ವಿಶ್ವದಲ್ಲೇ ಮೊದಲ ಬಾರಿಗೆ ಸಂಪೂರ್ಣ ಎಐನಿಂದ 'ಲವ್ ಯು' ಎಂಬ ಕನ್ನಡ ಸಿನಿಮಾವನ್ನು ಕೇವಲ 10 ಲಕ್ಷ ರೂ. ಗೆ ನಿರ್ಮಿಸಲಾಗಿದೆ. ನಿರ್ದೇಶಕ ನರಸಿಂಹ ಮೂರ್ತಿ ಮತ್ತು ಎಐ ತಜ್ಞ ನೂತನ್, ನಟನೆ, ಸಂಗೀತ ಸೇರಿದಂತೆ ಎಲ್ಲವನ್ನೂ ಎಐ ಬಳಸಿ ರಚಿಸಿದ್ದಾರೆ.
Love You AI-generated movie: ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ವಿಶ್ವಾದ್ಯಂತ ಭಾರಿ ಸಂಚಲನ ಮೂಡಿಸಿರುವಾಗಲೇ, ವಿಶ್ವದಲ್ಲೇ ಮೊದಲ ಬಾರಿಗೆ ಸಂಪೂರ್ಣ ಎಐನಿಂದಲೇ ಸಿನಿಮಾವೊಂದನ್ನು ತಯಾರಿಸಲಾಗಿದೆ! ಅದೂ ಕನ್ನಡದಲ್ಲಿ!
‘ಲವ್ ಯು’ ಎಂಬ ಸಿನಿಮಾವನ್ನು ಎಐ ಬಳಸಿ ಕೇವಲ 10 ಲಕ್ಷ ರು.ಗೆ ನಿರ್ಮಾಣ ಮಾಡಲಾಗಿದೆ.
ನಿರ್ದೇಶನ, ನಿರ್ಮಾಣ ಮಾಡಿರುವ ನರಸಿಂಹ ಮೂರ್ತಿ ಹಾಗೂ ಇಡೀ ಚಿತ್ರದ ಎಐ ಕೆಲಸ ಮಾಡಿರುವ ನೂತನ್ ಅವರನ್ನು ಹೊರತುಪಡಿಸಿದರೆ ನಟನೆ, ಸಂಗೀತ ಸಂಯೋಜನೆ, ಹಾಡುಗಳು, ಹಿನ್ನೆಲೆ ಸಂಗೀತ, ಡಬ್ಬಿಂಗ್ ಹೀಗೆ ಸರ್ವಸ್ವವನ್ನೂ ನಿರ್ವಹಿಸಿರುವುದು ಎಐ ತಂತ್ರಜ್ಞಾನ. ಈ ಸಿನಿಮಾ ನಿರ್ದೇಶನ ಹಾಗೂ ನಿರ್ಮಾಣ ಮಾಡಿರುವ ನರಸಿಂಹ ಮೂರ್ತಿ ಮೂಲತಃ ಬೆಂಗಳೂರಿನ ಬಾಗಲಗುಂಟೆ ಆಂಜನೇಯ ದೇವಾಲಯದ ಅರ್ಚಕರು. ಈ ಹಿಂದೆ ಒಂದೆರಡು ಸಿನಿಮಾಗಳ ನಿರ್ದೇಶನವನ್ನೂ ಮಾಡಿದ್ದಾರೆ.
ಇಡೀ ಸಿನಿಮಾದ ಎಐ ಕೆಲಸ ನಿರ್ವಹಿಸಿರುವ ನೂತನ್ ಓದಿದ್ದು ಎಲ್‌ಎಲ್‌ಬಿ. ಕಳೆದೊಂದು ದಶಕದಿಂದ ಸ್ಯಾಂಡಲ್‌ವುಡ್‌ನಲ್ಲಿ ಸಹ ನಿರ್ದೇಶನ, ಎಡಿಟಿಂಗ್ ಕೆಲಸ ಮಾಡುತ್ತಿದ್ದಾರೆ. ಈ ಕಾಲದ ತಂತ್ರಜ್ಞಾನವಾಗಿರುವ ಎಐಯಲ್ಲೇ ಸಿನಿಮಾ ಮಾಡಬೇಕು ಎಂದು ಎಐ ತಂತ್ರಜ್ಞಾನ ಕಲಿತು ಇಡೀ ಸಿನಿಮಾದ ತಾಂತ್ರಿಕ ನಿರ್ವಹಣೆ ಮಾಡಿದ್ದಾರೆ.
