ಮದುವೆಯಾದ ನಂತರ ಹೊಸ ಮನೆಯಲ್ಲಿ ಹೇಗಿದ್ರೆ ಲೈಫ್ ಚೆನ್ನಾಗಿರುತ್ತೆ

First Published Jul 1, 2022, 6:28 PM IST

ಮದುವೆಯಾದ ಬಳಿಕ ಹುಡುಗಿಯರ ಜೀವನದಲ್ಲಿ (girls life) ಅನೇಕ ಬದಲಾವಣೆಗಳು ಉಂಟಾಗುತ್ತವೆ. ಮದುವೆಯಾದ ಹೊಸತರಲ್ಲಿ ಎಲ್ಲವೂ ಹೊಸದಾಗಿರೋದರಿಂದ ಅಡ್ಜಸ್ಟ್ ಮಾಡೋದು ಕಷ್ಟವಾಗುತ್ತೆ. ಗಂಡನ ಮನೆಲೀ ನಿಮಗೆ ಏನೂ ಕಷ್ಟ ಆಗಬಾರದು ಎಂದಾದರೆ ನೀವು ಈ ಸಲಹೆಗಳನ್ನು ಪಾಲಿಸಬೇಕು. 

ಮದುವೆಯ ನಂತರ, ಹುಡುಗಿಯರು (bride) ಅನೇಕ ವಿಷಯಗಳನ್ನು ಎದುರಿಸಬೇಕಾಗುತ್ತದೆ. ಹೊಸ ಮನೆ, ಹೊಸ ಕುಟುಂಬ, ಹೊಸ ಪರಿಸರ, ಹೊಸ ಜನರು ಮತ್ತು ತಮಗೆ ಗೊತ್ತಿಲ್ಲದ ವಿಷಯಗಳನ್ನು ಎದುರಿಸುವ ಮೂಲಕ ಅವರು ಹೊಸ ಜಗತ್ತಿನಲ್ಲಿ ತಮ್ಮನ್ನು ತಾವು ಹೊಂದಿಸಿಕೊಳ್ಳಬೇಕು. ಹೊಸ ಮನೆಯಲ್ಲಿ ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗೋದು ಸವಾಲಿನ ಕೆಲಸ ಆಗಿರುತ್ತೆ. ಹಾಗಾದ್ರೆ ಎಲ್ಲಾ ಸಮಸ್ಯೆಗಳನ್ನು ಎದುರಿಸೋದು ಹೇಗೆ? 
 

ಇಂದು ನಾವು ನಿಮ್ಮ ಈ ಸವಾಲು ಮತ್ತು ಭಯವನ್ನು ದೂರ ಮಾಡಲು ಕೆಲವೊಂದು ಟಿಪ್ಸ್ ತಿಳಿಸುತ್ತೇವೆ. ಈ ಟಿಪ್ಸ್ ನ್ನು ನೀವು ಫಾಲೋ ಮಾಡಿದ್ರೆ ಯಾವುದೇ ತಪ್ಪುಗಳನ್ನು ಮಾಡದೆ ಹೊಸ ಮನೆ ಮತ್ತು ಪರಿಸರದಲ್ಲಿ ನೀವು ಖುಶಿ ಖುಶಿಯಾಗಿ ಜೀವನ ನಡೆಸಬಹುದು. ಏನದು ಸಲಹೆ ಮುಂದೆ ಓದಿ… 

ನಿಮ್ಮ ಸ್ನೇಹಿತರಿಗೆ ಎಲ್ಲವನ್ನೂ ಹೇಳಬೇಡಿ

ಮದುವೆಯ ನಂತರ, ವಧುವು ತನ್ನ ಅತ್ತೆ -ಮಾವ ಇರುವ ಮನೆಯೇ ತನ್ನ ಮನೆ ಎಂದು ಅಂದುಕೊಂಡು ಜೀವನ ನಡೆಸಬೇಕು. ಪ್ರತಿಯೊಂದು ಸಂಸಾರದಲ್ಲೂ ಏರಿಳಿತ ಇದ್ದೇ ಇರುತ್ತೆ, ಆದರೆ ನೀವು ಎಲ್ಲಾ ಸಮಸ್ಯೆಗಳನ್ನು ಮನೆಯಲ್ಲಿಯೇ ಪರಿಹರಿಸಬೇಕು. ಅದನ್ನೆಲ್ಲಾ ನಿಮ್ಮ ಸ್ನೇಹಿತರ ಬಳಿ ಹೇಳಬೇಡಿ. ಇದರಿಂದ ಮನೆಯಲ್ಲಿ ಕಲಹ ಉಂಟಾಗುವ ಸಾಧ್ಯತೆ ಇದೆ. 

