ಮಹಿಳೆ ತನ್ನ ಮಗುವಿನೊಂದಿಗೆ ಅದು ಗಂಡು ಮಗು ಅಥವಾ ಹೆಣ್ಣು ಮಗುವೇ ಆಗಿರಲಿ, ಒಬ್ಬಂಟಿಯಾಗಿ ರೈಲಿನಲ್ಲಿ ರಾತ್ರಿಯ ವೇಳೆ ಪ್ರಯಾಣ ಮಾಡುತ್ತಿದ್ದರೆ, ಆಕೆಯನ್ನು ಯಾವುದೇ ಕಾರಣಕ್ಕೂ ರೈಲಿನಿಂದ ಕೆಳಗೆ ಇಳಿಸುವಂತಿಲ್ಲ. ಏಕೆಂದರೆ ಇದು ಭಾರತೀಯ ರೈಲ್ವೆಯ ಸ್ತ್ರೀ ಮತ್ತು ಮಕ್ಕಳ ರಕ್ಷಣೆಯ ಅತ್ಯಂತ ಕಠಿಣ ನಿಯಮವಾಗಿದೆ.
ಯಾವುದೇ ಕಾರಣದಿಂದ ನೀವು ನಿಮ್ಮ ರೈಲನ್ನು ತಪ್ಪಿಸಿಕೊಂಡರೆ ಮುಂದಿನ ಎರಡು ನಿಲ್ದಾಣಗಳಿಂದ ನೀವು ಆ ಟ್ರೇನ್‌ಅನ್ನು ಮರಳಿ ಹಿಡಿಯಬಹುದಾಗಿದೆ.
ಭಾರತೀಯ ರೈಲ್ವೇಯು ಲಗೇಜ್ ಅಥವಾ ಸಾಮಾನು ಸರಂಜಾಮುಗಳನ್ನು ಸಾಗಿಸಲು ಗರಿಷ್ಠ ಮಿತಿಯನ್ನು ಹೊಂದಿದೆ. ರೈಲಿನಲ್ಲಿ ಒಬ್ಬ ವ್ಯಕ್ತಿ 70 ಕೆಜಿಗಿಂತ ಹೆಚ್ಚು ಲಗೇಜ್ ಕೊಂಡೊಯ್ಯುವಂತಿಲ್ಲ ಎಂದು ಭಾರತೀಯ ರೈಲ್ವೇಯ ನಿಯಮ ತಿಳಿಸುತ್ತದೆ.
ಭಾರತೀಯ ರೈಲ್ವೇ ಮಿಡಲ್ ಬರ್ತ್ ನಿಯಮದ ಬಗ್ಗೆ ನಿಮಗೆ ತಿಳಿದಿದೆಯೇ? ಇಲ್ಲದಿದ್ದರೆ ಭಾರತೀಯ ರೈಲ್ವೇಯಲ್ಲಿ ಮಿಡಲ್ ಬರ್ತ್ ವಿಚಾರದಲ್ಲಿ ನಿಯಮವಿದೆ, ಅಲ್ಲಿ ಮಲಗುವ ಸಮಯವನ್ನು ನಿಗದಿ ಮಾಡಲಾಗಿದೆ. ಇದರ ಪ್ರಕಾರ, ಮಲಗುವ ಸಮಯವನ್ನು ರಾತ್ರಿ 10 ರಿಂದ ಬೆಳಿಗ್ಗೆ 6 ರವರೆಗೆ ನಿಗದಿಪಡಿಸಲಾಗಿದೆ ಮತ್ತು ನೀವು ಬೆಳಿಗ್ಗೆ 6 ರ ನಂತರ ಮಿಡಲ್ ಬರ್ತ್‌ನಲ್ಲಿ ಮಲಗಿಕೊಳ್ಳುವ ಹಾಗಿಲ್ಲ.
ನಮಗೆಲ್ಲರಿಗೂ ತಿಳಿದಿರುವಂತೆ ನಮ್ಮ ಜನಸಂಖ್ಯೆಯ ಹೆಚ್ಚಿನ ಸಂಖ್ಯೆಯ ಜನರು ರೈಲಿನಲ್ಲಿ ಪ್ರಯಾಣಿಸಲು ಬಳಸುತ್ತಾರೆ. ಪ್ರತಿಯೊಬ್ಬರ ಸುರಕ್ಷತೆಗಾಗಿ ಭಾರತೀಯ ರೈಲ್ವೆಯಲ್ಲಿ ಮತ್ತೊಂದು ಪ್ರಮುಖ ನಿಯಮವಿದೆ. ಅದೇನೆಂದರೆ, ನಿಮ್ಮ ಫೋನ್‌ನ ಲೌಡ್ ಸ್ಪೀಕರ್ ಬಳಸಿ ಹಾಡು ಕೇಳುವಂತಿಲ್ಲ, ಮಾತನಾಡುವಂತಿಲ್ಲ ಎಂದು ಉಲ್ಲೇಖಿಸಲಾಗಿದೆ. ರಾತ್ರಿ 10 ಗಂಟೆಯ ನಂತರ ಲೌಡ್ ಸ್ಪೀಕರ್‌ನ ಆಡಿಯೋ ಅಥವಾ ವಿಡಿಯೋ ಇತರ ಪ್ರಯಾಣಿಕರಿಗೆ ತೊಂದರೆಯಾಗಬಹುದು ಎನ್ನುವ ಕಾರಣಕ್ಕೆ ಈ ನಿಯಮ ಮಾಡಲಾಗಿದೆ.