ಭಾರತದಲ್ಲಿ ಹಲವಾರು ಬಿಲಿಯನೇರ್ ಉದ್ಯಮಿಗಳಿದ್ದಾರೆ. ಲಕ್ಸುರಿಯಸ್ ಲೈಫ್‌ಸ್ಟೈಲ್ ಫಾಲೋ ಮಾಡ್ತಾರೆ. ಐಷಾರಾಮಿ ಬಂಗಲೆ, ಲಕ್ಸುರಿ ಕಾರುಗಳನ್ನು ಹೊಂದಿರುತ್ತಾರೆ. ಆದರೆ ಈ ಭಾರತದ ಈ ಬಿಲಿಯನೇರ್ ಮಾತ್ರ ಕೋಟಿ ಕೋಟಿ ಆಸ್ತಿಯಿದ್ರೂ ಹಳೆಯ ಅಜ್ಜನ ಮನೆಯಲ್ಲಿ ವಾಸಿಸ್ತಾರೆ. ಯಾರು ಆ ಬಿಲಿಯನೇರ್?
ಆನಂದ್ ಮಹೀಂದ್ರಾ, ಭಾರತದ ಪ್ರಭಾವಿ ಉದ್ಯಮಿ ಮತ್ತು ಬಿಲಿಯನೇರ್‌ಗಳಲ್ಲಿ ಒಬ್ಬರು. ಸಾಕಷ್ಟು ಪರೋಪಕಾರಿ ಕೆಲಸಗಳ ಮೂಲಕ ಸುದ್ದಿಯಲ್ಲಿರುತ್ತಾರೆ. ಕೆಲವು ವರ್ಷಗಳ ಹಿಂದೆ, ಫಾರ್ಚೂನ್ ಮ್ಯಾಗಜೀನ್‌ನ 'ವಿಶ್ವದ 50 ಶ್ರೇಷ್ಠ ನಾಯಕರ' ಪಟ್ಟಿಯಲ್ಲಿ ಆನಂದ್ ಮಹೀಂದ್ರಾ ಹೆಸರೂ ಸೇರಿತ್ತು. 2013ರಲ್ಲಿ ಫೋರ್ಬ್ಸ್ ಇಂಡಿಯಾ ಅವರನ್ನು ತಮ್ಮ 'ವರ್ಷದ ವಾಣಿಜ್ಯೋದ್ಯಮಿ' ಎಂದು ಹೆಸರಿಸಿತು. 2020ರಲ್ಲಿ, ಭಾರತ ಸರ್ಕಾರವು ಆನಂದ್ ಮಹೀಂದ್ರಾ ಅವರಿಗೆ ವ್ಯಾಪಾರ ಜಗತ್ತು ಮತ್ತು ಸಮಾಜಕ್ಕೆ ನೀಡಿದ ಕೊಡುಗೆಗಾಗಿ ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿತು.
ಆನಂದ್ ಮಹೀಂದ್ರಾ ಅವರ ಮಹೀಂದ್ರಾ ಗ್ರೂಪ್ ಏರೋಸ್ಪೇಸ್, ಶಕ್ತಿ, ಫಾರ್ಮ್, ಮತ್ತು ರಕ್ಷಣೆಯಿಂದ ಘಟಕಗಳು, ಆಟೋಮೋಟಿವ್, ಆಫ್ಟರ್‌ಮಾರ್ಕೆಟ್ ಮತ್ತು ಇತರ ಹಲವು ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಭಾರತದ ಪ್ರಮುಖ ಸಂಘಟಿತ ಸಂಸ್ಥೆಗಳಲ್ಲಿ ಒಂದಾಗಿದೆ. ಬಿಲಿಯನೇರ್ ತಮ್ಮ ಲೋಕೋಪಕಾರದ ಕೆಲಸ, ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ಮತ್ತು ಹಲವಾರು ಕಾರುಗಳ ಬಿಡುಗಡೆಯ ವೀಡಿಯೋದೊಂದಿಗೆ ಆಗಾಗ ಸುದ್ದಿಯಲ್ಲಿರುತ್ತಾರೆ. ಏಪ್ರಿಲ್ 29, 2024ರಂದು ಮಹೀಂದ್ರಾ XUV 3XO ಕಾರನ್ನು ಭಾರತದಲ್ಲಿ ಕೇವಲ 7.49 ಲಕ್ಷಕ್ಕೆ ಬಿಡುಗಡೆ ಮಾಡಿದ್ದು ಮತ್ತೆ ಆನಂದ್ ಮಹೀಂದ್ರಾ ಟ್ರೆಂಡಿಂಗ್‌ನಲ್ಲಿದ್ದಾರೆ.
ಮಹೀಂದ್ರಾ ಕಾರ್‌ಗಳು ಡಬ್ಬಾ ಎಂದ ವ್ಯಕ್ತಿ; ಆನಂದ್ ಮಹೀಂದ್ರಾ ಕೊಟ್ರು ಸಖತ್ ರಿಪ್ಲೈ
17,000 ಕೋಟಿಯ ಆಸ್ತಿ ಹೊಂದಿರುವ ಉದ್ಯಮಿ ಆನಂದ್ ಮಹೀಂದ್ರಾ
ಭಾರತದ 90ನೇ ಶ್ರೀಮಂತ ವ್ಯಕ್ತಿ ಮತ್ತು ವಿಶ್ವದ 1143ನೇ ಶ್ರೀಮಂತ ವ್ಯಕ್ತಿಯಾಗಿದ್ದರೂ, ಆನಂದ್ ಮಹೀಂದ್ರಾ ಸರಳ ಜೀವನಶೈಲಿಯನ್ನು ಹೊಂದಿದ್ದಾರೆ. ಮಹೀಂದ್ರಾ ಗ್ರೂಪ್‌ನ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ಅಂದಾಜು 2.1 ಬಿಲಿಯನ್ USD ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ, ಇದನ್ನು INR ನಲ್ಲಿ ಪರಿವರ್ತಿಸಿದರೆ, ಸುಮಾರು ರೂ. 17,000 ಕೋಟಿ. ಇತರ ಭಾರತೀಯ ಬಿಲಿಯನೇರ್‌ಗಳು ಐಷಾರಾಮಿ ಮತ್ತು ಭವ್ಯವಾದ ಜೀವನ ನಡೆಸುತ್ತಿದ್ದರೆ, ಆನಂದ್ ಮಹೀಂದ್ರಾ ಇದಕ್ಕೆ ಸಂಪೂರ್ಣ ವಿರುದ್ಧವಾದ ಜೀವನವನ್ನು ನಡೆಸುತ್ತಿದ್ದಾರೆ.
ಯೂಟ್ಯೂಬರ್ ಆಗಿ ಮನೆ ಖರೀದಿಸಿದ ಟ್ರಕ್ ಡ್ರೈವರ್; ಇದಕ್ಕಿಂತ ಸ್ಪೂರ್ತಿ ಇನ್ನೇನು ಅಂದ್ರು ಆನಂದ್ ಮಹೀಂದ್ರ
ಮುಂಬೈನಲ್ಲಿ ಮನೆ ಬಾಡಿಗೆ ಪಡೆದಿದ್ದ ಆನಂದ್ ಮಹೀಂದ್ರಾ ಅಜ್ಜ
ಆನಂದ್ ಮಹೀಂದ್ರಾ ಅವರ ಅಜ್ಜ, ಕೆಸಿ ಮಹೀಂದ್ರಾ ಅವರು ತಮ್ಮ ಸಮಯದಲ್ಲಿ ಮುಂಬೈನ ನೇಪಿಯನ್ ಸೀ ರೋಡ್‌ನಲ್ಲಿ ಮನೆಯೊಂದನ್ನು ಬಾಡಿಗೆಗೆ ಪಡೆದಿದ್ದರು. ನಂತರದ ವರ್ಷಗಳಲ್ಲಿ, ಕುಟುಂಬದ ಅನೇಕ ಮಂದಿ ಅದೇ ಮನೆಯಲ್ಲಿ ದಶಕಗಳ ಕಾಲ ವಾಸಿಸುತ್ತಿದ್ದರು. ಎಷ್ಟೋ ವರ್ಷಗಳ ನಂತರ ಮನೆ ಮಾಲೀಕರು ಅದನ್ನು ಕೆಡವಿ ನವೀಕರಿಸಲು ನಿರ್ಧರಿಸಿದರು. ಆದರೆ ಈ ವಿಷಯ ತಿಳಿದು ಆನಂದ್ ಮಹೀಂದ್ರಾ ಇದನ್ನು ಖರೀದಿಸಿದರು.
ವರದಿಯ ಪ್ರಕಾರ, ಆನಂದ್ ಮಹೀಂದ್ರಾ ಅವರು 13,000 ಎಕರೆ ಆಸ್ತಿಯನ್ನು ರೂ. 270 ಕೋಟಿಗೆ ಖರೀದಿಸಿದರು. ಆಸ್ತಿಯ ಹೆಸರು ಗುಲಿಸ್ತಾನ್, ಅಂದರೆ ಹೂವುಗಳ ನಾಡು. ವರ್ಷಗಳಿಂದ ಆನಂದ್ ಮಹೀಂದ್ರಾ, ಅವರ ಪತ್ನಿ ಅನುರಾಧಾ ಮಹೀಂದ್ರಾ ಮತ್ತು ಅವರ ಪುತ್ರಿಯರಾದ ಅಲಿಕಾ ಮಹೀಂದ್ರಾ ಮತ್ತು ದಿವ್ಯಾ ಮಹೀಂದ್ರಾ ಇಲ್ಲಿ ವಾಸಿಸುತ್ತಿದ್ದಾರೆ.