ವಯಸ್ಸು 30 ದಾಟಿದ್ರೂ ಇನ್ನೂ ಮದುವೆ ಆಗಿಲ್ಲ ಅಂತ ಕೊರಗುತ್ತಿದ್ದೀರಾ? ಎಷ್ಟೇ ಸಂಬಂಧ ನೋಡಿದ್ರೂ ಯಾವುದು ಕೂಡಿ ಬರ್ತಿಲ್ವಾ? ಹಾಗಿದ್ರೆ ಚಿಂತೆ ಬಿಡಿ. ದೇಶದ ಈ ಪ್ರಸಿದ್ಧ ದೇವಾಲಯಗಳಿಗೆ ಭೇಟಿ ಕೊಟ್ಟರೆ ಸಾಕು, ತಿಂಗಳೊಳಗೆ ನಿಮ್ಮ ಮದುವೆ ಖಚಿತ ಎನ್ನುತ್ತಾರೆ ಭಕ್ತರು.
ಜೀವನದಲ್ಲಿ ಮದುವೆ ಅನ್ನೋದು ಒಂದು ಪ್ರಮುಖ ಘಟ್ಟ. ಪ್ರತಿಯೊಬ್ಬರೂ ಸರಿಯಾದ ವಯಸ್ಸಿಗೆ ಮದುವೆಯಾಗಲು ಬಯಸುತ್ತಾರೆ. ಆದರೆ, ಇಂದಿನ ದಿನಗಳಲ್ಲಿ ಅನೇಕರು ಕೆರಿಯರ್ ಕಡೆ ಗಮನ ಹರಿಸಿ ಮದುವೆ ವಯಸ್ಸು ದಾಟಿದ ಮೇಲೂ ಸಿಂಗಲ್ ಆಗಿ ಉಳಿಯುತ್ತಾರೆ.
26
ಜಾತಕ ದೋಷಗಳಿಂದ ಮದುವೆ ತಡ
ಕೆಲವರಿಗೆ ಜಾತಕದ ದೋಷದಿಂದ ವಿವಾಹ ವಿಳಂಬವಾಗುತ್ತದೆ. ಕಾರಣ ಯಾವುದೇ ಇರಲಿ, ದೇಶದ ಕೆಲವು ದೇವಾಲಯಗಳಿಗೆ ಭೇಟಿ ನೀಡುವುದರಿಂದ ಈ ಸಮಸ್ಯೆ ಬಗೆಹರಿಯುತ್ತದೆ, ಶೀಘ್ರದಲ್ಲೇ ಕಂಕಣ ಭಾಗ್ಯ ಕೂಡಿಬರುತ್ತದೆ ಎಂದು ನಂಬಲಾಗಿದೆ. ಆ ದೇವಾಲಯಗಳು ಯಾವುವು ಎಂದು ತಿಳಿಯೋಣ.
36
ಮಂಗಳಾದೇವಿ ದೇವಸ್ಥಾನ
ಮಂಗಳೂರಿನಲ್ಲಿರುವ ಪುರಾತನ ಮಂಗಳಾದೇವಿ ದೇವಸ್ಥಾನಕ್ಕೆ ಭೇಟಿ ನೀಡಿ, ಭಕ್ತಿಯಿಂದ ದೇವಿಯನ್ನು ಪೂಜಿಸಿದರೆ ವಿವಾಹದ ಅಡೆತಡೆಗಳು ನಿವಾರಣೆಯಾಗುತ್ತವೆ. ಶೀಘ್ರದಲ್ಲೇ ಮದುವೆ ನೆರವೇರಿ, ದಾಂಪತ್ಯ ಜೀವನ ಸುಖಮಯವಾಗಿರುತ್ತದೆ.
ಇನ್ನು ಉಜ್ಜಯಿನಿಯ ಮಹಾಕಾಳೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಶಿವನ ಆಶೀರ್ವಾದ ಪಡೆದರೆ, ಮದುವೆಗೆ ಸಂಬಂಧಿಸಿದ ಅಡೆತಡೆಗಳು ದೂರವಾಗುತ್ತವೆ. ಇಲ್ಲಿ ಜಾತಕ ದೋಷಗಳನ್ನು ನಿವಾರಿಸಲು ವಿಶೇಷ ಪೂಜೆಗಳನ್ನು ಸಹ ಮಾಡಲಾಗುತ್ತದೆ. ಈ ದೇವಾಲಯಕ್ಕೆ ಭೇಟಿ ನೀಡುವುದರಿಂದ ಆರ್ಥಿಕ ಸಮಸ್ಯೆಗಳೂ ದೂರವಾಗುತ್ತವೆ ಎಂಬುದು ಭಕ್ತರ ನಂಬಿಕೆ.
56
ಮಂಡ್ಯದ ಬ್ರಹ್ಮೇಶ್ವರ ದೇವಾಲಯ
ಮಂಡ್ಯ ಜಿಲ್ಲೆಯ ಕಿಕ್ಕೇರಿಯಲ್ಲಿರುವ ಈ ಪುರಾತನ ಬ್ರಹ್ಮೇಶ್ವರ ದೇವಾಲಯ ವಾಸ್ತುಶಿಲ್ಪಕ್ಕೆ ಮಾತ್ರವಲ್ಲ, ಭಕ್ತರ ಸಮಸ್ಯೆಗಳನ್ನು ಪರಿಹರಿಸುವುದಕ್ಕೂ ಹೆಸರುವಾಸಿ. ಇಲ್ಲಿ ದೇವರಿಗೆ ವಿಶೇಷ ಅಭಿಷೇಕ ಮಾಡಿಸುವುದರಿಂದ ವಿವಾಹದ ಅಡೆತಡೆಗಳು ದೂರವಾಗುತ್ತವೆ.
66
ಇಸ್ಕಾನ್ ದೇವಾಲಯ
ರಾಜಸ್ಥಾನದ ಖಾಟು ಶ್ಯಾಮ್ ದೇವಾಲಯವು ಭಕ್ತರ ಇಷ್ಟಾರ್ಥಗಳನ್ನು ಪೂರೈಸುತ್ತದೆ. ಇಲ್ಲಿ ಪ್ರಾರ್ಥನೆ ಸಲ್ಲಿಸುವುದರಿಂದ ಮದುವೆಗೆ ಇರುವ ಅಡ್ಡಿಗಳು ನಿವಾರಣೆಯಾಗುತ್ತವೆ. ಅಸ್ಸಾಂನ ಗುವಾಹಟಿಯಲ್ಲಿರುವ ಕಾಮಾಕ್ಯ ದೇವಾಲಯವು ಪ್ರೀತಿ ಮತ್ತು ವೈವಾಹಿಕ ಜೀವನದ ಸಮಸ್ಯೆಗಳಿಗೆ ಪರಿಹಾರ ನೀಡುವ ಶಕ್ತಿಪೀಠವಾಗಿದೆ. ಇಲ್ಲಿ ಪೂಜೆ ಸಲ್ಲಿಸಿದರೆ ಶೀಘ್ರ ವಿವಾಹ ನೆರವೇರುತ್ತದೆ. ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‌ನಲ್ಲಿರುವ ಇಸ್ಕಾನ್ ದೇವಾಲಯದಲ್ಲಿ ರಾಧಾ-ಕೃಷ್ಣರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರೆ ತಕ್ಷಣವೇ ವಿವಾಹ ಯೋಗ ಕೂಡಿಬರುತ್ತದೆ ಎಂದು ನಂಬಲಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.