ಇದು ವಿಶ್ವದ ಅತೀ ದುಬಾರಿ ಹೊಟೆಲ್, ಒಂದು ರಾತ್ರಿ ಕಳೆಯಲು 88 ಲಕ್ಷ ರೂಪಾಯಿ

Published : Sep 20, 2025, 05:00 PM IST

ಇದು ವಿಶ್ವದ ಅತೀ ದುಬಾರಿ ಹೊಟೆಲ್, ಒಂದು ರಾತ್ರಿ ಕಳೆಯಲು 88 ಲಕ್ಷ ರೂಪಾಯಿ, ಈ ದುಬಾರಿ ಹೊಟೆಲ್‌ನಲ್ಲಿ ಕಳೆಯಲು ಸೆಲೆಬ್ರೆಟಿಗಳು, ಶ್ರೀಮಂತರು ಸೇರಿದಂತೆ ಹಲವರು ಆಗಮಿಸುತ್ತಾರೆ. ಈ ಹೊಟೆಲ್ ಇಷ್ಟು ದುಬಾರಿ ಯಾಕೆ?

PREV
16
ದುಬೈ, ಸೇರಿ ಅರಬ್ ದೇಶದ ಹೊಟೆಲ್ ಅಲ್ಲ

ದುಬೈ, ಸೇರಿ ಅರಬ್ ದೇಶದ ಹೊಟೆಲ್ ಅಲ್ಲ

ಪ್ರತಿ ನಗರಗಳಲ್ಲಿ ದುಬಾರಿ ಹೊಟೆಲ್‌ಗಳಿರುತ್ತವೆ. 5 ಸ್ಟಾರ್, 7 ಸ್ಟಾರ್ ಸೇರಿದಂತೆ ಹಲವು ಸ್ಟಾರ್ ಲೆವೆಲ್ ಹೊಟೆಲ್ ಇರುತ್ತವೆ. ಒಂದ ದಿನಕ್ಕೆ 50 ಸಾವಿರ ರೂಪಾಯಿ, 1 ಲಕ್ಷ ರೂಪಾಯಿ ಸೇರಿದಂತೆ ದುಬಾರಿ ಬೆಲೆ ಸಾಮಾನ್ಯ. ಆದರೆ ಈ ಹೊಟೆಲ್‌ನಲ್ಲಿ ಕೇವಲ ಒಂದು ರಾತ್ರಿ ಅಂದರೆ ಕತ್ತಲಾಗುತ್ತಿದ್ದಂತೆ ಹೊಟೆಲ್ ಸೇರಿಕೊಂಡು ಬೆಳಗ್ಗೆ ತನಗೆ ತಂಗಲು ಬರೋಬ್ಬರಿ 88 ಲಕ್ಷ ರೂಪಾಯಿ ಪಾವತಿಸಬೇಕು. ಈ ಹೊಟೆಲ್ ದುಬೈ ಸೇರಿದಂತೆ ಅರಬ್ ರಾಷ್ಟ್ರದ ಹೊಟೆಲ್ ಅಲ್ಲ.

26
70 ಲಕ್ಷ ರೂಪಾಯಿಯಿಂದ ಆರಂಭ

70 ಲಕ್ಷ ರೂಪಾಯಿಯಿಂದ ಆರಂಭ

ವಿಶ್ವದ ಅತೀ ದುಬಾರಿ ಹೊಟೆಲ್ ಇರುವುದು ಸ್ವಿಟ್ಜರ್‌ಲೆಂಡ್‌ನ ಹೃದಯಭಾಗದ ಜೆನೆವಾದಲ್ಲಿ. ಜೆನೆವಾದ ಪ್ರಸಿಡೆಂಡ್ ವಿಲ್ಸನ್ ಹೊಟೆಲ್ ಅತೀ ದುಬಾರಿ ಹಾಗೂ ಐಷಾರಾಮಿ ಹೊಟೆಲ್ ಎಂದು ಗುರುತಿಸಿಕೊಂಡಿದೆ. ಇಲ್ಲಿ ಒಂದು ರಾತ್ರಿ ತಂಗಲು $80,000-100,000 ಡಾಲರ್ ಅಂದರೆ 70,48,032 ರೂಪಾಯಿಂದ 88,09,180 ರೂಪಾಯಿ ನೀಡಬೇಕು.

36
8ನೇ ಮಹಡಿಯಲ್ಲಿದೆ ಸ್ಯೂಟ್

8ನೇ ಮಹಡಿಯಲ್ಲಿದೆ ಸ್ಯೂಟ್

ಈ ಹೊಟೆಲ್‌ನಲ್ಲಿ ಹಲವು ಕೊಠಡಿಗಳಿವೆ. ಈ ಪೈಕಿ ಲಕ್ಷುರಿ ಸ್ಯೂಟ್ ಕೊಠಡಿಗೆ 88 ಲಕ್ಷ ರೂಪಾಯಿ ಪಾವತಿ ಮಾಡಬೇಕು. ಹಾಗಂತ ಇತರ ಕೊಠಡಿಗೆ ಕಡಿಮೆ ಇದೆ ಎಂತಲ್ಲ,ಉಳಿದ ಕೊಠಡಿಗಳ ಬೆಲೆಯೂ ಲಕ್ಷ ಲಕ್ಷ ರೂಪಾಯಿ. 8ನೇ ಮಹಡಿಯಲ್ಲಿರುವ ಈ ದುಬಾರಿ ಸ್ಯೂಟ್ 1,680 ಚದರ ಅಡಿ ವಿಸ್ತೀರ್ಣ ಹೊಂದಿದೆ.

46
ರಾಯಲ್ ಸ್ಯೂಟ್ ಎಂದೇ ಜನಪ್ರಿಯ

ರಾಯಲ್ ಸ್ಯೂಟ್ ಎಂದೇ ಜನಪ್ರಿಯ

ಹೊಟೆಲ್ ಪ್ರಸಿಡೆಂಟ್ ವಿಲ್ಸನ್ ಹೊಟೆಲ್‌ನ 8ನೇ ಮಹಡಿ ಸಂಪೂರ್ಣವಾಗಿ ನೀಡಲಾಗುತ್ತದೆ. 12 ಬೆಡ್‌ರೂಂ, 12 ಮಾರ್ಬಲ್ ಬಾತ್‌ರೂಂ ಸೇರಿದಂತೆ ಎಲ್ಲವೂ ಐಷಾರಾಮಿ ತನದಿಂದ ಕೂಡಿದೆ. ಇನ್ನು ಕಿಟಕಿಗಳು ಕೂಡ ಬುಲೆಟ್‌ಫ್ರೂಫ್ ವ್ಯವಸ್ಥೆ ಹೊಂದಿದೆ. 88 ಲಕ್ಷ ರೂಪಾಯಿ ಕೊಟ್ಟು ಈ ಕೊಠಡಿ ಬುಕ್ ಮಾಡಿದರೆ ನಿಮಗೆ ಪರ್ಸಲ್ ಅಸಿಸ್ಟೆಂಟ್,ಚೆಫ್, ಸಹಾಯಕರು, ಸಿಬ್ಬಂದಿಗಳನ್ನು ನೀಡಲಾಗುತ್ತದೆ.

56
ಅನ್‌ಲಿಮಿಟೆಡ್ ಫುಡ್ ಹಾಗೂ ಲಿಕ್ಕರ್

ಅನ್‌ಲಿಮಿಟೆಡ್ ಫುಡ್ ಹಾಗೂ ಲಿಕ್ಕರ್

ಇನ್ನು ಅನ್‌ಲಿಮಿಟೆಡ್ ಫುಡ್ ಹಾಗೂ ಲಿಕ್ಕರ್ ನೀಡಲಾಗುತ್ತದೆ. ಎಲ್ಲಾ ಬಗೆಯ, ವಿಶೇಷ ಖಾದ್ಯಗಳು ಇರಲಿದೆ. ಪಾರ್ಟಿ ಮಾಡಲು, ಕಾರ್ಯಕ್ರಮ ಮಾಡಲು ಅವಕಾಶವಿದೆ. ಇಲ್ಲಿನ ಎಲ್ಲಾ ಕೊಠಡಿಗಳಿಂದ ಜೆನೆವಾ ಲೇಕ್ ಹಾಗೂ ಆಲ್ಪ್ಸ್ ಲೇಕ್ ವೀಕ್ಷಣೆ ಸಿಗಲಿದೆ. ಇನ್ನು ಅತೀ ಸೌಂದರ್ಯದ ಸನ್‌ಸೆಟ್ ಕೂಡ ಇಲ್ಲಿಂದ ವೀಕ್ಷಣೆ ಮಾಡಲು ಸಾಧ್ಯವಿದೆ.

66
ಸುರಕ್ಷತೆಗೆ ಹೆಚ್ಚಿನ ಆದ್ಯತೆ

ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಇಲ್ಲಿ ಕೊಠಡಿ ಬುಕ್ ಮಾಡುವ ಮಂದಿಯನ್ನು ರಾಜ ರಾಣಿಯಂತೆ ಗೌರವಿಸಿ ಆತಿಥ್ಯ ನೀಡಲಾಗುತ್ತದೆ. ಇನ್ನು ಲಕ್ಷುರಿ ಸ್ಪಾ, ವೈದ್ಯರ ನೆರವು ಸೇರಿದಂತೆ ಎಲ್ಲವೂ ನೀಡಲಾಗುತ್ತದೆ. ಹೊಟೆಲ್ ಒಳಗೆ ಹೊಸ ಲೋಕವನ್ನೇ ಸೃಷ್ಟಿಸಲಾಗಿದೆ.

Read more Photos on
click me!

Recommended Stories