Kantara ಲೀಲಾ ಇಷ್ಟೊಂದು ಫಿಟ್ ಆಗಿರಲು ಕಾರಣ ಈ ವರ್ಕೌಟ್‌; ಫೋಟೋ ವೈರಲ್

First Published Jan 9, 2023, 12:34 PM IST

ಸೋಷಿಯಲ್ ಮೀಡಿಯಾದಲ್ಲಿ ಫಿಟ್ನೆಸ್‌ ಬಗ್ಗೆ ಮಾಹಿತಿ ಹಂಚಿಕೊಂಡ ಸಪ್ತಮಿ ಗೌಡ. ಹಾಟ್ ಫೋಟೋಗೆ ಮತ್ತೊಮ್ಮೆ ಬೋಲ್ಡ್‌ ಆದ ನೆಟ್ಟಿಗರು....
 

ಪಾಪ್ ಕಾರ್ನ್‌ ಮಂಕಿ ಟೈಗರ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಐಟಿ ಉದ್ಯೋಗಿ ಸಪ್ತಮಿ ಗೌಡ ಈಗ ಲೀಲಾ ಆಗಿ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸಿದ್ದಾರೆ. 

ಹೊಂಬಾಳೆ ಫಿಲ್ಮ್ ನಿರ್ಮಾಣ ಮಾಡಿರುವ ಕಾಂತಾರ ಸಿನಿಮಾದಲ್ಲಿ ರಿಷಬ್ ಶೆಟ್ಟಿಗೆ ಜೋಡಿಯಾಗಿ ಸಪ್ತಮಿ ಗೌಡ ಅಭಿನಯಿಸಿದ್ದಾರೆ. ಅಂದಿನಿಂದ ವಿಶ್ವಾದ್ಯಂತ ಅಭಿಮಾನಿಗಳನ್ನು ಸಂಪಾದಿಸಿ ಸಪ್ತಮಿಗಿಂತ ಲೀಲಾ ಎಂದೇ ಫೇಮಸ್ ಆಗಿದ್ದಾರೆ.

ಇಂಜಿನಿಯರಿಂಗ್ ವ್ಯಾಸಂಗ ಮಾಡಿರುವ ಸಪ್ತಮಿ ಗೌಡ  ಐಟಿ ಕಂಪನಿಯಲ್ಲಿ ಕೆಲವು ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಅಲ್ಲದೆ ರಾಷ್ಟ್ರ  ಮಟ್ಟದ ಈಜುಪಟು ಆಗಿರುವ ಕಾರಣ ಫಿಟ್ನೆಸ್‌ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆ. 

ಸಪ್ತಮಿ ಗೌಡ ತುಂಬಾನೇ ವರ್ಕೌಟ್ ಮಾಡುವ ಕಾರಣ ಫಿಟ್ ಆಂಡ್ ಗ್ಲೋ ಆಗಿದ್ದಾರೆ. ಅಲ್ಲದೆ ಒಂದು ಸಮಯದಲ್ಲಿ 6 ಪ್ಯಾಕ್‌ ಕೂಡ ಮಾಡಿದ್ದರು. 

ಬೆಂಗಳೂರಿನ ಜಿಮ್‌ನಲ್ಲಿ ವರ್ಕೌಟ್ ಮಾಡುವ ಸಪ್ತಮಿ ಹೆಚ್ಚಿಗೆ ವೇಟ್‌ ಲಿಫ್ಟ್‌ ಹಾಗೂ ಕಾರ್ಡಿಯೋ ಮಾಡುತ್ತಿರುವ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. 

ಸಪ್ತಮಿ ಜಿಮ್‌ ಆರಂಭ ಹಾಗೂ ಮುಗಿಸಿ ನಂತರ ಅಲ್ಲಿರುವ ಕನ್ನಡಿ ಮುಂದೆ ನಿಂತು ಪೋಸ್ ಕೊಡುತ್ತಾರೆ. ವಿವಿಧ ಶೈಲಿಯ ಹಾಗೂ ಬಣ್ಣದ ಉಡುಪುಗಳಲ್ಲಿ ಕಂಗೊಳ್ಳಿಸಿದ್ದಾರೆ. ಕೆಲವೊಂದಕ್ಕೆ ಹಾಟ್ ಎಂದು ಕಾಮೆಂಟ್ ಮಾಡಿದ್ದಾರೆ

ಏನ್ ಲೀಲಾ ನೀನು ಇಷ್ಟೊಂದು ಸಣ್ಣ ಇದ್ಯಾ? ಎಂದು ಒಬ್ಬರು ಕಾಮೆಂಟ್ ಮಾಡಿದರೆ ಮತ್ತೊಬ್ಬರು ಇಷ್ಟೊಂದು ವರ್ಕೌಟ್ ಮಾಡುತ್ತಿರುವುದಕ್ಕೆ ಇಷ್ಟು ಸಣ್ಣ ಇರುವುದು ಇಲ್ಲ ಅಂದ್ರೆ ಡುಮ್ಮಿ ಆಗುತ್ತಿದ್ದೆ ಎಂದು ಹಾಸ್ಯ ಮಾಡಿದ್ದಾರೆ.

click me!