ಯಶ್ ಹಾಗೂ ರಾಧಿಕಾ ಪಂಡಿತ್ ಅವರದು ಅಪರೂಪ ಹಾಗೂ ಅನುರೂಪ ಎಂಬಂತಹ ದಾಂಪತ್ಯ. ಸದ್ಯಕ್ಕೆ ಸ್ಯಾಂಡಲ್‌ವುಡ್‌ನ ಪಪ್ಯುಲರ್ ಸ್ಟಾರ್ ಜೋಡಿ ಹಾಗೂ ಅನ್ಯೋನ್ಯವಾಗಿರುವ ಜೋಡಿಗಳಲ್ಲಿ ರಾಧಿಕಾ-ಯಶ್ ಜೋಡಿ ಟಾಪ್ ಸ್ಥಾನನದಲ್ಲಿದೆ. ಇದೀಗ..
ಸ್ಯಾಂಡಲ್‌ವುಡ್ ಸಿಂಡ್ರೆಲ್ಲಾ ಖ್ಯಾತಿಯ ನಟಿ ರಾಧಿಕಾ ಪಂಡಿತ್ ಅವರು ಸೋಷಿಯಲ್ ಮೀಡಿಯಾಗಳಲ್ಲಿ ಯಾವತ್ತೂ ಆಕ್ಟಿವ್ ಎಂಬ ಸಂಗತಿ ಎಲ್ಲರಿಗೂ ಗೊತ್ತು. ಇದೀಗ, 'A moment with my ‘Rocky’ between takes…' ಎಂದು ಬರೆದು, ತಮ್ಮ ಸೋಷಿಯಲ್ ಮೀಡಿಯಾ ಪೇಜ್ ಅಕೌಂಟ್‌ನಲ್ಲಿ ಪೋಸ್ಟ್ ಮಾಡಿದ್ದಾರೆ ರಾಧಿಕಾ ಪಂಡಿತ್. ಹಾಗಿದ್ದರೆ ಈ ಫೋಟೋದಲ್ಲಿ ಏನಿದೆ? ಅದರಲ್ಲಿ ರಾಧಿಕಾ ಪಂಡಿತ್ ಅವರು ತಮ್ಮ ಪತಿ ಯಶ್ ಜೊತೆ ಇದ್ದಾರೆ. ಖುಷಿಯಾಗಿದ್ದಾರೆ. ಕ್ಯಾಸುವಲ್ ಡ್ರೆಸ್‌ನಲ್ಲಿ ಮಿಂಚುತ್ತಿದ್ದಾರೆ. ಅದರಲ್ಲೇನು ವಿಶೇಷ ಅಂತೀರಾ?
ಅಲ್ಲೇ ಇರೋದು ವಿಶೇಷ ನೋಡಿ.. ನಟ ಯಶ್ ಅವರು ಈಗ ಪ್ಯಾನ್ ಇಂಡಿಯಾ ಸ್ಟಾರ್. ಅಷ್ಟೇ ಅಲ್ಲ, ಬಿಗ್ ಬಜೆಟ್ ಸಿನಿಮಾಗಳಾದ ಟಾಕ್ಸಿಕ್ ಹಾಗೂ ರಾಮಾಯಣ ಸಿನಿಮಾಗಳಲ್ಲಿ ಅವರೀಗ ಬ್ಯುಸಿ ಇದ್ದಾರೆ. ಹೀಗಾಗಿ ರಾಕಿಂಗ್ ಸ್ಟಾರ್ ಯಶ್ ಅವರು ಮನೆಯಲ್ಲಿ ಇಲ್ಲ. ಹಾಗಿದ್ದರೆ ಯಶ್-ರಾಧಿಕಾ ಒಟ್ಟಿಗೇ ಇರೋ ಈ ಫೋಟೋ ಹಳೆಯದಾ? ಖಂಡಿತ ಹಳೆಯದಲ್ಲ, ಅದು ಹೊಚ್ಚ ಹೊಸ ಫೋಟೋ.. ತೆಗೆದ ತಕ್ಷಣವೇ ರಾಧಿಕಾ ಪಂಡಿತ್ ಅವರು ಅಪ್ಲೋಡ್ ಮಾಡಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಒಟ್ಟೂ ಆಸ್ತಿ ಎಷ್ಟು? ಇಷ್ಟು ಬೇಗ ಅಷ್ಟೊಂದು ಕೋಟಿ ಸಂಪಾದಿಸಿದ್ದು ಹೇಗೆ?
