ಶಿವಣ್ಣರ ಅಭಿಮಾನಿಗಳು ಕುಣಿದು ಕುಪ್ಪಳಿಸೋದು ಗ್ಯಾರಂಟಿ. ಮುಂದೇನು ಆಗಿಬಿಡುತ್ತೋ ದೇವರೇ ಎಂದು ಆತಂಕಗೊಂಡಿದ್ದ ಕೆಲವು ಅಭಿಮಾನಿಗಳಿಗೆ ಈ ಸಿಹಿಸುದ್ದಿ ತಂಗಾಳಿ ಆಗುವುದರಲ್ಲಿ ಸಂದೇಹವೇ ಇಲ್ಲ. ನಟ ಶಿವಣ್ಣ ಅನಾರೋಗ್ಯ ಸರಿ..
ಕನ್ನಡದ ಹಿರಿಯ ನಟ, ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ (Shiva Rajkumar) ಅವರು ಅನಾರೋಗ್ಯದಿಂದ ಬಳಲುತ್ತಿರೋದು ಗೊತ್ತೆ ಇದೆ. ಶಿವಣ್ಣ ಅವರು ಕ್ಯಾನ್ಸರ್ (Cancer) ಖಾಯಿಲೆಗೆ ಸಂಬಂಧಿಸಿ ಚಿಕಿತ್ಸೆ ಸಹ ಪಡೆದುಕೊಳ್ಳುತ್ತಿದ್ದಾರೆ. ಆದರೆ, ಅದನ್ನು ಅನಗತ್ಯವಾಗಿ ಎಲ್ಲೂ ಹೇಳಿಕೊಂಡು ಓಡಾಡುತ್ತಿರಲಿಲ್ಲ. ಆದರೆ, ಇತ್ತೀಚೆಗೆ ಸಂದರ್ಶನವೊಂದರಲ್ಲಿ ನಟ ಶಿವರಾಜ್‌ಕುಮಾರ್ ಅವರು ತಮ್ಮ ಅನಾರೋಗ್ಯ ಹಾಗೂ ಚಿಕಿತ್ಸೆ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಇದೀಗ, ನಟ ಶಿವಣ್ಣಗೆ ಅಮೆರಿಕಾದಲ್ಲಿ ಶಸ್ತ್ರ ಚಿಕಿತ್ಸೆ ಮಾಡಲಿರುವ ವೈದ್ಯರು ಈ ಬಗ್ಗೆ ಅದೇನು ಹೇಳಿದ್ದಾರೆ ಎಂಬ ಸಂಗತಿ ವೈರಲ್ ಅಗಿದೆ. ಇಲ್ಲಿದೆ ನೋಡಿ ಡಿಟೇಲ್ಸ್..
ಹೌದು, ಕನ್ನಡದ ನಟ ಶಿವರಾಜ್‌ಕುಮಾರ್ ಅವರು ಅಮೆರಿಕಾದ (America) ಫ್ಲೋರಿಡಾದಲ್ಲಿನ ವೈದ್ಯರಿಂದ ಕ್ಯಾನ್ಸರ್‌ಗೆ ಸರ್ಜರಿ ಮಾಡಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಅಲ್ಲಿನ (US) ಡಾಕ್ಟರ್ ನಟ ಶಿವಣ್ಣ ಅವರಿಗೆ ಅಭಯ ನೀಡಿದ್ದು, 'ನೀವು ಇಲ್ಲಿಗೆ ಬಂದು ಸರ್ಜರಿ ಮಾಡಿಸಿಕೊಂಡು ಆರಾಮ್ ಆಗಿ ಹೋಗುತ್ತೀರಿ.. ನಿಮಗೆ ಆ ಬಗ್ಗೆ ಯಾವುದೇ ಭಯ ಬೇಡ.. ಬಳಿಕ ಒಂದು ತಿಂಗಳು ನೀವು ರೆಸ್ಟ್ ಮಾಡಬೇಕಾಗಬಹುದು. ನಂತರ ಎಂದಿನಂತೆ ನೀವು ನಿಮ್ಮ ಕೆಲಸ-ಕಾರ್ಯಗಳನ್ನು ಮುಂದುವರಿಸಬಹುದು' ಎಂದಿದ್ದಾರಂತೆ. ಈ ಸಂಗತಿಯೀಗ ಭಾರೀ ವೈರಲ್ ಆಗುತ್ತಿದೆ.
undefined
ಒಂದೇ ತಕ್ಕಡಿಯಲ್ಲಿ ತಾಯಿ & ಪತ್ನಿ ತೂಗಿದ ಶಿವರಾಜ್‌ಕುಮಾರ್; ಇಲ್ನೋಡಿ ನೆಟ್ಟಿಗರು ಏನಂತಿದಾರೆ?
