Self-love Tips: ಬೇರೆಯವರ ಚಿಂತೆ ನಿಮಗ್ಯಾಕೆ? ನಿಮ್ಮನ್ನ ನೀವು ಪ್ರೀತಿಸಿ ನೋಡಿ

First Published | Jun 20, 2022, 5:55 PM IST

ಜೀವನದಲ್ಲಿ ನಿಮಗೆ ನೀವೇ ಒಂದು ಅವಕಾಶ ನೀಡೋದು ಬಹಳ ಮುಖ್ಯ. ನಮ್ಮನ್ನು ನಾವು ಗೌರವಿಸದ ಹೊರತು, ನಮ್ಮ ಹತ್ತಿರದ ಅಥವಾ ನಮ್ಮಿಂದ ದೂರವಿರುವ ಜನರು ನಮ್ಮನ್ನು ಹೇಗೆ ಗೌರವಿಸ್ತಾರೆ ಅಲ್ವಾ?. ನಾವು ಜೀವನದಲ್ಲಿ ನಿರ್ಧಾರ ತೆಗೆದುಕೊಳ್ಳೋದನ್ನು ತಪ್ಪಿಸ್ತೇವೆ, ಅನೇಕ ವಿಷಯಕ್ಕೆ ಹೆದರ್ತ್ತೇವೆ, ಹೀಗೆ ಮಾಡೋದ್ರಿಂದ ಅದು ನಮ್ಮನ್ನು ಚುಚ್ಚುತ್ತೆ. ಪ್ರಪಂಚದ ಬಗ್ಗೆ ಯೋಚಿಸೋ ನಾವು ನಮ್ಮ ಬಗ್ಗೆ ಯೋಚಿಸೋದನ್ನೆ ಯಾಕೆ ಮರೀತಿವಿ ಎಂಬ ಪ್ರಶ್ನೆ ಮೂಡುತ್ತೆ. ದೇಶದ ಬಗ್ಗೆ ಯೋಚಿಸೋ ಮುನ್ನ ನಾವು ನಮ್ಮ ಬಗ್ಗೆ ಯೋಚಿಸಬೇಕು.

ನಾವು ನಮ್ಮನ್ನ ಎಷ್ಟು ಬೇಗ ಅರ್ಥಮಾಡಿಕೊಳ್ಳುತ್ತೇವೋ ಅಷ್ಟು ಒಳ್ಳೆಯದು. ನಮಗಾಗಿ ಮಾತ್ರವಲ್ಲ, ನಮ್ಮ ಸುತ್ತಮುತ್ತಲಿನ ಜನರಿಗೂ ಸಹ. ನಾವು ಸಂತೋಷವಾಗಿರೋವಾಗ (Happiness), ನಮ್ಮೊಂದಿಗೆ ಸಂಬಂಧ ಹೊಂದಿರುವ ಜನರನ್ನು ಸಹ ನಾವು ಸಂತೋಷವಾಗಿರಿಸುತ್ತೇವೆ. ಆದರೆ ನಾವು ದುಃಖಿತರಾಗಿದ್ರೆ ಮತ್ತು ಕಿರಿಕಿರಿ ಹೊಂದಿದ್ರೆ, ನಮ್ಮ ಪ್ರೀತಿಪಾತ್ರರ ಮೇಲೆ ಕೋಪಗೊಳ್ತೇವೆ. ಆದುದರಿಂದ ಸೆಲ್ಫ್ ಲವ್ ಬಹಳ ಮುಖ್ಯ. ನಿಮ್ಮನ್ನು ನೀವು ಪ್ರೀಸೋದು ಹೇಗೆ ನೋಡೋಣ…. ತಿಳಿಯೋಣ… 

ಈ ರೀತಿ ನಿಮ್ಮನ್ನು ನೀವು ಪ್ರೀತಿಸಿ(Love):
ಇತರರು ಏನು ಯೋಚಿಸ್ತಾರೆ ಎಂಬುದರ ಬಗ್ಗೆ ಚಿಂತಿಸಬೇಡಿ - ನಾವು ಏನಾದ್ರು ಇಷ್ಟ ಪಟ್ಟು ಮಾಡಲು ಹೊರಟಿರ್ತೀವಿ,  ಆದರೆ ನಾನು ಹೀಗೆ ಮಾಡಿದ್ರೆ ಇತರರು ಏನು ಯೋಚಿಸ್ತಾರೆ ಅನ್ನೋದ್ರ ಬಗ್ಗೆ ನಾವು ಯೋಚಿಸಿದಾಗ ನಾವು ಚಿಂತಿಸಲು ಆರಂಭಿಸುತ್ತೇವೆ. ನೀವು ಅಂತಹ ತಪ್ಪನ್ನು ಮಾಡಿದ್ರೆ, ಅದನ್ನು ಇನ್ನು ರಿಪೀಟ್ ಮಾಡ್ಬೇಡಿ. ನೀವು ಏನನ್ನಾದರೂ ಮಾಡಲು ಬಯಸಿದ್ರೆ, ಅದನ್ನು ಮಾಡಲು ಹಿಂಜರಿಯಬೇಡಿ.

Tap to resize

ಇನ್ನೊಬ್ಬರ ನಷ್ಟದ ಬಗ್ಗೆ ಹೆಚ್ಚು ಯೋಚ್ನೆ ಬೇಡ:
ನಾವು ನಮ್ಮನ್ನು ಹೆಚ್ಚು ಪ್ರೀತಿಸುವುದಿಲ್ಲ ಏಕೆಂದರೆ ನಾವು ಇತರರನ್ನು ಕಳೆದುಕೊಳ್ಳುವ ಭಯದಲ್ಲಿರ್ತೇವೆ. ನಮ್ಮನ್ನು ನಿಜವಾಗಿಯೂ ಪ್ರೀತಿಸುವವರು ನಮ್ಮ ನಿರ್ಧಾರಗಳಿಂದ ಸಂತೋಷ ಪಡುತ್ತಾರೆ ಎಂದು ನಾವು ತಿಳಿದಿರಬೇಕು. ಹಾಗಾಗಿ, ಬೇರೆಯವರ ಬಗ್ಗೆ ಯೋಚಿಸಿ (Thinking) ನಿಮ್ಮ ಸ್ವಂತ ಸಮಯ ಕಳ್ಕೊಬೇಡಿ.

ಯಾವಾಗಲೂ ನಿಮ್ಮನ್ನು ನೀವು ಮೊದಲ ಸ್ಥಾನದಲ್ಲಿರಿಸಿ:
ಹೆಚ್ಚಿನ ಜನರು ಬೇರೆಯವರಿಗೆ ತಮಗಿಂತ ಹೆಚ್ಚಿನ ಸ್ಥಾನ ಕೊಡ್ತಾರೆ. ಆದ್ರೆ ಇದು ಸರೀನಾ…? ನೀವು ನಿಮ್ಮ ಜೀವನವನ್ನು (Life) ಹೊಂದಿರೋದರಿಂದ ನಿಮ್ಮ ಜೀವನದಲ್ಲಿ ಯಾರು ಮುಖ್ಯ ಎಂದು ನೀವು ಅರ್ಥಮಾಡಿಕೊಳ್ಳಬೇಕು. ನಿಮ್ಮನ್ನು ನೀವು ಮೊದಲ ಸ್ಥಾನದಲ್ಲಿಟ್ಟುಕೊಳ್ಳೋದು ಬಹಳ ಮುಖ್ಯ ಎಂಬುದನ್ನು ಎಂದಿಗೂ ಮರೆಯಬೇಡಿ.

ನಿಮ್ಮ ಭಯಗಳ(Scared) ವಿರುದ್ಧ ಹೋರಾಡಿ:
ನಿಮಗಾಗಿ ಹೋರಾಡಿ. ಮೇಲೆ ತಿಳಿಸಿದ ಎಲ್ಲಾ ವಿಷ್ಯಗಳು ನಮ್ಮ ಮನಸ್ಸಿನ ಭಯಕ್ಕೆ ಸಂಬಂಧಿಸಿವೆ. ಯಾರನ್ನಾದರೂ ಕಳೆದುಕೊಳ್ಳುವ ಭಯ, ತಮ್ಮ ಸ್ವಂತ ನಿರ್ಧಾರ ನಂಬಲು ಸಾಧ್ಯವಾಗುವುದಿಲ್ಲ ಎಂಬ ಭಯ ಮತ್ತು ಜನರು ಏನು ಯೋಚಿಸ್ತಾರೆ ಎಂಬ ಭಯ. ಭಯದಿಂದಾಗಿ ಈ ಎಲ್ಲಾ ವಿಷಯಗಳು ನಮ್ಮ ಮನಸ್ಸಿಗೆ ಬರುತ್ತವೆ. ನೀವು ನಿಮ್ಮ ಭಯದ ವಿರುದ್ಧ ಹೋರಾಡಿ ಅದನ್ನು ಗೆದ್ದಾಗ ಮಾತ್ರ ನಿಮ್ಮನ್ನು ಸಂತೋಷವಾಗಿ ಮತ್ತು ಪ್ರೀತಿಯಿಂದ ಇರಿಸೋಕೆ ಸಾಧ್ಯ.

ತಪ್ಪುಗಳನ್ನು ಮಾಡಲು ನಿಮಗೆ ನೀವೇ ಒಂದು ಅವಕಾಶ ನೀಡಿ:
ನಮ್ಮೆಲ್ಲರ ಜೀವನದಲ್ಲಿ ತಪ್ಪುಗಳು ಆಗೋದು ಸಾಮಾನ್ಯ. ತಪ್ಪುಗಳಿಂದ ನಾವು ಕಲಿಯೋದು(Learn) ಮಾತ್ರವಲ್ಲ, ಯಾವುದು ಸರಿ ಎಂಬುದರ ಬಗ್ಗೆ ತಿಳುವಳಿಕೆ ಬೆಳೆಸಿಕೊಳ್ಳಲು ಸಹ ಸಾಧ್ಯವಾಗುತ್ತೆ. ಹಾಗಾಗಿ, ನೀವು ತಪ್ಪು ಮಾಡಿದರೆ, ನಿಮ್ಮನ್ನು ಶಪಿಸುವುದನ್ನು ಮತ್ತು ಮಾನಸಿಕವಾಗಿ ಅಸಮಾಧಾನಗೊಳ್ಳೋದನ್ನು ತಪ್ಪಿಸಿ. ನಾವು ನಮ್ಮ ತಪ್ಪುಗಳಿಂದ ಕಲಿಯುತ್ತೇವೆ ಎಂಬುದನ್ನು ಮರೆಯಬೇಡಿ.

Latest Videos

click me!