ಲಿಪ್ ಕಿಸ್ ಆರಂಭಿಸಿದ್ದು ಮನುಷ್ಯನಲ್ಲ, ಮುತ್ತಿಡುವಾಗ ಗೊತ್ತಿರಲಿ 2 ಕೋಟಿ ವರ್ಷದ ಹಿಂದಿನ ಇತಿಹಾಸ

Published : Mar 15, 2026, 09:14 AM IST

ಲಿಪ್ ಕಿಸ್ ಆರಂಭಿಸಿದ್ದು ಮನುಷ್ಯನಲ್ಲ, ಮುತ್ತಿಡುವಾಗ ಗೊತ್ತಿರಲಿ 2 ಕೋಟಿ ವರ್ಷದ ಹಿಂದಿನ ಇತಿಹಾಸ, ಚುಂಬನ ಮಾನವ ಪ್ರೇಮದ ಸಂಕೇತವಾಗಿದೆ. ಚುಂಬನ ರೊಮ್ಯಾನ್ಸ್‌ನ ಪ್ರಮುಖ ಭಾಗವಾಗಿದೆ. ಆದರೆ ಈ ಕಿಸ್ ಆರಂಭಗೊಂಡಿದ್ದು ಮನುಷ್ಯನಿಂದ ಅಲ್ಲ. 

PREV
16
ಚುಂಬನ ಕೇವಲ ಮನುಷ್ಯನ ಪ್ರಯಣದ ಸಂಕೇತ

ಪ್ರೀತಿ ಪ್ರೇಮ, ರೊಮ್ಯಾನ್ಸ್‌ನಲ್ಲಿ ಕಿಸ್ ಪ್ರಮುಖ ಪಾತ್ರವಹಿಸುತ್ತದೆ. ಅದರಲ್ಲೂ ಚುಂಬನ ಪ್ರೇಮಿಗಳಲ್ಲೇ ಹೆಚ್ಚು. ಚುಂಬನ ಕೇವಲ ಮನುಷ್ಯನ ಪ್ರಯಣದ ಸಂಕೇತ ಎಂದು ನಾವು ಭಾವಿಸುದ್ದೇವೆ. ಬೇರೆ ಯಾವುದೇ ಜೀವಿಗಳು ಪ್ರಯಣದ ಸಂಕೇತವಾಗಿ ಚುಂಬಿಸುವುದಿಲ್ಲ. ಲಿಪ್ ಕಿಸ್, ಫ್ರೆಂಚ್ ಕಿಸ್, ಸ್ಮೂಚ್ ಸೇರಿದಂತೆ ಒಂದಷ್ಟು ಕಿಸ್ ವಿಧಾನ ಜನಪ್ರಿಯವಾಗಿದೆ. ಮೊದಲ ಕಿಸ್ ಅಥವಾ ಈ ಚುಂಬನ ಆರಂಭಗೊಂಡಿದ್ದು ಮನುಷ್ಯ ಭೂಮಿಗೆ ಬರವು ಮೊದಲು ಅನ್ನೋದು ಸಂಶೋಧನೆ ಒಂದು ಬಹಿರಂಗಪಡಿಸಿದೆ.

26
ಚುಂಬನಕ್ಕಿದೆ 2.1 ಕೋಟಿ ವರ್ಷಗಳ ಇತಿಹಾಸ

ಕಿಸ್ ಶುರುವಾಗಿದ್ದು ಹೇಗೆ, ಪ್ರಣಯದಲ್ಲಿ ಚುಂಬನ ಈ ಕುರಿತು ಆಕ್ಸ್‌ಪರ್ಡ್ ವಿಶ್ವವಿದ್ಯಾಲಯ, ಯೂನಿವರ್ಸಿಟಿ ಕಾಲೇಜು ಲಂಡನ್ ಹಾಗೂ ಫ್ಲೋರಿಡಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಶೋಧಕರು ಮಹತ್ವದ ಅಧ್ಯಯನ ನಡೆಸಿ ವರದಿ ಬಹಿರಂಗಪಡಿಸಿದ್ದಾರೆ. ಈ ವರದಿ ಪ್ರಕರಾ ಚುಂಬನಕ್ಕೆ ಬರೋಬ್ಬರಿ 1.6 ರಿಂದ 2.1 ಕೋಟಿ ವರ್ಷಗಳ ಇತಿಹಾಸವಿದೆ.ಮನುಷ್ಯನ ಉಗಮಕ್ಕಿಂತ ಮೊದಲೇ ವಿಶೇಷವಾಗಿ ಕೋತಿಗಳು ಹಾಗೂ ಕೋತಿ ಜಾತಿಗೆ ಸೇರಿದ ಪ್ರಾಣಿಗಳು ಚುಂಬಿಸುತ್ತಿದ್ದವು ಎಂದಿದೆ.

