ಬಾಲಿವುಡ್‌ನ ಸಾರ್ವಕಾಲಿಕ ಹಿಟ್ ಜೋಡಿ ಶಾರುಖ್ ಖಾನ್ ಮತ್ತು ಕಾಜೋಲ್ ತಮ್ಮ ಸ್ನೇಹಕ್ಕೆ ಹೆಸರುವಾಸಿ. ಒಮ್ಮೆ ತೀವ್ರ ತಲೆನೋವಿನಿಂದ ಬಳಲುತ್ತಿದ್ದಾಗ, ಬೇಡ ಬೇಡ ಅಂದ್ರೂ ಶಾರುಖ್ ಕೊಟ್ಟ ಮಾತ್ರೆಯಿಂದ ಬಳಿಕ ಆಗಿದ್ದೇನು ಎನ್ನುವುದನ್ನು ನಟಿ ಕಾಜೋಲ್ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ.
ಒಂದು ಕಾಲದ ಸೂಪರ್ಹಿಟ್ ಜೋಡಿಗಳಲ್ಲಿ ಒಂದು ಶಾರುಖ್ ಖಾನ್ ಮತ್ತು ಕಾಜೋಲ್ ಜೋಡಿ. ಇದನ್ನು ಬಾಲಿವುಡ್‌ನ ಸಾರ್ವಕಾಲಿಕ ಅತ್ಯುತ್ತಮ ಹಾಗೂ ಜನಪ್ರಿಯ ಆನ್-ಸ್ಕ್ರೀನ್ ಜೋಡಿ ಎಂದೇ ಹೇಳಲಾಗುತ್ತದೆ. ಸ್ಕ್ರೀನ್ ಮೇಲೆ ಅಷ್ಟೇ ಅಲ್ಲದೇ ನಿಜ ಜೀವನದಲ್ಲಿಯೂ ಇಬ್ಬರೂ ಕ್ಲೋಸ್ ಫ್ರೆಂಡ್ಸ್
26
ಲಂಡನ್‌ನಲ್ಲಿ ಜೋಡಿ ಪ್ರತಿಮೆ
ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ (DDLJ), ಕುಚ್ ಕುಚ್ ಹೋತಾ ಹೈ, ಕಭಿ ಖುಷಿ ಕಭಿ ಗಮ್, ಮೈ ನೇಮ್ ಈಸ್ ಖಾನ್, ಕರಣ್ ಅರ್ಜುನ್ ಮತ್ತು ದಿಲ್ವಾಲೆ... ಹೀಗೆ ಈ ಜೋಡಿಯ ಹಲವು ಚಿತ್ರಗಳು ದೇಶ-ವಿದೇಶಗಳಲ್ಲಿ ಬ್ಲಾಕ್ ಬಸ್ಟರ್ ಆಗಿವೆ. ಈ ಜೋಡಿಯ ಕ್ರೇಜ್ ಎಷ್ಟು ಎಂದರೆ, ಲಂಡನ್‌ನಲ್ಲಿ ಇವರ ಪ್ರತಿಮೆಗಳನ್ನು ಸಹ ಅನಾವರಣಗೊಳಿಸಲಾಗಿದೆ.
36
ಶಾರುಖ್ ಹೇಳಿದ್ದೇನು?
ದಶಕಗಳಿಂದಲೂ ಇವರಿಬ್ಬರ ಸ್ನೇಹ ಮುಂದುವರಿದಿದ್ದು, ಒಬ್ಬರನ್ನೊಬ್ಬರು ಬಹುವಾಗಿ ಗೌರವಿಸುತ್ತಾರೆ. ಒಮ್ಮೆ ಶಾರುಖ್ ಖಾನ್ ಅವರಿಗೆ ನೀವು ಯಾವ ಸಿನಿಮಾದಲ್ಲಿ ಕಾಜೋಲ್ರನ್ನು ಮಿಸ್ ಮಾಡಿಕೊಳ್ಳುತ್ತೀರಿ ಎಂದು ಪ್ರಶ್ನಿಸಿದ್ದಾಗ, ಶಾರುಖ್ ಎಲ್ಲಾ ಸಿನಿಮಾಗಳಲ್ಲಿಯೂ ಎಂದು ಉತ್ತರ ಕೊಟ್ಟಿದ್ದರು. ಅಷ್ಟು ಬಾಂಡಿಂಗ್ ಇದೆ ಇವರದ್ದು.
ಇದೀಗ ನಟಿ ಕಾಜೋಲ್, ಅಂದು ಶಾರುಖ್ ಖಾನ್ ಕೊಟ್ಟ ಮಾತ್ರೆಯ ಬಗ್ಗೆ ಮಾತನಾಡಿದ್ದಾರೆ. foodwithfarahh ಚಾನೆಲ್ಗೆ ನೀಡಿರುವ ಸಂದರ್ಶನದಲ್ಲಿ ನಿರ್ಮಾಪಕಿ ಫರ್ಹಾ ಖಾನ್ ಅವರು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ, ಕಾಜೋಲ್ ಆ ಘಟನೆ ನೆನಪಿಸಿಕೊಂಡಿದ್ದಾರೆ.
56
ಅಂದು ನಡೆದದ್ದೇನು?
ಅದೊಂದು ದಿನ ನನಗೆ ವಿಪರೀತ ತಲೆನೋವು ಇತ್ತು. ಅದು ಹೇಗೆ ಎಂದು ಹೇಳುವುದಕ್ಕೂ ಸಾಧ್ಯವಿಲ್ಲ. ಆಗ ಶಾರುಖ್ ಖಾನ್ ಒಂದು ಮಾತ್ರೆ ಕೊಟ್ಟು ಇದನ್ನು ತೆಗೆದುಕೋ ಎಂದ. ಆದ್ರೆ ನಾನು ಮಾತ್ರೆ ಗೀತ್ರೆ ತಿನ್ನುವವಳಲ್ಲ. ಬೇಡವೇ ಬೇಡ ಅಂದೆ. ಆಮೇಲೆ ಏನಾಯ್ತೋ ಗೊತ್ತಿಲ್ಲ.
66
3 ಗಂಟೆ ನಿದ್ದೆಯಿಂದ ಎಚ್ಚರವಾದಾಗ...
ಮೂರು ಗಂಟೆ ನಿದ್ದೆ ಮಾಡಿಬಿಟ್ಟೆ. ಎಚ್ಚರವಾದಾಗ ಫುಲ್ ಖುಷಿಯಾಗಿದ್ದೆ. ತಲೆನೋವು ಹೋಗಿತ್ತು. ಮಾತ್ರೆ ತಿನ್ನದೇ ಹೇಗೆ ಆರಾಮಾದೆ ನೋಡಿದ್ಯಾ ಎಂದು ಶಾರುಖ್ಗೆ ಕೇಳಿದಾಗ, ಆತ ಜೋರಾಗಿ ನಕ್ಕು, ನಿನ್ನ ತಲೆನೋವಲ್ಲಿ ಏನಾಗ್ತಿದೆ ಎಂದು ನಿನಗೇನು ಗೊತ್ತಿತ್ತು, ತಲೆನೋವು ತಡೆದುಕೊಳ್ಳಲು ಆಗದೇ ಮಾತ್ರೆ ನುಂಗಿ ಮಲಗಿದ್ದೆ ಅಷ್ಟೇ ಎಂದಾಗ, ನಾನು ಠುಸ್ ಆದೆ ಎಂದು ನೆನಪಿಸಿಕೊಂಡಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.