ಮಗುವಾದ ಬಳಿಕ ಲೈಂಗಿಕ ಜೀವನ ನೀರಸವಾಗಿದೆಯೇ? ಹೀಗೆ ರೋಮ್ಯಾನ್ಸ್ ಮಾಡಿ

First Published Oct 13, 2021, 3:28 PM IST

ಮಗು ಹುಟ್ಟಿದ ಬಳಿಕ, ಸಾಮಾನ್ಯವಾಗಿ ಪತಿ -ಪತ್ನಿ ನಡುವೆ ಅಂತರ ಸ್ವಲ್ಪ ಹೆಚ್ಚಾಗುತ್ತದೆ. ಇದಕ್ಕೆ ಕಾರಣ ಮಗು ಹುಟ್ಟಿದ ನ೦ತರ ಲೈ೦ಗಿಕ ಕ್ರಿಯೆಯಲ್ಲಿ ಆಸಕ್ತಿ ನಶಿಸಿ ಹೋಗಿ ಜೋಡಿಲೈ೦ಗಿಕೆ ಕ್ರಿಯೆ ನಡೆಸುವುದು ಕಷ್ಟ. ತಾಯ್ತನದ ಕೆಲಸಗಳು, ಇನ್ನೊಮ್ಮೆ ಗರ್ಭಿಣಿಯಾಗುವ ಭಯ, ಹಾಗೂ ಹಾರ್ಮೋನುಗಳು ಲೈ೦ಗಿಕ ಆಸಕ್ತಿ ನಶಿಸಿ ಹೋಗುವ೦ತೆ ಮಾಡುತ್ತವೆ. ಕೆಲವು ಸಲಹೆಗಳನ್ನು ಪಾಲಿಸಿ ನಿಮ್ಮ ಸೆಕ್ಸ್ ಲೈಫನ್ನು ಪುನಃ ಮರಳಿ ಪಡೆಯಿರಿ. 
 

ಉತ್ತಮ ವೈವಾಹಿಕ ಜೀವನಕ್ಕೆ ಲೈಂಗಿಕ ಆಸಕ್ತಿಯೂ ಪ್ರಮುಖ ಕಾರಣವಾಗಿದೆ. ಅದಿಲ್ಲದೇ ಹೋದರೆ ವೈವಾಹಿಕ ಜೀವನ (married Life) ನೀರಸವಾಗಿರುತ್ತದೆ. ಮಗುವಾದ ಬಳಿಕವೂ ಲೈಂಗಿಕ ಜೀವನ (Sex life) ಉತ್ತಮವಾಗಿರಲು ಏನು ಮಾಡಬೇಕು? ಅನ್ನೋ ಮಾಹಿತಿ ಇಲ್ಲಿದೆ. 

ಸೆಕ್ಸ್(Sex) ಬಗ್ಗೆ ಮಾತನಾಡಿ: ಇದು ಅಶ್ಲೀಲವಗಬೇಕೆ೦ದೇನೂ ಇಲ್ಲ. ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸುವುದೂ ಕೂಡ ಒಳ್ಳೆಯದು. ಒ೦ದು ಸ೦ದರ್ಭದ ಬಗ್ಗೆ ಭಾವನೆಗಳನ್ನು ವ್ಯಕ್ತಪಡಿಸುತ್ತಿರುವಾಗ, ಆತನಿಗೂ ಅದನ್ನೇ ಮಾಡುವ೦ತೆ ಹೇಳಿ. ನೀವಿಬ್ಬರು ನ೦ತರ ಖ೦ಡಿತವಾಗಿಯೂ ಕನೆಕ್ಟ್ ಆಗುತ್ತೀರಿ.

ಆತ್ಮೀಯತೆ ಬೆಳೆಸಿ: ಮಗು ಇದ್ದಾಗ ಸಮಯವನ್ನು ಹೊ೦ದಿಸಿಕೊಳ್ಳುವುದು ಬಹಳ ಕಷ್ಟ. ಹಾಗಾಗಿ ನಿಮಗೆ ಅವಕಾಶ ಸಿಕ್ಕಿದೊಡನೆ ಅತನನ್ನು ಚು೦ಬಿಸುವುದು (Kiss), ಮಗು ನಿದ್ದೆಗೆ (Sleep) ಜಾರಿದಾಗ ಆತನ ಕೈ ಹಿಡಿದುಕೊಳ್ಳುವುದು ಮತ್ತು  ಓದುತ್ತಿರುವಾಗ ಅಥವಾ ಟಿವಿ (TV) ನೋಡುತ್ತಿರುವಾಗ ಆತನನ್ನು ಅಪ್ಪಿಕೊ೦ಡಿರಿ (Hug). ಇ೦ಥಹ ಸಣ್ಣ ಗೆಸ್ಚರ್ ಗಳು ಭಾವನೆಯನ್ನು ಕೆರಳಿಸುತ್ತವೆ.

ಕೆಲಸಗಳನ್ನು ಆಮೇಲೆ ಮಾಡಬಹುದು: ಮಗು ಹಾಗೂ ಅದಕ್ಕೆ ಸ೦ಬ೦ಧಪಟ್ಟ ಜವಾಬ್ದಾರಿಗಳಿದ್ದಾಗ  ಗ೦ಡನ (Husband) ಜೊತೆ ಹೆಚ್ಚು ಸಮಯ ಕಳೆಯಲು ಸಿಗುವುದಿಲ್ಲ.  ಆದುದರಿಂದ ಮಗು ನಿದ್ದೆ (Sleep) ಮಾಡುವ ಸಮಯವನ್ನು ನಿಮಗಾಗಿ ಮೀಸಲಿಡಿ. ಮಗು ಸಣ್ಣ ನಿದ್ದೆಯಲ್ಲಿದ್ದಾಗ ಮನೆಯ ಕೆಲಸವನ್ನು ಮುಗಿಸುವ ಧಾವ೦ತದಲ್ಲಿರಬೇಡಿ.

 ಮನೆಯ ಕೆಲಸಗಳನ್ನು ನಿಧಾನವಾಗಿ ಮಾಡಿ ಮುಗಿಸಿ, ಜೊತೆಗೆ ನಿಮ್ಮ ಗ೦ಡನ ಜೊತೆ ಸಮಯ ಕಳೆಯಿರಿ. ಅತ ಕೆಲಸದಲ್ಲಿದ್ದರೆ ಆತನಿಗೆ ಸರ್ ಪ್ರೈಸ್ (Surprise) ಕರೆ ಮಾಡಿ. ನೀವು ಆತನನ್ನು ಎಷ್ಟು ಪ್ರೀತಿಸುತ್ತೀರಿ ಎನ್ನುವುದನ್ನು ವ್ಯಕ್ತಪಡಿಸಿ ಹಾಗೂ ಆತನು ನಿಮಗೆ ಎಷ್ಟು ಮುಖ್ಯ ಎನ್ನುವುದನ್ನೂ ತಿಳಿಸಿ. ಬದಲಾವಣೆ ನೀವೆ ನೋಡಿ.

ಬೆಡ್ (Bed) ಬಳಿ ಹೋಗಬೇಡಿ:  ಮಗು ಅನೇಕ ರಾತ್ರಿಗಳವರೆಗೆ ನಿಮ್ಮನ್ನು ಎಚ್ಚರದಲ್ಲಿರಿಸುತ್ತದೆ. ಮಗುವಿನ ಒಂದೊಂದು ಕೆಲ್ಸ ಮಾಡುವುದು, ನಿದ್ರೆ ಮಾಡದೇ ಮಗು ರಾತ್ರಿ ಅಳುತ್ತಿದ್ದರೆ, ನೀವು ಎಚ್ಚರವಾಗಿರಬೇಕಾಗುತ್ತದೆ. ಇದರಿಂದ ನಿದ್ರೆ ಬರುತ್ತಿರುತ್ತದೆ. ಹಾಗಾಗಿ ನೀವು ಬೆಡ್ ನ್ನು ನೋಡಿದಾಗ ವಿಶ್ರಾ೦ತಿ (rest) ಪಡೆಯುವ ಮನಸ್ಸಾಗಬಹುದು.  

ನಿಮ್ಮ ಗ೦ಡನೊ೦ದಿಗೆ ಆತ್ಮೀಯ ಕ್ಷಣಗಳನ್ನು ಕಳೆಯುವ ಅವಕಾಶ ಬ೦ದಾಗ ಬೆಡ್ ರೂಮಿಗೆ ಹೋಗಬೇಡಿ. ಅದರ ಬದಲು, ಕೌಚ್, ನೆಲ ಅಥವಾ ಲಾ೦ಡ್ರಿ ರೂಮನ್ನು ಆಯ್ಕೆ ಮಾಡಿ, ಅವರೊಂದಿಗೆ ಸಮಯ ಕಳೆಯಿರಿ. ಜೊತೆಯಾಗಿ ತಿಂಡಿ ತಿನ್ನಿ, ತಬ್ಬಿಕೊಂಡು (Hug) ಮಲಗಿ, ಇಲ್ಲವಾದರೆ ರೊಮ್ಯಾಂಟಿಕ್ (Romantic) ಮಾತುಗಳನ್ನಾಡಿ. ಇದರಿಂದ ಪ್ರೀತಿ (love) ಹೆಚ್ಚುತ್ತದೆ. 

click me!