ನೀವು ಮಾಡೋ ಈ ತಪ್ಪುಗಳು ಮೊದಲ ಡೇಟ್ ನ್ನೇ ಹಾಳು ಮಾಡುತ್ತೆ

Published : Apr 07, 2022, 12:48 AM IST

ಡೇಟಿಂಗ್ ಅನ್ನೋದು ವಿಶೇಷವಾದ ಸಮಯವಾಗಿರುತ್ತದೆ. ಈ ಸಂದರ್ಭದಲ್ಲಿ ನೀವು ಒಬ್ಬರನ್ನೊಬ್ಬರು ತಿಳಿದುಕೊಳ್ಳಲು ಸಹಕಾರಿಯಾಗಿದೆ. ನೀವು ಮೊದಲ ಬಾರಿಗೆ ನಿಮ್ಮ ಕ್ರಶ್ ನೊಂದಿಗೆ ಡೇಟಿಂಗ್ ಗೆ (dating) ಹೋಗುತ್ತಿದ್ದರೆ, ಈ ವಿಷಯಗಳ ಬಗ್ಗೆ ಕಾಳಜಿ ವಹಿಸುವುದು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಅಲ್ಲದೆ ಯಾವ ವಿಷಯಗಳನ್ನು ನೀವು ಕೇಳಬಹುದು, ಯಾವ ವಿಷಯಗಳನ್ನು ಕೇಳಬಾರದು ಎನ್ನುವುದರ ಬಗ್ಗೆ ಇಲ್ಲಿ ನೋಡೋಣ... 

PREV
18
ನೀವು ಮಾಡೋ ಈ ತಪ್ಪುಗಳು ಮೊದಲ ಡೇಟ್ ನ್ನೇ ಹಾಳು ಮಾಡುತ್ತೆ

ಕುಟುಂಬದ ಬಗ್ಗೆ ಪ್ರಶ್ನೆಗಳು
ಕುಟುಂಬಕ್ಕೆ ಸಂಬಂಧಿಸಿದ ವಿಷಯಗಳನ್ನು ನೀವು ಅವರ ಬಳಿ ಕೆದಕಿ ಕೇಳಬೇಡಿ. ನೀವು ಕುಟುಂಬದ ವಿಷಯಗಳ (family issue) ಬಗ್ಗೆ ಹೆಚ್ಚು ಹೆಚ್ಚು ಕೇಳಿದರೆ ಹಳೆಯ ಆಲೋಚನೆಗಳ ವ್ಯಕ್ತಿ ಎಂದು ಅವರಿಗೆ ಅನಿಸುವಂತೆ ಮಾಡಬಹುದು. ಇದು ಅವರಿಗೆ ಇಷ್ಟವಾಗದೇ ಇರಬಹುದು. 

28

ಸಂಬಳ ಕೇಳಬೇಡಿ (asking about salary)
"ಮೊದಲ ಭೇಟಿಯಲ್ಲಿ ಯಾವತ್ತೂ ಸಂಬಳದ ಬಗ್ಗೆ ಮಾತುಕತೆ ನಡೆಸಬೇಡಿ. ಇದು ಇಬ್ಬರು ಜೊತೆಯಾಗಿ ಸೇರಿ ಬಾಳುವ ನಿರ್ಧಾರ ಮಾಡಿದಾಗ ಮಾತ್ರ ಇಂತಹ ಪ್ರಶ್ನೆಗಳನ್ನು ಕೇಳಬಹುದು. ಮೊದಲ ಭೇಟಿಯಲ್ಲೇ ಈ ರೀತಿ ಪ್ರಶ್ನೆ ಕೇಳಿದಾಗ ಅವರಿಗೆ ನೀವು ಅವರ ಹಣಕ್ಕಾಗಿಯೇ ಅವರ ಜೊತೆ ಇದ್ದೀರಿ ಎಂದು ಅಂದುಕೊಳ್ಳಬಹುದು. 

38

ತಯಾರಾಗಿ 
ಡೇಟಿಂಗ್ ಗೆ ರೆಡಿಯಾಗಲು ಅತಿಯಾಗಿ ಉತ್ಸುಕರಾಗಬೇಡಿ. ಮೊದಲ ಡೇಟ್ ಗಾಗಿ ನಿಮ್ಮ ಲುಕ್ ಡೀಸೆಂಟ್ ಆಗಿರುವಂತೆ ನೋಡಿಕೊಳ್ಳಿ. ಹೆಚ್ಚು ಸ್ಟೈಲ್ ಮಾಡಲು ಹೋಗಿ ನಿಮ್ಮ ಲುಕ್ ಹಾಳು ಮಾಡಿಕೊಳ್ಳಬೇಡಿ. ಇದರಿಂದ ಎದುರಿದ್ದವರಿಗೆ ನಿಮ್ಮ ಲುಕ್ ಅಸಹ್ಯವಾಗಿ ತೋರಬಹುದು. 

