ಬಿಗ್ಬಾಸ್ ಖ್ಯಾತಿಯ ಧ್ರುವಂತ್, ಇತ್ತೀಚಿನ ಕೆಲವು ಘಟನೆಗಳನ್ನು ಉಲ್ಲೇಖಿಸಿ, ಪುರುಷರು ಯಾವ ಕರ್ಮಕ್ಕೆ ಮದುವೆಯಾಗಬೇಕು ಎಂದು ಪ್ರಶ್ನಿಸಿದ್ದಾರೆ. ಅವರ ಈ ಹೇಳಿಕೆಯು ಪರ-ವಿರೋಧ ಚರ್ಚೆಗೆ ಕಾರಣವಾಗಿದ್ದು, ಕೆಲವರು ಬೆಂಬಲಿಸಿದರೆ, ಹಲವು ಮಹಿಳೆಯರು ಮತ್ತು ಪುರುಷರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಬಿಗ್ಬಾಸ್ ಸೀಸನ್ 12ರ ಮೂಲಕ ಫೇಮಸ್ ಆಗಿರುವವರಲ್ಲಿ ಒಬ್ಬರು ನಟ ಧ್ರುವಂತ್. ರಕ್ಷಿತಾ ಶೆಟ್ಟಿ ಮತ್ತು ಧ್ರುವಂತ್ ಅವರ ಜಗಳ ವೀಕ್ಷಕರನ್ನು ಸಕತ್ ರಂಜಿಸಿತ್ತು. ಬಿಗ್ಬಾಸ್ನಿಂದ ಹೊರಕ್ಕೆ ಬಂದ ಮೇಲೆ ಧ್ರುವಂತ್ಗೆ ಅವರಿಗೆ ಹಲವು ಅವಕಾಶಗಳು ಹುಡುಕಿ ಬಂದಿವೆ. ಇವೆಂಟ್ಸ್ ಸೇರಿದಂತೆ ಮುಂದಿನ ಪ್ರಾಜೆಕ್ಟ್ ಬಗ್ಗೆ ಬ್ಯುಸಿ ಇದ್ದಾರೆ.
26
ಸದ್ಯ ಸಿಂಗಲ್
ಡಿವೋರ್ಸ್ ಪಡೆದಿರುವ ಧ್ರುವಂತ್, ಸದ್ಯ ಸಿಂಗಲ್ ಆಗಿದ್ದಾರೆ. ಅವರಿಗೆ ಸಾಕಷ್ಟು ಪ್ರಫೋಸಲ್ಸ್ ಬರುತ್ತಿವೆ ಎಂದು ಇದಾಗಲೇ ಅವರು ಹೇಳಿದ್ದರು. ಅನೇಕ ಹುಡುಗಿಯರು ಧ್ರುವಂತ್ ಗೆ ಪ್ರಫೋಸ್ ಮಾಡಿದ್ದಾರೆ. ಹುಡುಗಿಯರು ತಮ್ಮ ಇಷ್ಟ, ಕಷ್ಟಗಳನ್ನು ನನ್ನ ಮುಂದೆ ಹಂಚಿಕೊಂಡಿದ್ದಾರೆ. ಇದು ಗೌರವದ ವಿಷ್ಯ ಎಂದಿದ್ದ ಧ್ರುವಂತ್, ಎಲ್ಲರನ್ನೂ ತಾಯಿ ದೃಷ್ಟಿಯಲ್ಲಿ ನೋಡುತ್ತೇನೆ, ಪ್ರತಿಯೊಬ್ಬ ಮಹಿಳೆಗೆ ಗೌರವ ನೀಡ್ತೇನೆ. ಅವರ ಅಭಿಪ್ರಾಯಕ್ಕೆ ಮನ್ನಣೆ ನೀಡ್ತೇನೆ ಎಂದಿದ್ದರು.
36
ಶಾಕಿಂಗ್ ಹೇಳಿಕೆ
ಆದರೆ, ಅದೇ ಧ್ರುವಂತ್ ಇದೀಗ ಮದುವೆಯ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟಿದ್ದು, ಒಂದಷ್ಟು ಮಹಿಳೆಯರ ವಿರೋಧ ಕಟ್ಟಿಕೊಂಡಿದ್ದಾರೆ. ಅದರ ಜೊತೆಗೆ ಪುರುಷರೂ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಮತ್ತೊಂದಿಷ್ಟು ಅವಿವಾಹಿತ ಪುರುಷರು ಮಾತ್ರ ಫುಲ್ ಖುಷ್ ಆಗಿದ್ದಾರೆ.
ಅಷ್ಟಕ್ಕೂ ಧ್ರುವಂತ್ ಹೇಳಿದ್ದು ಏನೆಂದರೆ, ಯಾವ ಕರ್ಮಕ್ಕೆ ಪುರುಷರು ಮದುವೆಯಾಗಬೇಕು? ಗುಡ್ಡದಿಂದ ತಳ್ಳುತ್ತಾರೆ, ಡ್ರಮ್ನಲ್ಲಿ ಹಾಕುತ್ತಾರೆ, ಕಟ್ ಮಾಡಿ ಸ್ಯೂಟ್ಕೇಸ್ನಲ್ಲಿ ಹಾಕ್ತಾರೆ, ಬಾತ್ರೂಮ್ನಲ್ಲಿ ಹೂತು ಹಾಕ್ತಾರೆ, ವಿಷ ಹಾಕ್ತಾರೆ, ಬೇಡವಾಗಿರೋ ಜಾಗವನ್ನು ಕಟ್ ಮಾಡಿ ಬಿಸಾಕ್ತಾರೆ... ಎಂದೆಲ್ಲಾ ಇತ್ತೀಚಿನ ದಿನಗಳಲ್ಲಿ ಮಹಿಳೆಯರಿಂದ ನಡೆದಿರುವ ಬರ್ಬರ ಹತ್ಯೆಗಳ ಬಗ್ಗೆ yasvanthtalksಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ. ಆದ್ದರಿಂದ ಯಾವ ಕರ್ಮಕ್ಕೆ ಮದುವೆ ಬೇಕು ಎನ್ನುವುದು ಅವರ ಮಾತು.
