ಮುತ್ತಿನ ಕುರಿತು ಹೀಗೊಂದು ಇಂಟ್ರೆಸ್ಟಿಂಗ್ ಸ್ಟೋರಿ

First Published Oct 8, 2021, 6:37 PM IST

ಯಾರೊಂದಿಗಾದರೂ ತುಂಬಾ ಹತ್ತಿರದ ಸಂಪರ್ಕ ಸಾಧಿಸಲು ಕಿಸ್ (Kiss) ಅತ್ಯಂತ ಶುದ್ಧ (Pure) ಮತ್ತು ಅತ್ಯಂತ ನಿಕಟ (close) ಮಾರ್ಗವಾಗಿದೆ. ಕಿಸ್ ಮಾಡುವಾಗಿನ ಸಂತೋಷ (happiness) ಮತ್ತು ಲೈಂಗಿಕತೆ (Sexuality) ಆಕರ್ಷಕವಾಗಿರುತ್ತೆ. ಶತಮಾನಗಳಿಂದ, ಪ್ರಪಂಚದ ಅರ್ಧಕ್ಕಿಂತ ಹೆಚ್ಚು ಭಾಗಗಳಲ್ಲಿ ಕಿಸ್ ಅನ್ನು ಸಾರ್ವಜನಿಕವಾಗಿ ಪ್ರೀತಿಯನ್ನು ತೋರಿಸುವ ಅತ್ಯಂತ ಜನಪ್ರಿಯ ರೂಪವೆಂದು ಪರಿಗಣಿಸಲಾಗಿದೆ. ವಿಜ್ಞಾನದಲ್ಲೂ (Science) ಕಿಸ್ ಬಗ್ಗೆ ಸುಂದರವಾಗಿ ವಿವರಿಸಿದ್ದಾರೆ. 

ಏಕೆ  ಕಿಸ್ ಮಾಡಲು ಇಷ್ಟಪಡುತ್ತಾರೆ?
ಕಿಸ್ ಅಥವಾ ಚುಂಬನ, ಇದು ಪ್ರೇಮಿಗಳು (lovers )ಅಥವಾ ಪತಿ ಪತ್ನಿಯ (Couple) ನಡುವಿನದ್ದೇ ಆಗಬೇಕೆಂದೇನೂ ಇಲ್ಲ. ಕಿಸ್ (Kiss) ಹುಟ್ಟಿನಿಂದ ಪ್ರಾರಂಭವಾಗುತ್ತದೆ, ಅಲ್ಲಿ  ತಾಯಂದಿರು ಶಿಶುಗಳಿಗೆ ಚುಂಬಿಸುವುದರಿಂದ ಪ್ರೀತಿಯ ನಂಟು ಬೆಸೆಯುತ್ತದೆ. ಮೊದಲನೆಯದಾಗಿ, ಇದು ತಾಯಂದಿರೊಂದಿಗೆ ಸಕಾರಾತ್ಮಕ (possitive)  ಮತ್ತು  ಬಲವಾದ ಬಂಧವನ್ನು (Bonding) ಸೃಷ್ಟಿಸುತ್ತದೆ. 

 ಈ ಚುಂಬನ ಪ್ರಾಣಿಗಳಲ್ಲೂ ಕಂಡು ಬರುತ್ತದೆ. ಸಸ್ತನಿ (Mammals) ಅಮ್ಮ ತನ್ನ ಬಾಯಿಯಲ್ಲಿ ಆಹಾರವನ್ನು ಅಗಿಯುತ್ತದೆ ಮತ್ತು ಆ ಆಹಾರವನ್ನು ತನ್ನ ಬಾಯಿಯ (mouth( ಮೂಲಕ ತನ್ನ ಮಕ್ಕಳಿಗೆ ರವಾನಿಸುತ್ತದೆ. ಇದು ಕೋತಿಗಳಲ್ಲಿ (monkey) ಸಾಕಷ್ಟು ಕಂಡುಬರುತ್ತದೆ . ಇದು ಕೂಡ ಒಂದು ರೀತಿಯ ಮುತ್ತು. 

ಕಿಸ್ ಏಕೆ ತುಂಬಾ ಸೂಕ್ಷ್ಮವಾಗಿದೆ?
ತುಟಿಗಳು ನಮ್ಮ ದೇಹದ ಅತ್ಯಂತ ಸೂಕ್ಷ್ಮ ಭಾಗ (sensitive part), ಕಿಸ್ ಮಾಡುವ ಮೂಲಕ ಅದರ ಮೃದುತ್ವದ ಪ್ರಜ್ಞೆ ನೀಡುತ್ತದೆ. ನಾವು ಸಾಮಾನ್ಯವಾಗಿ ಬಟ್ಟೆಗಳಿಂದ ಮುಚ್ಚಿಕೊಳ್ಳದ ಭಾಗ ಇದು ಮತ್ತು ಪ್ರೀತಿ ಮತ್ತು ವಾತ್ಸಲ್ಯದ ಭಾವನೆಗಳಿಂದ ಸುಲಭವಾಗಿ ಸ್ಫೂರ್ತಿ (inspiration) ಪಡೆಯಲು ಕಿಸ್ ಮಾಡಬಹುದು. 

