ಕಪಲ್ಸ್ ಯೋಗ ಮಾಡಿ…. ಸಂಬಂಧ ಸ್ಟ್ರಾಂಗ್ ಮಾಡ್ಕೊಳ್ಳಿ

First Published Jun 21, 2022, 5:18 PM IST

ಸಂಬಂಧದಲ್ಲಿ ಸ್ವಲ್ಪ ಏರಿಳಿತಗಳು ಯಾವಾಗಲೂ ಇದ್ದೇ ಇರುತ್ತೆ, ಆದರೆ ಅವು ಬೆಳೆಯಲು ಪ್ರಾರಂಭಿಸಿದಾಗ, ಸಮಸ್ಯೆ ಹೆಚ್ಚಾಗುತ್ತೆ. ಸಮಸ್ಯೆ ಹೆಚ್ಚಾದಂತೆ ಸಂಬಂಧ ದೂರವಾಗುತ್ತೆ. ಇವೆಲ್ಲಾ ಆಗಬಾರದು ಎಂದಾದರೆ ಸಂಬಂಧ ಸುಧಾರಿಸಲು ಅನೇಕ ಮಾರ್ಗಗಳಿವೆ, ಸಂಗಾತಿಯೊಂದಿಗಿನ ನಿಮ್ಮ ಸಂಬಂಧ ಸುಧಾರಿಸುವುದು ಮಾತ್ರವಲ್ಲದೆ ನಿಮ್ಮನ್ನು ಆರೋಗ್ಯವಾಗಿಡಲು ಸಹಾಯ ಮಾಡುವ ಒಂದು ವಿಷಯವಿದೆ. 

ಸಂಗಾತಿಯೊಂದಿಗಿನ ನಿಮ್ಮ ರಿಲೇಷನ್ಶಿಪ್ (Relationship)ಯಾವಾಗಲೂ ಸುಂದರವಾಗಿ ಮತ್ತು ತಾಜಾವಾಗಿಡಲು, ನೀವು ಕೆಲವು ಯೋಗಾಸನ ಟ್ರೈ ಮಾಡಿ, ಇದು ನಿಮ್ಮ ನಡುವಿನ ಪ್ರೀತಿ ಹೆಚ್ಚಿಸಲು ಸಹಾಯ ಮಾಡುತ್ತೆ. ಇಂದು ಜೂನ್ 21 ರಂದು, ಪ್ರಪಂಚದಾದ್ಯಂತ ಜನರು ಯೋಗ ದಿನವನ್ನು ಆಚರಿಸ್ತಿದ್ದಾರೆ, ಈ ದಿನದಿಂದ ನೀವು ನಿಮ್ಮ ಸಂಬಂಧ ಸುಧಾರಿಸಲು ಅವಕಾಶ ನೀಡಬಹುದು. ಆರೋಗ್ಯ ಸುಧಾರಿಸಲು ಮತ್ತು ರೋಮ್ಯಾನ್ಸ್ ಸ್ಟಾರ್ಟ್ (Romance) ಮಾಡುವಂತೆ ಮಾಡುವ ಕೆಲವು ಯೋಗಾಸನಗಳ ಬಗ್ಗೆ ತಿಳಿಯಿರಿ.

ಕ್ರಾಸ್ ಲೆಗ್ಡ್ ಯೋಗಾಸನ

ಆರೋಗ್ಯವಾಗಿರಲು ಯೋಗ (Yoga) ಅತ್ಯಗತ್ಯ ಮತ್ತು ನೀವು ಅದನ್ನು ನಿಮ್ಮ ಸಂಗಾತಿಯೊಂದಿಗೆ ಸಹ ಮಾಡಬಹುದು. ಕಪಲ್ ಯೋಗವು (Couple Yoga) ನಿಮ್ಮ ಆರೋಗ್ಯ ಸುಧಾರಿಸುವುದಲ್ಲದೇ, ನಿಮ್ಮ ಸಂಬಂಧ ಬಲಪಡಿಸುತ್ತೆ. ಮೊದಲನೆಯದಾಗಿ ಕ್ರಾಸ್ ಲೆಗ್ ಪೊಸಿಷನ್ ಯೋಗದ ಬಗ್ಗೆ ತಿಳಿಯೋಣ, ಇದನ್ನು ನೀವು ನಿಮ್ಮ ಸಂಗಾತಿಯೊಂದಿಗೆ ಸುಲಭವಾಗಿ ಮಾಡಬಹುದು.

ನಿಮ್ಮ ಕಾಲುಗಳನ್ನು ಕ್ರಾಸ್ (Cross) ಮಾಡಿ ಯೋಗ ಮ್ಯಾಟ್ ಮೇಲೆ ಕುಳಿತುಕೊಳ್ಳಿ ಮತ್ತು ಕೈಗಳನ್ನು ಪರಸ್ಪರರ ಮೊಣಕಾಲಿನ ಮೇಲೆ ಇರಿಸಿ. ಈ ಯೋಗಾಸನ ಮಾಡುವಾಗ, ನಿಮ್ಮ ಸೊಂಟವು ಸಂಪೂರ್ಣವಾಗಿ ನೇರವಾಗಿರಬೇಕು. ನೀವು ಈ ಭಂಗಿಯಲ್ಲಿ ಕುಳಿತು ಪರಸ್ಪರರ ಕಣ್ಣು ನೋಡಬಹುದು. ಈ ಭಂಗಿಯಲ್ಲಿ ಕುಳಿತುಕೊಳ್ಳುವುದು ದೀರ್ಘಕಾಲದ ನೋವು, ಆತಂಕ ಮತ್ತು ಒತ್ತಡವನ್ನು ತೆಗೆದುಹಾಕುತ್ತೆ.

ಲೆಗ್ ರೈಸ್ ಯೋಗಾಸನ

ಈ ಯೋಗಾಸನದಲ್ಲಿ, ನೀವು ಮಲಗಿ ನಿಮ್ಮ ಬೆನ್ನಿನ ಸಹಾಯದಿಂದ ಸಂಗಾತಿ ಕಡೆಗೆ ಬರುತ್ತೀರಿ, ಇದು ನಿಮ್ಮ ಹೊಟ್ಟೆಯ ಮೇಲೆ ಒತ್ತಡವನ್ನು ಹಾಕುತ್ತೆ. ಇದರಲ್ಲಿ ನೀವು ನಿಮ್ಮ ಪಾರ್ಟ್ನರ್ ಕೈಯನ್ನು ಸ್ಪರ್ಶಿಸಿದಾಗ, ನೀವು ಪರಸ್ಪರ ಪ್ರೆಸೆನ್ಸ್ ಅನುಭವಿಸಬಹುದು. ಅದೇ ಸಮಯದಲ್ಲಿ, ನೀವು ಎದ್ದಾಗ,  ಪಾರ್ಟ್ನರ್ (Partner) ಜೊತೆ ನಿಮ್ಮ ಐ ಕಾಂಟಾಕ್ಟ್ (Eye Contact) ಸಹ  ರೂಪುಗೊಳ್ಳುತ್ತೆ  ಮತ್ತು ನೀವು ಕಣ್ಣುಗಳಲ್ಲಿ ನಿಮ್ಮ ಹೃದಯದ(Heart) ಮಾತನಾಡಬಹುದು.

ಸೀಟೆಡ್ ಕೈಟ್ ಕೌ ಯೋಗಾಸನ

ಈ ಯೋಗಾಸನದಲ್ಲಿ, ನೀವು ಕಾಲುಗಳನ್ನು ಕ್ರಾಸ್ ಮಾಡಿ ಪರಸ್ಪರರ ಮುಂದೆ ಕುಳಿತು ನಿಮ್ಮ ಕೈಗಳನ್ನು ಮುಂದೆ ತಂದು ಹಿಡಿದುಕೊಳ್ಳಿ. ಸಂಗಾತಿಯ ಎರಡೂ ಕೈ ಹಿಡಿದುಕೊಂಡು ಅದನ್ನು ಬ್ರಿಡ್ಜ್ ನಂತೆ ಮಾಡಿ ಮತ್ತು ಧ್ಯಾನ ಮಾಡಲು ಪ್ರಯತ್ನಿಸಿ. ಈ ಯೋಗದಿಂದ ನೀವು ಒಬ್ಬರಿಗೊಬ್ಬರು ಕಳೆದುಹೋಗಲು ಪ್ರಾರಂಭಿಸುವುದು ಮಾತ್ರವಲ್ಲದೆ, ನಿಮ್ಮ ದೇಹವು ಸ್ಟ್ರೇಟ್ಚ್ (Body stretch) ಸಹ ಆಗುತ್ತೆ.

ಒತ್ತಡ(Stress) ಕಡಿಮೆ ಮಾಡಲು ಯೋಗ

ಪಾರ್ಟ್ನರ್ ಜೊತೆ ಯೋಗ ಮಾಡೋದ್ರಿಂದ, ಅವರ ನಡುವಿನ ನಿಕಟತೆ ಹೆಚ್ಚಾಗೋದು ಮಾತ್ರವಲ್ಲದೆ ಅವರ ಒತ್ತಡವೂ  ಕಡಿಮೆ ಮಾಡುತ್ತೆ. ಯೋಗ ನಿಮ್ಮನ್ನು ಒತ್ತಡ ಮುಕ್ತಗೊಳಿಸುವ ಮಾಧ್ಯಮ. ನೀವು ಪ್ರತಿದಿನ ಇದನ್ನು ಮಾಡಲು ಪ್ರಾರಂಭಿಸಿದಾಗ, ಅದು ನಿಮ್ಮನ್ನು ಶಾಂತಗೊಳಿಸುತ್ತೆ, ಇದು ಉತ್ತಮ ಬಾಂಧವ್ಯಕ್ಕೆ ಸಹಾಯ ಮಾಡುತ್ತೆ. ಕೋಪವನ್ನು ಶಾಂತಗೊಳಿಸಿಸುವ ಮೂಲಕ ಸಂಗಾತಿಯೊಂದಿಗಿನ ನಿಮ್ಮ ಜಗಳವನ್ನು ಕಡಿಮೆ ಮಾಡಿ, ಬಾಂಧವ್ಯ ವೃದ್ಧಿ ಮಾಡುತ್ತೆ.
 

click me!