56
ಪರ-ವಿರೋಧ ನಿಲುವು
ಧ್ರುವಂತ್ ಹೇಳಿರುವುದು ನಿಜವೇ ಇದೆ ಎಂದು ಹಲವರು ಒಪ್ಪಿಕೊಂಡಿದ್ದಾರೆ. ಅದರಲ್ಲಿಯೂ ಮದುವೆಯಾಗದೇ ಇರುವ ಗಂಡುಮಕ್ಕಳು, ನಿಜ ನಿಜ, ನಾನೂ ಅದಕ್ಕೇ ಮದುವೆಯಾಗಿಲ್ಲ ಎಂದು ಸಪೋರ್ಟ್ ಮಾಡುತ್ತಿದ್ದಾರೆ. ಆದರೆ ಇದು ಹಲವು ಮಹಿಳೆಯರ ವಿರೋಧಕ್ಕೆ ಕಾರಣವಾಗಿದೆ. ತಲೆತಲಾಂತರಗಳಿಂದ ಮಹಿಳೆಯರ ಮೇಲೆ ಪುರುಷರು ನಡೆಸುತ್ತಿರುವ ದೌರ್ಜನ್ಯ ನಿಮಗೆ ಕಾಣಿಸುತ್ತಿಲ್ಲವೆ? ಹೆಣ್ಣುಮಕ್ಕಳು ಕೊಲೆ ಮಾಡಿದಾಗ ದೊಡ್ಡ ಮಟ್ಟದ ಸುದ್ದಿಯಾಗುತ್ತದೆ, ಅವರು ಮಾಡ್ತಿರೋದು ನೀಚ ಕೆಲಸವೇ. ಆದರೆ ಪ್ರತಿನಿತ್ಯವೂ ಗಂಡಸರ ಶೋಷಣೆಯಿಂದ ಅದೆಷ್ಟು ಮಂದಿ ಅಮಾಯಕ ಹೆಣ್ಣುಮಕ್ಕಳು ಸಾವಿನ ಬಾಯಿಗೆ ಹೋಗುತ್ತಿದ್ದಾರೆ, ನಿತ್ಯವೂ ಕಣ್ಣೀರಿನಿಂದಲೇ ಕೈತೊಳೆಯುತ್ತಿರುವುದು ಗೊತ್ತಾಗುವುದಿಲ್ಲವೆ ಎಂದು ಧ್ರುವಂತ್ ವಿರುದ್ಧ ಅಸಮಾಧಾನ ಹೊರ ಹಾಕುತ್ತಿದ್ದಾರೆ.
66
ಮದುವೆ ಬಗ್ಗೆ ಚರ್ಚೆ
ಅಂದಹಾಗೆ ಧ್ರುವಂತ್ ಅವರು ಬಿಗ್ಬಾಸ್ನಲ್ಲಿ ಇದ್ದಾಗ, ಅವರ ಮದುವೆಯ ಬಗ್ಗೆ ಸಾಕಷ್ಟು ಚರ್ಚೆಯಾಗಿತ್ತು. ಮೊದಲ ಪತ್ನಿಯಿಂದ ಡಿವೋರ್ಸ್ ಪಡೆದುಕೊಂಡಿದ್ದ ಧ್ರುವಂತ್ ಅವರ ಬಗ್ಗೆ ಕೆಟ್ಟದ್ದಾಗಿ ಕಮೆಂಟ್ಸ್ ಬಂದಿದ್ದವು. ಅದಕ್ಕೆ ಸ್ಪಷ್ಟನೆ ನೀಡಿದ್ದ ಧ್ರುವಂತ್, ತಮ್ಮನ್ನ ಟ್ರ್ಯಾಪ್ ಮಾಡಲು ಮತ್ತು ಹೆಸರನ್ನ ಡ್ಯಾಮೇಜ್ ಮಾಡಲು ಪ್ರಯತ್ನಿಸಲಾಗಿತ್ತು ಎಂದು ಸ್ಪಷ್ಟೀಕರಿಸಿದ್ದರು. ಈತ ಮತ್ತೊಂದು ಮದುವೆಗೆ ಮನೆಯಲ್ಲಿ ಸಿದ್ಧತೆ ನಡೆಸುತ್ತಿದ್ದಾರೆ ಎಂದು ಧ್ರುವಂತ್ ಈ ಹಿಂದೆ ಸಂದರ್ಶನದಲ್ಲಿ ಹೇಳಿದ್ದರು. ಸೂಕ್ತವೆನ್ನಿಸುವ ಬಾಳ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವಂತೆ ಧ್ರುವಂತ್ ಗೆ ಅಪ್ಪ-ಅಮ್ಮ ಹೇಳಿರುವುದಾಗಿ ಮಾತನಾಡಿದ್ದರು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.