ಇದನ್ನೂ ಓದಿ: ರಾಕಿಂಗ್ ಸ್ಟಾರ್ ಯಶ್ ಒಟ್ಟೂ ಆಸ್ತಿ ಎಷ್ಟು? ಇಷ್ಟು ಬೇಗ ಅಷ್ಟೊಂದು ಕೋಟಿ ಸಂಪಾದಿಸಿದ್ದು ಹೇಗೆ?
95 ನಿಮಿಷದ ಸಿನಿಮಾ:
ಈ ಸಿನಿಮಾ ಬಗ್ಗೆ ಮಾಹಿತಿ ನೀಡಿದ ನಿರ್ದೇಶಕ ಎಸ್. ನರಸಿಂಹಮೂರ್ತಿ, ‘95 ನಿಮಿಷ ಅವಧಿಯ ನಮ್ಮ ಸಿನಿಮಾದಲ್ಲಿ 12 ಹಾಡುಗಳಿವೆ. ಸೆನ್ಸಾರ್ ಬೋರ್ಡ್‌ನವರೂ ಸಿನಿಮಾವನ್ನು ಕುತೂಹಲದಿಂದ ನೋಡಿ ಯು/ಎ ಸರ್ಟಿಫಿಕೆಟ್ ನೀಡಿದ್ದಾರೆ. ಈ ಸಿನಿಮಾಕ್ಕಾಗಿ 6 ತಿಂಗಳು ಕೆಲಸ ಮಾಡಿದ್ದೇವೆ. ಇದು ಎಐ ಕ್ರಾಂತಿಯ ಕಾಲ. ಸಿನಿಮಾದಲ್ಲಿ ನಮ್ಮಿಬ್ಬರನ್ನು ಹೊರತುಪಡಿಸಿ ನೂರಾರು ಜನರ ಕೆಲಸವನ್ನು ಎಐ ಮಾಡಿದೆ. ನಮ್ಮ ಸಿನಿಮಾದಲ್ಲಿ ರಿಯಲ್ ಸಿನಿಮಾದಲ್ಲಿರುವ ಎಲ್ಲ ಅಂಶಗಳೂ ಇವೆ. ಡ್ರೋನ್ ಶಾಟ್‌ಗಳೂ ಇವೆ. ಸಿನಿಮಾ ಮಾಡುವಾಗ ಕೆಲವು ಟೆಕ್ನಿಕಲ್ ಚಾಲೆಂಜ್‌ಗಳೂ ಎದುರಾದವು. ನಾವು ಓಲ್ಡ್ ಮ್ಯಾನ್ ಎಂಬ ಸರ್ಚ್ ಕೊಟ್ಟರೆ 10,000ಕ್ಕೂ ಅಧಿಕ ವಯಸ್ಸಾದ ವ್ಯಕ್ತಿಯ ಇಮೇಜ್‌ಗಳು ಬಂದು ಬೀಳುತ್ತಿದ್ದವು. ಅದರಲ್ಲಿ ಬೆಸ್ಟ್ 10ನ್ನು ಎಐ ಆಯ್ಕೆ ಮಾಡುತ್ತಿತ್ತು. ಅದರಲ್ಲಿ ನಮಗೆ ಬೇಕಾದ ಪಾತ್ರ ಆರಿಸಬೇಕಿತ್ತು. ಪಾತ್ರದ ಕಂಟಿನ್ಯುಟಿಯಲ್ಲೂ ಚಾಲೆಂಜ್‌ಗಳಿದ್ದವು. ಜೊತೆಗೆ ಪಾತ್ರಗಳು ನಡೆಯುವ, ಓಡುವ ವೇಗವನ್ನೂ ನಮೂದಿಸಬೇಕಿತ್ತು. ಆದರೆ ಇತ್ತೀಚೆಗೆ ಎಐ ಇನ್ನಷ್ಟು ಬಲಗೊಂಡಿದ್ದು, ಆಯ್ಕೆಗಳು ಸುಲಭವಾಗಿವೆ’ ಎಂದಿದ್ದಾರೆ.
