Relationship Tips : ನಿಮ್ಮ ಪ್ರೀತಿ ಈಗಷ್ಟೇ ಶುರುವಾಗಿದ್ರೆ, ಈ ತಪ್ಪುಗಳನ್ನು ಮಾಡಲೇಬೇಡಿ

First Published May 11, 2022, 6:46 PM IST

ನೀವು ಹೊಸದಾಗಿ ಪ್ರೀತಿಯಲ್ಲಿ ಬಿದ್ದಾಗ, ಸಂಬಂಧದಲ್ಲಿ ನಿಮಗೆ ಸಾಕಷ್ಟು ಗಮನದ ಅಗತ್ಯವಿರುತ್ತದೆ. ಪ್ರೀತಿಯಲ್ಲಿ ನಾವೆಷ್ಟೇ ಜಾಕರೂಕರಾದ ನಂತರವೂ, ನಾವು ಅಂತಹ ಅನೇಕ ತಪ್ಪುಗಳನ್ನು ಮಾಡುತ್ತೇವೆ. ಅಂತಹ ಪರಿಸ್ಥಿತಿಯಲ್ಲಿ, ಇಲ್ಲಿ ಹೇಳಿರುವ ಸಲಹೆಗಳ ಸಹಾಯದಿಂದ ನೀವು ನಿಮ್ಮ ಹದಗೆಡುತ್ತಿರುವ ಸಂಬಂಧವನ್ನು ನಿಭಾಯಿಸಬಹುದು. 
 

ನಿಮ್ಮ ಸಂಗಾತಿಯೊಂದಿಗೆ(Partner) ಏನು ಮಾತನಾಡಬೇಕು? ಮಾತನಾಡುವುದು ಹೇಗೆ? ಅವರ ಜೊತೆ ವರ್ತಿಸುವುದು ಹೇಗೆ? ಇದು ಎಲ್ಲರೂ ಯೋಚನೆ ಮಾಡುವಂತಹ ಪ್ರಶ್ನೆಯಾಗಿದೆ, ಆದರೆ ಅದರ ನಂತರವೂ, ನಾವು ತಪ್ಪುಗಳನ್ನು ಮಾಡುತ್ತೇವೆ. ಇದರಿಂದ ಸಂಬಂಧ ಹದಗೆಡಲು ಆರಂಭಿಸುತ್ತದೆ. 
 


ಅಧಿಕಾರ ಚಲಾಯಿಸುವುದು ತಪ್ಪು. 
ನಿಮ್ಮ ಸಂಬಂಧವು ಈಗಷ್ಟೇ ಪ್ರಾರಂಭವಾಗಿದ್ದರೆ, ನೀವು ನಿಮ್ಮ ಎಮೋಷನ್ ಗಳನ್ನು ತೋರಿಸುವುದನ್ನು ನಿಲ್ಲಿಸಬೇಕು ಮತ್ತು ನೀವು ಮೊದಲು ನಿಮ್ಮ ಕ್ವಾಲಿಟಿಯನ್ನು(Quality) ತೋರಿಸುವ ಕೆಲಸ ಮಾಡಬೇಕು. ಇದರಿಂದ ಪ್ರೀತಿ ಗಟ್ಟಿಯಾಗುತ್ತೆ. 

ನಿಮ್ಮ ಗುಣವನ್ನು ಮೊದಲಿಗೆ ತೋರಿಸಿದರೆ, ಆಗ ನೀವು ಪ್ರೀತಿಯನ್ನು ಕಳೆದುಕೊಳ್ಳುವ ಬಗ್ಗೆ ಎಂದಿಗೂ ಹೆದರುವ ಆವಶ್ಯಕತೆ ಇರುವುದಿಲ್ಲ. ಅದೇ ಸಮಯದಲ್ಲಿ, ಕೆಲವು ಜನರು ತಾವು ಪ್ರೀತಿಸಲು(Love) ಆರಂಭಿಸಿದ್ದೆ ತಡ ಅಧಿಕಾರ ಚಲಾಯಿಸಲು ಶುರು ಮಾಡುತ್ತಾರೆ. ನೀವು ಅಲ್ಲಿಗೆ ಏಕೆ ಹೋದಿರಿ, ನೀವು ಹೇಗೆ ಹೋದಿರಿ ಅಥವಾ ಫೋನ್ ನಲ್ಲಿ ನೀವು ಯಾರೊಂದಿಗೆ ಮಾತನಾಡುತ್ತಿದ್ದಿರಿ? ಎಂದು, ಇದೆಲ್ಲವೂ ಸಂಪೂರ್ಣವಾಗಿ ತಪ್ಪು.

