಾಗ್ಯೂ, ಪ್ರಪಂಚದಾದ್ಯಂತ ಶಿಕ್ಷಣವು ಸಂಪೂರ್ಣವಾಗಿ ಉಚಿತವಾಗಿರುವ ಅನೇಕ ದೇಶಗಳಿವೆ. ಭಾರತದ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣವೂ ಒಂದು ರೀತಿಯಲ್ಲಿ ಉಚಿತ.ಇನ್ನು ಖಾಸಗಿ ಶಾಲೆಗಳಲ್ಲಿನ ಬೋಧನಾ ಶುಲ್ಕವನ್ನು ಆದಾಯ ತೆರಿಗೆಯಲ್ಲಿ ತೋರಿಸುವ ಮೂಲಕ ನೀವು ವಿನಾಯಿತಿ ಪಡೆಯಬಹುದು.
ಈ ಪದಗಳನ್ನು ಇಂಗ್ಲಿಷ್ ಗೆ ಭಾಷಾಂತರಿಸೋದು ತಪ್ಪು
ಅಲ್ಲಾ, ಮಸೀದಿ, ರಸೂಲ್ ಅಥವಾ ನಬಿ ಮುಂತಾದ ಪದಗಳ ಇಂಗ್ಲಿಷ್ ಅನುವಾದವು (english translation)ಪಾಕಿಸ್ತಾನದಲ್ಲಿ ಅಪರಾಧವಾಗಿದೆ. ಯಾರಾದರೂ ಇದನ್ನು ಮಾಡಿದರೆ, ಅವರ ವಿರುದ್ಧ ಕಾನೂನುಬದ್ಧವಾಗಿ ಕಠಿಣ ಕ್ರಮ ಕೈಗೊಳ್ಳಲಾಗುವುದು.
ಯಾವ ಪಾಕಿಸ್ತಾನಿಯೂ ಇಸ್ರೇಲ್ ಗೆ ಹೋಗಲು ಸಾಧ್ಯವಿಲ್ಲ
ಪಾಕಿಸ್ತಾನದ ನಾಗರಿಕರಿಗೆ ಇಸ್ರೇಲ್ ಗೆ ಹೋಗಲು ಅನುಮತಿ ಇಲ್ಲ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು. ಹೌದು, ಪಾಕಿಸ್ತಾನ ಸರ್ಕಾರವು ತನ್ನ ನಾಗರಿಕರಿಗೆ ಇಸ್ರೇಲ್ಗೆ ಹೋಗಲು ವೀಸಾ ನೀಡುವುದಿಲ್ಲ. ಇದರ ಹಿಂದಿನ ಕಾರಣವೆಂದರೆ ಪಾಕಿಸ್ತಾನವು ಇಸ್ರೇಲ್ಗೆ ಒಂದು ದೇಶದ ಸ್ಥಾನಮಾನ ನೀಡಿಲ್ಲ, ಅಂದರೆ, ಅದು ಇಸ್ರೇಲ್ ನ್ನು ದೇಶವೆಂದು ಪರಿಗಣಿಸುವುದಿಲ್ಲ.
ರಂಜಾನ್‌ನಲ್ಲಿ ಹೊರಗಿನ ಆಹಾರ ತಿನ್ನೋದು ತಪ್ಪು
ನೀವು ಮುಸ್ಲಿಂ ಆಗಿರಲಿ ಅಥವಾ ಬೇರೆ ಯಾವುದೇ ಧರ್ಮಕ್ಕೆ ಸೇರಿದವರಾಗಿರಲಿ, ಆದರೆ ರಂಜಾನ್(Ramzan) ಸಮಯದಲ್ಲಿ ನೀವು ಹೊರಗಿನ ಆಹಾರವನ್ನು ತಿನ್ನಲು ಅವಕಾಶವೇ ಇರೋಲ್ಲ. ಹೆಚ್ಚಿನ ಆಹಾರ ಅಂಗಡಿಗಳು ಮುಚ್ಚಿರುತ್ತವೆ, ಮನೆಯಲ್ಲಿಯೇ ಆಹಾರ ತಯಾರಿಸಿ ಸೇವಿಸಬೇಕು.
ಪ್ರಧಾನಿಗೆ ತಮಾಷೆ ಮಾಡೋದು ಕಾನೂನು ಬಾಹಿರ
ಪಾಕಿಸ್ತಾನದ ಪ್ರಧಾನಿಯನ್ನು(prime minister) ಅಪಹಾಸ್ಯ ಮಾಡುವುದು ಕಾನೂನುಬಾಹಿರ. ಒಬ್ಬ ಪಾಕಿಸ್ತಾನಿ ಇದನ್ನು ಮಾಡಿದರೆ, ಅವನಿಗೆ ಶಿಕ್ಷೆಯಾಗಬಹುದು ಎಂದು ಇಲ್ಲಿನ ಕಾನೂನು ತಿಳಿಸಿದೆ.