ಉದ್ದ ಕೂದಲಿನ ಜೊತೆ ಈ ಗುಣಗಳು ಹೆಣ್ಣಿನಲ್ಲಿದ್ದರೆ ಗಂಡಿಗಿಷ್ಟ!

First Published | Jun 18, 2022, 3:54 PM IST

ಸುಂದರವಾಗಿ ಕಾಣುವ ಹುಡುಗಿಯನ್ನು ಸೆಳೆಯಲು ಪುರುಷರು ಒಂದಲ್ಲ ಒಂದು ರೀತಿಯ ಕಸರತ್ತುಗಳನ್ನು ಮಾಡ್ತಾರೆ. ಆದರೆ ಹುಡುಗರು, ಹುಡುಗೀರ  ಮುಖವನ್ನೇ ನೋಡಿ ಪ್ರೀತಿಯಲ್ಲಿ ಬೀಳುತ್ತಾನೆ ಎಂದು ನೀವು ಭಾವಿಸಿದರೆ, ಅದು ತಪ್ಪು. ಹುಡುಗಿಯರ ಅನೇಕ ಗುಣಗಳು ಹುಡುಗರನ್ನು ಹೆಚ್ಚು ಆಕರ್ಷಿಸುತ್ತೆ. ಮಹಿಳೆಯರ ಯಾವೆಲ್ಲಾ ಗುಣಗಳು ಪುರುಷರಿಗೆ ಇಷ್ಟವಾಗುತ್ತೆ ನೋಡಿ… 

ಉತ್ಸಾಹದಿಂದ ಜೀವನ ನಡೆಸುವವರು

ದಿನವಿಡೀ ದೂರು ನೀಡುವಂತಹ ಹುಡುಗಿಯರನ್ನು ಯಾವ ಹುಡುಗರು ಸಹ ಇಷ್ಟಪಡೋದಿಲ್ಲ. ಅದರ ಬದಲಾಗಿ ತನ್ನ ಜೀವನವನ್ನು ತುಂಬಾ ಉತ್ಸಾಹದಿಂದ ಜೀವಿಸುವ ಕಲೆ ಅರಿತಿರುವ ಹುಡುಗಿಯರನ್ನು ಪುರುಷರು ಇಷ್ಟಪಡುತ್ತಾರೆ. 
 

ಹಾಸ್ಯ ಪ್ರಜ್ಞೆ

ತಮ್ಮ ಸಂಗಾತಿಯ ಜೋಕ್ ಕೇಳಿ ನಗಬಲ್ಲ ಮಹಿಳೆಯರನ್ನು ಪುರುಷರು ಇಷ್ಟಪಡ್ತಾರೆ. ಉತ್ತಮ ಮಟ್ಟದ ಹಾಸ್ಯ ಪ್ರಜ್ಞೆ (sense of humour) ಹೊಂದಿರುವ ಹುಡುಗಿಯರು, ತಮ್ಮ ಸಂಗಾತಿ ಜೊತೆ ಸಂತೋಷದಿಂದ ಜೀವನ ಸಾಗಿಸುತ್ತಾರೆ. ಆದುದರಿಂದ ಅಂತಹ ಹುಡುಗಿಯರು ಇಷ್ಟವಾಗುತ್ತಾರೆ.

Tap to resize

ರೆಡ್ ಲಿಪ್ಸ್

 ಮಹಿಳೆಯರ ರೆಡ್ ಲಿಪ್ಸ್ ಪುರುಷರನ್ನು ಬೇಗನೆ ಆಕರ್ಷಿಸುತ್ತೆ, ರೆಡ್ ಲಿಪ್ಸ್ ಇರಬಹುದು ಅಥವಾ ರೆಡ್ ಲಿಪ್ ಸ್ಟಿಕ್ ಇರಬಹುದು. ಇದು ಹುಡುಗಿಯರಿಗೆ ಬೋಲ್ಡ್ ಲುಕ್ (bold look) ನೀಡುತ್ತೆ. ಇದು ಪುರುಷರನ್ನು ಹೆಚ್ಚು ಆಕರ್ಷಿಸುತ್ತೆ.

ಅರ್ಥ ಮಾಡಿಕೊಳ್ಳುವ ಹುಡುಗಿ

ಕೆಲವು ಜನರು ತಾವು ಯಾವಾಗಲೂ ಸರಿ ಎಂದು ಭಾವಿಸುತ್ತಾರೆ ಮತ್ತು ತಮ್ಮ ಅಭಿಪ್ರಾಯಗಳು ಎಂದಿಗೂ ತಪ್ಪಾಗುವುದಿಲ್ಲಎಂದು ಅಂದುಕೊಳ್ಳುತ್ತಾರೆ. ಅಂತಹ ಜನರೊಂದಿಗೆ ಮಾತನಾಡುವುದು ಕಷ್ಟ. ಆದರೆ ಸಂದರ್ಭಗಳಿಗೆ ಅನುಗುಣವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಹುಡುಗಿಯರನ್ನು ಹುಡುಗರು ಇಷ್ಟಪಡುತ್ತಾರೆ.

