ಉಜ್ಜಯಿನಿ ಮಹಾಕಾಳನಿಗೆ ಪ್ರತಿ ಮುಂಜಾನೆ ನಡೆಯುತ್ತೆ ಚಿತಾ ಭಸ್ಮದಾರತಿ

First Published Jan 17, 2024, 3:17 PM IST

ಉಜ್ಜಯಿನಿಯಲ್ಲಿರುವ ಮಹಾಕಾಲೇಶ್ವರ ದೇವಸ್ಥಾನಕ್ಕೆ ಸಂಬಂಧಿಸಿದ ಹಲವಾರು ರಹಸ್ಯಗಳಿವೆ. ಅವುಗಳಲ್ಲಿ ಕೆಲವು ನಿಮಗೆ ತಿಳಿದಿದೆ. ಇನ್ನೂ ಕೆಲವು ನಿಮಗೆ ತಿಳಿದಿರಲು ಸಾಧ್ಯವಿಲ್ಲ. ಇಲ್ಲಿನ ಚಿತಾಭಸ್ಮ ಆರತಿ ಬಹಳ ಪ್ರಸಿದ್ಧವಾಗಿದೆ ಎಂದು ಹೇಳಲಾಗುತ್ತದೆ. ಬೆಳಿಗ್ಗೆ 4 ರಿಂದ ನಡೆಯಲಿರುವ ಭಸ್ಮ ಆರತಿಯಲ್ಲಿ ಭಾಗಿಯಾಗಲು ಮುಂಚಿತವಾಗಿ ನೋಂದಾಯಿಸಿಕೊಳ್ಳಬೇಕು. 
 

ಮಧ್ಯಪ್ರದೇಶದ ಉಜ್ಜಯಿನಿಯನ್ನು (Ujjain) ಶಿವನ ನಗರ ಎಂದು ಕರೆಯಲಾಗುತ್ತದೆ. 12 ಜ್ಯೋತಿರ್ಲಿಂಗಗಳಲ್ಲಿ ಒಂದಾದ ಮಹಾಕಾಲೇಶ್ವರ ಜ್ಯೋತಿರ್ಲಿಂಗ ಇಲ್ಲಿ ಇದೆ. ಪ್ರಪಂಚದಾದ್ಯಂತದ ಜನರು ಶಿವನ ದರ್ಶನಕ್ಕಾಗಿ ಇಲ್ಲಿಗೆ ಬರುತ್ತಾರೆ. ಇಲ್ಲಿಗೆ ಬಂದು ಶಿವನನ್ನು ಬೇಡಿಕೊಳ್ಳೋದರಿಂದ ಜನರ ಪ್ರತಿಯೊಂದೂ ಬಿಕ್ಕಟ್ಟು ನಿವಾರಣೆಯಾಗುತ್ತೆ ಎಂದು ನಂಬಲಾಗಿದೆ. 
 

ನಂಬಿಕೆ ಪ್ರಕಾರ, ಬಾಬಾ ಮಹಾಕಾಲ (Mahakaleshwar Mandir) ದೇವಾರ ದರ್ಶನ ಮಾಡುವ ಮೂಲಕ ಜೀವನ-ಸಾವಿನ ಚಕ್ರವನ್ನು ಸಹ ಸಂಪರ್ಕಿಸಲಾಗುತ್ತದೆ ಮತ್ತು ವ್ಯಕ್ತಿ ಮರಣದ ನಂತರ ಮೋಕ್ಷವನ್ನು ಪಡೆಯುತ್ತಾನೆ ಎಂದು ನಂಬಲಾಗುತ್ತದೆ. ಇಲ್ಲಿನ ಚಿತಾಭಸ್ಮವು ಬಹಳ ಪ್ರಸಿದ್ಧ. ನೀವು ಇಲ್ಲಿಗೆ ಹೋಗಲು ಪ್ಲ್ಯಾನ್ ಮಾಡುತ್ತಿದ್ದರೆ, ಇಂದು ನಾವು ನಿಮಗೆ ಇಲ್ಲಿನ ವಿಶೇಷ ಭಸ್ಮಾ ಆರತಿಯ ಕೆಲವು ವಿಷಯಗಳನ್ನು ಹೇಳಲಿದ್ದೇವೆ, ಅದನ್ನು ತಿಳಿದರೆ ನಿಮಗೆ ಅಚ್ಚರಿಯಾಗಬಹುದು.
 

ಮಹಾಕಾಲನಿಗೆ ಆರು ಬಗೆಯ ಆರತಿ
ಮಹಾಕಾಲನಿಗೆ 6 ರೀತಿಯ ಆರತಿ ಮಾಡಲಾಗುತ್ತದೆ, ಇದರಲ್ಲಿ ಅತ್ಯಂತ ವಿಶೇಷವಾದುದು ಭಸ್ಮ ಆರತಿ, ಮೊದಲನೆಯದಾಗಿ ಭಸ್ಮಾ ಆರತಿ, ನಂತರ ಎರಡನೇ ಆರತಿಯಲ್ಲಿ, ಶಿವನಿಗೆ ಮಹಾಕಾಲನ ರೂಪವನ್ನು ನೀಡಲಾಗುತ್ತದೆ, ಮೂರನೇ ಆರತಿಯಲ್ಲಿ, ಶಿವಲಿಂಗಕ್ಕೆ ಹನುಮಾನ್ ಜಿ ರೂಪವನ್ನು ನೀಡಲಾಗುತ್ತದೆ. ನಾಲ್ಕನೇ ಆರತಿಯಲ್ಲಿ, ಶಿವನ ಶೇಷನಾಗ ಅವತಾರವನ್ನು ಕಾಣಬಹುದು. ಐದನೆಯದರಲ್ಲಿ, ಶಿವನಿಗೆ ಮದುಮಗನ ರೂಪವನ್ನು ನೀಡಲಾಗುತ್ತದೆ ಮತ್ತು ಆರನೇ ಆರತಿಯಲ್ಲಿ, ಶಯನ ಆರತಿ ಆಗಿದೆ.

ಭಸ್ಮಾ ಆರತಿಯಲ್ಲಿ ಚಿತಾ ಭಸ್ಮಾ
ಭಸ್ಮಾ ಆರತಿ ಇಲ್ಲಿ ಮುಂಜಾನೆ 4 ಗಂಟೆಗೆ ನಡೆಯುತ್ತದೆ, ಈ ಆರತಿಯ ವಿಶೇಷತೆಯೆಂದರೆ ಮಹಾಕಾಲನನ್ನು ತಾಜಾ ಮೃತ ದೇಹಗಳ ಚಿತಾಭಸ್ಮದಿಂದ (ashes of dead) ಪೂಜಿಸಲಾಗುತ್ತದೆ. ಎಲ್ಲರಿಗೂ ಈ ಆರತಿ ನೋಡಲು ಸಾಧ್ಯವಿಲ್ಲ. ಈ ಆರತಿಯ ಸೌಲಭ್ಯ ದೊರೆಯಲು, ಮುಂಚಿತವಾಗಿ ಬುಕ್ ಮಾಡಿರಬೇಕು. ಭಸ್ಮಾರತಿಯನ್ನು ನೋಡಲು ಮಹಿಳೆಯರು ಮುಂಚಿತವಾಗಿ ಕಾಯ್ದಿರಿಸಬೇಕು ಎಂಬುದನ್ನು ನೆನಪಿನಲ್ಲಿಡಿ.
 

ಮಹಿಳೆಯರು ಮುಸುಕು ಧರಿಸಬೇಕು
ಶಿವಲಿಂಗದ ಮೇಲೆ ಚಿತಾಭಸ್ಮವನ್ನು ಅರ್ಪಿಸುವ ಸಮಯದಲ್ಲಿ, ಮಹಿಳೆಯರು ಮುಸುಕು ಧರಿಸಬೇಕಾಗುತ್ತದೆ. ಆ ಸಮಯದಲ್ಲಿ ಶಿವನಿಗೆ ರೂಪರಹಿತವಾಗಿ  ಭಸ್ಮಾರತಿ ಮಾಡಲಾಗುತ್ತದೆ ಮತ್ತು ಮಹಿಳೆಯರು ಈ ರೂಪದಲ್ಲಿ ಶಿವನನ್ನು ನೋಡಬಾರದು ಎಂಬ ನಂಬಿಕೆ ಇದೆ. ಈ ಆರತಿಯನ್ನು ನೋಡಲು ಪುರುಷರು ಸ್ವಚ್ಚವಾದ ಧೋತಿ ಧರಿಸಿ ಬರಬೇಕು. 

ಮಹಾಕಾಳ ಅಲ್ಲಿ ನೆಲೆಸಲು ಕಾರಣ ಏನು?
ಪ್ರಾಚೀನ ನಂಬಿಕೆ ಪ್ರಕಾರ, ದುಶಾನ ಎಂಬ ರಾಕ್ಷಸನಿಂದಾಗಿ ಅವಂತಿಕಾದಲ್ಲಿ ಭಯವಿತ್ತು. ಪಟ್ಟಣದ ಜನರು ರಾಕ್ಷಸನಿಂದ ತಮ್ಮ ರಕ್ಷಿಸಲು ಶಿವನನ್ನು ಪ್ರಾರ್ಥಿಸಿದಾಗ, ಶಿವ ಅವನನ್ನು ಕೊಂದು ಅವನ ಚಿತಾಭಸ್ಮದಿಂದ ಅಲಂಕೃತನಾದನು. ಇದರ ನಂತರ, ಗ್ರಾಮಸ್ಥರ ಒತ್ತಾಯದ ಮೇರೆಗೆ, ಶಿವ ಅಲ್ಲಿ ಮಹಾಕಾಲ ಆಗಿ ನೆಲೆಸಿದನು ಎನ್ನಲಾಗುತ್ತದೆ. ಈ ಕಾರಣಕ್ಕಾಗಿ, ಈ ದೇವಾಲಯವನ್ನು ಮಹಾಕಾಲೇಶ್ವರ ಎಂದು ಹೆಸರಿಸಲಾಯಿತು ಮತ್ತು ಶಿವಲಿಂಗಕ್ಕೆ ಚಿತಾ ಭಸ್ಮದಲ್ಲಿ ಆರತಿ ಮಾಡಲಾಯಿತು. 

ಯಾವುದೇ ರಾಜ ಅಥವಾ ಮಂತ್ರಿ ಉಜ್ಜಯಿನಿಯಲ್ಲಿ ರಾತ್ರಿ ತಂಗೋದಿಲ್ಲ
ಭಗವಾನ್ ಮಹಾಕಾಲ ಈ ನಗರದ ರಾಜ ಎಂದು ನಂಬಲಾಗಿದೆ, ಮತ್ತು ಅವನನ್ನು ಹೊರತುಪಡಿಸಿ ಬೇರೆ ಯಾವುದೇ ರಾಜನು ಇಲ್ಲಿ ಉಳಿಯಲು ಸಾಧ್ಯವಿಲ್ಲ. ಇದಕ್ಕೆ ಸಂಬಂಧಿಸಿದ ಅನೇಕ ಉದಾಹರಣೆಗಳಿವೆ,  ನಮ್ಮ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸಹ ಅಲ್ಲಿ ರಾತ್ರಿ ಕಳೆದು ಬಂದ ಮರುಗಳಿಗೆಯೆ ಅಧಿಕಾರ ಕಳೆದುಕೊಂಡಿದ್ದರು. 

click me!