ತುಪ್ಪವು ಬೆಳೆಯುವ ಮಕ್ಕಳಿಗೆ ಶಕ್ತಿಯನ್ನು ನೀಡುತ್ತದೆ. ಆರೋಗ್ಯಕರ ಕೊಬ್ಬನ್ನು ಸಹ ಒದಗಿಸುತ್ತದೆ. ಒಂದು ಗ್ರಾಂ ತುಪ್ಪದಲ್ಲಿ 9 ಕ್ಯಾಲೋರಿಗಳಿರುತ್ತವೆ. ಇದು ಮಕ್ಕಳು ದಿನವಿಡೀ ಚುರುಕಾಗಿ ಮತ್ತು ಶಕ್ತಿಯುತವಾಗಿರಲು ಸಹಾಯ ಮಾಡುತ್ತದೆ.
ತೂಕ ಹೆಚ್ಚಿಸಲು ಸಹಾಯ ಮಾಡುತ್ತೆ
ಒಂದು ವೇಳೆ ಮಗು ದುರ್ಬಲವಾಗಿದ್ದರೆ ಅಥವಾ ಕಡಿಮೆ ತೂಕ ಹೊಂದಿದ್ದರೆ, ನೀವು ಅವರಿಗೆ ತುಪ್ಪವನ್ನು ನೀಡಬಹುದು. ತುಪ್ಪ ನೀಡುವುದರಿಂದ ಅವರ ಆಹಾರದಲ್ಲಿ ಕ್ಯಾಲೋರಿ ಮತ್ತು ಪೋಷಕಾಂಶಗಳು ಹೆಚ್ಚಾಗುತ್ತವೆ. ಇದರಿಂದ ಮಕ್ಕಳು ಆರೋಗ್ಯಕರವಾಗಿ ತೂಕ ಹೆಚ್ಚಿಸಿಕೊಳ್ಳುತ್ತಾರೆ. ತುಪ್ಪ ಸುಲಭವಾಗಿ ಜೀರ್ಣವಾಗುತ್ತದೆ. ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಮಲಬದ್ಧತೆಯಿಂದ ಪರಿಹಾರ ನೀಡಲು ಸಹ ಸಹಾಯ ಮಾಡುತ್ತದೆ.
ಮೆದುಳಿನ ಬೆಳವಣಿಗೆ
ಮೆದುಳಿನ ಹೆಚ್ಚಿನ ಭಾಗವು ಕೊಬ್ಬಿನಿಂದ ಮಾಡಲ್ಪಟ್ಟಿದೆ. ತುಪ್ಪದಲ್ಲಿರುವ ಒಮೆಗಾ-3 ಮತ್ತು ಒಮೆಗಾ-6 ನಂತಹ ಆರೋಗ್ಯಕರ ಕೊಬ್ಬಿನಾಮ್ಲಗಳು ಮೆದುಳಿನ ಸರಿಯಾದ ಬೆಳವಣಿಗೆಗೆ ಬಹಳ ಅವಶ್ಯಕ. ಇದು ಜ್ಞಾಪಕಶಕ್ತಿಯನ್ನು ಚುರುಕುಗೊಳಿಸಲು ಸಹ ಸಹಾಯ ಮಾಡುತ್ತದೆ.