ಹೆಚ್ಚು ನಿರೀಕ್ಷಿಸಬೇಡಿ 
ಹೊಸ ಸಂಬಂಧದಲ್ಲಿ ನಿಮ್ಮ ಸಂಗಾತಿಯಿಂದ ಯಾವುದನ್ನೇ ಆಗಲಿ ನಿರೀಕ್ಷಿಸುವುದು ತುಂಬಾ ತಪ್ಪು. ಹೆಚ್ಚು ನಿರೀಕ್ಷೆ(Expectation) ಮಾಡಿದಷ್ಟು ಹೆಚ್ಚು ಬೇಸರ ಉಂಟಾಗುವುದು ಖಚಿತ. ಆದುದರಿಂದ ಸಾಧ್ಯವಾದಷ್ಟು ನಿರೀಕ್ಷೆ ಮಾಡುವುದನ್ನು ಬಿಡಿ. 

ಅನೇಕ ಬಾರಿ ದಂಪತಿಗಳು(Couple) ತಮ್ಮ ಸಂಗಾತಿ ತಾವು ಹೇಗೆ ಫೀಲ್ ಮಾಡುತ್ತಾರೋ, ಕಾಳಜಿ ವಹಿಸುತ್ತಾರೋ ಹಾಗೆ ತಮ್ಮ  ಸಂಗಾತಿಯೂ ಮಾಡಬೇಕು ಎಂದು ಬಯಸುತ್ತಾರೆ. ಅದು ತಪ್ಪು.  ನಿಮಗೆ ಅನಿಸಿದ್ದನ್ನು ನೀವು ಮಾಡಿ, ಅದೇ ರೀತಿ ಅವರಿಗೆ ಅನಿಸಿದ್ದನ್ನು ಅವರಿಗೆ ಮಾಡಲು ಬಿಡಿ, ಅವರಿಂದ ಏನನ್ನು ನಿರೀಕ್ಷೆ ಮಾಡಬೇಡಿ. 

ಪ್ರತಿಯೊಂದಕ್ಕೂ ವಾದ, ಜಗಳ(Fight) ಮಾಡುವುದಲ್ಲ
ನಿಮ್ಮ ಸಂಗಾತಿಯು ಇತರ ಜನರೊಂದಿಗೆ ಮಾತನಾಡುವುದನ್ನು ನೀವು ಇಷ್ಟಪಡದಿರಬಹುದು, ಅದಕ್ಕಾಗಿ ನೀವು ಅವರನ್ನು ಅಡ್ಡಿಪಡಿಸಲು ಪ್ರಾರಂಭಿಸುವುದು ಅಥವಾ ಸಂಗಾತಿಯ ಬಟ್ಟೆಗಳು ಅಥವಾ ಉಡುಗೆಗಳ ಬಗ್ಗೆ ನಿಮ್ಮ ಅಸಮಾಧಾನವನ್ನು ವ್ಯಕ್ತಪಡಿಸಬೇಕು ಎಂದು ಇದರರ್ಥವಲ್ಲ.

ಸ್ಪೇಸ್(Space) ನೀಡಿ 
ಸಂಬಂಧದಲ್ಲಿ ಸ್ಪೇಸ್ ನೀಡುವುದು ತುಂಬಾನೆ ಮುಖ್ಯ. ಯಾಕೆಂದರೆ ಎಲ್ಲರಿಗೂ ಅವರದ್ದೆ ಆದ ಕೆಲವೊಂದು ಅಗತ್ಯಗಳಿವೆ. ಅವುಗಳನ್ನು ಅವರು ಪೂರೈಸಲು ಬಯಸುತ್ತಾರೆ. ಆದುದರಿಂದ ಅದನ್ನು ನಾವು ತಡೆಯಬಾರದು ಅವರಿಗೂ ಅವರದ್ದೆ ಆದ ಸ್ಪೇಸ್ ನೀಡಬೇಕು. 

ಈ ಎಲ್ಲ ಟಿಪ್ಸ್ ಗಳನ್ನೂ ಫಾಲೋ ಮಾಡಿ ನೋಡಿ, ಪ್ರೀತಿಯ ಮ್ಯಾಜಿಕ್ ಅನುಭವಿಸುವಿರಿ! 

click me!