ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಗ್ರಾಮವು 'ಕರ್ನಾಟಕದ ಹಾಲಿವುಡ್' ಎಂದೇ ಪ್ರಸಿದ್ಧವಾಗಿತ್ತು. ಇಂದು ಈ ಹಚ್ಚಹಸಿರಿನಿಂದ ಕೂಡಿದ, ಕಾವೇರಿ ನದಿ ತೀರದ ಸುಂದರ ತಾಣವು ಪ್ರಿ-ವೆಡ್ಡಿಂಗ್ ಫೋಟೋಶೂಟ್‌ಗೆ ಮತ್ತು ವೀಕೆಂಡ್ ಟ್ರಿಪ್‌ಗೆ ಜನಪ್ರಿಯವಾಗಿದೆ.
ವೀಕೆಂಡ್ ಬಂದ್ರೆ ಟ್ರಿಪ್ ಮಾಡಬೇಕು ಅನ್ನೋದು ಬೆಂಗಳೂರು ಜನತೆಯ ಆಸೆ. ಮಂಡ್ಯ ಜಿಲ್ಲೆಯಲ್ಲಿ ಸುಂದರವಾದ ತಾಣವವೊಂದಿದ್ದು, ನಿಮಗೆ ಗೋವಾದ ಅನುಭವವನ್ನು ನೀಡುತ್ತದೆ. ಇಲ್ಲಿಯ ನಿಸರ್ಗ ಸೌಂದರ್ಯ ಸವಿಯುತ್ತಾ ಕುಳಿತ್ರೆ ಸಮಯ ಹೋಗಿದ್ದೇ ಗೊತ್ತಾಗಲ್ಲ. ಈ ಪ್ಲೇಸ್ ಯಾವುದು ಎಂದು ನೋಡೋಣ ಬನ್ನಿ.
25
ಕರ್ನಾಟಕದ ಹಾಲಿವುಡ್
90ರ ದಶಕದಲ್ಲಿ ಈ ಸ್ಥಳ ಕರ್ನಾಟಕದ ಹಾಲಿವುಡ್ ಆಗಿತ್ತು. ಈ ಗ್ರಾಮದಲ್ಲಿ ಒಂದಿಲ್ಲೊಂದು ಸಿನಿಮಾದ ಚಿತ್ರೀಕರಣ ನಡೆಯುತ್ತಿತ್ತು. ಸ್ಟಾರ್ ಕಲಾವಿದರನ್ನು ನೋಡಲು ಜನರು ಮಂಡ್ಯ ಜಿಲ್ಲೆಯಲ್ಲಿರುವ ಈ ಗ್ರಾಮಕ್ಕೆ ಬರುತ್ತಿದ್ದರು. ಕನ್ನಡ, ತೆಲುಗು, ಹಿಂದಿ ಮತ್ತು ತಮಿಳು ಸಿನಿಮಾ ನಿರ್ದೇಶಕರು ಹೊರಾಂಗಣ ಚಿತ್ರೀಕರಣಕ್ಕೆ ಈ ಗ್ರಾಮವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು. ನಿರಂತರವಾಗಿ ಚಿತ್ರೀಕರಣ ನಡೆಯುತ್ತಿರೋದರಿಂದ ಇದನ್ನು ಕರ್ನಾಟಕದ ಹಾಲಿವುಡ್ ಎಂದು ಕರೆಯಲಾಗುತ್ತಿತ್ತು.
35
ಯಾವುದು ಈ ಗ್ರಾಮ?
ಮಂಡ್ಯದ ಕೊಪ್ಪಲು, ಅಂದ್ರೆ ಮಹದೇವಪುರ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ವ್ಯಾಪ್ತಿಯಲ್ಲಿ ಮಹದೇವಪುರ ಗ್ರಾಮ ಬರುತ್ತದೆ. ಮಂಡ್ಯ ನಗರದಿಂದ ಕೇವಲ 28 ಕಿ.ಮೀ. ಮತ್ತು ಶ್ರೀರಂಗಪಟ್ಟಣದಿಂದ 15 ಕಿ.ಮೀ ದೂರದಲ್ಲಿದೆ ಈ ಸುಂದರವಾದ ಸ್ಥಳ. ಶೂಟಿಂಗ್ ಮಹದೇವಪುರ ಅಂತಾನೇ ಈ ಗ್ರಾಮ ಜನಪ್ರಿಯವಾಗಿದೆ.
ಸುತ್ತಲೂ ಭತ್ತದ ಗದ್ದೆ, ರಸ್ತೆಯುದ್ದಕ್ಕೂ ತೆಂಗಿನಮರಗಳು, ಸ್ವಚ್ಛಂದ ಕಾವೇರಿ ನದಿ, ಹೂವಿನ ತೋಟಗಳು, ಪಕ್ಷಿದಾಮ ಸೇರಿದಂತೆ ಇಡೀ ಪ್ರದೇಶ ಹಚ್ಚಹಸಿರಿನಿಂದ ಕೂಡಿದೆ. ನದಿತೀರದಲ್ಲಿ ಬೋರದೇವರ ದೇವಸ್ಥಾನವಿದ್ದು, ವರ್ಷವಿಡೀ ತಂಪಾದ ವಾತಾವರಣವನ್ನು ಹೊಂದಿರೋದರಿಂದ ಕುಟುಂಬ ಸಮೇತರಾಗಿ ಈ ಸ್ಥಳಕ್ಕೆ ಭೇಟಿ ನೀಡಬಹುದು. ಇಂದು ಈ ಪ್ರದೇಶ ಪ್ರಿವೆಡ್ಡಿಂಗ್ ಸ್ಪಾಟ್ ಆಗಿ ಬದಲಾಗಿದೆ.
90ರ ದಶಕದಲ್ಲಿ ಇಲ್ಲಿನ ಜನರಿಗೆ ಚಿತ್ರೀಕರಣ ಕಾಲಕ್ಕೆ ತಮ್ಮ ದನಕರುಗಳನ್ನು ಕ್ಯಾಮೆರಾ ಮುಂದೆ ಒಂದು ಕ್ಷಣ ನಡೆಸಿಕೊಂಡು ಹೋಗು ಎಂದರೆ ನೂರು ರೂಪಾಯಿ ಕೇಳುತ್ತಿದ್ದರು. ಸಿನಿಮಾ ನಟರನ್ನು ನೋಡಲು ಮನೆತನಕ ಹೋದರೂ ಸಿಗದವರು ಇಲ್ಲಿ ಸಿಗುತ್ತಿದ್ದರು. ಅವರೊಂದಿಗೆ ಫೋಟೋ ತೆಗೆಸಿಕೊಳ್ಳಲೂ ಸಹ ಪೋಟೋಗ್ರಾಫರಗಳೂ ಸಹ ಹಾಜರಿರುತ್ತಿದ್ದರು.ಈ ಗ್ರಾಮದಲ್ಲಿ ಹೊರಾಂಗಣ ಚಿತ್ರೀಕರಣ ಮಾಡಿದ ಚಿತ್ರಗಳಲ್ಲಿ ಅತ್ಯಂತ ಯಶಸ್ವಿಯಾದ ಚಿತ್ರ ಜನುಮದ ಜೋಡಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.