ಕನ್ನಡದ ಮೋಸ್ಟ್ ಟ್ಯಾಲೆಂಟೆಡ್ ನಟಿ (talented actress) ಎಂದು ಗುರುತಿಸಿಕೊಂಡಿರುವ ಹೊಸ ಪ್ರತಿಭೆ ಚೈತ್ರಾ ಆಚಾರ್ ತಮ್ಮ ನಟನೆಯ ಜೊತೆಗೆ ತುಸು ಹೆಚ್ಚೇ ಬೋಲ್ಡ್ ಎನಿಸುವಂತಹ ಫೋಟೋ ಶೂಟ್ ಮೂಲಕ ಸದಾ ಸುದ್ದಿಯಲ್ಲಿರುವ ನಟಿ.
ತಮ್ಮ ಬೋಲ್ಡ್ ಸ್ಟೇಟ್‌ಮೆಂಟ್‌ಗಳಷ್ಟೇ, ಬೋಲ್ಡ್ ಆಗಿ ಕಾಣಿಸಿ ಕೊಳ್ಳುವ ಮೂಲಕ ಚಿತ್ರರಂಗವೇ ಹುಬ್ಬೇರಿಸುವಂತೆ ಮಾಡೋ ಚೈತ್ರಾ ಆಚಾರ್ (Chaithra Achar), ತಮ್ಮ ನಟನೆ, ನೃತ್ಯ, ಹಾಡಿನ ಮೂಲಕ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಫೋಟೋ ಶೂಟ್ ಮೂಲಕ ಸದ್ದು ಮಾಡ್ತಿರ್ತಾರೆ.
ಮೊದ ಮೊದಲು ಬೋಲ್ಡ್ ಫೋಟೋ ಹಂಚಿ ಕೊಂಡಾಗ, ತುಂಬಾನೆ ಕೆಟ್ಟ ಕಾಮೆಂಟ್‌ಗಳು ಬರುತ್ತಿದ್ದುದರಿಂದ, ಕಾಮೆಂಟ್ ಆಯ್ಕೆಯನ್ನೇ ಸೀಮಿತಗೊಳಿಸಿದ ನಟಿ ಚೈತ್ರಾ ಬಳಿಕ ಚೈತ್ರಾ ಇಷ್ಟೊಂದು ಬೋಲ್ಡ್ ಹಾಟ್ ಆಗಿ ಕಾಣಿಸಬಲ್ಲರೇ ಎನಿಸುವಷ್ಟು ಹಾಟ್ ಆಗಿ ಕಾಣಿಸಿಕೊಂಡಿದ್ದರು ನಟಿ.
ಹೆಚ್ಚಾಗಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಟೂ ಪೀಸ್ ಡ್ರೆಸ್, ಸೀರೆಯಲ್ಲೇ ಕಾಣಿಸಿಕೊಳ್ಳುವ ಚೈತ್ರಾ, ಈ ಬಾರಿಯೂ ಕೇಸರಿ ಬಣ್ಣದ ಸಿಂಪಲ್ ಸೀರೆ (orange saree) ಧರಿಸಿ, ಅದಕ್ಕೆ ಮಲ್ಟಿ ಕಲರ್ ಸ್ಲೀವ್ ಲೆಸ್ ಬ್ಲೌಸ್ ಧರಿಸಿ, ಅಷ್ಟೇನೂ ಬೋಲ್ಡ್ ಅಲ್ಲದೇ, ಆದ್ರೆ ತುಂಬಾನೆ ಸ್ಟೈಲಿಶ್ ಆಗಿ ಕಾಣಿಸಿಕೊಂಡಿರೋದಂತೂ ನಿಜ.
ನಟಿ ಈ ಸಿಂಪಲ್ ಲುಕ್ ಜೊತೆಗೆ ಹೈ ಪೋನಿಟೇಲ್ ಮತ್ತು ಕುತ್ತಿಗೆಗೊಂದು ನೆಕ್ ಪೀಸ್ ಧರಿಸಿ As vibrant as it may be ಎಂದು ಬರೆದು ಕೊಂಡಿದ್ದಾರೆ. ಸಿಂಪಲ್ ಲುಕ್ಕಲ್ಲಿ ತುಂಬಾ ಸುಂದರವಾಗಿ ಕಾಣಿಸ್ತಿದ್ದಾರೆ. ನಟಿಯ ಅಂದ ನೋಡಿ ಶ್ರುತಿ ಹರಿಹರನ್ ಉಫ್ ಅಂದ್ರೆ, ರುಕ್ಮಿಣಿ ವಸಂತ್ ಮತ್ತು ಆಶಿಕಾ ರಂಗನಾಥ್ ಪ್ರೆಟಿ, ಗಾರ್ಜಿಯಸ್ ಎಂದಿದ್ದಾರೆ.
ಇನ್ನು ಚೈತ್ರಾ ಆಚಾರ್ ಸದ್ಯ ತಮಿಳಿನಲ್ಲಿ ಎರಡು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಒಂದು ಸಿನಿಮಾದಲ್ಲಿ ನಟ ಸಿದ್ಧಾರ್ಥ್‌ಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಕನ್ನಡದಲ್ಲೂ ಸ್ಟ್ರಾಬೆರ್ರಿ, ಉತ್ತರಖಾಂಡ, ಹ್ಯಾಪಿ ಬರ್ತ್ ಡೇ ಟು ಮಿ ಸಿನಿಮಾದಲ್ಲಿ ನಟಿಸಿದ್ದು, ಸಿನಿಮಾ ಬಿಡುಗಡೆಗೆ ಕಾಯ್ತಿದ್ದಾರೆ.
ನಟನೆಯ ಮೂಲಕ ಜಾದೂ ಮಾಡುವ ಸಪ್ತಸಾಗರದಾಚೆ ಎಲ್ಲೋ ಬೆಡಗಿ ಚೈತ್ರಾ ಆಚಾರ್, ತುಂಡುಡುಗೆಯಾದ್ರೂ ಸರಿ, ಸೀರೆಯಾದ್ರೂ ಸರಿ, ಎಲ್ಲಾ ಔಟ್ ಫಿಟ್ ಗಳಲ್ಲೂ ಸಖತ್ ಬೋಲ್ಡ್ ಮತ್ತು ಸ್ಟೈಲಿಶ್ ಆಗಿ ಕಾಣಿಸೋದಂತೂ ನಿಜಾ.