ಇದ್ದಕ್ಕಿದ್ದಂತೆ ಸಣ್ಣಗಾದ್ರ ಮೋಹಕತಾರೆ ರಮ್ಯಾ? ನಟಿ ಸಮಂತಾ ಕಾಮೆಂಟ್ ನೋಡಿ ಎಲ್ಲರೂ ಶಾಕ್
ಸ್ಯಾಂಡಲ್‌ವುಡ್ ಕ್ವೀನ್ ಹೊಸ ಲುಕ್‌ಗೆ ಕ್ಲೀನ್ ಬೋಲ್ಡ್ ಆಗಿಬಿಟ್ಟರು ಸ್ಯಾಮ್. ಇಬ್ಬರು ಸೇರಿ ಸಿನಿಮಾ ಮಾಡಿ ಅಂತಿದ್ದಾರೆ ನೆಟ್ಟಿಗರು.
ಸ್ಯಾಂಡಲ್‌ವುಡ್ ಕ್ವೀನ್ ಹೊಸ ಲುಕ್‌ಗೆ ಕ್ಲೀನ್ ಬೋಲ್ಡ್ ಆಗಿಬಿಟ್ಟರು ಸ್ಯಾಮ್. ಇಬ್ಬರು ಸೇರಿ ಸಿನಿಮಾ ಮಾಡಿ ಅಂತಿದ್ದಾರೆ ನೆಟ್ಟಿಗರು.
ಕನ್ನಡ ಚಿತ್ರರಂಗದ ಓನ್ ಆಂಡ್ ಓನ್ಲಿ ಮೋಹಕ ತಾರೆ ರಮ್ಯಾ ಸಾಮಾಜಿಕ ಜಾಲತಾಣದಲ್ಲಿ ಹೊಸ ಫೋಟೋಶೂಟ್ ಒಂದನ್ನು ಅಪ್ಲೋಡ್ ಮಾಡಿದ್ದಾರೆ.
ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಮೇಲೆ ಬಿಳಿ ಬಣ್ಣದ ಜಾಕೆಟ್ ಧರಿಸಿದ್ದಾರೆ. ಜ್ಯಾಕೆಟ್ ಮೇಲೆ ಸಿಂಪಲ್ ಡಿಸೈನ್ ಕೂಡ ಇದ್ದು ವೈಟ್ ಹಾರ್ಟ್ ಎಮೋಜಿ ಬರೆದುಕೊಂಡಿದ್ದಾರೆ.
ಈ ಫೋಟೋದಲ್ಲಿ ನಟಿ ರಮ್ಯಾ ಸಿಕ್ಕಾಪಟ್ಟೆ ಸಣ್ಣ ಕಾಣುತ್ತಿದ್ದಾರೆ. ಇರೋ ವಯಸ್ಸಿಗಿಂತ ಕಡಿಮೆ ವಯಸ್ಸಿನಲ್ಲಿ ಕಾಣಿಸಿಕೊಳ್ಳುತ್ತಿರುವ ಕಾರಣ ಅಭಿಮಾನಿಗಳು ಮತ್ತು ಫ್ಯಾನ್ಸ್ ಶಾಕ್ ಆಗಿದ್ದಾರೆ.
ರಮ್ಯಾ ಫೋಟೋಗೆ ಸೌತ್ ಚಿತ್ರರಂಗದ ಸೂಪರ್ ಸ್ಟಾರ್ ಸಮಂತಾ ರುತ್ ಪ್ರಭು ಕೆಂಪು ಬಣ್ಣದ ಹಾರ್ಟ್ ಎಮೋಜಿ ಹಾಕಿದ್ದಾರೆ. ಹಲವು ಸೆಲೆಬ್ರಿಟಿಗಳು ಕೂಡ ಕಾಮೆಂಟ್ ಮಾಡಿದ್ದಾರೆ.
ಸಮಂತಾ ಕೂಡ ರಮ್ಯಾ ಫ್ರೆಂಡ್ ಎಂದು ತಿಳಿದ ಮೇಲೆ ಇಬ್ಬರು ಒಟ್ಟಿಗೆ ಸಿನಿಮಾ ಮಾಡಿ ಒಟ್ಟಿಗೆ ಕಾಣಿಸಿಕೊಳ್ಳಿ ಇಬ್ಬರ ಸ್ನೇಹದ ಬಗ್ಗೆ ಮಾತನಾಡಿ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಇದ್ದಕ್ಕಿದ್ದಂತೆ ರಮ್ಯಾ ಸಣ್ಣಗಾಗಿದ್ದು ಯಾಕೆ? ಮತ್ತೆ ಸಿನಿಮಾ ಮಾಡ್ತಾರಾ? ರಮ್ಯಾ ಫಿಟ್ನೆಸ್ ಕಾಳಜಿ ವಹಿಸುತ್ತಿರುವುದು ಪುನೀತ್ ರಾಜ್‌ಕುಮಾರ್ ಘಟನೆ ನಂತರವೇ? ಹೀಗೆ ಸಾಕಷ್ಟು ಪ್ರಶ್ನೆಗಳನ್ನು ಅಭಿಮಾನಿಗಳು ಮುಂದಿಟ್ಟಿದ್ದಾರೆ.