ಒಲಿಂಪಿಕ್ ಪದಕಗಳ ಬಗ್ಗೆ ಗೊತ್ತಿರದ ಇಂಟ್ರೆಸ್ಟಿಂಗ್ ಸಂಗತಿಗಳಿವು..!

First Published Jul 10, 2024, 4:46 PM IST

ಬೆಂಗಳೂರು: ಬಹುನಿರೀಕ್ಷಿತ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟವು ಇದೇ ಜುಲೈ 26ರಿಂದ ಆರಂಭವಾಗಲಿದೆ. ನಾವಿಂದು ಒಲಿಂಪಿಕ್ಸ್‌ನಲ್ಲಿ ನೀಡಲಾಗುವ ಪದಕಗಳ ಕುರಿತಾದ ಇಂಟ್ರೆಸ್ಟಿಂಗ್ ಮಾಹಿತಿಗಳನ್ನು ತಿಳಿದುಕೊಳ್ಳೋಣ ಬನ್ನಿ.
 

ನೀವೆಲ್ಲರೂ ಕಣ್ಣರಳಿಸಿ ನೋಡುವ ಓಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ ಪಡೆದವರು ಜಯಿಸುವ ಚಿನ್ನದ ಪದಕ ನಿಜಕ್ಕೂ ಅದು ನಿಜವಾದ ಚಿನ್ನ ಅಲ್ಲ ಎನ್ನುವುದು ನಿಮಗೆ ಗೊತ್ತಿರಲಿ.
 

1912ರಲ್ಲಿ ನಡೆದ ಸ್ಟಾಕ್‌ಹೋಮ್‌ ಒಲಿಂಪಿಕ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ವಿಜೇತರಿಗೆ ನಿಜವಾದ ಚಿನ್ನದ ಪದಕವನ್ನೇ ನೀಡಲಾಗಿತ್ತು. ಇದಾದ ಬಳಿಕ ಶುದ್ದ ಚಿನ್ನ ನೀಡುವ ಪರಿಪಾಠ ನಿಂತು ಹೋಯಿತು.

Latest Videos


1986ರ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಮೊದಲ ಸ್ಥಾನ ಪಡೆದವರು ಆಲೀವ್ ಎಲೆಯ ಕಿರೀಟ ಹಾಗೂ ಬೆಳ್ಳಿ ಪದಕವನ್ನು ನೀಡಿ ಗೌರವಿಸಲಾಗುತ್ತಿತ್ತು. 1904ರ ಒಲಿಂಪಿಕ್‌ನಲ್ಲಿ ಮೊದಲ ಬಾರಿಗೆ ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕ ನೀಡುವ ಪದ್ದತಿ ಜಾರಿಗೆ ತರಲಾಯಿತು.

ಒಲಂಪಿಕ್ ಧ್ಯೇಯವಾಕ್ಯ "ಸಿಟಿಯಸ್, ಅಲ್ಟಿಯಸ್, ಫೋರ್ಟಿಯಸ್" ("ವೇಗವಾದ, ಉನ್ನತ, ಬಲಶಾಲಿ") 1924ರ ಒಲಿಂಪಿಕ್ಸ್‌ನಲ್ಲಿ ಅಳವಡಿಸಿಕೊಳ್ಳಲಾಯಿತು. ಇದನ್ನು ಫಾದರ್ ಹೆನ್ರಿ ಡಿಡಾನ್ ಅವರು ರಚಿಸಿದ್ದರು.

ಈ ಸಂದರ್ಭದಲ್ಲಿ ಒಂದು ಸ್ಪರ್ಧೆಗೆ 4 ಪದಕ ಪರಿಚಯಿಸಲಾಯಿತು. ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ನೀಡಲಾಗಿದ್ದ 4 ಪದಕಗಳ ಕಾನ್ಸೆಪ್ಟ್‌ ಅದೇ ವರ್ಷದ ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಹಿಂಪಡೆಯಲಾಯಿತು.

Olympics

ಒಲಿಂಪಿಕ್ ಪದಕ ವಿಜೇತರು ಆ ಪದಕವನ್ನು ಹಲ್ಲಿನಿಂದ ಕಚ್ಚಿ ಫೋಟೋಗಳಿಗೆ ಫೋಸ್ ಕೊಡುವುದನ್ನು ನಾವು ಈ ಹಿಂದಿನಿಂದಲೂ ನೋಡುತ್ತಾ ಬಂದಿದ್ದೇವೆ. ಚಿನ್ನದ ಪರಿಶುದ್ಧತೆಯನ್ನು ಪರೀಕ್ಷಿಸಲು ಈ ಹಿಂದೆ ಅಥ್ಲೀಟ್‌ಗಳು ಪದಕವನ್ನು ಕಚ್ಚಿ ನೋಡುತ್ತಿದ್ದರು.

ಅಮೆರಿಕದ ಮಾಜಿ ಸ್ವಿಮ್ಮರ್ ಮೈಕಲ್ ಪೆಲ್ಫ್ಸ್ ಒಲಿಂಪಿಕ್ಸ್‌ನಲ್ಲಿ ಅತಿಹೆಚ್ಚು ಪದಕ ಜಯಿಸಿದ ಸಾಧನೆ ಮಾಡಿದ್ದಾರೆ. ಚಿನ್ನದ ಮೀನು ಎಂದೇ ಖ್ಯಾತಿ ಪಡೆದಿರುವ ಫೆಲ್ಫ್ಸ್ ಒಲಿಂಪಿಕ್ಸ್‌ನಲ್ಲಿ 18 ಪದಕ ಜಯಿಸಿದ್ದಾರೆ.
 

click me!