36
ಪ್ರಾಣಿಗಳಲ್ಲೂ ಇದೆ ಪ್ರೀತಿ ಪ್ರೇಮ

ಅಧ್ಯಯನ ಪ್ರಕಾರ ಪ್ರಾಣಿ ಪಕ್ಷಿಗಳು ಆಹಾರವನ್ನು ನೀಡುವುದು ಬಾಯಿ ಮೂಲಕ. ಆದರೆ ಇದನ್ನು ಹೊರತುಪಡಿಸಿ ಪ್ರಾಣಿಗಳು ಬಾಯಿ ಸಂಪರ್ಕ ಮಾಡುತ್ತದೆ. ಇದು ಸಂಪರ್ಕ, ಪ್ರೀತಿ ಸೇರಿದಂತೆ ಹಲವು ಕಾರಣಗಳಿಂದ ನಡೆಸುತ್ತದೆ. ಇದೊಂದು ಜೈವಿಕ ಪ್ರಕ್ರಿಯೆ ಎಂದು ಸಂಶೋಧನೆ ವರದಿ ಹೇಳುತ್ತದೆ. ಪ್ರಮುಖವಾಗಿ ಚಿಂಪಾಂಜಿ, ಒರಾಂಗುಟಾನ್, ಬೋನೋಬೋ ಪ್ರಾಣಿಗಳು ಚುಂಬಿಸುತ್ತದೆ. ಮಾನವರ ಪೂರ್ವಜರಾದ ನಿಯಾಂಡರ್ತಲ್ (Neanderthals) ಮುತ್ತಿಡುತ್ತಿದ್ದರು ಅನ್ನೋದಕ್ಕೆ ಸಾಕ್ಷ್ಯಗಳಿವೆ ಎಂದು ಈ ಅಧ್ಯಯನ ವರದಿ ಹೇಳಿದೆ.

46
ಲೈಂಗಿಕ ಪ್ರಚೋದನೆ

ಬೊನೊಬೊ ಪ್ರಾಣಿಗಳು ನಾಲಿಗೆ ಬಳಸಿ ಸುದೀರ್ಘ ಚುಂಬನ ನೀಡುತ್ತದೆ. ಗೊರಿಲ್ಲಾ ಅತೀ ವಿರಳ ಸಂದರ್ಭದಲ್ಲಿ ಮುತ್ತಿಡುತ್ತದೆ. ಹಿಮಕರಡಿ ಸೇರದಂತೆ ಹಲವು ಪ್ರಾಣಿಗಳು ಚಂಬಿಸುತ್ತದೆ. ಚಿಂಪಾಂಜಿಗಳು ಜಗಳದ ಬಳಿಕ ಮುತ್ತಿಟ್ಟು ಸಮಾಧಾನ ಮಾಡುತ್ತದೆ. ಪ್ರಾಣಿಗಳು ಹಲವು ಕಾರಣಗಳಿಂದ ಮುತ್ತಿಡುತ್ತದೆ. ಗುಂಪಿನಲ್ಲಿ ಸಂಬಂಧ ಗಟ್ಟಿಗೊಳಿಸಲು , ಸಂಗಾತಿ ಪ್ರಾಣಿಗಳ ಆರೋಗ್ಯ ತಿಳಿಯಲು, ಲೈಂಗಿಕ ಪ್ರಚೋದನೆ ಸೇರಿದಂತೆ ಹಲವು ಕಾರಣಗಳಿಂದ ಮುತ್ತಿಡುತ್ತದೆ ಎಂದು ಅಧ್ಯಯನ ವರದಿ ಹೇಳುತ್ತಿದೆ.

56
ಆಸ್ವಾದಿಸುವ ಪ್ರಣಯದ ಭಾಗ

ಮನುಷ್ಯನ ವಿಕಾಸದ ಹಾದಿಯಲ್ಲಿ ಹಲವು ಪದ್ಧತಿಗಳು, ಸಂಪ್ರದಾಯಗಳು ಮುಂದುವರಿದಿಲ್ಲ. ಆದರೆ ಚುಂಬನ ಅದಕ್ಕಿಂತ ಹೆಚ್ಚಾಗಿ ಸಾಗಿ ಬಂದಿದೆ. ಇದೀಗ ಮನುಷ್ಯನ ಪ್ರಣಯದ ಆರಂಭವೇ ಕಿಸ್. ಹಲವು ಬಾರಿ ಇದನ್ನು ಮೀರಿದ ಪ್ರಣಯಗಳು ವರದಿಯಾಗಿದೆ. ಆದರೆ ಚುಂಬನ ಮುನುಷ್ಯ ಅತೀಯಾಗಿ ಆಸ್ವಾದಿಸುವ ಪ್ರಣಯದ ಭಾಗವಾಗಿದೆ.

66
ಮುತ್ತಿಡುವಾಗ ಸಂಪ್ರದಾಯದ ನೆನಪಿರಲಿ

ಮುಂದಿನ ಬಾರಿ ಮುತ್ತಿಡುವಾಗ ನೀವು ಬರೋಬ್ಬರಿ 2.1 ಕೋಟಿ ವರ್ಷಗಳ ಹಿಂದಿನ ಸಂಪ್ರದಾಯ ಮುಂದುವರಿಸುತ್ತಿದ್ದೀರಿ ಅನ್ನೋದು ನೆನಪಿರಲಿ. ಇದರ ಹೆಮ್ಮೆ, ಖುಷಿ ನಿಮಗಿರಲಿ. ಜೊತೆಗೆ ಸಂಪ್ರದಾಯವನ್ನೇ ನೀವೊಬ್ಬರೇ ಮುಂದುವರಿಸುತ್ತಿದ್ದೀರಿ ಅನ್ನೋ ಭ್ರಮೆ ಚುಂಬನದ ವೇಳೆ ಬೇಡ ಅಷ್ಟೆ.

ಮುತ್ತಿಡುವಾಗ ಸಂಪ್ರದಾಯದ ನೆನಪಿರಲಿ

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories