ಈ ಜಾಗಕ್ಕೆ ಹೋದಾಗ ರಾತ್ರಿ 10 ಗಂಟೆಯ ನಂತರ ಹೀಗೆಲ್ಲಾ ಮಾಡ್ಬಾರ್ದಂತೆ!

Published : Sep 21, 2025, 12:14 PM IST

Quiet hours law: ಒಂದು ವೇಳೆ ಈಗ ನಾವು ಹೇಳುತ್ತಿರುವ ಜಾಗಕ್ಕೆ ಹೋದರೆ ಅಪ್ಪಿತಪ್ಪಿ ರಾತ್ರಿ ಗಂಟೆಯಾದ ನಂತರ  ಈ ರೀತಿಯೆಲ್ಲಾ ಮಾಡ್ಬೇಡಿ. ಯಾಕೆ ಮಾಡ್ಬಾರ್ದು, ಆ ಜಾಗ ಯಾವುದು? ನೋಡೋಣ ಬನ್ನಿ…  

PREV
17
ಜಾಗಗಳ ಬಗ್ಗೆ ತಿಳಿದುಕೊಳ್ಳಿ

ಪ್ರಯಾಣ ಮಾಡುವಾಗ ನಾವು ಹೋಗುವ ಜಾಗಗಳ ಬಗ್ಗೆ ಮೊದಲೇನೇ ತಿಳಿದುಕೊಂಡಿದ್ದರೆ ಒಳಿತು. ಇಲ್ಲವೇ ಸರಿಯಾದ ಮಾರ್ಗದರ್ಶಕರನ್ನು ನೇಮಿಸಿಕೊಳ್ಳಬೇಕು. ಏಕೆಂದರೆ ಅಲ್ಲಿಯ ನಿಯಮಗಳ ಬಗ್ಗೆ ನಾವು ತಿಳಿಯದೇ ಮಾಡುವ ತಪ್ಪಿನಿಂದ ದಂಡ ಕಟ್ಟಬೇಕಾದ ಪರಿಸ್ಥಿತಿ ಬಂದೊದಗಿದರೂ ಆಶ್ಚರ್ಯವೇನಿಲ್ಲ ಬಿಡಿ.

27
ಯಾಕೆ ಮಾಡ್ಬಾರ್ದು?

ಒಂದು ವೇಳೆ ಈಗ ನಾವು ಹೇಳುತ್ತಿರುವ ಜಾಗಕ್ಕೆ ಹೋದರೆ ಅಪ್ಪಿತಪ್ಪಿ ರಾತ್ರಿ ಗಂಟೆಯಾದ ನಂತರ ಈ ರೀತಿಯೆಲ್ಲಾ ಮಾಡ್ಬೇಡಿ. ಯಾಕೆ ಮಾಡ್ಬಾರ್ದು, ಆ ಜಾಗ ಯಾವುದು? ನೋಡೋಣ ಬನ್ನಿ…

37
ಸ್ವಿಟ್ಜರ್ಲೆಂಡ್ ಹೋಗುವ ಮುನ್ನ

ಪ್ರಕೃತಿ ಪ್ರಿಯರು ವಿದೇಶಕ್ಕೆ ಹೋಗಬೇಕೆಂದು ಪ್ಲಾನ್ ಮಾಡಿದಾಗ ಮೊದಲು ಸೆಲೆಕ್ಟ್ ಮಾಡುವುದು ಸ್ವಿಟ್ಜರ್ಲೆಂಡ್. ಇಲ್ಲಿನ ವ್ಯಾಲಿಗಳ ಸೌಂದರ್ಯ ನೋಡಿ ಅನುಭವಿಸಿದರೇನೇ ಚೆನ್ನ. ಇದಲ್ಲದೆ, ಸ್ವಿಟ್ಜರ್ಲೆಂಡ್ ಬಗ್ಗೆ ವಿಶೇಷ ಮಾಹಿತಿಗಾಗಿ ನೀವು ಇಂಟರ್ನೆಟ್ ಹುಡುಕಿದರೆ ಕೆಲವು ಆಶ್ಚರ್ಯಕರ ಸಂಗತಿಯನ್ನು ಕಂಡುಕೊಳ್ಳುವಿರಿ.

47
ಯಾಕೆ ಬಂತು ಈ ನಿಯಮ?

ಹೌದು, ಸ್ವಿಟ್ಜರ್ಲೆಂಡ್‌ನಲ್ಲಿ ರಾತ್ರಿ ಸ್ನಾನ ಮಾಡುವುದು ಮತ್ತು ಶೌಚಾಲಯದಲ್ಲಿ ಫ್ಲಶ್ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಹಲವಾರು ವರದಿಗಳು ಹೇಳುತ್ತವೆ. ಇದು ಯಾವ ರೀತಿಯ ನಿಯಮ ಮತ್ತು ಈ ವಿಶೇಷ ನಿಯಮವನ್ನು ಏಕೆ ರಚಿಸಲಾಗಿದೆ ಎಂದು ನೀವು ಆಶ್ಚರ್ಯಪಡುತ್ತಿರಬಹುದು.

57
ಇದರಲ್ಲಿ ಎಷ್ಟು ಸತ್ಯವಿದೆ?

ಹಾಗಾದರೆ ಇಂದು ಇದರಲ್ಲಿ ಎಷ್ಟು ಸತ್ಯವಿದೆ ಮತ್ತು ರಾತ್ರಿ ವೇಳೆ ಶೌಚಾಲಯವನ್ನು ಫ್ಲಶ್ ಮಾಡಬಾರದು ಎಂದು ಏಕೆ ಹೇಳಲಾಗುತ್ತದೆ ಎಂಬುದನ್ನು ನೋಡೋಣ. ವಾಸ್ತವವಾಗಿ ಅವರ ತರ್ಕವನ್ನು ಅರ್ಥಮಾಡಿಕೊಂಡ ನಂತರ ನೀವು ಸಹ ಅದು ನಿಜವೆಂದು ನಂಬಬಹುದು.

67
ಜೋರಾದ ಶಬ್ದ ಕೇಳಿಬರುವ ಕಾರಣಕ್ಕೆ!

ಸ್ವಿಟ್ಜರ್ಲೆಂಡ್ ಅನ್ನು ಅತ್ಯಂತ ಶಾಂತ ದೇಶಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ರಾತ್ರಿ ಸಮಯ ಬಂದಾಗ ಅದು ಇನ್ನಷ್ಟು ನಿಶ್ಯಬ್ದವಾಗುತ್ತದೆ. ಆದ್ದರಿಂದ ರಾತ್ರಿ ಸಣ್ಣ ಶಬ್ದವೂ ಕೇಳಬಹುದು. ಎಲ್ಲರಿಗೂ ಗೊತ್ತಿರುವಂತೆ ಟಾಯ್ಲೆಟ್ ಫ್ಲಶ್ ಮಾಡಿದಾಗ ಸಾಕಷ್ಟು ಜೋರಾದ ಶಬ್ದ ಕೇಳಿಬರುತ್ತದೆ. ಒಂದು ವೇಳೆ ಟಾಯ್ಲೆಟ್ ಫ್ಲಶ್ ಬಳಸುವುದರಿಂದ ನೆರೆಯ ಅಪಾರ್ಟ್‌ಮೆಂಟ್‌ಗಳಲ್ಲಿ ಶಬ್ದ ಮಾಲಿನ್ಯ ಉಂಟಾಗುತ್ತದೆ ಎಂದು ಸ್ಥಳೀಯರು ನಂಬುತ್ತಾರೆ. ಆದ್ದರಿಂದ ರಾತ್ರಿ ವೇಳೆ ಫ್ಲಶ್ ಮಾಡುವುದನ್ನು ಇಲ್ಲಿ ನಿಷೇಧಿಸಲಾಗಿದೆ.

77
ಈ ನಿಯಮ ನಿಜವೇ?

ಇದರ ಜೊತೆಗೆ ರಾತ್ರಿ ಸ್ನಾನ ಮಾಡುವುದನ್ನು ಸಹ ಶಬ್ದ ಮಾಲಿನ್ಯವೆಂದು ಪರಿಗಣಿಸಲಾಗುತ್ತದೆ. ತಡರಾತ್ರಿ ಸ್ನಾನಗೃಹ ಬಳಸುವುದರಿಂದ ನೆರೆಹೊರೆಯವರಿಗೆ ಅನಾನುಕೂಲವಾಗುತ್ತದೆ ಎಂದು ನಂಬಲಾಗಿದೆ.

ಈಗ ರಾತ್ರಿ ಶೌಚಾಲಯದಲ್ಲಿ ಫ್ಲಶ್ ಮಾಡೋದನ್ನ ನಿಜವಾಗಿಯೂ ನಿಷೇಧಿಸಲಾಗಿದೆಯೇ ಎಂದು ನೋಡುವುದಾದರೆ ಇಲ್ಲಿನ ನಿವಾಸಿಗಳು ಅಂದರೆ ಅನೇಕ ಮನೆಮಾಲೀಕರು ಬಾಡಿಗೆದಾರರಿಗೆ ಈ ನಿಯಮಗಳನ್ನು ಹೇರಿದ್ದಾರೆ. ಮನೆಮಾಲೀಕರು ತಮ್ಮ ಮನೆಗಳಲ್ಲಿ ಕೆಲವು ನಿಯಮಗಳನ್ನು ಮಾಡಲು ಸ್ವತಂತ್ರರು. ಅದಕ್ಕಾಗಿಯೇ ಇಲ್ಲಿನ ಅನೇಕ ಸ್ಥಳಗಳು ಬಾಡಿಗೆದಾರರಿಗೆ ಇದೇ ರೀತಿಯ ನಿಯಮಗಳನ್ನ ಹಾಕಿವೆಯಂತೆ.

Read more Photos on
click me!

Recommended Stories