ಜನವರಿಯಲ್ಲಿ ನೀವ್‌ ಈ ಕಾರಣಕ್ಕಾದ್ರೂ ಕೇರಳ ವಿಸಿಟ್ ಮಾಡ್ಲೇಬೇಕು

First Published | Jan 20, 2024, 2:14 PM IST

ದೇವರ ನಾಡು ಕೇರಳ ಪ್ರವಾಸಿಗರ ಫೇವರಿಟ್ ಪ್ಲೇಸ್. ಕೂಲ್‌ ವೆದರ್‌, ಹಿಲ್ ಸ್ಟೇಷನ್‌, ಬ್ಯೂಟಿಫುಲ್‌ ಬ್ಯಾಕ್‌ವಾಟರ್ಸ್ ಎಲ್ಲವೂ ಮನಸೆಳೆಯುತ್ತದೆ. ಅದರಲ್ಲೂ ಇಯರ್ ಸ್ಟಾರ್ಟಿಂಗ್‌ ಜನವರಿಯಲ್ಲಿ ನೀವು ಮಸ್ಟ್‌ ಆಗಿ ಕೇರಳಕ್ಕೆ ವಿಸಿಟ್ ಮಾಡ್ಲೇಬೇಕು. ಅದ್ಯಾಕೆ ಅನ್ನೋದು ನಾವ್ ಹೇಳ್ತೀವಿ.

ಕೇರಳ, ಪ್ರವಾಸಿಗರ ಸ್ವರ್ಗ..ಸುಂದರವಾದ ಪ್ರಕೃತಿ, ಹವಾಮಾನ, ಹಿಲ್ ಸ್ಟೇಷನ್‌, ಬ್ಯಾಕ್‌ವಾಟರ್ಸ್‌, ಕಾಡು, ನದಿ-ತೊರೆಗಳು ಎಲ್ಲರ ಗಮನ ಸೆಳೆಯುತ್ತದೆ. ಹೀಗಾಗಿಯೇ ಪ್ರತಿ ದಿನ ದೇವರ ನಾಡಿಗೆ ಲಕ್ಷಾಂತರ ಪ್ರವಾಸಿಗರು ಭೇಟಿ ನೀಡುತ್ತಾರೆ. ಆದರೆ ಜನವರಿಯಲ್ಲಿ ಕೇರಳ ವಿಸಿಟ್ ಮಾಡೋದು ಇನ್ನೂ ಒಳ್ಳೇದು ಅನ್ನೋದು ನಿಮ್ಗೊತ್ತಾ?

ಸುಂದರವಾದ ಹವಾಮಾನ
ಜನವರಿಯಲ್ಲಿ ಕೇರಳದಲ್ಲಿ ಅತ್ಯುತ್ತಮ ವಾತಾವರಣವಿರುತ್ತದೆ. ತಣ್ಣಗೆ ಬೀಳುವ ಮಂಜು, ಬಿಸಿಲು ಇಲ್ಲದ ಕೂಲ್ ಕೂಲ್ ವಾತಾವರಣ ಔಟಿಂಗ್ ಮಾಡಲು ಹೇಳಿ ಮಾಡಿಸಿದಂತಿರುತ್ತದೆ. ಎಷ್ಟು ಓಡಾಡಿದರೂ ಸುಸ್ತಾಗುವುದಿಲ್ಲ. 

Tap to resize

ಬ್ಯಾಕ್‌ವಾಟರ್ಸ್‌
ಕೇರಳದಲ್ಲಿ ಬ್ಯಾಕ್‌ವಾಟರ್ಸ್ ಹಾಗೂ ಹೌಸ್‌ಬೋಟ್ಸ್ ಹೆಚ್ಚು ಫೇಮಸ್‌ ಆಗಿದೆ. ಜನವರಿ ಈ ಆಕ್ಟಿವಿಟಿಗೆ ಹೇಳಿ ಮಾಡಿಸಿದ ತಿಂಗಳು. ಸುತ್ತಲೂ ಹಸಿರಿನ ಪರಿಸರ. ನಡುವೆ ನೀರಿನಲ್ಲಿ ಸಂಚರಿಸಲು ಆಹ್ಲಾದಕರವಾಗಿರುತ್ತದೆ.

ಹಬ್ಬಗಳ ಸಂಭ್ರಮ
ಜನವರಿಯಲ್ಲಿ ಕೇರಳಕ್ಕೆ ಹೋದರೆ ನೀವು ಹಬ್ಬದ ಸಂಭ್ರಮವನ್ನೂ ಸವಿಯಬಹುದು. ಕೇರಳದ ಪ್ರಸಿದ್ಧ ಫೆಸ್ಟಿವಲ್‌ 'ಅಟ್ಟುಕಲ್‌ ಪೊಂಗಲ್‌' ಹಬ್ಬದ ವೈಬ್‌ನ್ನು ಅಲ್ಲಿದ್ದೇ ಎಂಜಾಯ್ ಮಾಡಿದರೆ ಚೆಂದ.

ವೈಲ್ಡ್ ಲೈಫ್ ಮತ್ತು ಪರಿಸರ
ಸುಂದರವಾದ ಲ್ಯಾಂಡ್‌ ಸ್ಕೇಪ್ ದೃಶ್ಯವನ್ನು ಕಣ್ತುಂಬಿಕೊಳ್ಳಲು ಖಂಡಿತವಾಗಿಯೂ ಜನವರಿಯಲ್ಲಿ ಕೇರಳಕ್ಕೆ ಹೋಗಲೇಬೇಕು. ನ್ಯಾಷನಲ್‌ ಪಾರ್ಕ್‌ಗಳಾದ ಪೆರಿಯಾರ್‌ನ ಸುಂದರ ಸೊಬಗು ಮನಸೂರೆಗೊಳ್ಳೋದ್ರಲ್ಲಿ ಯಾವುದೇ ಸಂದೇಹವಿಲ್ಲ.

ಸಂಸ್ಕೃತಿಯ ವೈಭವ
ಕೇರಳದಲ್ಲಿ ಹಲವಾರು ಸುಂದರ ಆರ್ಟ್‌ ಫಾರ್ಮ್‌ಗಳಿವೆ. ಕಥಕ್ಕಳಿ, ಕಳರಿಪಯಟ್ಟು ಮೊದಲಾದ ಕಲಾಪ್ರಕಾರ ಎಂಥವರನ್ನೂ ತನ್ಮಯಗೊಳಿಸುತ್ತದೆ. ಜನವರಿಯಲ್ಲಿ ಮ್ಯೂಸಿಕ್ ಫೆಸ್ಟಿವಲ್‌ಗಳೂ ಹೆಚ್ಚಾಗಿ ನಡೆಯುವ ಕಾರಣ ನೀವು ಇದನ್ನು ಸಹ ನೋಡಬಹುದು.

ಬೀಚ್ ವೈಬ್‌
ದೇವರನಾಡಿನ ಸುಂದರ ಕಡಲತೀರಗಳಲ್ಲಿ ನೀವು ಜನವರಿಯಲ್ಲಿ ಅತ್ಯದ್ಭುತವಾದ ಸಮಯವನ್ನು ಕಳೆಯಬಹುದು. ಕೋವಳಂ, ವರ್ಕಳದ ಬೀಚ್‌ಗಳ ಮರಳಿನಲ್ಲಿ ಕುಳಿತು ಸನ್‌ಸೆಟ್ ನೋಡುತ್ತಾ ರಿಲ್ಯಾಕ್ಸ್ ಆಗಬಹುದು.

Latest Videos

click me!