ಗಿಣಿರಾಮ ಶಿವರಾಮ್ ಈಗ ‘ನಿನಗಾಗಿ’ಯಲ್ಲಿ ದಿವ್ಯಾ ಉರುಡುಗಂಗೆ ನಾಯಕ!

Published : May 02, 2024, 04:22 PM ISTUpdated : May 02, 2024, 04:29 PM IST

ಗಿಣಿರಾಮ ಸೀರಿಯಲ್ ಖ್ಯಾತಿಯ ಶಿವರಾಮ್ ದೇಶಪಾಂಡೆ ಅಂದ್ರೆ ರಿತ್ವಿಕ್ ಮಠದ್ ಇದೀಗ ಹೊಸದಾಗಿ ಆರಂಭವಾಗಲಿರುವ ನಿನಗಾಗಿ ಸೀರಿಯಲ್ ನಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ.   

PREV
17
ಗಿಣಿರಾಮ ಶಿವರಾಮ್ ಈಗ ‘ನಿನಗಾಗಿ’ಯಲ್ಲಿ ದಿವ್ಯಾ ಉರುಡುಗಂಗೆ ನಾಯಕ!

ಇತ್ತೀಚೆಗೆ ದಿವ್ಯಾ ಉರುಡುಗ (Divya Uruduga) ಅಭಿನಯದ ಹೊಸ ಸೀರಿಯಲ್ ನಿನಗಾಗಿ ಪ್ರೋಮೊ ಬಿಡುಗಡೆಯಾಗಿತ್ತು. ಈ ಸೀರಿಯಲ್ ನಲ್ಲಿ ಸೂಪರ್ ಸ್ಟಾರ್ ಹಿರೋಯಿನ್ ಆಗಿ, ಆದರೆ ಅಮ್ಮನ ಕೈಗೊಂಬೆಯಾಗಿರುವ ರಚನಾ ಪಾತ್ರದಲ್ಲಿ ದಿವ್ಯಾ ನಟಿಸುತ್ತಿದ್ದಾರೆ. 
 

27

ಇದೀಗ ನಿನಗಾಗಿ ಸೀರಿಯಲ್ ನ ಮತ್ತೊಂದು ಪ್ರೊಮೋ ರಿಲೀಸ್ ಆಗಿದ್ದು, ಇದರಲ್ಲಿ ನಾಯಕನ ಇಂಟ್ರೋ ನೀಡಿದ್ದಾರೆ. ನಾಯಕ ಇನ್ಯಾರೂ ಅಲ್ಲ ಗಿಣಿರಾಮ ಸೀರಿಯಲ್ ಖ್ಯಾತಿಯ ಶಿವರಾಮ್ ದೇಶಪಾಂಡೆ ಅಂದ್ರೆ ರಿತ್ವಿಕ್ ಮಠದ್ (Rithvik Mathad)ನಿನಗಾಗಿ ಸೀರಿಯಲ್ ನಾಯಕ. 
 

37

ಬಾಲನಟಿಯಾಗಿ ಜೀವನ ಆರಂಭಿಸಿದ ರಚನಾ, ಇದೀಗ ಸೂಪರ್ ಸ್ಟಾರ್ ನಾಯಕಿ. ಲಕ್ಷಾಂತರ ಅಭಿಮಾನಿಗಳನ್ನು ಪಡೆದ ರಚನಾಗೆ ಬಾಲ್ಯದಿಂದಲೂ ಅಮ್ಮನ ಬಂಧನ, ಅಮ್ಮ ಹೇಳಿದಂತೆ ಮಾಡುವ ಗೊಂಬೆ ರಚನಾ. 
 

47

ನೀನು ಸಾಕಿದ ಆನೆ ದಿನೇ ದಿನೇ ಬೆಳಿತಿದೆ ಹುಷಾರು ಎಂದು ಒಬ್ಬರು ಹೇಳಿದಾಗ, ರಚನಾ ತಾಯಿ ನಾನು ಪಳಗಿಸಿದ ಆನೆ ಅವಳು, ಎಷ್ಟೇ ಬೆಳೆದ್ರೂ ನಾನು ಹಾಕಿದ ಸರಪಳಿನ ಕಳಚೋಕೆ ಆಗಲ್ಲ ಅನ್ನುತ್ತಾಳೆ. ಅಂದರೆ ಮಗಳು ಯಾವಾಗಲೂ ನನ್ನ ಕೈಗೊಂಬೆ ಅನ್ನೋದನ್ನು ಹೇಳ್ತಿದ್ದಾಳೆ ರಚನಾ ಅಮ್ಮ. 
 

57

ಈವಾಗ ನಾಯಕನ ಎಂಟ್ರಿಯಾಗುತ್ತೆ, ಸರಪಳಿಯನ್ನು ತೆಗೆದು ಕೈಯಲ್ಲಿ ಹಿಡಿಯುವ ನಾಯಕ, ತನ್ನ ಕೈಯಲ್ಲಿರುವ ಬಾಲಕಿಯ ಬಳಿ, ಬೇಬಿ ಹಾಕಿರೋ ಸರಪಳೀನ ಕಟ್ ಮಾಡಿ ಹೋಗದೇ ಇರೋದಕ್ಕೆ ಕಾರಣ ಆನೆಗೆ ಶಕ್ತಿ ಇಲ್ಲಾಂತ ಅಲ್ಲ, ಅಥವಾ ಸರಪಳಿ ಗಟ್ಟಿಯಾಗಿದೆ ಅಂತಾನೂ ತಾಯಿ. ಆನೆಗೆ ಮಾವುತನ ಮೇಲಿನ ಪ್ರೀತಿಯಿಂದಾಗಿ ಆನೆ ಹಾಗೆ ಉಳಿಯುತ್ತೆ ಎನ್ನುತ್ತಾನೆ. 
 

67

ಮನುಷ್ಯರನ್ನೇ ಆಗಲಿ, ಪ್ರಾಣಿಗಳನ್ನೇ ಆಗಲಿ ಕಟ್ಟು ಹಾಕೋಕೆ ಆಗೋದು ಪ್ರೀತಿಯಿಂದ ಮಾತ್ರ ಸಾಧ್ಯ, ಒತ್ತಾಯದಿಂದ ಸಾಧ್ಯವಿಲ್ಲ ಎನ್ನುತ್ತಾಳೆ. ಹುಡುಗಿ ನಾಯಕನ ಕೆನ್ನೆಗಿಂಡಿ ಸೂಪರ್ ಎನ್ನುತ್ತಾಳೆ. ಇದನ್ನ ನೋಡಿ ನಾಯಕಿ ರಚನಾಗೆ ತನ್ನ ಮತ್ತು ತಾಯಿಯ ಬಾಂಧವ್ಯದ ನೆನಪಾಗುತ್ತೆ. 
 

77

ನಾಯಕಿ ದಿವ್ಯಾ ಉರುಡುಗ (Divya Uruduga) ಸಿನಿಮಾದಲ್ಲಿ ನಾಯಕಿ ಅನ್ನೋದು ತಿಳಿದಿದೆ. ಇನ್ನು ರಿತ್ಚಿಕ್ ಮಠದ್ ಫುಡ್ ಟ್ರಕ್ ನಡೆಸೋದು ಅನ್ನೋದು ಪ್ರೊಮೋ ಮೂಲಕ ಗೊತ್ತಾಗಿದೆ. ಇವರಿಬ್ಬರು ಹೇಗೆ ಜೊತೆಯಾಗ್ತಾರೆ. ನಾಯಕನ ಜೊತೆ ಇರೋ ಮಗು ಯಾರು? ರಚನಾ ಅಮ್ಮ ಅಷ್ಟೊಂದು ಸ್ಟ್ರಿಕ್ಟ್ ಯಾಕೆ? ರಚ್ಚುಗೆ ಅಮ್ಮನ ಪ್ರೀತಿ ಸಿಗುತ್ತಾ ಕಾದು ನೋಡಬೇಕು. 
 

click me!

Recommended Stories