'ಸಪ್ತ ಸಾಗರದಾಚೆ ಎಲ್ಲೋ' ಲವ್​ ಸ್ಟೋರಿ Rakshit shetty ರಿಯಲ್​ ಕಥೆನಾ? ನಟ ಏನಂದ್ರು ಕೇಳಿ

Published : Mar 15, 2026, 01:10 PM IST

ರಶ್ಮಿಕಾ ಮಂದಣ್ಣ ಅವರ ಮದುವೆ ಸುದ್ದಿಯ ಬಳಿಕ, ರಕ್ಷಿತ್ ಶೆಟ್ಟಿ ಅಭಿನಯದ 'ಸಪ್ತಸಾಗರದಾಚೆ ಎಲ್ಲೋ' ಚಿತ್ರದ ಪ್ರೇಮ ವೈಫಲ್ಯದ ಕಥೆಯು ಅವರ ನಿಜ ಜೀವನದ ಕಥೆಯೇ ಎಂಬ ಚರ್ಚೆ ಶುರುವಾಗಿದೆ.  ತಮಗೆ ಒಂದಲ್ಲ ಹಲವು ಬ್ರೇಕಪ್‌ಗಳಾಗಿವೆ ಎಂದು ರಕ್ಷಿತ್ ಶೆಟ್ಟಿ ಹೇಳಿದ್ದು, ಸಿನಿಮಾ ಬಗ್ಗೆ ಏನಂದ್ರು?

PREV
16
ರಕ್ಷಿತ್​ ಶೆಟ್ಟಿ ಮುನ್ನೆಲೆಗೆ

ರಶ್ಮಿಕಾ ಮಂದಣ್ಣ (Rashmika Mandanna marriage) ಅವರ ಮದುವೆಯ ಬಳಿಕ ರಕ್ಷಿತ್​ ಶೆಟ್ಟಿ ಮತ್ತೆ ಮುನ್ನೆಲೆಗೆ ಬರುತ್ತಿದ್ದಾರೆ. ಇವರಿಬ್ಬರ ಮದುವೆ ಮುರಿದು ಬಿದ್ದಿರುವ ಕಾರಣದಿಂದಾಗಿ ಮತ್ತೆ ಹಳೆಯ ವಿಡಿಯೋಗಳೆಲ್ಲವೂ ವೈರಲ್​ ಆಗ್ತಿವೆ. ಅಷ್ಟಕ್ಕೂ ಸಪ್ತಸಾಗರದಾಚೆ ಎಲ್ಲೋ ಸಿನಿಮಾದಲ್ಲಿ ಕೂಡ ರಕ್ಷಿತ್​ ಶೆಟ್ಟಿ ಅವರದ್ದು ಲವ್​ ಫೆಲ್ಯೂರ್​ ವಿಷ್ಯವೇ

26
ಏನಿದು ಸಿನಿಮಾ ಸ್ಟೋರಿ

ಪಾರ್ಟ್​ ಎ ಮತ್ತು ಬಿ ತೆಗೆದುಕೊಂಡರೆ, ಪ್ರೀತಿಯ ಆಳ, ಕಳೆದುಹೋದ ಸಮಯ, ಮತ್ತು ಪ್ರೇಮಿಗಳ ನಡುವಿನ ದೈಹಿಕ ಹಾಗೂ ಭಾವನಾತ್ಮಕ ಅಂತರವನ್ನು ಸುಂದರವಾಗಿ ತೋರಿಸುವ ಚಿತ್ರ ಇದಾಗಿದೆ. ಪಾರ್ಟ್​ 1 ನಲ್ಲಿ, ಮನು ಮತ್ತು ಪ್ರಿಯಾ ಸಣ್ಣ ಪುಟ್ಟ ವಿಷಯಗಳಲ್ಲೇ ಖುಷಿ ಕಾಣುವ ಪ್ರೇಮಿಗಳು. ಸಮುದ್ರ ತೀರದಲ್ಲಿ ಮನೆ ಕಟ್ಟುವ ಕನಸು ಅವರಿಗಿರುತ್ತದೆ.

36
ಪಾರ್ಟ್​-ಎ

ಪ್ರಿಯಾಳ ಮೇಲೆ ನಡೆಯುವ ಒಂದು ಘಟನೆಯಿಂದಾಗಿ ಅವಳನ್ನು ರಕ್ಷಿಸಲು ಹೋಗಿ, ಮನು ಅಪರಾಧಿಯಲ್ಲದಿದ್ದರೂ ಜೈಲು ಸೇರುತ್ತಾನೆ. ಜೈಲಿನಲ್ಲಿನ ನೋವಿನಿಂದಾಗಿ ಮನು, ಪ್ರಿಯಾ ತನ್ನನ್ನು ಮರೆತು ಬೇರೊಬ್ಬರನ್ನು ಮದುವೆಯಾಗಲಿ ಎಂದು ಬಯಸಿ ಅವಳಿಂದ ದೂರಾಗುತ್ತಾನೆ. ಪ್ರಿಯಾ ಬೇರೆ ಮದುವೆಯಾಗಲು ಒಪ್ಪಿಕೊಳ್ಳುವುದರೊಂದಿಗೆ ಸೈಡ್-ಎ ಕೊನೆಗೊಳ್ಳುತ್ತದೆ.

46
ಪಾರ್ಟ್​-ಬಿ

ಪಾರ್ಟ್​ ಬಿ ನಲ್ಲಿ, ಜೈಲಿನಿಂದ ಬಿಡುಗಡೆಯಾದ ಮನು, ಸಂಪೂರ್ಣ ಬದಲಾಗಿರುತ್ತಾನೆ. ಪ್ರಿಯಾಳನ್ನು ನೋಡುವ ಹಂಬಲವಾಗುತ್ತದೆ. ಆದರೆ ಇದಾಗಲೇ ಮದುವೆಯಾಗಿರುವ ಪ್ರಿಯಾ, ಜೀವನದಲ್ಲಿ ಆರ್ಥಿಕ ಮತ್ತು ಕೌಟುಂಬಿಕ ಕಷ್ಟಗಳನ್ನು ಅನುಭವಿಸುತ್ತಿದ್ದಾಳೆ. ಮನು ಪ್ರಿಯಾಳನ್ನು ಭೇಟಿಯಾಗುತ್ತಾನೆ, ಆದರೆ ಅವರಿಬ್ಬರ ಬದುಕು ಮೊದಲಿನಂತಿಲ್ಲ. ನೋವು ಮತ್ತು ಭಾವುಕತೆಯ ನಡುವೆ ಅವರ ಕಥೆ ಸಾಗುತ್ತದೆ. ಕೊನೆಗೆ ತಮ್ಮ ಶತ್ರುಗಳ ವಿರುದ್ಧ ಸೇಡು ತೀರಿಸಿಕೊಂಡ ಮನು ದುರಂತ ಅಂತ್ಯ ಕಾಣುತ್ತಾನೆ.

56
ರಿಯಲ್​ ಲೈಫ್​ ಸ್ಟೋರಿನಾ?

ಆದರೆ, ಲವ್​ಬ್ರೇಕಪ್​ ಆಗಿರುವ ಹಿನ್ನೆಲೆಯಲ್ಲಿ ಇದು ರಕ್ಷಿತ್​ ಶೆಟ್ಟಿ ಅವರ ರಿಯಲ್​ ಲೈಫ್​ ಸ್ಟೋರಿನಾ ಎಂದು ಹಲವರು ಎಂದುಕೊಂಡದ್ದು ಉಂಟು. ಈ ಬಗ್ಗೆ ಏಷ್ಯಾನೆಟ್​ ಸುವರ್ಣ ಈ ಹಿಂದೆ ಮಾಡಿರುವ ವಿಡಿಯೋ ವೈರಲ್​ ಆಗುತ್ತಿದ್ದು, ಅದರಲ್ಲಿ ರಕ್ಷಿತ್​ ಶೆಟ್ಟಿ ಈ ಬಗ್ಗೆ ಮಾತನಾಡಿದ್ದಾರೆ.

66
ಹಲವು ಬ್ರೇಕಪ್​

ನನಗೆ ಒಂದಲ್ಲ, ಹಲವು ಲವ್​ ಬ್ರೇಕಪ್​ ಆಗಿವೆ. ನಿಮಗೆ ಒಂದು ಗೊತ್ತಿರಬಹುದು ಅಷ್ಟೇ. ಈ ಚಿತ್ರಕ್ಕೂ, ನನ್ನ ಲೈಫ್​ಗೂ ಸಂಬಂಧವಿಲ್ಲ ಎಂದು ಹೇಳುವ ಮೂಲಕ, ಮದುವೆ ಮುರಿದಿದ್ದರಿಂದ ತಮ್ಮ ಜೀವನದಲ್ಲಿ ಅಂಥದ್ದೊಂದು ದೊಡ್ಡ ಆಘಾತವೇನೂ ಆಗಲಿಲ್ಲ ಎಂದು ಸೂಕ್ಷ್ಮವಾಗಿ ವಿವರಿಸಿದ್ದಾರೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories