ಹೀಗೆ ಮಾಡಿದ್ರೆ ನನ್ನ ಪತಿ ನನ್ನ ಮಾತಿಗೆ No ಹೇಳೋದಿಲ್ಲ; Infosys ಸುಧಾ ಮೂರ್ತಿ ಬಿಚ್ಚಿಟ್ಟ ರಹಸ್ಯ ಏನು?

Published : Apr 26, 2026, 09:53 AM IST

ಇನ್ಫೋಸಿಸ್ ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ದಂಪತಿ ತಮ್ಮ ಸರಳ ಜೀವನ ಹಾಗೂ ಅನ್ಯೋನ್ಯ ದಾಂಪತ್ಯಕ್ಕೆ ಹೆಸರುವಾಸಿ. ತಮಗೆ ಬೇಕಾದ್ದನ್ನು ಗಂಡನ ಬಳಿ ಯಾವ ಸಮಯದಲ್ಲಿ ಕೇಳಬೇಕು ಎಂದು ಸುಧಾಮೂರ್ತಿ ಇತ್ತೀಚೆಗೆ ತಿಳಿಸಿದ್ದಾರೆ. ತಾವೂ ಕೂಡ ನಾರಾಯಣ ಮೂರ್ತಿ ಬಳಿ ಇದೇ ರೀತಿ ಕೇಳುವುದಾಗಿ ಹೇಳಿಕೊಂಡಿದ್ದಾರೆ.

PREV
14
ಸಿಕ್ಕಾಪಟ್ಟೆ ಸಿಂಪಲ್‌ ಇರೋ ಸುಧಾ ಮೂರ್ತಿ

ಇನ್ಫೋಸಿಸ್ ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ದಂಪತಿ ಕೋಟ್ಯಧಿಪತಿಗಳಾಗಿದ್ದರೂ ತಮ್ಮ ಸರಳ ಜೀವನಶೈಲಿಯಿಂದಲೇ ಎಲ್ಲರ ಗಮನ ಸೆಳೆಯುತ್ತಾರೆ. ಇನ್ಫೋಸಿಸ್‌ನಲ್ಲಿ ಈ ದಂಪತಿ ಮತ್ತು ಅವರ ಮಕ್ಕಳ ಒಟ್ಟು ಷೇರು ಮೌಲ್ಯ ಸುಮಾರು 30 ಸಾವಿರ ಕೋಟಿ ರೂಪಾಯಿ. ಆದರೂ ಅವರು ತುಂಬಾ ಸಾಮಾನ್ಯ ಜೀವನ ನಡೆಸುತ್ತಾರೆ. ಸುಧಾ ಮೂರ್ತಿ ಸರಳ ಸೀರೆಗಳನ್ನು ಉಡುತ್ತಾರೆ, 

ಚಿನ್ನದ ಆಭರಣಗಳನ್ನು ಧರಿಸುವುದಿಲ್ಲ. ಎಷ್ಟೇ ಹಣ, ಆಸ್ತಿ, ಅಂತಸ್ತು ಇದ್ದರೂ ಅದನ್ನು ಪ್ರದರ್ಶಿಸದೆ, ತಮ್ಮ ಸರಳ ಜೀವನದಲ್ಲೇ ಸಂತೋಷ ಕಂಡುಕೊಂಡು ಎಲ್ಲರಿಗೂ ಮಾದರಿಯಾಗಿದ್ದಾರೆ. ಅವರು ಮನಸ್ಸು ಮಾಡಿದರೆ ಕೋಟಿಗಟ್ಟಲೆ ಮೌಲ್ಯದ ವಜ್ರಾಭರಣಗಳನ್ನು ಧರಿಸಬಹುದು, ಆದರೆ ಆಡಂಬರದಿಂದ ಅವರು ಸದಾ ದೂರ.

24
ಗಂಡ ಪೇಪರ್‌ ಓದುವಾಗ..

ಸುಧಾಮೂರ್ತಿ ಆಗಾಗ ಸಂತೋಷದ ದಾಂಪತ್ಯ ಜೀವನಕ್ಕೆ ಕೆಲವು ಸಲಹೆಗಳನ್ನು ನೀಡುತ್ತಿರುತ್ತಾರೆ. ಇತ್ತೀಚೆಗೆ ಅವರು ಒಂದು ತಮಾಷೆಯ ವಿಚಾರವನ್ನು ಹಂಚಿಕೊಂಡಿದ್ದಾರೆ. ಪತ್ನಿಯರ ಮಾತುಗಳನ್ನು ಕೇಳದೆಯೇ ಗಂಡಂದಿರು ಯಾವಾಗ 'ಸರಿ' ಎನ್ನುತ್ತಾರೆ ಎಂಬುದನ್ನು ಅವರು ಹೇಳಿದ್ದಾರೆ. 

