ಭಾರತೀಯ ರೈಲ್ವೆಯು ಕಾಶಿ, ಅಯೋಧ್ಯೆ, ಪುರಿ ಸೇರಿದಂತೆ ಹಲವು ಪುಣ್ಯಕ್ಷೇತ್ರಗಳ ದರ್ಶನಕ್ಕಾಗಿ ವಿಶೇಷ ಪ್ರವಾಸಿ ಪ್ಯಾಕೇಜ್ ಘೋಷಿಸಿದೆ. 9 ರಾತ್ರಿ 10 ಹಗಲುಗಳ ಈ ಯಾತ್ರೆಯು ಕೇವಲ ₹16,500 ರಿಂದ ಪ್ರಾರಂಭವಾಗಲಿದ್ದು, ಪ್ರಯಾಣ, ವಸತಿ ಮತ್ತು ಊಟದ ಸೌಲಭ್ಯಗಳನ್ನು ಒಳಗೊಂಡಿದೆ.
ಕಾಶಿ, ಅಯೋಧ್ಯೆ, ಪುರಿ, ಗಯಾ, ಪ್ರಯಾಗ್ರಾಜ್ ಸೇರಿ ಭಾರತದಲ್ಲಿನ ಅಸಂಖ್ಯ ಪುಣ್ಯಕ್ಷೇತ್ರಗಳ ದರ್ಶನ ಮಾಡುವ ಹಂಬಲ ಹಲವರಿಗೆ ಇರುತ್ತದೆ. ಆದರೆ, ದುಬಾರಿ ವೆಚ್ಚದಿಂದಾಗಿ ಹಲವರಿಗೆ ಅದು ಕೈಗೆಟುಕದ್ದಾಗಿದೆ. ಇದೇ ಕಾರಣಕ್ಕೆ, ಭಾರತೀಯ ರೈಲ್ವೆ ಇದೀಗ ಕೇವಲ 16,500 ರೂಪಾಯಿಗೆ ಎಲ್ಲಾ ಸೌಲಭ್ಯಗಳನ್ನೂ ಕೊಟ್ಟು ಪುಣ್ಯಕ್ಷೇತ್ರಗಳ ದರ್ಶನ ಮಾಡಿಸಲಿದೆ. ವಿಶೇಷ ಪ್ರವಾಸ ಪ್ಯಾಕೇಜ್ ಅನ್ನು ಭಾರತೀಯ ರೈಲ್ವೆ (ಐಆರ್‌ಸಿಟಿಸಿ) ಕಲ್ಪಿಸಿದೆ. 9 ರಾತ್ರಿ 10 ಹಗಲು ಈ ಯಾತ್ರೆ ಇರಲಿದೆ.
27
ಯಾವ ಕ್ಷೇತ್ರಗಳ ದರ್ಶನ?
ಪುರಿ, ಕೋಣಾರ್ಕ್, ಗಯಾ, ಕಾಶಿ (ವಾರಣಾಸಿ), ಅಯೋಧ್ಯೆ ಹಾಗೂ ಪ್ರಯಾಗರಾಜ್, ಪುರಿ ಜಗನ್ನಾಥ ದೇವಾಲಯ, ಕೋಣಾರ್ಕ ಸೊರ್ಯ ದೇವಾಲಯ, ಗಯಾದ ವಿಷ್ಣುಪಾದ ದೇವಾಲಯ, ಕಾಶಿ ವಿಶ್ವಾನಾಥ ದೇವಾಲಯ ಮತ್ತು ಕಾರಿಡಾರ್, ವಿಶಾಲಾಕ್ಷಿ ದೇವಸ್ಥಾನ, ಅನ್ನಪೂಣೇಶ್ವರಿ ದೇವಸ್ಥಾನ ಹಾಗೂ ಪ್ರಸಿದ್ಢ ಗಂಗಾ ಆರತಿಯನ್ನು ವೀಕ್ಷಿಸುವ ಅವಕಾಶ ದೊರೆಯಲಿದೆ. ಇದರ ಜೊತೆಗೆ ಅಯೋಧ್ಯೆಯ ರಾಮ ಜನ್ಮಭೂಮಿ ಮಂದಿರ, ಹನುಮಾನ್ ಗಢಿ, ಸರಯೂ ನದಿಯ ಆರತಿ ಹಾಗೂ ಪ್ರಯಾಗ್ರ ರಾಜ್ ತ್ರಿವೇಣಿ ಸಂಗಮಕ್ಕೂ ಬೇಟಿ ನೀಡಲಾಗುತ್ತದೆ.
