ಅರಿಶಿನವು(Turmeric) ಆಂಟಿ ಒಕ್ಸಿಡಾಂಟ್ಸ್, ಉರಿಯೂತ ನಿವಾರಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳಿಂದ ಸಮೃದ್ಧವಾಗಿದೆ. ಹಾಲಿನಲ್ಲಿ ಉತ್ತಮ ಪೋಷಕಾಂಶಗಳೂ ಇರುತ್ತವೆ. ನೀವು ಅರಿಶಿನವನ್ನು ಹಾಲಿನಲ್ಲಿ ಕುದಿಸಿ ಸೇವಿಸಿದಾಗ, ಅದು ಅದ್ಭುತ ಪ್ರಯೋಜನಗಳನ್ನು ನೀಡುತ್ತೆ. ಇದೆಲ್ಲವೂ ನಿಜಾ. ಆದರೆ ಅರಿಶಿನ ಹಾಲಿನಿಂದ ಉಂಟಾಗುವ ಆರೋಗ್ಯದ ಮೇಲಿನ ಎಫೆಕ್ಟ್ ಗಳೇನು? ತಿಳಿಯೋಣ.
ಅರಿಶಿನದ ಹಾಲನ್ನು ಸೇವಿಸೋದು ಎಲ್ಲರಿಗೂ ಸಮಾನವಾಗಿ ಪ್ರಯೋಜನಕಾರಿಯೇ? ಕ್ಲಿನಿಕಲ್ ನ್ಯೂಟ್ರಿಷನಿಸ್ಟ್ ಮತ್ತು ಆಹಾರ ತಜ್ಞರ ಪ್ರಕಾರ, ಕೆಲವು ಜನರಿಗೆ, ಅರಿಶಿನದ ಹಾಲನ್ನು ಸೇವಿಸೋದು ತುಂಬಾ ಹಾನಿಕಾರಕವೆಂದು ಸಾಬೀತಾಗಿದೆ. ನಿಮಗೆ ಅನೇಕ ಆರೋಗ್ಯ ಸಮಸ್ಯೆಗಳಿದ್ದು, ಆ ಸಮಯದಲ್ಲಿ ಅರಿಶಿನ ಹಾಲನ್ನು(Turmeric milk) ಸೇವಿಸಿದರೆ, ಅದು ಆರೋಗ್ಯಕ್ಕೆ ಸಾಕಷ್ಟು ಹಾನಿಯನ್ನುಂಟು ಮಾಡುತ್ತೆ.
ಅರಿಶಿನದ ಹಾಲನ್ನು ಯಾರು ಕುಡಿಯಬಾರದು?
1. ಕಿಡ್ನಿ(Kidney) ಸಮಸ್ಯೆಯುಳ್ಳ ರೋಗಿ
ಮೂತ್ರಪಿಂಡದ ಕಲ್ಲು, ಮೂತ್ರಪಿಂಡದ ಉರಿಯೂತ, ಮೂತ್ರಪಿಂಡದ ವೈಫಲ್ಯ ಮುಂತಾದ ಮೂತ್ರಪಿಂಡ ಸಂಬಂಧಿತ ಸಮಸ್ಯೆಗಳಿಂದ ಒಬ್ಬ ವ್ಯಕ್ತಿಯು ಬಳಲುತ್ತಿದ್ದರೆ, ಅರಿಶಿನದ ಹಾಲಿನ ಸೇವನೆ ತಪ್ಪಿಸಬೇಕು. ಏಕೆಂದರೆ ಅರಿಶಿನವು ಆಕ್ಸಲೇಟ್ ಹೊಂದಿರುತ್ತೆ, ಇದು ಮೂತ್ರಪಿಂಡದ ಕಲ್ಲಿನ ಸಮಸ್ಯೆಯನ್ನು ಪ್ರಚೋದಿಸುತ್ತೆ. ಒಬ್ಬ ವ್ಯಕ್ತಿಯು ಈಗಾಗಲೇ ಮೂತ್ರಪಿಂಡದ ಸಮಸ್ಯೆಯನ್ನು ಹೊಂದಿದ್ದರೆ, ಅರಿಶಿನದ ಹಾಲು ಪರಿಸ್ಥಿತಿಯನ್ನು ಗಂಭೀರಗೊಳಿಸಬಹುದು.
2. ಲೊ ಬ್ಲಡ್ ಶುಗರ್ (Low Blood Sugar)ರೋಗಿ
ಅರಿಶಿನ ಹಾಲನ್ನು ಸೇವಿಸೋದರಿಂದ ಲೊ ಬ್ಲಡ್ ಶುಗರ್ ರೋಗಿಗಳಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆ ಆಗಬಹುದು, ಏಕೆಂದರೆ ಅರಿಶಿನವು ಕರ್ಕ್ಯುಮಿನ್ ಹೊಂದಿರುತ್ತೆ, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತೆ. ಆದ್ದರಿಂದ, ಇದು ಕಡಿಮೆ ರಕ್ತದೊತ್ತಡ ಹೊಂದಿರುವ ರೋಗಿಗಳಿಗೆ ಸಮಸ್ಯೆಯನ್ನು ಹೆಚ್ಚಿಸಬಹುದು.
3. ಕಳಪೆ ಜೀರ್ಣಕ್ರಿಯೆ(digestion) ಹೊಂದಿರುವ ಜನರು
ಒಬ್ಬ ವ್ಯಕ್ತಿಯು ಹೊಟ್ಟೆಯಲ್ಲಿ ಗ್ಯಾಸ್, ಹೊಟ್ಟೆಯುಬ್ಬರ, ಎದೆಯ ಕಿರಿಕಿರಿ ಅಥವಾ ಆಸಿಡ್ ರಿಫ್ಲಕ್ಸ್, ಮಲಬದ್ಧತೆ, ಅಜೀರ್ಣ, ಇತ್ಯಾದಿಗಳಂತಹ ಜೀರ್ಣಕಾರಿ ಸಮಸ್ಯೆಗಳೊಂದಿಗೆ ಹೋರಾಡುತ್ತಿದ್ದರೆ, ಆಗ ಅರಿಶಿನ ಹಾಲನ್ನು ಸೇವಿಸೋದರಿಂದ ಹೊಟ್ಟೆಯ ಸಮಸ್ಯೆ ಹೆಚ್ಚಾಗಬಹುದು. ಆದ್ದರಿಂದ, ಹೊಟ್ಟೆಯ ಸಮಸ್ಯೆಗಳಿದ್ದರೆ ಅರಿಶಿನದ ಹಾಲನ್ನು ಸೇವಿಸೋದನ್ನು ತಪ್ಪಿಸೋದು ಒಳ್ಳೆಯದು.
4. ರಕ್ತಹೀನತೆ(Anemia) ಇರುವ ಜನರು
ಅರಿಶಿನದ ಹಾಲನ್ನು ಸೇವಿಸೋದರಿಂದ ದೇಹದಲ್ಲಿ ಕಬ್ಬಿಣದ ಹೀರಿಕೊಳ್ಳುವಿಕೆಗೆ ಅಡ್ಡಿಯಾಗುತ್ತೆ , ಇದು ದೇಹದಲ್ಲಿ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸೋದಿಲ್ಲ. ಒಬ್ಬ ವ್ಯಕ್ತಿಯು ದೇಹದಲ್ಲಿ ರಕ್ತ ಅಥವಾ ಕಬ್ಬಿಣದ ಕೊರತೆಯೊಂದಿಗೆ ಹೋರಾಡುತ್ತಿದ್ದರೆ, ಅವರು ಅರಿಶಿನದ ಹಾಲನ್ನು ಸೇವಿಸೋದನ್ನು ತಪ್ಪಿಸಬೇಕು.
5. ರಕ್ತಸ್ರಾವದಿಂದ(Bleeding) ಬಳಲುತ್ತಿರುವವರು
ನೀವು ಅರಿಶಿನ ಹಾಲನ್ನು ಸೇವಿಸಿದರೆ, ಅದು ರಕ್ತದಲ್ಲಿ ಹೆಪ್ಪುಗಟ್ಟುವ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತೆ. ಇದು ರಕ್ತಸ್ರಾವದ ತೊಂದರೆ ಹೊಂದಿರುವ ಜನರಲ್ಲಿ ಗಾಯ ಮತ್ತು ರಕ್ತಸ್ರಾವದ ಅಪಾಯವನ್ನು ಹೆಚ್ಚಿಸುತ್ತೆ . ಅಲ್ಲದೆ, ಬ್ಲಡ್ ತಿನ್ನರ್ ಮಾತ್ರೆ ತೆಗೆದುಕೊಳ್ಳುತ್ತಿರುವವರು ಅರಿಶಿನದ ಹಾಲು ಸೇವಿಸೋದನ್ನು ನಿಲ್ಲಿಸಬೇಕು.