'ಬ್ಲೂ ಬಾಲ್' ಎಂಬ ಪುರುಷರನ್ನು ಕಾಡುವ ಸಮಸ್ಯೆಯಿಂದ ಮುಕ್ತಿ ಹೇಗೆ?

Published : Aug 23, 2022, 07:28 PM IST

'ಬ್ಲೂ ಬಾಲ್' ಎಂಬುದು ಒಂದು ಸಮಸ್ಯೆಯಾಗಿದೆ, ಅದರ ಹೆಸರನ್ನು ಪುರುಷರು ಅಪರೂಪವಾಗಿ ಕೇಳುತ್ತಾರೆ, ಆದರೆ ಈ ಸಮಸ್ಯೆಯನ್ನು ಒಂದಲ್ಲ ಒಂದು ಸಮಯದಲ್ಲಿ ಪ್ರತಿಯೊಬ್ಬರೂ ಅನುಭವಿಸುತ್ತಾರೆ. ಇದು ದೇಹಕ್ಕೆ ಯಾವುದೇ ಹಾನಿಯನ್ನುಂಟು ಮಾಡುವುದಿಲ್ಲ. ಆದ್ದರಿಂದ ಅದನ್ನು ಅನುಭವಿಸಿದ ನಂತರ ಆತಂಕಕ್ಕೆ ಒಳಗಾಗಬೇಡಿ. ಇದು ನಿಭಾಯಿಸಲು ಕಷ್ಟವಲ್ಲದ ಸಾಮಾನ್ಯ ಪರಿಸ್ಥಿತಿಯಾಗಿದೆ. ವಿಶೇಷವೆಂದರೆ ಪುರುಷರ ಈ ಸ್ಥಿತಿಯ ಬಗ್ಗೆ ಯಾವುದೇ ವಿಶೇಷ ಸಂಶೋಧನೆಯನ್ನು ಮಾಡಲಾಗಿಲ್ಲ. ಆದ್ದರಿಂದ, ಈ ಬಗ್ಗೆ ಸಲಹೆಗಳನ್ನು ಮಾತ್ರ ನೀಡಬಹುದು. ನಿಮಗೂ ಬ್ಲೂ ಬಾಲ್ ಬಗ್ಗೆ ತಿಳಿಯಬೇಕು ಅನ್ನೋದಾದ್ರೆ, ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

PREV
110
'ಬ್ಲೂ ಬಾಲ್' ಎಂಬ ಪುರುಷರನ್ನು ಕಾಡುವ ಸಮಸ್ಯೆಯಿಂದ ಮುಕ್ತಿ ಹೇಗೆ?

ಬ್ಲೂ ಬಾಲ್ ಎಂದರೇನು?
ಬ್ಲೂ ಬಾಲ್ (blue ball) ಅನ್ನೋದು ಒಂದು ಮಾನಸಿಕ ಸ್ಥಿತಿ. ಈ ಪುರುಷರು ಶಾರೀರಿಕ ಸಂಬಂಧಗಳಿಲ್ಲದೆ ದೀರ್ಘಕಾಲದವರೆಗೆ ಉದ್ವಿಗ್ನರಾಗಿರುತ್ತಾರೆ. ಈ ಪರಿಸ್ಥಿತಿಯಲ್ಲಿ ಪುರುಷರು ಎಕ್ಸೈಟ್ ಆಗಿರುತ್ತಾರೆ, ಆದರೆ ಅವರು ಆರ್ಗಸಂ ಪಡೆಯುವುದಿಲ್ಲ. ನಂತರ ಕೊನೆಯಲ್ಲಿ, ಅವರು ಬೇಸರದಿಂದಲೇ ತಮ್ಮ ಎಕ್ಸೈಟ್ ಮೆಂಟ್ ಕಳೆದುಕೊಳ್ಳುತ್ತಾರೆ.

210

ರೋಗಲಕ್ಷಣಗಳು ಯಾವುವು?
ಬ್ಲೂ ಬಾಲ್ ಅನೇಕ ರೋಗಲಕ್ಷಣಗಳನ್ನು ಹೊಂದಿರಬಹುದು, ಇದೊಂದು ಸಾಮಾನ್ಯ ಸಮಸ್ಯೆ ಆಗಿದ್ದರೂ ಸಹ ಕೆಲವೊಮ್ಮೆ ಅದು ಪುರುಷರನ್ನು ದೈಹಿಕವಾಗಿ ತೊಂದರೆಗೊಳಿಸಬಹುದು (physical problem). ಈ ಕಾರಣದಿಂದಾಗಿ, ಪುರುಷರು ಸಹ ನೋವನ್ನು ಅನುಭವಿಸುತ್ತಾರೆ. 

310

ಕೆಲವು ವಿಶೇಷ ಲಕ್ಷಣಗಳು ಇಲ್ಲಿವೆ:
ವೃಷಣಗಳಲ್ಲಿ ಸಮಸ್ಯೆಗಳು ಸಹ ಇರಬಹುದು.
ಪುರುಷರಿಗೆ ಖಾಸಗಿ ಭಾಗದಲ್ಲಿ ನೋವು ಇರಬಹುದು.
ನೋವು ಕೆಲವೊಮ್ಮೆ ಎಷ್ಟು ಹೆಚ್ಚಾಗಿರಬಹುದು ಎಂದರೆ ಅದು ಕೆಳಹೊಟ್ಟೆ ಮತ್ತು ಸೊಂಟದವರೆಗೂ ತಲುಪಬಹುದು. ಈ ಪರಿಸ್ಥಿತಿಯನ್ನು ಕೆಲವೊಮ್ಮೆ ನಿಭಾಯಿಸುವುದು ತುಂಬಾನೆ ಕಷ್ಟವಾಗಿರುತ್ತೆ. 

410

ಬ್ಲೂ ಬಾಲ್ ಸಮಸ್ಯೆ ಏಕೆ ಬರುತ್ತದೆ?
ಕಾಮೋತ್ತೇಜಕಗಳ ಕಾರಣದಿಂದಾಗಿ, ಲಿಕ್ವಿಡ್ ಹೊರಚರ್ಮದಲ್ಲಿ ಶೇಖರಣೆಯಾಗುತ್ತದೆ. ದೀರ್ಘಕಾಲದವರೆಗೆ ಸ್ಖಲನದ ಕೊರತೆ ಉಂಟಾಗುವುದು ಇದಕ್ಕೆ ಕಾರಣ. ಈ ಸಂದರ್ಭದಲ್ಲಿ ಸೆಕ್ಸ್ ಮಾಡುವಾಗ, ವೀರ್ಯವು ಎಲ್ಲೆಡೆಯಿಂದ ಹೋಗುವಂತಹ ಪರಿಸ್ಥಿತಿ ಬರುತ್ತದೆ. ಆದರೆ ಇದು ಸಂಭವಿಸದಿದ್ದರೆ, ಬ್ಲೂ ಬಾಲ್ ಸಮಸ್ಯೆ ಉಂಟಾಗುತ್ತೆ. ಆದರೆ, ಈ ಸ್ಥಿತಿಯನ್ನು ಮುಂದಿನ ಕೆಲವು ಗಂಟೆಗಳಲ್ಲಿ ಗುಣಪಡಿಸಲಾಗುವುದು.

510

ಇದು ನಿಮ್ಮ ತಪ್ಪಲ್ಲ
ಬ್ಲೂ ಬಾಲ್ ಸಮಸ್ಯೆ ಬಂದಾಗ, ಹೆಚ್ಚಿನ ಪುರುಷರು ತಮ್ಮದೇ ತಪ್ಪು ಎಂದು ಅಂದುಕೊಳ್ಳುತ್ತಾರೆ. ಅದಕ್ಕಾಗಿ ಅವರು ತಮ್ಮನ್ನು ತಾವೇ ದೂಷಿಸಿಕೊಳ್ಳುತ್ತಾರೆ. ಆದರೆ ಈ ಆಲೋಚನೆ ತಪ್ಪು. ನಾಚಿಕೆಪಡಬೇಡಿ. ಬದಲಾಗಿ, ಅದರಿಂದ ಹೊರಬರಲು ಮಾರ್ಗಗಳನ್ನು ಕಂಡುಕೊಂಡರೆ ಒಳ್ಳೆಯದು. ಇದು ನಿಮಗೆ ಉತ್ತಮ ಭಾವನೆಯನ್ನು ನೀಡುತ್ತದೆ.
 

610

ಆರ್ಗಸಂ ಮೊದಲ ಪರಿಹಾರವಾಗಿದೆ
ಬ್ಲೂ ಬಾಲ್ ಸಮಸ್ಯೆಗೆ ಮೊದಲ ಪರಿಹಾರವೆಂದರೆ ಪರಾಕಾಷ್ಠೆ (orgasm). ಇದು ತುಂಬಾನೆ ಫಾಸ್ಟ್ ಆಗಿರೋ ರಿಸಲ್ಟ್ ನೀಡುತ್ತೆ. ಆದರೆ, ಕೆಲವೊಮ್ಮೆ ನೀವು ಅದರೊಂದಿಗೆ ಕೆಲವು ಸಮಸ್ಯೆಗಳನ್ನು ಸಹ ನಿವಾರಣೆ ಮಾಡಬಹುದು. ಮತ್ತೊಂದು ವಿಷಯ ಏನೆಂದರೆ ಆರ್ಗಸಂ ನಿಂದ (orgasm) ಒತ್ತಡವು ಕಡಿಮೆಯಾಗುತ್ತದೆ.

710

ಆರ್ಗಸಂ ಉಂಟಾದಾಗ, ನಿಮ್ಮ ಖಾಸಗಿ ಭಾಗದಲ್ಲಿ ರಕ್ತವು ಹರಿದುಹೋಗುತ್ತದೆ ಮತ್ತು ನಿಮಗೆ ಆರಾಮವನ್ನು ನೀಡುತ್ತದೆ. ಹಸ್ತಮೈಥುನದಿಂದ ಈ ಕೆಲಸವನ್ನು ಸುಲಭವಾಗಿ ಮಾಡಬಹುದು. ಇದಲ್ಲದೆ, ಸಂಗಾತಿಯೊಂದಿಗೆ ಸೆಕ್ಸ್ ಮಾಡುವ ಮೂಲಕವೂ ಇದನ್ನು ಮಾಡಬಹುದು. ಆದರೆ ಈ ಕೆಲಸಕ್ಕಾಗಿ, ನೀವು ನಿಮ್ಮ ಸಂಗಾತಿಯ ಮೇಲೆ ಅನಗತ್ಯ ಒತ್ತಡವನ್ನು ಹಾಕಬೇಕಾಗಬಹುದು. ಆದ್ದರಿಂದ ಪರಿಸ್ಥಿತಿಗೆ ಅನುಗುಣವಾಗಿ ಕೆಲಸ ಮಾಡಿ.
 

810

ಕೋಲ್ಡ್ ವಾಟರ್ ಸಹಾಯ ಮಾಡುತ್ತದೆ
ಪರಾಕಾಷ್ಠೆ ಸಾಧ್ಯವಾಗದಿದ್ದರೆ, ಕೋಲ್ಡ್ ವಾಟರ್ ಸಹ ನಿಮಗೆ ಸಹಾಯ ಮಾಡುತ್ತದೆ. ಅನೇಕ ಬಾರಿ ಹಸ್ತಮೈಥುನ ಅಥವಾ ಸೆಕ್ಸ್ ಮಾಡಲು ಸಾಧ್ಯವಾಗೋದಿಲ್ಲ. ಈ ಸಮಯದಲ್ಲಿ, ವೃಷಣಗಳ ಮೇಲೆ ಕೋಲ್ಡ್ ವಾಟರ್ (cold water) ಹಾಕುವ ಮೂಲಕ ನಿಮ್ಮ ಸಮಸ್ಯೆ ನಿವಾರಿಸಬಹುದು. ಆರಂಭದಲ್ಲಿ ಇದು ನಿಮಗೆ ಕಷ್ಟಕರವಾಗಿರುತ್ತದೆ. ಆದರೆ ಇದು ಖಂಡಿತವಾಗಿಯೂ ನೋವನ್ನು ನಿವಾರಿಸುತ್ತದೆ.

910

ವ್ಯಾಯಾಮವೂ ಒಂದು ಆಯ್ಕೆ
ವ್ಯಾಯಾಮವು ಈ ಕೆಲಸದ ಮೇಲೆ ಪರಿಣಾಮ ಬೀರುತ್ತದೆಯೋ ಇಲ್ಲವೋ, ಅದನ್ನು ಖಚಿತವಾಗಿ ಹೇಳಲಾಗುವುದಿಲ್ಲ, ಆದರೆ ಇದು ದೊಡ್ಡ ಪ್ರಮಾಣದಲ್ಲಿ ಪರಿಹಾರ ಒದಗಿಸುತ್ತದೆ. ವ್ಯಾಯಾಮ ಮಾಡುವಾಗ, ಜನನಾಂಗಗಳಿಂದ ರಕ್ತ ಹರಿಯುತ್ತದೆ. ಇದು ದೇಹದ ಇತರ ಭಾಗಗಳನ್ನು ತಲುಪುತ್ತದೆ. ಹೀಗೆ ಆದಾಗ ಹೆಚ್ಚಿನ ನೋವು ಉಂಟಾಗೋದಿಲ್ಲ. 

1010

ಸೆಕ್ಸ್ ಗೆ ಸಂಬಂಧಿಸಿದ ವಿಷಯಗಳಿಂದ ನೀವು ನಿಮ್ಮ ಮನಸ್ಸನ್ನು ದೂರ ಮಾಡಬೇಕು. ಆರ್ಗಸಂ ಅನ್ನೋದು ವಿಭಿನ್ನವಾಗಿರುತ್ತೆ. ಬ್ಲೂ ಬಾಲ್ ಉಂಟಾಗಲು ಮುಖ್ಯ ಕಾರಣ, ಲೈಂಗಿಕತೆ ಅಥವಾ ಸೆಕ್ಸ್ ಬಗ್ಗೆ ಯೋಚನೆ ಮಾಡೋದು. ಹಾಗಾಗಿ ನೀವು ಇವುಗಳ ಬಗ್ಗೆ ಯೋಚನೆ ಮಾಡೋದನ್ನು ನಿಲ್ಲಿಸಿದರೆ, ಸಮಸ್ಯೆಯಿಂದ ಹೊರ ಬರಲು ಸಾಧ್ಯವಾಗುತ್ತೆ.  

Read more Photos on
click me!

Recommended Stories