ಹಣವನ್ನು ವ್ಯರ್ಥ ಮಾಡಬೇಡಿ
ನಿಮ್ಮ ಅಥವಾ ಗಂಡನ ಹಣವನ್ನು ಸುಮ್ಮನೆ ಶಾಪಿಂಗ್ (shopping) ಮಾಡಲು, ಇನ್ನಿತರ ಕಾರಣಕ್ಕಾಗಿ ಖರ್ಚು ಮಾಡಬೇಡಿ. ನಿಮ್ಮ ಪತಿಗೆ ಇಡೀ ಮನೆಯ ಜವಾಬ್ದಾರಿ ಇದೆ ಅನ್ನೋದನ್ನು ನೀವು ಅರ್ಥ ಮಾಡಿಕೊಳ್ಳಬೇಕು. 

ಅಷ್ಟೇ ಅಲ್ಲ ಪತಿಯ ಹಣ ನಿಮಗೆ ಮತ್ತು ಇಡೀ ಕುಟುಂಬಕ್ಕೆ ಸೇರಿದೆ. ಇದರಿಂದ ಮನೆಯ ಸಂಪೂರ್ಣ ವೆಚ್ಚಗಳು ಸರಿತೂಗಿಸಿಕೊಂಡು ಹೋಗಬೇಕು, ಹಾಗಾಗಿ ಎಲ್ಲಿ, ಹೇಗೆ ಮತ್ತು ಎಷ್ಟು ಹಣ ಖರ್ಚು ಮಾಡಬೇಕು ಎಂಬುದನ್ನು ನೀವು ಅರ್ಥಮಾಡಿಕೊಳ್ಳಬೇಕು. ಆಗ ಮಾತ್ರ ಹ್ಯಾಪಿ ಲೈಫ್ ನಿಮ್ಮದಾಗಲು ಸಾಧ್ಯ.
 

ಎಲ್ಲವನ್ನು ಸರಿಸಮಗೊಳಿಸು
ನೀವು ಯಾವಾಗಲೂ ನಿಮ್ಮ ಮನೆಯವರು ಮತ್ತು ಸ್ನೇಹಿತರಿಗೆ ಮಾತ್ರ ಇಂಪಾರ್ಟನ್ಸ್ ಕೊಡೋದು  ತಪ್ಪು. ನೀವು ಎಲ್ಲರನ್ನೂ ಬ್ಯಾಲೆನ್ಸ್ ಮಾಡಬೇಕು ಮತ್ತು ಮುಂದೆ ಸಾಗಬೇಕು. ನೀವು ಅತ್ತೆ-ಮಾವಂದಿರು ಮತ್ತು ಸ್ನೇಹಿತರಿಗೆ ಸಮಾನ ಇಂಪಾರ್ಟನ್ಸ್ ಕೊಡಬೇಕು. ಆಗ ಮಾತ್ರ ನೆಮ್ಮದಿಯ ಜೀವನ ನಡೆಸಲು ಸಾಧ್ಯ.

ಅತ್ತೆ-ಮಾವಂದಿರನ್ನೂ ಪ್ರೀತಿಸಿ
ನೀವು ನಿಮ್ಮ ಮನೆಯಲ್ಲಿ ಅಪ್ಪ -ಅಮ್ಮನನ್ನು ಎಷ್ಟು ಪ್ರೀತಿಸಿದ್ದೀರೋ, ಅಷ್ಟೇ ಪ್ರೀತಿಯನ್ನು ನಿಮ್ಮ ಅತ್ತೆ ಮಾವನಿಗೂ ನೀಡಬೇಕು. ಅವರ ಜೊತೆ ನೀವು ಪ್ರೀತಿಯಿಂದ ಬಾಳಿದರೆ ಮಾತ್ರ ಗಂಡನ ಮನೆಯಲ್ಲಿ ನಿಮ್ಮ ಲೈಫ್ ತುಂಬಾನೆ ಖುಷಿಯಾಗಿರುತ್ತೆ.

click me!