ಸುಧಾ ಮೂರ್ತಿ ಅವರ ಪ್ರಕಾರ, ಗಂಡ ಪೇಪರ್ ಓದುತ್ತಿರುವಾಗ ಪತ್ನಿ ಏನು ಕೇಳಿದರೂ ಅವರು ಗಮನ ಕೊಡುವುದಿಲ್ಲವಂತೆ. ಅವರ ಪೂರ್ತಿ ಗಮನ ಪೇಪರ್ ಓದುವುದರ ಮೇಲೆಯೇ ಇರುತ್ತದೆ. ಹಾಗಾಗಿ ಪತ್ನಿ ಏನಾದರೂ ಕೇಳಿದರೆ ತಕ್ಷಣ 'ಸರಿ' ಎನ್ನುತ್ತಾರಂತೆ. ತಾನೂ ಕೂಡ ಹೀಗೆ ಹಲವು ಬಾರಿ ಮಾಡಿದ್ದೇನೆ ಎಂದು ಸುಧಾಮೂರ್ತಿ ಹೇಳಿಕೊಂಡಿದ್ದಾರೆ.

34
3 ಕೋಟಿ ರೂಪಾಯಿ ಆಭರಣ ಬೇಕು ಎಂದೆ

ಆದರೆ, ಒಮ್ಮೆ ಇದೇ ಟ್ರಿಕ್ ಬಳಸಿ ನಾರಾಯಣ ಮೂರ್ತಿ ಪೇಪರ್ ಓದುತ್ತಿದ್ದಾಗ ಒಂದು ಗಿಫ್ಟ್ ಕೇಳಿದೆ, ಆದರೆ ಅವರಿಂದ 'ಸರಿ' ಎನ್ನಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಸುಧಾಮೂರ್ತಿ ಒಂದು ತಮಾಷೆಯ ಘಟನೆಯನ್ನು ಹಂಚಿಕೊಂಡಿದ್ದಾರೆ. 'ಎಂದಿನಂತೆ ಮೂರ್ತಿ ಪೇಪರ್ ಓದುತ್ತಿದ್ದಾಗ ನಾನು ಮೂರು ಕೋಟಿ ರೂಪಾಯಿ ಮೌಲ್ಯದ ಆಭರಣ ಕೊಳ್ಳುತ್ತೇನೆ ಎಂದು ಹೇಳಿದೆ. ಆದರೆ ಈ ಬಾರಿ ನಾನು ಅಂದುಕೊಂಡಿದ್ದು ನಡೆಯಲಿಲ್ಲ. 

ನನ್ನ ಮಾತು ಕೇಳಿದ ತಕ್ಷಣ ಮೂರ್ತಿ ಪೇಪರ್ ಪಕ್ಕಕ್ಕಿಟ್ಟು ನನಗೆ ಚಿಕ್ಕದಾಗಿ ಕ್ಲಾಸ್ ತೆಗೆದುಕೊಂಡರು. ಇಷ್ಟು ದುಡ್ಡು ಕೊಟ್ಟು ಕೊಂಡರೆ ನಷ್ಟವೇನಿಲ್ಲ, ಆದರೆ ನೀನು 30 ರೂಪಾಯಿ ವಸ್ತು ಕೊಳ್ಳುವುದಕ್ಕೂ ಯೋಚಿಸುತ್ತೀಯಾ. ಅಂಥಾದ್ರಲ್ಲಿ 3 ಕೋಟಿ ರೂಪಾಯಿ ಆಭರಣ ಕೊಳ್ಳುತ್ತೀಯಾ? ಖಂಡಿತಾ ಕೊಳ್ಳಲ್ಲ ಬಿಡು' ಎಂದರಂತೆ ಎಂದು ಸುಧಾಮೂರ್ತಿ ವಿವರಿಸಿದ್ದಾರೆ.

44
ಇನ್ನೊಬ್ಬರು ಸೈಲೆಂಟ್‌ ಇರಬೇಕು

ದಾಂಪತ್ಯ ಜೀವನದ ಬಗ್ಗೆ ಸುಧಾ ಮೂರ್ತಿ ಈ ಹಿಂದೆ ಒಂದು ಉತ್ತಮ ಸಲಹೆ ನೀಡಿದ್ದರು. ಗಂಡ-ಹೆಂಡಿರ ಜಗಳದಲ್ಲಿ ಒಬ್ಬರು ಕೋಪಗೊಂಡಾಗ, ಇನ್ನೊಬ್ಬರು ಶಾಂತವಾಗಿರಬೇಕು. ಬಾಯಿಯೇ ತೆರೆಯಬಾರದು. 

'ಮೂರ್ತಿ (ನಾರಾಯಣ್) ಕೋಪಗೊಂಡಾಗ, ನಾನು ಮೌನವಾಗಿರುತ್ತೇನೆ. ಅವರು ಏನು ಹೇಳಬೇಕೆಂದುಕೊಂಡಿದ್ದಾರೋ ಅದನ್ನು ಹೇಳಲು ಬಿಡುತ್ತೇನೆ. ನಾನು ಮಾತ್ರ ಮಾತನಾಡುವುದಿಲ್ಲ' ಎಂದು ಸುಧಾಮೂರ್ತಿ ಹೇಳಿದ್ದಾರೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories