Sabudana health risks: ಈ ಕುರಿತು ಡಾ. ಶುಭಂ ತಮ್ಮ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಪೋಸ್ಟ್ ಶೇರ್ ಮಾಡಿದ್ದು, “ಸಬ್ಬಕ್ಕಿ ಸೋಗಿನಲ್ಲಿ ನಾವು ಸಂಸ್ಕರಿಸಿದ ಸಕ್ಕರೆಯನ್ನು ಸೇವಿಸುತ್ತಿದ್ದೇವೆ. ವೈದ್ಯಕೀಯವಾಗಿ ಹೇಳುವುದಾದರೆ ಸಾಬುದಾನ ಸೂಪರ್‌ಫುಡ್ ಅಲ್ಲ”.
ಸಾಮಾನ್ಯವಾಗಿ ಉಪವಾಸದ ಸಮಯದಲ್ಲಿ ಎಲ್ಲರ ಮೊದಲ ಆಯ್ಕೆಂದರೆ ಸಬ್ಬಕ್ಕಿ ಅಥವಾ ಸಾಬುದಾನ ಆಧಾರಿತ ತಿನಿಸುಗಳು. ಸಬ್ಬಕ್ಕಿ ಹಗುರವಾದ, ಆರೋಗ್ಯಕರ ಆಹಾರವೆಂದು ಹೇಳಲಾಗುತ್ತದೆ. ಹಾಗಾಗಿಯೇ ಇದನ್ನು ಭಾರತದಾದ್ಯಂತ ಹೆಚ್ಚಾಗಿ ಸೇವಿಸಲಾಗುತ್ತದೆ. ಇದರಲ್ಲಿ ಖಿಚಡಿ ಮತ್ತು ವಡೆ ಮಾಡಿದಾಗ ಸಿಗುವ ರುಚಿ ಬಲ್ಲವನೇ ಬಲ್ಲ. ಒಟ್ಟಾರೆ ಎಲ್ಲಾ ದೃಷ್ಟಿಯಿಂದಲೂ ಅನೇಕರು ಇದು ಹಾನಿಕಾರಕವಲ್ಲ ಅಂದುಕೊಳ್ಳುತ್ತಾರೆ.
26
ಆರೋಗ್ಯ ಸಮಸ್ಯೆಗಳಿಗೆ ಕಾರಣ
ಆದರೆ ಗ್ಯಾಸ್ಟ್ರೋಎಂಟರಾಲಜಿಸ್ಟ್ ಮತ್ತು ಹೆಪಟಾಲಜಿಸ್ಟ್ ಡಾ. ಶುಭಮ್ ವತ್ಸ್ಯ ಇದೊಂದು 'ಸ್ಕ್ಯಾಮ್' ಎಂದು ಕರೆದಿದ್ದಾರೆ. ಏಕೆಂದರೆ ಇದರಲ್ಲಿರುವ ಹೆಚ್ಚಿನ ಪಿಷ್ಟ ಅಂಶವು ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಎಚ್ಚರಿಸಿದ್ದಾರೆ.
36
ಸೂಪರ್‌ಫುಡ್ ಅಲ್ವೇ ಅಲ್ಲ
ಈ ಕುರಿತು ಡಾ. ಶುಭಂ ತಮ್ಮ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಪೋಸ್ಟ್ ಶೇರ್ ಮಾಡಿದ್ದು, "ಸಬ್ಬಕ್ಕಿ ಸೋಗಿನಲ್ಲಿ ನಾವು ಸಂಸ್ಕರಿಸಿದ ಸಕ್ಕರೆಯನ್ನು ಸೇವಿಸುತ್ತಿದ್ದೇವೆ. ವೈದ್ಯಕೀಯವಾಗಿ ಹೇಳುವುದಾದರೆ ಸಾಬುದಾನ ಸೂಪರ್‌ಫುಡ್ ಅಲ್ಲ. ಇದು ಕಸಾವ (ಮರಗೆಣಸು) ಮೂಲದಿಂದ ಪಡೆದ ಶುದ್ಧ ಪಿಷ್ಟವಾಗಿದ್ದು, ಸುಮಾರು 90% ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿರುತ್ತದೆ. ಬಹುತೇಕ ಶೂನ್ಯ ಪ್ರೋಟೀನ್, ಫೈಬರ್ ಅಥವಾ ವಿಟಮಿನ್‌ಗಳನ್ನು ಹೊಂದಿದೆ." ಎಂದು ತಿಳಿಸಿದ್ದಾರೆ.
"ಸಬ್ಬಕ್ಕಿಯಲ್ಲಿ 70 ಕ್ಕಿಂತ ಹೆಚ್ಚಿನ ಗ್ಲೈಸೆಮಿಕ್ ಸೂಚ್ಯಂಕವಿದೆ. ಇದು ತಕ್ಷಣವೇ ರಕ್ತದಲ್ಲಿನ ಸಕ್ಕರೆಯ ಏರಿಕೆಗೆ ಕಾರಣವಾಗುತ್ತದೆ. ಆಗಾಗ್ಗೆ ಸೇವನೆಯು ಇನ್ಸುಲಿನ್ ಮಟ್ಟದ ಮೇಲೆ ಪರಿಣಾಮ ಬೀರುತ್ತದೆ" ಎಂದು ಡಾ. ವತ್ಸ್ಯ ಹೇಳುತ್ತಾರೆ.
56
ಆದ್ರೆ ಬ್ಯಾಲೆನ್ಸ್ ಮಾಡ್ಬೋದು
ಸಬ್ಬಕ್ಕಿಯನ್ನು ಕೆಲವು ಆಹಾರದ ಜೊತೆ ಸೇವಿಸುವುದರಿಂದ ಬ್ಯಾಲೆನ್ಸ್ ಮಾಡಬಹುದು ಎಂದು ವೈದ್ಯರು ಹೇಳುತ್ತಾರೆ. "ನೀವು ಅದನ್ನು ಮೊಸರು , ಕಡಲೆಕಾಯಿಗಳು ಮತ್ತು ಸಾಕಷ್ಟು ತರಕಾರಿಗಳೊಂದಿಗೆ ಸೇವಿಸಿದರೆ ಈ ಕಾಂಬಿನೇಶನ್ ಸಬ್ಬಕ್ಕಿ ಗ್ಲೈಸೆಮಿಕ್ ಅನ್ನು ಬ್ಯಾಲೆನ್ಸ್ ಮಾಡಲು ಸಹಾಯ ಮಾಡುತ್ತದೆ" ಎಂದು ವಿವರಿಸಿದ್ದಾರೆ.
66
ಮಧುಮೇಹ ಅಥವಾ ಅಧಿಕ ತೂಕ ಹೊಂದಿದ್ದರೆ
ಕೆಲವು ಜನರು ಹೆಚ್ಚು ಜಾಗರೂಕರಾಗಿರಬೇಕು ಎಂದು ಡಾ. ವತ್ಸ್ಯ ಎಚ್ಚರಿಸುತ್ತಾರೆ. "ನೀವು ಮಧುಮೇಹ ಅಥವಾ ಅಧಿಕ ತೂಕ ಹೊಂದಿದ್ದರೆ ಆಗಾಗ್ಗೆ ಸಬ್ಬಕ್ಕಿ ತಿನ್ನುವುದು ನಿಮ್ಮ ಆರೋಗ್ಯಕ್ಕೆ ಹಾನಿಕಾರಕ" ಎಂದು ವೈದ್ಯರು ಎಚ್ಚರಿಸಿದ್ದಾರೆ.