37
ಭಾರತ್ ಗೌರವ ಸ್ಪೆಷಲ್ ಟೂರಿಸ್ಟ್ ರೈಲು
ಭಾರತ್ ಗೌರವ ಸ್ಪೆಷಲ್ ಟೂರಿಸ್ಟ್ ರೈಲು' ಇದಕ್ಕಾಗಿ ಸಂಚಾರ ಮಾಡಲಾಗಿದೆ. ರೈಲು ಆಗಸ್ಟ್ 4ರಂದು ಸಿಕಂದರಾಬಾದ್ ನಿಂದ ಹೊರಡಲಿದೆ. ಕರ್ನಾಟಕದಿಂದಲೂ ಸಿಕಂದರಾಬಾದ್ಗೆ ಹಲವು ಟ್ರೈನ್ಗಳು ಲಭ್ಯ ಇದ್ದು, ಇಲ್ಲಿಯ ಜನರೂ ಅದರ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.
ವಿವಿಧ ಕ್ಲಾಸ್ಗಳು ರೈಲಿನಲ್ಲಿ ಇರುವಂತೆ ಇಲ್ಲಿಯೂ ನಿಮ್ಮ ನಿಮ್ಮ ಅನುಕೂಲಕ್ಕೆ ತಕ್ಕಂತೆ ಪ್ರವಾಸದರ ನಿಗದಿ ಮಾಡಲಾಗಿದೆ. ಅದರ ಡಿಟೇಲ್ಸ್ ಇಲ್ಲಿದೆ:
ಸ್ಲಿಪರ್ ಕ್ಲಾಸ್ (ಎಕಾನಮಿ) ಟಿಕೆಟ್ ದರ ಪ್ರತಿ ವ್ಯಕ್ತಿಗೆ ರೂ. 16,500 ರಿಂದ ಪ್ರಾರಂಭ
ಸ್ಲೀಪರ್ ಕ್ಲಾಸ್ (ಎಕಾನಮಿ) ರೂ. 16,500 (5 11 ವರ್ಷದ ಮಕ್ಕಳಿಗೆ 15,400)
ತೃತೀಯ ಎಸಿ (3AC) ರೂ. 25,600 (5 11 ವರ್ಷದ ಮಕ್ಕಳಿಗೆ 24,300)
ದ್ವಿತೀಯ ಎಸಿ (2AC) ರೂ. 33,400 (5 11 ವರ್ಷದ ಮಕ್ಕಳಿಗೆ 31,800)
57
ಇವೆಲ್ಲಾ ಸೌಲಭ್ಯಗಳಿವೆ
ರಾತ್ರಿ 10 ದಿನಗಳು ಈ ಯಾತ್ರೆಯಲ್ಲಿ ಪ್ರಯಾಣ ಮಾತ್ರವಲ್ಲದೇ, ಸ್ಥಳಿಯ ಸಾರಿಗೆ, ವಸತಿ ವ್ಯವಸ್ಥೆ, ವೆಜಿಟೇರಿಯನ್ ಉಪಾಹಾರ, ಮಧ್ಯಾಹ್ನ ಹಾಗೂ ರಾತ್ರಿಯ ಊಟ, ಪ್ರವಾಸದ ಮಾರ್ಗದರ್ಶಕರ ಸೇವೆ ಮತ್ತು ಪ್ರಯಾಣ ವಿಮೆ ಸೇರಿದಂತೆ ಇನ್ನು ಹಲವಾರು ಸೌಲಭ್ಯಗಳು ಇದರಲ್ಲಿ ಸೇರಿವೆ.
67
ನಿಲುಗಡೆ ಇಲ್ಲೆಲ್ಲಾ ಇವೆ
ಸಿಕಂದರಾಬಾದ್, ಚರ್ಲಪಳ್ಳಿ, ಕಾಜಿಪೇಟ್, ವಾರಂಗಲ್, ಖಮ್ಮಂ, ವಿಜಯವಾಡ, ಗುಡಿವಾಡ, ಭೀಮಾವರಂ, ತನೂಕು, ನಿಡದವೋಲು, ರಾಜಮಹೇಂದ್ರವರಂ, ಸಮಲ್ಕೋಟ್, ತುಣಿ, ದುವ್ವಾಡ, ಪೆಂಡುರ್ತಿ ಹಾಗೂ ವಿಜಯನಗರಂ ಜಂಕ್ಷನ್ ಸೇರಿದಂತೆ ಹಲವು ನಿಲ್ದಾಣಗಳಲ್ಲಿ ಪ್ರಯಾಣಿಕರು ರೈಲು ಹತ್ತಲು ಮತ್ತು ಇಳಿಯಲು ಅವಕಾಶವಿದೆ.
ನೀವು ಯಾವ ಸ್ಥಳದಿಂದ ಹತ್ತುವುದು ಎನ್ನುವ ಡಿಟೇಲ್ಸ್ ಅಲ್ಲಿ ಕೇಳಲಾಗಿದ್ದು ಅದನ್ನೂ ಕೊಡಿ.
ಬಳಿಕ ಹಣ ನೀಡಿ ಬುಕ್ ಮಾಡಿ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.