ಚುಂಬನದೊಂದಿಗೆ ಬಟ್ಟೆಗಳ ಪರಿಕಲ್ಪನೆ
ಬುಡಕಟ್ಟು ಜನರು  (tribal people) ಮತ್ತು ಪರಭಕ್ಷಕ ಸಮುದಾಯಗಳು ಬಹಳ ಕಡಿಮೆ ಬಟ್ಟೆಗಳನ್ನು ಧರಿಸುತ್ತಾರೆ ಅಥವಾ ಬಟ್ಟೆಗಳಿಲ್ಲದೆ ವಾಸಿಸುತ್ತಾರೆ,  ಅವರ ಮೇಲೆ ನಡೆಸಿದ ಅಧ್ಯಯನಗಳ ಪ್ರಕಾರ, ಅವರಿಗೆ ಕಿಸ್ (kiss) ಅಗತ್ಯವಿಲ್ಲ. ಅವರ ದೇಹವು ಎಲ್ಲಾ ಕಡೆಗಳಿಂದಲೂ ಲೈಂಗಿಕ (sexual)  ಮುಖಾಮುಖಿಗಳ ಸಾಧ್ಯತೆಗೆ ಮುಕ್ತವಾಗಿರುವುದರಿಂದ, ಈ ಜನರು ಚುಂಬಿಸುವ ಅಗತ್ಯವನ್ನು ಅನುಭವಿಸುವುದಿಲ್ಲ. 

ಆರ್ಕ್ಟಿಕ್ ವೃತ್ತದಲ್ಲಿರುವ ಇನ್ಯುಟ್ ಗಳು ಬೆಚ್ಚಗಿನ ಮತ್ತು ಪೂರ್ಣ ಬಟ್ಟೆಗಳನ್ನು ಧರಿಸುತ್ತಾರೆ,  ಅವರು ಲೈಂಗಿಕತೆಯನ್ನು ಅನುಭವಿಸುವ ಏಕೈಕ ಸ್ಥಳವೆಂದರೆ ಮಾನವ ಮುಖ. ಅವರು ತಮ್ಮ ಮೂಗಿನಿಂದ ಮೂಗನ್ನು ಸ್ಪರ್ಶಿಸುವ (touching nose to nose)  ಮೂಲಕ ಕಿಸ್ ಮಾಡುತ್ತಾರೆ. 

ಕಿಸ್ ಮಾಡುವಾಗ ಏನನ್ನು ಗಮನಿಸುತ್ತಾರೆ?
ಕಿಸ್ ಮಾಡುವಾಗ ಮೊದಲು ಗಮನಿಸುವುದು ಸುಗಂಧವನ್ನು. ಉತ್ತಮ ಸುಗಂಧ ದ್ರವ್ಯ ಅಥವಾ ಸೆಂಟ್ ಹಾಕಿದ್ದರೆ ಇಬ್ಬರೂ ಮತ್ತಷ್ಟು ಆಕರ್ಷಿತರಾಗುತ್ತಾರೆ. ಆದುದರಿಂದ ಯಾವಾಗ ಕಿಸ್ ಮಾಡಲು ಬಯಸುತ್ತಿರೋ, ಆವಾಗ ಆಕರ್ಷಕವಾದ ಪರ್ಫ್ಯೂಮ್ ಹಾಕಿ. 

ಕಿಸ್ ಒಂದು ವಿಶಿಷ್ಟ ಮಾನವ ನಡವಳಿಕೆ
ಮಾನವರು ಪರಸ್ಪರ ವಾಸನೆಯನ್ನು ಗ್ರಹಿಸಲು ಚುಂಬನ ಕಾರಣವಾಯಿತು, ನಂತರ ಪರಸ್ಪರರ ತುಟಿಗಳನ್ನು ಹೀರಲು ಪ್ರಾರಂಭಿಸಿದರು.ಬಳಿಕ ಜನರನ್ನು ಅವರು ಇಷ್ಟಪಡುವ ಅಥವಾ ಪ್ರೀತಿಸುವ ವ್ಯಕ್ತಿಗೆ ಹತ್ತಿರವಾಗಲು ಚುಂಬಿಸಲು ಪ್ರಾರಂಭಿಸಿದರು. ಮುಂದೆ ಇದು ಪ್ರೀತಿಯ ಸಂಕೇತವಾಗಿ ಬದಲಾಯಿತು. 

click me!