ಅಧಿಕ ಪಿಚ್ ವಾಯ್ಸ್

 ಹೆಚ್ಚಿನ ಪಿಚ್ ವಾಯ್ಸ್ (high pitch voice) ಹೊಂದಿರುವ ಮಹಿಳೆಯರ ಕಡೆ ಪುರುಷರು ಹೆಚ್ಚು ಆಕರ್ಷಿತರಾಗುತ್ತಾರೆ ಎಂದು ನಂಬಲಾಗಿದೆ. ಮಹಿಳೆಯರ ಆ ಹೈ ವಾಯ್ಸ್ ಇದ್ರೆ ಏನೋ ಒಂಥರಾ ಆಕರ್ಷಣೆ ಇರುತ್ತೆ. 

ಹೈ ಹಿಪ್ಸ್

 ಹಿಪ್ಸ್ ಚೆನ್ನಾಗಿರೋ ಹುಡುಗಿಯರನ್ನು ಕಂಡರೆ ಪುರುಷರು ಬೇಗನೆ ಅವರತ್ತ ಆಕರ್ಷಿತರಾಗುತ್ತಾರೆ ಎನ್ನಲಾಗುತ್ತೆ. ಇಂತಹ ಹುಡೂಗಿಯರು ನೋಡಲು ಸಹ ತುಂಬಾನೆ ಆಕರ್ಷಿತರಾಗಿರುತ್ತಾರೆ. ಅಲ್ಲದೇ ಬೋಲ್ಡ್ ಲುಕ್ ಹೊಂದಿರುತ್ತಾರೆ.

ಸ್ವಾವಲಂಬಿ ಮಹಿಳೆ

 ಹೌದು, ತಮ್ಮ ಆಯ್ಕೆ ಕ್ಷೇತ್ರವನ್ನು ಗುರುತಿಸಿ, ಅದರಲ್ಲೇ ಮುಂದುವರೆಯುವ ಸ್ವಾಭಿಮಾನಿ ಹುಡುಗಿಯರನ್ನು ಪುರುಷರು ಇಷ್ಟಪಡುತ್ತಾರೆ. ಇಂತಹ ಹುಡುಗಿಯರು ಮದುವೆಯಾದ ನಂತರವೂ ತಮ್ಮ ಕೆಲಸ ಮುಂದುವರೆಸುವ ಹುಡುಗಿ ಎಲ್ಲರಿಗೂ ಇಷ್ಟ. 

ಕರುಣಾಮಯಿ

ಯಾವ ಮಹಿಳೆ ತನ್ನ ಹೃದಯದಲ್ಲಿ ತುಂಬಾ ಸಾಫ್ಟ್ ಆಗಿರುತ್ತಾಳೋ ಮತ್ತು ದಯೆಯ ಗುಣ ಹೊಂದಿದ್ದಾಳೆಯೋ ಆ ಮಹಿಳೆ ಕೆಟ್ಟ ಸಮಯದಲ್ಲೂ ತನ್ನ ಸಂಗಾತಿಯನ್ನು ಬೆಂಬಲಿಸುತ್ತಾಳೆ. ಇಂತಹ ಮಹಿಳೆ ಪುರುಷರಿಗೆ ಇಷ್ಟವಾಗೋದಿಲ್ಲ.

ಕುಕ್ಕಿಂಗ್ ಸ್ಕಿಲ್ಸ್

 ಪುರುಷರ ಹೃದಯದ ಮಾರ್ಗವು ಹೊಟ್ಟೆಯ ಮೂಲಕ ಹಾದುಹೋಗುತ್ತದೆ ಎಂದು ನಿಮಗೆ ತಿಳಿದಿರಬೇಕು. ಕುಕ್ಕಿಂಗ್ ಸ್ಕಿಲ್ಸ್ (cooking skills) ಚೆನ್ನಾಗಿ ಇದ್ರೆ ಆ ಹುಡುಗಿ ಪುರುಷರಿಗೆ ಇಷ್ಟವಾಗುತ್ತಾರೆ. 