ತಾಂತ್ರಿಕ ನಿರ್ವಹಣೆ ಮಾಡಿದ ನೂತನ್, ‘ಎಐ ರನ್‌ವೇ ಎಂಎಲ್, ಕ್ಲಿಂಗ್ ಎಐ, ಮಿನಿ ಮ್ಯಾಕ್ಸ್ ಸೇರಿ 20 ರಿಂದ 30 ಟೂಲ್‌ಗಳನ್ನು ಬಳಸಿದ್ದೇವೆ. ಸಿನಿಮಾವನ್ನು ನೋಡಿದವರು ಮಾಮೂಲಿ ಸಿನಿಮಾಕ್ಕಿಂತಲೂ ಚೆನ್ನಾಗಿದೆ ಎಂದಿದ್ದಾರೆ’ ಎನ್ನುತ್ತಾರೆ. ಈ ಸಿನಿಮಾ ಮೇ ತಿಂಗಳಲ್ಲಿ ತೆರೆಗೆ ಬರಲಿದೆ.
ಇಬ್ಬರಿಂದ ಇಡೀ ಸಿನಿಮಾ ತಯಾರಿ!
ನಿರ್ದೇಶನ, ನಿರ್ಮಾಣ ಮಾಡಿರುವ ನರಸಿಂಹ ಮೂರ್ತಿ ಹಾಗೂ ಇಡೀ ಚಿತ್ರದ ಎಐ ಕೆಲಸ ಮಾಡಿರುವ ನೂತನ್ ಅವರನ್ನು ಹೊರತುಪಡಿಸಿದರೆ ನಟನೆ, ಸಂಗೀತ ಸಂಯೋಜನೆ, ಹಾಡುಗಳು, ಹಿನ್ನೆಲೆ ಸಂಗೀತ, ಡಬ್ಬಿಂಗ್ ಹೀಗೆ ಸರ್ವಸ್ವವನ್ನೂ ನಿರ್ವಹಿಸಿರುವುದು ಎಐ ತಂತ್ರಜ್ಞಾನ.
ನಾಯಕ ನಾಯಕಿಯೂ ಎಐ: । ಸಂಗೀತ, ಹಾಡು, ಡಬ್ಬಿಂಗ್ ಎಲ್ಲವನ್ನೂ ಮಾಡಿದ್ದು ಎಐ, ಕೇವಲ 10 ಲಕ್ಷ ರು.ಗೆ ‘ಲವ್ ಯು’ ಎಂಬ ಸಿನಿಮಾ ನಿರ್ಮಾಣ । ಮೇನಲ್ಲಿ ಬಿಡುಗಡೆ
95 ನಿಮಿಷದ ಸಿನಿಮಾ
95 ನಿಮಿಷ ಅವಧಿಯ ನಮ್ಮ ಸಿನಿಮಾದಲ್ಲಿ 12 ಹಾಡುಗಳಿವೆ. ಸೆನ್ಸಾರ್ ಬೋರ್ಡ್‌ನವರೂ ಸಿನಿಮಾವನ್ನು ಕುತೂಹಲದಿಂದ ನೋಡಿ ಯು/ಎ ಸರ್ಟಿಫಿಕೆಟ್ ನೀಡಿದ್ದಾರೆ. ಈ ಸಿನಿಮಾಕ್ಕಾಗಿ 6 ತಿಂಗಳು ಕೆಲಸ ಮಾಡಿದ್ದೇವೆ. ಇದು ಎಐ ಕ್ರಾಂತಿಯ ಕಾಲ. ಸಿನಿಮಾದಲ್ಲಿ ನಮ್ಮಿಬ್ಬರನ್ನು ಹೊರತುಪಡಿಸಿ ನೂರಾರು ಜನರ ಕೆಲಸವನ್ನು ಎಐ ಮಾಡಿದೆ.
- ಎಸ್. ನರಸಿಂಹಮೂರ್ತಿ, ನಿರ್ದೇಶಕ
30 ಎಐ ಟೂಲ್ ಬಳಕೆ
ಎಐ ರನ್‌ವೇ ಎಂಎಲ್, ಕ್ಲಿಂಗ್ ಎಐ, ಮಿನಿ ಮ್ಯಾಕ್ಸ್ ಸೇರಿ 20 ರಿಂದ 30 ಟೂಲ್‌ಗಳನ್ನು ಬಳಸಿದ್ದೇವೆ. ಸಿನಿಮಾವನ್ನು ನೋಡಿದವರು ಮಾಮೂಲಿ ಸಿನಿಮಾಕ್ಕಿಂತಲೂ ಚೆನ್ನಾಗಿದೆ ಎಂದಿದ್ದಾರೆ.- ನೂತನ್, ಎಐ ತಂತ್ರ ನಿರ್ವಹಿಸಿದವರು