ಭಾರತೀಯ ರೈಲ್ವೆ ಜನಸ್ನೇಹಿ ಸಾರಿಗೆಯಾಗಿದ್ದು, ದೀರ್ಘ ಪ್ರಯಾಣಕ್ಕೆ ಇದುವೇ ಉತ್ತಮ ಎಂಬ ಅಭಿಪ್ರಾಯ ಎಲ್ಲಾ ಪ್ರಯಾಣಿಕರಿಂದ ಬರುತ್ತದೆ. ಆದ್ರೆ ಎಷ್ಟು ವರ್ಷದೊಳಗಿನ ಮಕ್ಕಳಿಗೆ ಟಿಕೆಟೆ ಪಡೆಯಬೇಕು ಎಂಬುದರ ಬಹುತೇಕರಿಗೆ ಗೊಂದಲ ಇರುತ್ತದೆ.
ಕೆಲವರು ರೈಲು ನಿಯಮಗಳ ಬಗ್ಗೆ ಗೊತ್ತಿರದ ಕಾರಣ ಚಿಕ್ಕ ಚಿಕ್ಕ ಮಕ್ಕಳಿಗೂ ವಯಸ್ಕರ ಟಿಕೆಟ್ ಖರೀದಿಸಲಾಗುತ್ತದೆ. ಎಷ್ಟು ವರ್ಷದೊಳಗಿನ ಮಕ್ಕಳಿಗೆ ಅರ್ಧ ಟಿಕೆಟ್ ತೆಗೆಯಬೇಕು ಎಂಬುದರ ಬಗ್ಗೆ ನಿಯಮಗಳಿವೆ. ಆ ನಿಯಮಗಳ ಕುರಿತ ವಿವರವಾದ ವರದಿ ಇಲ್ಲಿದೆ.
ಭಾರತೀಯ ರೈಲ್ವೆ ಮಕ್ಕಳ ಟಿಕೆಟ್‌ಗೆ ಸಂಬಂಧಿಸಿದಂತೆ ಕೆಲ ನಿಯಮಗಳನ್ನು ಮಾಡಿದೆ. ನಿಯಮಗಳ ಪ್ರಕಾರ, ನಾಲ್ಕು ವರ್ಷದೊಳಗಿನ ಮಕ್ಕಳಿಗೆ ಯಾವುದೇ ಟಿಕೆಟ್ ಖರೀದಿಸುವ ಅಗತ್ಯವಿಲ್ಲ. ನಾಲ್ಕು ವರ್ಷದೊಳಗಿನ ಮಕ್ಕಳು ರೈಲಿನಲ್ಲಿ ಉಚಿತವಾಗಿ ಪ್ರಯಾಣಿಸಬಹುದು.
ಭಾರತೀಯ ರೈಲ್ವೆಯ ಪ್ರಕಾರ, 5 ರಿಂದ 12 ವರ್ಷದೊಳಗಿನ ಮಕ್ಕಳಿಗೆ ಟಿಕೆಟ್ ತೆಗೆದುಕೊಳ್ಳುವುದು ಕಡ್ಡಾಯವಾಗಿದೆ. ಸ್ಲೀಪರ್ ಕೋಚ್‌ಗಳಲ್ಲಿ ನಿಮ್ಮ ಮಕ್ಕಳಿಗೆ ಸೀಟ್ ಬೇಡವಾಗಿದ್ರೆ ಅರ್ಧ ಟಿಕೆಟ್ ತೆಗೆದುಕೊಳ್ಳಬಹುದು. ಅರ್ಧ ಟಿಕೆಟ್ ಪಡೆದುಕೊಂಡಲ್ಲಿ ಪೋಷಕರು ಮಕ್ಕಳನ್ನು ತಮ್ಮ ಆಸನದಲ್ಲಿಯೇ ಕುಳಿಸಿಕೊಳ್ಳಬೇಕಾಗುತ್ತದೆ. ಅರ್ಧ ಟಿಕೆಟ್ ಪಡೆದರ ಮಕ್ಕಳಿಗೆ ಯಾವುದೇ ಆಸನ ನೀಡಲಾಗುವುದಿಲ್ಲ.
5-12ವರ್ಷದೊಳಿಗಿನ ಮಕ್ಕಳಿಗೆ ಇಡೀ ಬರ್ತ್ ಬೇಕಿದ್ದರೆ ಸಾಮಾನ್ಯ ಟಿಕೆಟ್ ಖರೀದಿಸಬೇಕು. ರಿಸರ್ವೇಶನ್ ಸಮಯದಲ್ಲಿ 4 ವರ್ಷದೊಳಗಿನ ಮಾಹಿತಿಯನ್ನು ಸಹ ನೀಡಬೇಕಾಗುತ್ತದೆ. ಇದಕ್ಕೆ ಯಾವುದೇ ಶುಲ್ಕ ಇರಲ್ಲ. ಸಾಮಾನ್ಯ ಪ್ರಯಾಣದ ವೇಳೆ ಅಂದ್ರೆ ಜನರಲ್ ಕೋಚ್‌ನಲ್ಲಿ 5-12 ವರ್ಷದೊಳಗಿನ ಮಕ್ಕಳಿಗೆ ಅರ್ಧ ಟಿಕೆಟ್ ತೆಗೆದುಕೊಳ್ಳಬೇಕಾಗುತ್ತದೆ.