ಲಿಫ್ಟ್‌ನಲ್ಲಿ ವೃದ್ಧ ಜೋಡಿಯೊಂದು ಪ್ರೇಮ ಸಲ್ಲಾಪದಲ್ಲಿ ತೊಡಗಿದ್ದಾಗ ಅನಿರೀಕ್ಷಿತ ಘಟನೆಯೊಂದು ನಡೆಯುತ್ತದೆ. ಈ ರೊಮ್ಯಾಂಟಿಕ್ ಕ್ಷಣ ಹಾಸ್ಯಮಯವಾಗಿ ಬದಲಾಗುತ್ತದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಸೋಶಿಯಲ್ ಮೀಡಿಯಾ ಅಜ್-ಅಜ್ಜಿಯ ರೊಮ್ಯಾನ್ಸ್ ವಿಡಿಯೋ ವೈರಲ್ ಆಗಿದ್ದು, ಇದನ್ನು ನೋಡಿದ ನೆಟ್ಟಿಗರು ಇಂಥಾ ಸಂದರ್ಭದಲ್ಲಿ ಹೀಗಾಗಬಾರದಿತ್ತು ಎಂದು ಮರುಕು ವ್ಯಕ್ತಪಡಿಸಿದ್ದಾರೆ. ಘನಘೋರ ದುರಂತವನ್ನು ಕೆಲವರು ತಮಾಷೆಯಾಗಿ ಪರಿಗಣಿಸಿದ್ರೆ, ಒಂದಿಷ್ಟು ಮಂದಿ ಈ ವಯಸ್ಸಿನಲ್ಲಿ ಇದೆಲ್ಲಾ ಬೇಕಿತ್ತಾ ಎಂದು ಪ್ರಶ್ನೆ ಮಾಡಿದ್ದಾರೆ. ಹಾಗಾದ್ರೆ ಲಿಫ್ಟ್‌ನಲ್ಲಿ ನಡೆದಿದ್ದೇನು?
25
10.5 ಮಿಲಿಯನ್ ವ್ಯೂವ್ ಪಡೆದ ವಿಡಿಯೋ
ಮಧುರ ಚುಂಬನಂ ದಂತ ಭಗ್ನಂ ಎಂಬ ಮಾತಿನಂತೆ ಇಲ್ಲಿ ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋಗೆ ಈವರೆಗೆ 10 ಮಿಲಿಯನ್‌ಗೂ ಅಧಿಕ ವ್ಯೂವ್ ಬಂದಿದ್ದು, 1.35 ಲಕ್ಷಕ್ಕೂ ಲೈಕ್ಸ್ ಜೊತೆ ಸಾವಿರಾರು ಕಮೆಂಟ್‌ಗಳು ಬಂದಿವೆ. ಕೆಲವರು ಇದನ್ನು AI ವಿಡಿಯೋ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಬಹುಶಃ ಅಜ್ಜನಿಗೆ ತನ್ನ ಮಾಜಿ ಪ್ರೇಯಸಿ ಸಿಕ್ಕಿರಬಹುದು ಎಂಬ ಕಮೆಂಟ್‌ಗಳು ಬಂದಿವೆ.
35
ವೈರಲ್ ವಿಡಿಯೋದಲ್ಲಿ ಏನಿದೆ?
ಲಿಫ್ಟ್‌ನಲ್ಲಿ ಅಜ್ಜ ಮತ್ತು ಅಜ್ಜಿ ಮಾತ್ರ ಇರುತ್ತಾರೆ. ಅಜ್ಜ ನೋಡ ನೋಡುತ್ತಿದ್ದಂತೆ ಪಕ್ಕದಲ್ಲಿರುವ ಅಜ್ಜಿಗೆ ಕಿಸ್ ಮಾಡಲು ಪ್ರಾರಂಭಿಸುತ್ತಾರೆ. ಅಜ್ಜಿಯೂ ಸಹ ವಿರೋಧ ವ್ಯಕ್ತಪಡಿಸದೇ ಚುಂಬನಕ್ಕೆ ಸಾಥ್ ನೀಡುತ್ತಾರೆ. ಇಬ್ರು ಮೈಮರೆಯುತ್ತಿರುವ ಸಂದರ್ಭದಲ್ಲಿಯೇ ಅಜ್ಜಿಯ ಹಲ್ಲಿನ ಸೆಟ್ ಹೊರಗೆ ಬೀಳುತ್ತದೆ. ಹಲ್ಲಿನ ಸೆಟ್ ಬೀಳುತ್ತಿದ್ದಂತೆ ಇಬ್ಬರ ರೊಮ್ಯಾನ್ಸ್ ನಿಲ್ಲುತ್ತದೆ.
ಹಲ್ಲಿನ ಸೆಟ್ ಹೋಗಿ ನೇರವಾಗಿ ಅಜ್ಜನ ಕಾಲಡಿಯಲ್ಲಿಯೇ ಬೀಳುತ್ತಿರೋದನ್ನು ನೀವು ವಿಡಿಯೋದಲ್ಲಿ ಗಮನಿಸಬಹುದು. ರೊಮ್ಯಾಂಟಿಕ್ ಕ್ಷಣವೊಂದು ಹಾಸ್ಯ ಪ್ರಸಂಗವಾಗಿ ಬದಲಾದ ವಿಡಿಯೋ ನೋಡುಗರನ್ನು ನಗೆಗಡಿಲಿನಲ್ಲಿ ತೇಲಾಡುವಂತೆ ಮಾಡುತ್ತಿದೆ. ಹಲ್ಲಿನ ಸೆಟ್ ಬೀಳುತ್ತಿದ್ದಂತೆ ಅಜ್ಜ-ಅಜ್ಜಿ ಸಹ ಒಂದು ನಗುತ್ತಾರೆ. viralchuski ಹೆಸರಿನ ಇನ್‌ಸ್ಟಾಗ್ರಾಂನಲ್ಲಿ ಈ ವಿಡಿಯೋ ಶೇರ್ ಮಾಡಿಕೊಳ್ಳಲಾಗಿದೆ.
ಈ ವಿಡಿಯೋ ದಿನದ ಅತ್ಯಂತ ತಮಾಷೆಯ ಪ್ರೀತಿಯ ಕ್ಷಣ ಎಂದು ಕಮೆಂಟ್ ಮಾಡಿದ್ದಾರೆ. ಪ್ರೀತಿಗೆ ವಯಸ್ಸಿಲ್ಲ ಎಂಬುದಕ್ಕೆ ಈ ಘಟನೆಯೇ ಉದಾಹರಣೆ. ವಿದೇಶಗಳಲ್ಲಿ ಚುಂಬಿಸುವ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ಇದರಲ್ಲಿ ಯಾವುದೇ ಅಶ್ಲೀಲತೆ ಇಲ್ಲ ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಿಡಿಯೋ ಎಲ್ಲಿಯದ್ದು ಎಂದು ತಿಳಿದು ಬಂದಿಲ್ಲ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.