ಈ ಸುದ್ದಿ ತಿಳಿದು ಕರುನಾಡ ಚಕ್ರವರ್ತಿ ಶಿವಣ್ಣರ ಅಭಿಮಾನಿಗಳು ಕುಣಿದು ಕುಪ್ಪಳಿಸೋದು ಗ್ಯಾರಂಟಿ. ಮುಂದೇನು ಆಗಿಬಿಡುತ್ತೋ ದೇವರೇ ಎಂದು ಆತಂಕಗೊಂಡಿದ್ದ ಕೆಲವು ಅಭಿಮಾನಿಗಳಿಗೆ ಈ ಸಿಹಿಸುದ್ದಿ ತಂಗಾಳಿ ಆಗುವುದರಲ್ಲಿ ಸಂದೇಹವೇ ಇಲ್ಲ. ನಟ ಶಿವಣ್ಣ ಅನಾರೋಗ್ಯ ಸರಿಪಡಿಸಿಕೊಂಡು ಮತ್ತೆ ಆರೋಗ್ಯವಂತರಾಗಿ ಮರಳಲಿ ಎಂದು ಕರುನಾಡಿನ ಸಿನಿಪ್ರೇಮಿಗಳು ಹಾಗೂ ನಟ ಶಿವಣ್ಣರ ಅಸಂಖ್ಯಾತ ಫ್ಯಾನ್ಸ್ ಸೋಷಿಯಲ್ ಮೀಡಿಯಾದಲ್ಲಿ ಹಾರೈಸುತ್ತಲೇ ಇದ್ದಾರೆ.
ಕನ್ನಡ ಸಿನಿಮಾರಂಗದ ಹಿರಿಯ ನಟ ಶಿವರಾಜ್‌ಕುಮಾರ್ ಅವರು ಬಹಳಷ್ಟು ದಿನಗಳಿಂದ ಅನಾರೋಗ್ಯಕ್ಕೆ (Health Issue) ಒಳಗಾಗಿದ್ದಾರೆ. ಅವರು ಚಿಕಿತ್ಸೆ ಪಡೆದುಕೊಳ್ಳುತ್ತಲೇ ತಮ್ಮ ನಟನೆಯ 'ಭೈರತಿ ರಣಗಲ್' ಸಿನಿಮಾದ ಶೂಟಿಂಗ್ ಮುಗಿಸಿದ್ದಾರೆ. ಜೊತೆಗೆ, ಕಿರುತೆರೆಯ 'ಡಿಕೆಡಿ' ರಿಯಾಲಿಟಿ ಶೋದಲ್ಲಿ ಸಹ ಪಾಲ್ಗೊಳ್ಳುತ್ತಿದ್ದಾರೆ. ಈ ಬಗ್ಗೆ ಮಾತನಾಡಿರುವ ನಟ ಶಿವಣ್ಣ ಅವರು 'ನಾನು ನನ್ನ ಅನಾರೋಗ್ಯವನ್ನು ನನ್ನ ಅಭಿಮಾನಿಗಳು ಸೇರಿದಂತೆ ಯಾರಿಂದಲೂ ಮುಚ್ಚಿಡುವ ಅಗತ್ಯವಿಲ್ಲ. ಆದರೆ, ಯಾರೂ ಅನಾವಶ್ಯಕ ಆತಂಕ ಪಡಬೇಡಿ. ಹೌದು, ಎಲ್ಲರಂತೆ ನಾನು ಕೂಡ ಮನುಷ್ಯ, ನನಗೂ ಅನಾರೋಗ್ಯ ಸಹಜವಾಗಿ ಕಾಡುತ್ತದೆ.
ಮತ್ತೆ ಇಡೀ ದೇಶ ತನ್ನತ್ತ ತಿರುಗಿ ನೋಡುವಂತೆ ಮಾಡಿದ ಕರ್ನಾಟಕ, ಓಂ ಕಮಾಲ್ ಕಥೆ ಗೊತ್ತಾ?
ಹೌದು, ನನಗೆ ಹುಶಾರಿಲ್ಲ, ಆದರೆ ಸೂಕ್ತ ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದೇನೆ. ಸದ್ಯದಲ್ಲೇ ಟ್ರೀಟ್‌ಮೆಂಟ್‌ಗೆ ಅಮೆರಿಕಾಗೆ ಒಂದು ತಿಂಗಳು ಹೋಗಲಿದ್ದೇನೆ. ಈಗಾಗಲೇ ಚಿಕಿತ್ಸೆಯ ಹಂತಗಳಲ್ಲಿ ಎರಡು ಸೆಷನ್ ಮುಗಿದಿದೆ, ಇನ್ನು ಎರಡು ಸೆಷನ್ ಬಾಕಿ ಇದ್ದು, ಅದಕ್ಕಾಗಿ ಅಮೆರಿಕಾಗೆ ಒಂದು ತಿಂಗಳು ಹೋಗಲಿದ್ದೇನೆ. ಬಳಿಕ ಒಂದು ಸರ್ಜರಿ ಸಹ ಆಗಬೇಕಿದೆ ಎಂದಿದ್ದಾರೆ ವೈದ್ಯರು. ಆದರೆ ಅದನ್ನು ಭಾರತದಲ್ಲಿಯೇ ಪಡೆದುಕೊಳ್ಳಬೇಕೋ ಅಥವಾ ಅಲ್ಲಿ ಅಮೆರಿಕಾದಲ್ಲಿಯೋ ಎಂಬ ಬಗ್ಗೆ ಇನ್ನೂ ಸ್ವಲ್ಪ ಗೊಂದಲವಿದೆ. ಆ ಬಗ್ಗೆ ಸದ್ಯದಲ್ಲೇ ನಿರ್ಧರಿಸಲಾಗುವುದು' ಎಂದಿದ್ದಾರೆ.
ಸಹಜವಾಗಿಯೇ ನಟ ಶಿವಣ್ಣರ ಅಭಿಮಾನಿಗಳು ಆತಂಕಕ್ಕೆ ಈಡಾಗುತ್ತಾರೆ. ಆದರೆ ಆ ಬಗ್ಗೆ ಸ್ವತಃ ಶಿವಣ್ಣ 'ನನ್ನ ಅನಾರೋಗ್ಯದ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ಈಗಲೂ ನಾನು ಶೂಟಿಂಗ್ ಹಾಗೂ ರಿಯಾಲಿಟಿ ಶೋ ಕೆಲಸದಲ್ಲಿ ತೊಡಗಿಸಿಕೊಂಡಿದ್ದೇನೆ. ಚಿಕಿತ್ಸೆಗೆ ಹೋಗಿಬಂದ ಬಳಿಕ ಮತ್ತೆ ನನ್ನ ಕೆಲಸವನ್ನು ಎಂದಿನಂತೆ ಮುಂದುವರಿಸಲಿದ್ದೇನೆ' ಎಂದಿದ್ದಾರೆ. 'ಅಭಿಮಾನಿಗಳಿಂದ ಯಾವುದನ್ನೂ ಮುಚ್ಚಿಡಬೇಕಾದ ಅಗತ್ಯ ನನಗಿಲ್ಲ' ಎಂದಿರುವ ನಟ ಶಿವಣ್ಣ ಅವರು, ಹೊರಗಡೆ ಜಗತ್ತಿಗೆ ಎಷ್ಟು ಮಾಹಿತಿ ನೀಡಬೇಕೋ ಅಷ್ಟನ್ನು ನೀಡಿದ್ದಾರೆ.
ಮನೆಗೆ ಚಿರು ಹೆಸರಿಲ್ಲ ಎಂದಿದ್ದ ಅಭಿಮಾನಿಗಳೇ 'ದೇವತೆ ನಮ್ಮ ಕರುನಾಡ ಅತ್ತಿಗೆ' ಅಂದಿದ್ಯಾಕೆ?
ನಟ ಶಿವರಾಜ್‌ಕುಮಾರ್ ಅವರೇ ಸ್ವತಃ ಹೇಳಿದಂತೆ 'ನನ್ನ ಅನಾರೋಗ್ಯ ಹಾಗು ಕಂಡೀಷನ್ ಬಗ್ಗೆ ಕನ್ನಡ ಸಿನಿಮಾ ಉದ್ಯಮದಲ್ಲಿ ಅನೇಕರಿಗೆ ತಿಳಿದಿದೆ. ಈ ಬಗ್ಗೆ ನನ್ನ ಆಪ್ತರು ಬಹಳಷ್ಟು ಧೈರ್ಯ ಹೇಳಿದ್ದಾರೆ. ಹೌದು, ನನಗೆ ಆ ಖಾಯಿಲೆ ಬಂದುಬಿಟ್ಟಿದೆ. ಆ ಬಗ್ಗೆ ಪ್ರಾರಂಭದಲ್ಲಿ ನಾನು ಭಯಪಟ್ಟರೂ ಈಗ ಧೈರ್ಯ ತಂದುಕೊಂಡಿದ್ದೇನೆ. ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದೇನೆ, ಮುಂದೆಯೂ ತೆಗೆದುಕೊಳ್ಳಲಿದ್ದೇನೆ, ಎಲ್ಲವೂ ಸರಿಯಾಗಲಿದೆ ಎಂಬ ವಿಶ್ವಾಸ ನನಗಿದೆ' ಎಂದಿದ್ದಾರೆ ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್.