48

ಎಕ್ಸ್ ಬಗ್ಗೆ ಕೇಳಬೇಡ
ನಿಮ್ಮ ಸಂಗಾತಿಯೊಂದಿಗೆ ಮೊದಲ ಡೇಟಿಂಗ್ (first dating) ನಲ್ಲಿ ಅವರ ಮಾಜಿ ಬಗ್ಗೆ ಕೇಳಬೇಡಿ. ಇದು ಡೇಟಿಂಗ್ ನ್ನು ಹಾಳುಮಾಡಬಹುದು. ಕೆಲವರಿಗೆ ಆರಂಭದಲ್ಲೇ ಎಲ್ಲವನ್ನು ಹೇಳಲು ಇಷ್ಟವಿರೋದಿಲ್ಲ. ಇದು ಅವರಿಗೆ ಮುಜುಗರವನ್ನು ಸಹ ಉಂಟು ಮಾಡಬಹುದು. ಆದುದರಿಂದ ನೀವು ಈ ಬಗ್ಗೆ ಕೇರ್ ಫುಲ್ ಆಗಿರುವುದು ಮುಖ್ಯವಾಗಿದೆ. 

58

ವಾದ ಮಾಡಬೇಡಿ
ಮೊದಲ ಮೀಟಿಂಗ್ ನಲ್ಲಿ ಪ್ರಸ್ತುತ ವಿಷಯದ ಬಗ್ಗೆ ಮಾತನಾಡುವುದು ವಾದ ಮಾಡುವ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ. ಆದುದರಿಂದ ಯಾವುದೇ ವಾದವನ್ನು ಉಂಟು ಮಾಡುವಂತಹ ವಿಷಯಗಳನ್ನು ಮಾತನಾಡದಂತೆ ಎಚ್ಚರ ವಹಿಸಿ. ಉತ್ತಮ ರೀತಿಯಲ್ಲಿ ವ್ಯವಹರಿಸಿ. 

68

ಗೇಲಿ ಮಾಡಬೇಡಿ
ಅನೇಕ ಬಾರಿ, ಕೆಲವು ವಿಷಯಗಳಿಗೆ ಸಂಬಂಧಿಸಿದಂತೆ ನಾವು ಸಂಗಾತಿಯನ್ನು ಗೇಲಿ (making fun) ಮಾಡುತ್ತೇವೆ ಮತ್ತು ನಾವು ಅದನ್ನು ಸಹ ಅರಿತುಕೊಳ್ಳುವುದಿಲ್ಲ, ತಮಾಷೆಗೆ ಹೇಳಿ ಬಿಡುತ್ತೇವೆ. ಆದರೆ ಅದು ಎದುರಿದ್ದವರಿಗೆ ಇಷ್ಟವಾಗಬೇಕು ಎಂದೇನೂ ಇಲ್ಲ. ಆದುದರಿಂದ ಯೋಚನೆ ಮಾಡಿ ವ್ಯವಹರಿಸುವುದು ಮುಖ್ಯ. 

78

ಇಷ್ಟಗಳು, ಇಷ್ಟವಿಲ್ಲದಿರುವಿಕೆಗಳ ಬಗ್ಗೆ ಕಾಳಜಿ ವಹಿಸಿ
ಸಂಗಾತಿಯ ಇಷ್ಟಗಳು, ಇಷ್ಟವಿಲ್ಲದಿರುವಿಕೆಗಳ ಬಗ್ಗೆ ತಿಳಿದುಕೊಂಡಿರುವುದು ಮುಖ್ಯವಾಗಿದೆ. ಇದನ್ನು ಮಾಡುವ ಮೂಲಕ, ನೀವು ಸಂಗಾತಿಯನ್ನು ಸುಲಭವಾಗಿ ಇಂಪ್ರೆಸ್ ಮಾಡಬಹುದು. ಅವರಿಗೆ ನೀವೂ ತುಂಬಾನೇ ಇಷ್ಟವಾಗೋದು ಖಚಿತ. 

88

ಪ್ರೀತಿಯ ಮೊದಲು ಸ್ನೇಹ 
ಮೊದಲ ಭೇಟಿಯಲ್ಲಿ ಪ್ರೀತಿಯನ್ನು ನಿರೀಕ್ಷಿಸಬೇಡಿ, ಆದರೆ ಉತ್ತಮ ಸ್ನೇಹಿತರಾಗಲು ಪ್ರಯತ್ನಿಸಿ. ಒಬ್ಬರ ಬಗ್ಗೆ ಇನ್ನೊಬ್ಬರು ತಿಳಿದುಕೊಳ್ಳಲು ಹೆಚ್ಚು ಸಮಯ ಬೇಕಾಗುತ್ತದೆ. ಆದುದರಿಂದ ಭೇಟಿಯಾದ ಕೂಡಲೇ ಪ್ರೀತಿ, ಗೀತಿ ಎಂದು ಯೋಚನೆ ಮಾಡಬೇಡಿ. ಬದಲಾಗಿ ಉತ್ತಮ ಸ್ನೇಹಿತರಾಗಿ. 

Read more Photos on
click me!

Recommended Stories