ಸದ್ಯಕ್ಕೆ, ಪತ್ನಿ ರಾಧಿಕಾ ಪಂಡಿತ್ ಸೇರಿದಂತೆ, ಮಕ್ಕಳಿಗೆ ಹಾಗೂ ಮನೆಯವರಿಗೆ ನಟ ಯಶ್ ಸಿಗೋದು ತುಂಬಾ ಅಪರೂಪ ಎಂಬಂತಾಗಿದೆ. ಕಾರಣ, ಶೂಟಿಂಗ್ ಶೂಟಿಂಗ್. ಅವೆಲ್ಲಾ ಬಿಗ್ ಬಜೆಟ್ ಶೂಟಿಂಗ್ ಆಗಿರೋ ಕಾರಣಕ್ಕೆ ತುಂಬಾ ದಿನ ಇದ್ದೇ ಇರುತ್ತೆ. ಜೊತೆಗೆ, ಎರಡು ಸಿನಿಮಾಗಳನ್ನು ಮಾಡುತ್ತಿರುವ ಕಾರಣಕ್ಕೆ ಯಶ್ ಮನೆಯಲ್ಲಿ ಸಿಗೋದು ಬಹಳ ಅಪರೂಪ. ಹೀಗಾಗಿ ರಾಧಿಕಾ ಪಂಡಿತ್ ಅವರೇ ತಮ್ಮ ಪತಿ ಯಶ್ ಇರುವ ಜಾಗಕ್ಕೆ ತಾವೇ ಹೋಗಿ ಫೋಟೋ ಕ್ಲಿಕ್ಕಿಸಿಕೊಂಡು ಬಂದಿದ್ದಾರೆ. ಪತಿಯ ದರ್ಶನ್ ಮಾಡಿಕೊಂಡು, ಅಂದ್ರೆ ಪತಿಗೆ ತಮ್ಮ ದರ್ಶನ ಮಾಡಿಸಿ ಬಂದಿದ್ದಾರೆ ಎನ್ನಬಹುದು.
ಹೌದು, ಯಶ್ ಹಾಗೂ ರಾಧಿಕಾ ಪಂಡಿತ್ ಅವರದು ಅಪರೂಪ ಹಾಗೂ ಅನುರೂಪ ಎಂಬಂತಹ ದಾಂಪತ್ಯ. ಸದ್ಯಕ್ಕೆ ಸ್ಯಾಂಡಲ್‌ವುಡ್‌ನ ಪಪ್ಯುಲರ್ ಸ್ಟಾರ್ ಜೋಡಿ ಹಾಗೂ ಅನ್ಯೋನ್ಯವಾಗಿರುವ ಜೋಡಿಗಳಲ್ಲಿ ರಾಧಿಕಾ-ಯಶ್ ಜೋಡಿ ಟಾಪ್ ಸ್ಥಾನನದಲ್ಲಿದೆ. ಇದೀಗ, ರಾಧಿಕಾ ಪಂಡಿತ್ ಪೋಸ್ಟ್ ಮಾಡಿರುವಫೋಟೋ ಅದಕ್ಕೊಂದು ಬೆಸ್ಟ್ ಉದಾಹರಣೆ ಎನ್ನುವಂತದೆ ಎನ್ನಬಹುದೇ?
ಪಿಬಿ ಶ್ರೀನಿವಾಸ್‌ಗೆ ಆಗಿರೋ ಅನ್ಯಾಯಕ್ಕೆ ಡಾ ರಾಜ್‌ಕುಮಾರ್ ಇಟ್ಟ ಹೆಜ್ಜೆಯೇ ರೋಚಕ!