ಸ್ಮೈಲ್

 ನಿಮ್ಮ ಮುಖದ ಮೇಲಿನ ನಗುವು ನಿಮ್ಮ ಸೌಂದರ್ಯವನ್ನು ಹೆಚ್ಚಿಸುತ್ತೆ, ಅಷ್ಟೇ ಅಲ್ಲ ನಿಮ್ಮನ್ನು ಮತ್ತಷ್ಟು ಆಕರ್ಷಕವಾಗಿ ಕಾಣುವಂತೆ ಮಾಡುತ್ತೆ, ನಿಮ್ಮ ನಗುವನ್ನು (smile) ನೋಡುವುದು ನಿಮ್ಮ ಸಂಗಾತಿಗೆ ಪಾಸಿಟಿವ್ ಫೀಲಿಂಗ್ ನೀಡುತ್ತೆ.

ವಿಭಿನ್ನ ವ್ಯಕ್ತಿತ್ವ

ಮಹಿಳೆಯರು ತಮ್ಮದೇ ಆದ ವ್ಯಕ್ತಿತ್ವವನ್ನು ಹೊಂದಿರಬೇಕು. ಅವರು ಇತರರಂತೆ ಇರಲು ಟ್ರೈ ಮಾಡಿದ್ರೆ, ಇತರರನ್ನು ಅನುಕರಿಸಿದ್ರೆ ಅಂತಹ ಹುಡುಗಿ ಪುರುಷರಿಗೆ ಇಷ್ಟವಾಗೋದಿಲ್ಲ, ಆದರೆ ತಮ್ಮದೇ ಆದ ವ್ಯಕ್ತಿತ್ವ ರೂಪಿಸಿಕೊಂಡಿರುವ ಹುಡುಗಿ ನಿಜಕ್ಕೂ ಆಕರ್ಷಕವಾಗಿ ಕಾಣುತ್ತಾಳೆ.

ತುಂಟಾಟ

ಗಂಭೀರವಾಗಿರೋ ಮಹಿಳೆಯರಿಗಿಂತ ಪುರುಷರು ಹೆಚ್ಚಾಗಿ ತುಂಟಾಟವಾಡುತ್ತಾ (naughty) , ತಮ್ಮ ಬಾಲ್ಯವನ್ನು ನೆನಪಿಸುವ ಮಹಿಳೆಯರತ್ತ ಬೇಗನೆ ಆಕರ್ಷಿತರಾಗುತ್ತಾರೆ. ನೀವು ಅವರಲ್ಲಿ ಒಬ್ಬರಾಗಿದ್ರೆ ಖಂಡಿತವಾಗಿಯೂ ಪುರುಷರು ನಿಮ್ಮತ್ತ ಆಕರ್ಷಿತರಾಗುತ್ತಾರೆ.

ಕಾಳಜಿ ವಹಿಸುವವರು

ಒಬ್ಬ ಪುರುಷ ತನಗಾಗಿ ಮತ್ತು ತನ್ನ ಕುಟುಂಬದ ಉತ್ತಮ ಭವಿಷ್ಯಕ್ಕಾಗಿ ಹೆಣಗಾಡುತ್ತಿರುವಾಗ, ಅವನಿಗೆ ತನ್ನ ಪ್ರೀತಿಯಿಂದ, ಕಾಳಜಿಯಿಂದ ನೋಡಿಕೊಳ್ಳುವ ಮತ್ತು ಬೆಂಬಲವಾಗಿ ನಿಲ್ಲುವ ಸಂಗಾತಿಯ ಅಗತ್ಯವಿರುತ್ತೆ. ಕಾಳಜಿ ಇರೋ ಮಹಿಳೆಯರು ಪುರುಷರಿಗೆ ಇಷ್ಟವಾಗ್ತಾರೆ. 

ಉದ್ದನೆಯ ಕೇಶರಾಶಿ

ಶಾರ್ಟ್ ಹೇರ್ ಈಗಿನ ಟ್ರೆಂಡ್ ಆಗಿರಬಹುದು, ಆದ್ರೆ ನಿಮಗೆ ಗೊತ್ತೆ ಪುರುಷರಿಗೆ ಉದ್ದನೆಯ, ದಟ್ಟವಾದ ಕೂದಲಿನ (long hair) ಹುಡುಗಿಯರನ್ನು ನೋಡಿದಾಗ, ಹೃದಯ ಅವರತ್ತ ಒಲಿಯಲು ಆರಂಭಿಸುತ್ತಂತೆ. ನಿಮಗೂ ಉದ್ದನೆಯ ಕೂದಲು ಇದ್ರೆ, ಖಂಡಿತಾ ಅವರಿಗೆ ನೀವೂ ಇಷ್ಟವಾಗ್ತೀರಿ.

Latest Videos

click me!