ಮದ್ವೆಗೆ ಮುಂಚೆ ರಾಧಿಕಾ ಜೊತೆ ಯಶ್​ ಸುತ್ತಾಟ: ಜನರ ಮಾತು ಕೇಳಿ ರೋಸಿಹೋದ್ರಂತೆ ಅಮ್ಮ ಪುಷ್ಪಾ

Published : Jul 16, 2026, 07:05 PM IST

ಯಶ್ ಅವರ ತಾಯಿ ಪುಷ್ಪಾ ಅರುಣ್‌ಕುಮಾರ್ ಅವರು, ಯಶ್ ಮತ್ತು ರಾಧಿಕಾ ಪಂಡಿತ್ ಅವರ ಪ್ರೀತಿಯ ದಿನಗಳ ಬಗ್ಗೆ ಮಾತನಾಡಿದ್ದಾರೆ. ಮದುವೆಗೂ ಮುನ್ನ ಅವರಿಬ್ಬರು ಸುತ್ತಾಡುತ್ತಿದ್ದಾಗ ಜನರು ಆಡುತ್ತಿದ್ದ ಮಾತುಗಳಿಗೆ ತಾವು ಹೇಗೆ ಪ್ರತಿಕ್ರಿಯಿಸುತ್ತಿದ್ದೆ ಎಂಬುದನ್ನು ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.

PREV
15
ಯಶ್​ ಮತ್ತು ರಾಧಿಕಾ ಜೋಡಿ

ಸ್ಯಾಂಡಲ್​ವುಡ್​ನ ಕ್ಯೂಟ್​ ಜೋಡಿಗಳಲ್ಲಿ ಒಂದು ಯಶ್​ ಮತ್ತು ರಾಧಿಕಾ ಪಂಡಿತ್​. ಒಟ್ಟಿಗೆ ಬಣ್ಣದ ಲೋಕದ ಜರ್ನಿಯನ್ನು ಆರಂಭಿಸಿ, ಹಲವು ವರ್ಷಗಳಿಂದ ಪ್ರೀತಿಸಿ, ಆನಂತರ 2016ರ ಆಗಸ್ಟ್‌ನಲ್ಲಿ ಎಂಗೇಜ್‌ಮೆಂಟ್ ಮಾಡಿಕೊಂಡಿತ್ತು ಈ ಜೋಡಿ. ಗೋವಾದಲ್ಲಿ ಈ ಎಂಗೇಜ್‌ಮೆಂಟ್ ನಡೆದಿತ್ತು. ಆನಂತರ ಬೆಂಗಳೂರಿನಲ್ಲಿ ಅದೇ ವರ್ಷ ಡಿಸೆಂಬರ್ 9ರಂದು ಅದ್ದೂರಿಯಾಗಿ ವಿವಾಹ ಸಮಾರಂಭವು ನಡೆದಿತ್ತು.

25
10 ವರ್ಷಗಳ ದಾಂಪತ್ಯ

ಇವರ ದಾಂಪತ್ಯಕ್ಕೆ 10 ವರ್ಷ ಆಗುತ್ತಾ ಬಂದಿದೆ. ಈ ನಡುವೆಯೇ ಯಶ್​ ಅವರ ಟಾಕ್ಸಿಕ್​ ಚಿತ್ರದ ಹವಾ ಜೋರಾಗಿಯೇ ಸದ್ದು ಮಾಡುತ್ತಿದೆ. ಅದರಲ್ಲಿಯೂ ಚಿತ್ರದ ‘ತಬಾಹಿ..’ ಹಾಡು ರಿಲೀಸ್ ಆಗಿದೆ. ‘ಟಾಕ್ಸಿಕ್’ ಟೀಸರ್‌ ಹಾಗೂ ‘ತಬಾಹಿ..’ ಹಾಡಿನಲ್ಲಿರುವ ಬೋಲ್ಡ್ ದೃಶ್ಯಗಳ ಬಗ್ಗೆ ವ್ಯಾಪಕ ಚರ್ಚೆ ಆಗುತ್ತಿದೆ.

35
ಜೋಡಿಯ ಲವ್ ಸ್ಟೋರಿ

ಇದೀಗ ಸುಮನ್​ಟಿವಿ ಎಂಟರ್​ಟೈನ್​ಮೆಂಟ್​ಗೆ ನೀಡಿರುವ ಸಂದರ್ಶನದಲ್ಲಿ ಯಶ್​ ಅವರ ಅಮ್ಮ ಪುಷ್ಪಾ ಅರುಣ್​ಕುಮಾರ್​ ಅವರು ಯಶ್​ ಮತ್ತು ರಾಧಿಕಾ ಲವ್​ಸ್ಟೋರಿ ಕುರಿತು ಮಾತನಾಡಿದ್ದಾರೆ. ಪ್ರೀತಿ, ಮದುವೆ ವಿಷ್ಯದಲ್ಲಿ ನಾವು ಯಶ್​ಗೆ ಯಾವುದೇ ನಿರ್ಬಂಧ ವಿಧಿಸಿರಲಿಲ್ಲ. ಅವನು ಅದನ್ನೆಲ್ಲಾ ಕೇಳೋನೂ ಅಲ್ಲ. ಅದಕ್ಕಾಗಿಯೇ ರಾಧಿಕಾನ್ನ ಮದ್ವೆಯಾಗ್ತೇನೆ ಎಂದಾಗ ನಾವು ಒಪ್ಪಿಗೆ ಕೊಟ್ಟಿದ್ವಿ ಎಂದಿದ್ದಾರೆ.

45
ಅಮ್ಮ ಪುಷ್ಪ ಹೇಳಿದ್ದೇನು?

ಮದುವೆಗೂ ಮುನ್ನ ಅವರು ಎಲ್ಲೆಲ್ಲೋ ಸುತ್ತಾಡೋರು. ಅವೆಲ್ಲಾ ಮೀಡಿಯಾದಲ್ಲಿ ಪ್ರಸಾರ ಆಗ್ತಿದ್ವು. ಆಗ ಹಲವಾರು ಮಂದಿ ಏನಮ್ಮಾ ಯಶ್​ ಅವಳ ಜೊತೆ ಅಲ್ಲಿ ಹೋದ್ನಂತೆ, ಇಲ್ಲಿ ಹೋದ್ನಂತೆ ಅಂತೆಲ್ಲಾ ಬಂದು ಹೇಳೋರು ಎಂದು ಅಂದಿನ ಘಟನೆಗಳನ್ನು ನೆನಪಿಸಿಕೊಂಡಿದ್ದಾರೆ ಪುಷ್ಪಾ ಅವರು.

55
ಟಾಕ್ಸಿಕ್​ ಚಿತ್ರದ ಕುರಿತು

ಅದಕ್ಕೆ ನಾನು, ಅವನು ಎಲ್ಲಿ ಬೇಕಾದ್ರೂ ಹೋಗ್ಲಿ. ಅವನ ಅಮ್ಮ ನಾನೋ, ನೀವೋ ಅಂತ ಪ್ರಶ್ನಿಸ್ತಾ ಇದ್ದೆ. ಅವನು ಎಲ್ಲಿಯೇ ಹೋದರೂ ನನಗೇನೇ ಬೇಸರವಿಲ್ಲ. ನಾನೇನೂ ಕೇಳಲ್ಲ, ನೀವೇನು ಕೇಳೋದು ಎಂದು ಪ್ರಶ್ನಿಸುತ್ತಿದ್ದೆ ಎಂದಿದ್ದಾರೆ ಪುಷ್ಪಾ ಅಮ್ಮ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories