ನಿಮ್ಮ ಸಂಗಾತಿಯನ್ನು ಹತ್ತಿರಕ್ಕೆ ತರಲು ಅತ್ಯುತ್ತಮ ಟ್ರಿಕ್ಸ್ ಇಲ್ಲಿವೆ !!

First Published | Apr 9, 2022, 7:22 PM IST

Relationship Tips: ಬಿಡುವಿಲ್ಲದ ಜೀವನದಿಂದಾಗಿ ಅನೇಕ ಬಾರಿ, ಉತ್ತಮ ಸಂಬಂಧದಲ್ಲಿಯೂ ದೂರವು ಹೆಚ್ಚಾಗಲು ಪ್ರಾರಂಭಿಸುತ್ತದೆ. ಸಂಬಂಧದಲ್ಲಿ ದೂರವು ನಂತರ ವಿರಸಕ್ಕೆ ಕಾರಣವಾಗುತ್ತದೆ. ಸಣ್ಣ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು, ನೀವು ಸಂಗಾತಿಯನ್ನು ಹತ್ತಿರಕ್ಕೆ ತರಬಹುದು. ಅದು ಹೇಗೆ ಅದಕ್ಕಾಗಿ ನೀವು ಏನು ಮಾಡಬೇಕು ಅನ್ನೋದನ್ನು ನೋಡೋಣ.... 
 

ಸಲಹೆ(Suggestion) ಕೇಳಿ
ಎಲ್ಲಾ ವಿಷಯದಲ್ಲೂ ನೀವೇ ನಿರ್ಧಾರ ತೆಗೆದುಕೊಳ್ಳಬೇಡಿ. ನಿಮ್ಮ ಸಂಗಾತಿಯ ಸಲಹೆ ಕೂಡ ಮುಖ್ಯವಾಗಿದೆ. ಆದುದರಿಂದ ಯಾವುದಾದರೂ ವಿಷಯದ ಬಗ್ಗೆ ಸಲಹೆಗಾಗಿ ನಿಮ್ಮ ಸಂಗಾತಿಯನ್ನು ಕೇಳುವುದು, ನೀವು ಅವರ ಅಭಿಪ್ರಾಯವನ್ನು ನಂಬುತ್ತೀರಿ ಎಂದು ತೋರಿಸುತ್ತದೆ. 

ಗಿಫ್ಟ್(Gift) ನೀಡಿ 
ಪ್ರೀತಿಯಿಂದ ನೀಡಲಾಗುವ ಒಂದು ಸಣ್ಣ ಉಡುಗೊರೆಯು ಯಾರದ್ದಾದರೂ ದಿನವನ್ನು ಅದ್ಭುತ ದಿನವನ್ನಾಗಿ ಬದಲಾಯಿಸುತ್ತದೆ. ರಜಾದಿನಗಳು, ಜನ್ಮದಿನಗಳು ಅಥವಾ ವಾರ್ಷಿಕೋತ್ಸವಗಳಲ್ಲಿ ಹೀಗೆ ವಿಶೇಷ ದಿನಗಳಲ್ಲಿ ಗಿಫ್ಟ್ ನೀಡಿ ಸರ್ ಪ್ರೈಸ್ ನೀಡಿ , ಇದು ಅವರಿಗೆ ಹೆಚ್ಚು ಖುಷಿಯನ್ನು ನೀಡುತ್ತದೆ. .

Tap to resize

ಉತ್ತಮ ಕೇಳುಗರಾಗಿ(Listener)
ನಿಮ್ಮ ಸಂಗಾತಿಯು ಏನನ್ನಾದರೂ ಹೇಳುತ್ತಿರುವಾಗ, ಅವರನ್ನು ಒಳ್ಳೆಯ ಲಿಸ್ನರ್ ನಂತೆ ಆಲಿಸಿ. ಈ ಸಮಯದಲ್ಲಿ ಫೋನ್ ಬಳಸಬೇಡಿ. ಅಥವಾ ಬೇರೆ ಯಾವುದೊ ಕೆಲಸ ಮಾಡುತ್ತಾ ಕಳೆಯಬೇಡಿ. ಇದರಿಂದ ಅವರಿಗೆ ಕೋಪ ಬರುವ ಸಾಧ್ಯತೆ ಇದೆ. ಆದುದರಿಂದ ಆ ಸಮಯದಲ್ಲಿ ಸಂಗಾತಿ ಹೇಳುವುದನ್ನು ಕೇಳಿ. 

ಇಂಪ್ರೆಸ್(Impress) ಮಾಡಿ
ನಿಮ್ಮ ಸಂಗಾತಿಯನ್ನು ವಿಭಿನ್ನ ರೀತಿಯಲ್ಲಿ ಮೆಚ್ಚಿಸಿ. ಅವರಿಗೆ ಇಷ್ಟವಾದ ಉಡುಪನ್ನು ಧರಿಸಿ ಅಥವಾ ಸರ್ಪ್ರೈಸ್ ಆಗಿ ಡಿನ್ನರ್ ಡೇಟ್ ಆರ್ಗನೈಸ್ ಮಾಡಿ, ಅಥವಾ ನೀವೇ ಮನೆಯನ್ನು ಡೆಕೋರ್ ಮಾಡಿ, ಅಲ್ಲಿ ಸಣ್ಣ ಡೇಟಿಂಗ್ ಪ್ಲ್ಯಾನ್ ಮಾಡಿ. ಇದು ಅವರನ್ನು ಇಂಪ್ರೆಸ್ ಮಾಡುತ್ತೆ. 

ಭಾವನೆಗಳನ್ನು(Feelings) ಹಂಚಿಕೊಳ್ಳಿ
ಸಂಗಾತಿಯೊಂದಿಗೆ ನಿಮ್ಮ ಭಾವನೆಗಳನ್ನು ಮುಕ್ತವಾಗಿ ಹಂಚಿಕೊಳ್ಳುವುದು ನೀವು ಅವರ ಬಗ್ಗೆ ಕಾಳಜಿ ವಹಿಸುತ್ತೀರಿ ಎಂದು ತೋರಿಸುತ್ತದೆ. ಯಾವುದೇ ವಿಷ್ಯ ನಿಮ್ಮನ್ನು ಕಾಡುತ್ತಿರಲಿ, ಅದನ್ನು ಮನಸ್ಸಿನಲ್ಲಿಟ್ಟುಕೊಂಡು ಬೇಸರ ಮಾಡಿಕೊಳ್ಳಬೇಡಿ, ಬದಲಾಗಿ ಸಂಗಾತಿಯೊಂದಿಗೆ ಮಾತನಾಡಿ ಪರಿಹರಿಸಿಕೊಳ್ಳಿ. 
 

ಅಭಿನಂದನೆಗಳನ್ನು ನೀಡಿ
ಪ್ರತಿಯೊಬ್ಬರೂ ತಮ್ಮ ನೋಟ ಮತ್ತು ವೈಯಕ್ತಿಕ ಗುಣಮಟ್ಟದ ಬಗ್ಗೆ ಒಳ್ಳೆಯದನ್ನು ಕೇಳಲು ಇಷ್ಟಪಡುತ್ತಾರೆ. ಆದುದರಿಂದ ಅವರು ಏನಾದರೂ ಮಾಡಿದಾಗ ಥಾಂಕ್ಸ್(Thanks), ಸುಂದರವಾಗಿದೆ, ಅದ್ಭುತವಾಗಿದೆ, ಹೀಗೆ ಹೇಳೋದನ್ನು ಮಾತ್ರ ಮರೆಯಬೇಡಿ. ಇದು ಅವರಿಗೆ ಹೆಚ್ಚಿನ ಸಂತೋಷ ನೀಡುತ್ತದೆ. 
 

Image: Getty Images

ಪ್ರೋತ್ಸಾಹಿಸಿ(Encourage)
ಯಾವುದೇ ಕೆಲಸಕ್ಕೆ ನಿಮ್ಮ ಸಂಗಾತಿಯನ್ನು ಪ್ರೋತ್ಸಾಹಿಸಿ ಮತ್ತು ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಿ. ಅವರು ಯಾವುದಾದರೂ ಹೊಸ ಕೆಲಸ ಮಾಡಲು ಹಿಂಜರಿಯುತ್ತಿದ್ದಾರೆ, ಅಂತಹ ಸಂದರ್ಭದಲ್ಲಿ ಅವರ ಬೆನ್ನ ಹಿಂದೆ ನಿಂತು ಅವರನ್ನು ಪ್ರೋತ್ಸಾಹಿಸಿ, ಇದರಿಂದ ಅವರಿಗೆ ಕೆಲಸ ಮಾಡಲು ಹುಮ್ಮಸ್ಸು ಸಿಗುತ್ತದೆ. 

ಥ್ಯಾಂಕ್ಸ್ ಹೇಳಿ
ಸಂಗಾತಿಯು ಮಾಡಿದ ಕೆಲಸಕ್ಕಾಗಿ ಧನ್ಯವಾದಗಳು ಎಂದು ಹೇಳಿ, ಇದು ಸಂಬಂಧದಲ್ಲಿ ರೆಸ್ಪೆಕ್ಟ್(Respect) ಅನ್ನು ಉಳಿಸಿಕೊಳ್ಳುತ್ತದೆ.ಇವರಿಗ್ಯಾಕೆ ಥ್ಯಾಂಕ್ಸ್ ಹೇಳಬೇಕು ಎಂದು ನೀವು ಯೋಚನೆ ಮಾಡಬೇಡಿ, ಅದರ ಬದಲಾಗಿ, ಸಣ್ಣ ಸಣ್ಣ ವಿಷಯಕ್ಕೂ ಥ್ಯಾಂಕ್ಸ್ ಹೇಳಿ. ಇದರಿಂದ ಗೌರವ ಹೆಚ್ಚುತ್ತದೆ. 

Latest Videos

click me!