ಈ ನಗರ ಕಟ್ಟೋಕೆ ಖರ್ಚಾಗಿದ್ದು 500 ಮಿಲಿಯನ್ ಡಾಲರ್, ಆದರೆ ಎರಡೇ ತಿಂಗಳಲ್ಲಿ ಮಾಯವಾಗಲಿದೆ!

Published : Jan 11, 2024, 11:00 AM IST

ಚೀನಾದ ಹರ್ಬಿನ್‌ನಲ್ಲಿ ಈ ನಗರ ಕಟ್ಟೋಕೆ ಆಗಿರುವ ಖರ್ಚು ಬರೋಬ್ಬರಿ 500 ದಶಲಕ್ಷ ಡಾಲರ್. ಆದರೆ, ಈ ನಗರದ ಆಯಸ್ಸು ಮಾತ್ರ ಎರಡೇ ತಿಂಗಳು. ಹಾಗಿದ್ದೂ ಚೀನಾ ಇದನ್ನು ಪ್ರತಿ ವರ್ಷ ನಿರ್ಮಿಸುವುದು ಏಕೆ ಗೊತ್ತಾ?

PREV
19
ಈ ನಗರ ಕಟ್ಟೋಕೆ ಖರ್ಚಾಗಿದ್ದು 500 ಮಿಲಿಯನ್ ಡಾಲರ್, ಆದರೆ ಎರಡೇ ತಿಂಗಳಲ್ಲಿ ಮಾಯವಾಗಲಿದೆ!

ಚೀನಾದ ಹರ್ಬಿನ್‌ನಲ್ಲಿರುವ ಐಸ್ ಮತ್ತು ಸ್ನೋ ವರ್ಲ್ಡ್ ವಿಶ್ವದ ಅತಿ ದೊಡ್ಡ ಚಳಿಗಾಲದ ಆಕರ್ಷಣೆಗಳಲ್ಲಿ ಒಂದಾಗಿದೆ. ಇಡೀ ಐಸ್ ಸಿಟಿಯನ್ನು 500 ಮಿಲಿಯನ್ ಡಾಲರ್‌ಗಳಷ್ಟು ವೆಚ್ಚದಲ್ಲಿ ಒಂದು ತಿಂಗಳಲ್ಲಿ ನಿರ್ಮಿಸಲಾಗಿದೆ ಮತ್ತು ಅದು ಎರಡು ತಿಂಗಳಲ್ಲಿ ಕರಗಲಿದೆ.

29

300 ಫುಟ್ಬಾಲ್ ಪಿಚ್‌ಗಳಷ್ಟು ವಿಶಾಲವಾದ ಐಸ್ ಸಿಟಿಯಲ್ಲಿ ಹೆಪ್ಪುಗಟ್ಟಿದ ಗಗನಚುಂಬಿ ಕಟ್ಟಡಗಳು, ವಿಶ್ವ ಪ್ರಸಿದ್ಧ ಐತಿಹಾಸಿಕ ಸ್ಮಾರಕಗಳು, ಜಗತ್ತಿನ ಎಲ್ಲ ಪ್ರಮುಖ ಆಕರ್ಷಣೆಗಳನ್ನು ಐಸ್‌ನಿಂದ ಮಾಡಲಾಗಿದೆ.  

39

ನಗರದ ತುಂಬಾ ವಿಸ್ತಾರವಾದ ಮಂಜುಗಡ್ಡೆ ಮತ್ತು ಹಿಮದ ಶಿಲ್ಪಗಳಿದ್ದು, ಇದೊಂದು ವಿಂಟರ್ ವಂಡರ್‌ಲ್ಯಾಂಡ್‌ನಂತಿದ್ದು, ಈ ಜಗತ್ತಿನ ಹೊರ ಲೋಕವೆನಿಸುತ್ತದೆ.

49

ಐಸ್ ಸಿಟಿಯು ಐಸ್ ಮತ್ತು ಸ್ನೋ ವರ್ಲ್ಡ್ ಅನ್ನು ಸಹ ಹೊಂದಿದೆ. ಇದು ಪ್ರಕಾಶಮಾನವಾದ ಐಸ್ ಶಿಲ್ಪಗಳು, ಐಸ್ ಸ್ಲೈಡ್‌ಗಳು ಮತ್ತು ವಿವಿಧ ಚಳಿಗಾಲದ ಚಟುವಟಿಕೆಗಳನ್ನು ಹೊಂದಿರುವ ಬೃಹತ್ ಉದ್ಯಾನವನವಾಗಿದೆ.

59

ಈ ಐಸ್ ಕಟ್ಟಡಗಳನ್ನು ನಿರ್ಮಿಸಲು 15 ದಿನಗಳಲ್ಲಿ 148 ಎಕರೆಗಳಲ್ಲಿ 7000 ಕಾರ್ಮಿಕರು 1,13,000 ಘನ ಮೀಟರ್ ಮಂಜುಗಡ್ಡೆಯನ್ನು ಕತ್ತರಿಸಿ, ಕೆತ್ತಿದ್ದಾರೆ. 

69

ಹರ್ಬಿನ್ ಐಸ್ ಸಿಟಿಯು ಸುಮಾರು 7,000 ಉದ್ಯೋಗಿಗಳು, ಕೆಲಸಗಾರರು, ಶಿಲ್ಪಿಗಳು ಮತ್ತು ಸ್ಟ್ರಕ್ಚರಲ್ ಇಂಜಿನಿಯರ್‌ಗಳನ್ನು  ನೇಮಿಸಿಕೊಂಡಿದೆ.

79

ಹರ್ಬಿನ್ ಹಬ್ಬವು ಪ್ರತಿ ವರ್ಷ ಪ್ರಪಂಚದಾದ್ಯಂತ ಸರಾಸರಿ 18 ದಶಲಕ್ಷ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಚೀನಾ ಈ ಕರಗುವ ನಗರದಿಂದ 4.4 ಬಿಲಿಯನ್ ಡಾಲರ್‌ಗಳನ್ನು ಮರಳಿ ಗಳಿಸಲಿದೆ. ಈ ಕಾರಣದಿಂದಲೇ ಕರಗುವ ನಗರವನ್ನು ಚೀನಾ ಪ್ರತಿ ವರ್ಷ ಉತ್ಸಾಹದಿಂದ ನಿರ್ಮಿಸುತ್ತದೆ. 

 

89

ಇಷ್ಟೊಂದು ಸುಂದರ ನಗರ ಎರಡೇ ತಿಂಗಳಲ್ಲಿ ಕರಗುತ್ತದೆ ಎಂಬ ಕಾರಣದಿಂದ ಕೆಲ ನೆಟ್ಟಿಗರು ತಮಾಷೆಯಾಗಿ ಚೀನಾ ಮಾಲ್ ಹೆಚ್ಚು ಸಮಯ ಇರಲ್ಲ ಎಂದು ಕಾಲೆಳೆದಿದ್ದಾರೆ. 

99

500 ಮಿಲಿಯನ್ ಡಾಲರ್ ಹಾಕಿ, 4.4 ಬಿಲಿಯನ್ ಡಾಲರ್ ತೆಗೆಯಬಹುದೆಂದರೆ ಇದು ಬೇರೆಲ್ಲದಕ್ಕಿಂತ ಲಾಭದಾಯಕ ಬಿಸ್ನೆಸ್, ಎಷ್ಟು ಬಾರಿ ಬೇಕಾದರೂ ಕಟ್ಟಬಹುದು ಎಂದೂ ನೆಟ್ಟಿಗರು ಹೇಳುತ್ತಿದ್ದಾರೆ.

Read more Photos on
click me!

Recommended Stories