ಐಫೆಲ್ ಟವರ್‌ಗಿಂತ ಎತ್ತರ, ಜಮ್ಮು ಕಾಶ್ಮೀರದ ಅಂಜಿ ರೈಲ್ವೇ ಸೇತುವೆ ವಿಸ್ಮಯಗಳ ಆಗರ!

First Published Dec 23, 2020, 6:28 PM IST

ಜಮ್ಮು ಮತ್ತು ಕಾಶ್ಮೀರ ಅತ್ಯಂತ ಸುದರ ತಾಣ. ಕೇಂದ್ರ ಸರ್ಕಾರ ವಿಶೇಷ ಸ್ಥಾನಮಾನ ರದ್ದು ಮಾಡಿದ ಬಳಿಕ ಇತರ ರಾಜ್ಯಗಳೊಂದಿಗೆ ಜಮ್ಮು ಮತ್ತು ಕಾಶ್ಮೀರ ಬೆಸೆಯಲು ಹಲವು ಯೋಜನೆಗಳನ್ನು ತಂದಿದೆ. ಇದರ ಜೊತೆ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ ಮಹತ್ವದ ರೈಲು ಯೋಜನೆ ಕಾಮಾಗಾರಿಗೆ ವೇಗ ನೀಡಿದೆ. ಉದಮಪುರ, ಶ್ರೀನಗರ ಹಾಗೂ ಬಾರಮುಲ್ಲ ರೈಲು ಯೋಜನೆ ಅತ್ಯಂತ ಸವಾಲಿನ ಹಾಗೂ ಕ್ಲಿಷ್ಟಕರ ಯೋಜನೆಯಾಗಿದೆ. ಇದರ ನಡುವೆ ಬರುವ ಅಂಜಿ ರೈಲು ಸೇತುವೆ, ಐಫೆಲ್ ಟವರ್‌ಗಿಂತ ಎತ್ತರವಿದೆ. ಅಂಜಿ ಸೇತುವೆ ಕುರಿತು ರೋಚಕ ಮಾಹಿತಿ ಇಲ್ಲಿದೆ.

ಉದಮಪುರ, ಶ್ರೀನಗರ ಹಾಗೂ ಬಾರಮುಲ್ಲ ರೈಲು ಯೋಜನೆ ಅತ್ಯಂತ ಕಠಿಣ ಹಾಗೂ ಸವಾಲಿನ ಯೋಜನೆಯಾಗಿದೆ. ಕಾರಣ ಬೆಟ್ಟ, ಗುಡ್ಡ, ಪ್ರಪಾತ, ನದಿ ಸೇರಿದಂತೆ ಹಲವು ಸವಾಲುಗಳನ್ನು ದಾಟಬೇಕಿದೆ. ಸೈರ್ಗಿಕವಾಗಿ, ಬೌಗೋಳಿಕವಾಗಿ ಕಾರಣದಿಂದ ಈ ಯೋಜನೆ ಪೂರ್ಣಗೊಂಡಿಲ್ಲ.
undefined
272 ಕಿ.ಮೀ ಉದ್ದದ ರೈಲು ಯೋಜನೆ ಭಾರತದ ಅತ್ಯಂತ ಕಠಿಣ ಹಳಿಯ ಯೋಜನೆಯಾಗಿದೆ. ಇದರಲ್ಲಿ 37 ಸೇತುವೆಗಳಿವೆ. 1997ರಲ್ಲಿ ಪ್ರಧಾನಿ ದೇವೇಗೌಡ ಶಂಕುಸ್ಥಾಪನೆ ಮಾಡಿದ್ದ ಈ ಯೋಜನೆ ಬಳಿಕ ಸರ್ಕಾರ ಬೇರೆ ಬೇರೆಯಾದರೂ ಯೋಜನೆ ಮಾತ್ರ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ.
undefined
ಮೋದಿ ಸರ್ಕಾರ ಈ ಯೋಜನೆ ಕೈಗೆತ್ತಿಕೊಂಡು ಕೆಲ ಬದಲಾವಣೆ ಮಾಡಿಕೊಂಡಿತು. ಬಳಿಕ ಕಾಮಾಗಾರಿ ಆರಂಭಿಸಿತು. ಹಲವು ಸುರಂಗ ಮಾರ್ಗ, ಹಲವು ಸೇತುವೆ ಸೇರಿದಂತೆ ಕಾಮಾಗಾರಿ ನಡೆಯುತ್ತಿದೆ. 2002ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಈ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಿದ್ದರು.
undefined
ಈ ರೈಲು ಯೋಜನೆಯಲ್ಲಿ ಕತ್ರಾ ಹಾಗೂ ರಿಯಾಸಿ ಸಂಪರ್ಕ ಕಲ್ಪಿಸುವ ಅಂಜಿ ಸೇತುವೆ ಕಾಮಾಗಾರಿ ನಡೆಯುತ್ತಿದೆ. ಇದು ವಿಶ್ವದ ಗಮನಸೆಳೆದಿದೆ. ಎಂಜಿನೀಯರ್‌ಗಳಿಗೆ ಸವಾಲಾಗಿರುವ ಈ ಸೇತುವೆ ಎತ್ತರ ಫ್ರಾನ್ಸ್‌ನ ಐಫೇಲ್ ಟವರ್‌ಗಿಂತ ಎತ್ತರವಾಗಿದೆ.
undefined
ಐಫೇಲ್ ಟವರ್ ಎತ್ತರ 324 ಮೀಟರ್, ಕೇಂದ್ರ ಸರ್ಕಾರ ನಿರ್ಮಿಸುತ್ತಿರುವ ಅಂಜಿ ಸೇತುವೆ ಎತ್ತರ 359 ಮೀಟರ್. ಇದು ಭಾರತದ ಮೊತ್ತ ಮೊದಲ ಕೇಬಲ್ ಸೇತುವೆಯಾಗಿದೆ.
undefined
ಅಂಜಿ ಸೇತುವೆ 15 ಮೀಟರ್ ಅಗಲ ಹಾಗೂ 687 ಮೀಟರ್ ಉದ್ದವಿದೆ. ಇನ್ನು 96 ಕೇಬಲ್‌ಗಳನ್ನು ಬಳಸಲಾಗುತ್ತಿದೆ. ಇನ್ನು ಗಂಟೆಗೆ 260 ಕಿ.ಮೀ ವೇಗದ ದಾಳಿಯನ್ನು ತಡೆಯಬಲ್ಲ ಶಕ್ತಿ ಈ ಸೇತುವೆಗಿದೆ.
undefined
ಈ ಯೋಜನೆಯನ್ನು ಉದಮಪುರ-ಕತ್ರ, ಕತ್ರಾ-ಬನಿಹಾಳ್ ಹಾಗೂ ಬನಿಹಾಳ್ -ಬಾರಮುಲ್ಲಾ ಎಂದು ಮೂರು ಭಾಗಗಳಾಗಿ ವಿಂಗಡಿಸಿ ಕಾಮಾಗಾರಿ ಆರಂಭಿಸಲಾಗಿದೆ.
undefined
ಈ ಮಹತ್ವದ ಯೋಜನೆ 2022ರ ಆಗಸ್ಟ್ 15 ರಂದು ಪೂರ್ಣಗೊಳ್ಳಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಇದಕ್ಕಿಂತ ಎತ್ತರದ ಸೇತುವೆಯನ್ನು ಚೀನಾ ನಿರ್ಮಿಸುತ್ತಿದೆ.
undefined
click me!