Liver Cleanse Drinks: ಫ್ಯಾಟಿ ಲಿವರ್ ಕಾಯಿಲೆಗೆ ರಾಮಬಾಣವಂತೆ ಈ 4 ಪಾನೀಯಗಳು

Published : Sep 09, 2025, 12:49 PM IST

ಗ್ಯಾಸ್ಟ್ರೋಎಂಟರಾಲಜಿಸ್ಟ್  ಡಾ. ಸೌರಭ್ ಸೇಥಿ ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಶೇರ್ ಮಾಡಿದ್ದು, ಫ್ಯಾಟಿ ಲಿವರ್ ಕಡಿಮೆ ಮಾಡಲು ಯಾವ ಪಾನೀಯಗಳನ್ನು ಸೇವಿಸಬೇಕೆಂದು ತಿಳಿಸಿದ್ದಾರೆ.

PREV
16
ಸಮಯಕ್ಕೆ ಸರಿಯಾಗಿ ನೋಡಿಕೊಳ್ಳಿ

ಇತ್ತೀಚಿನ ದಿನಗಳಲ್ಲಿ ಫ್ಯಾಟಿ ಲಿವರ್ ಕಾಯಿಲೆ (Fatty liver disease) ಸಾಮಾನ್ಯ ಸಮಸ್ಯೆಯಾಗುತ್ತಿದೆ. ಕೆಟ್ಟ ಜೀವನಶೈಲಿ, ಅನಾರೋಗ್ಯಕರ ಆಹಾರ ಪದ್ಧತಿ ಮತ್ತು ದೈಹಿಕ ಚಟುವಟಿಕೆಗಳ ಕೊರತೆಯಿಂದಾಗಿ ಯಕೃತ್ತಿನಲ್ಲಿ ಅಂದರೆ ಲಿವರ್‌ನಲ್ಲಿ ಹೆಚ್ಚುವರಿ ಕೊಬ್ಬು ಸಂಗ್ರಹವಾಗಲು ಪ್ರಾರಂಭಿಸುತ್ತದೆ. ಸಮಯಕ್ಕೆ ಸರಿಯಾಗಿ ಇದನ್ನು ನೋಡಿಕೊಳ್ಳದಿದ್ದರೆ ಈ ಸಮಸ್ಯೆ ಗಂಭೀರ ಸ್ವರೂಪ ಪಡೆಯಬಹುದು.

26
ಯಾವ ಪಾನೀಯ ಸೇವಿಸಬೇಕು?

ಆದರೆ ಕೆಲವು ಸರಳ ಕ್ರಮದ ಮೂಲಕವೂ ಇದನ್ನು ತಪ್ಪಿಸಬಹುದು. ಹೇಗೆಂದರೆ ನಿಮ್ಮ ಆಹಾರದಲ್ಲಿ ಕೆಲವು ಪಾನೀಯಗಳನ್ನು (Drinks to Reduce Fatty Liver) ಸೇರಿಸಿಕೊಳ್ಳುವ ಮೂಲಕವೂ ನೀವು ಫ್ಯಾಟಿ ಲಿವರ್ ಸಮಸ್ಯೆಯನ್ನು ತೊಡೆದುಹಾಕಬಹುದು. ಹಾರ್ವರ್ಡ್‌ನಲ್ಲಿ ತರಬೇತಿ ಪಡೆದ ಗ್ಯಾಸ್ಟ್ರೋಎಂಟರಾಲಜಿಸ್ಟ್ (Gastroenterologist) ಡಾ. ಸೌರಭ್ ಸೇಥಿ (Dr. Saurabh Sethi) ಈ ಪಾನೀಯಗಳ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಶೇರ್ ಮಾಡಿದ್ದು, ಫ್ಯಾಟಿ ಲಿವರ್ ಕಡಿಮೆ ಮಾಡಲು ಯಾವ ಪಾನೀಯಗಳನ್ನು ಸೇವಿಸಬೇಕೆಂದು ತಿಳಿಸಿದ್ದಾರೆ.

36
ಬ್ಲಾಕ್ ಟೀ (Black tea)

ಹಾಲು ಮತ್ತು ಸಕ್ಕರೆ ಇಲ್ಲದೆ ಬ್ಲಾಕ್ ಟೀ ಕುಡಿಯುವುದರಿಂದ ಬೆಳಗಿನ ಆಯಾಸ ನಿವಾರಣೆಯಾಗುವುದಲ್ಲದೆ, ಫ್ಯಾಟಿ ಲಿವರ್ ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ಲಿವರ್‌ನಲ್ಲಿ ಕೊಬ್ಬು ಶೇಖರಣೆ ಮತ್ತು ಉರಿಯೂತವನ್ನು ಕಡಿಮೆ ಮಾಡಲು ಸಹಾಯಕವಾಗಿವೆ ಎಂದು ಕಂಡುಬಂದಿದೆ. ನಿಯಮಿತವಾಗಿ ಬ್ಲಾಕ್ ಟೀ ಕುಡಿಯುವುದರಿಂದ ಲಿವರ್ ಕಾರ್ಯ ಸುಧಾರಿಸುತ್ತದೆ ಮತ್ತು ಇನ್ಸುಲಿನ್ ಪ್ರತಿರೋಧವೂ ಕಡಿಮೆಯಾಗುತ್ತದೆ. ದಿನಕ್ಕೆ ಒಂದು ಅಥವಾ ಎರಡು ಕಪ್ ಬ್ಲಾಕ್ ಟೀ ಕುಡಿಯುವುದು ಆರೋಗ್ಯಕರವೆಂದು ಸಾಬೀತಾಗಿದೆ.

46
ಗ್ರೀನ್ ಟೀ (Green tea)

ಗ್ರೀನ್ ಟೀ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದು ಎಪಿಗಲ್ಲೊಕಾಟೆಚಿನ್ ಗ್ಯಾಲೇಟ್ (Epigallocatechin gallate) ಎಂಬ ಶಕ್ತಿಶಾಲಿ ಉತ್ಕರ್ಷಣ ನಿರೋಧಕದಲ್ಲಿ ಸಮೃದ್ಧವಾಗಿದೆ. ಈ ಸಂಯುಕ್ತವು ಲಿವರ್‌ನಲ್ಲಿ ಕೊಬ್ಬಿನ ಚಯಾಪಚಯ ಕ್ರಿಯೆ(Fat metabolism)ಯನ್ನು ಉತ್ತೇಜಿಸುತ್ತದೆ. ಗ್ರೀನ್ ಟೀ ಲಿವರ್ ಕಾರ್ಯವನ್ನು ಸುಧಾರಿಸುತ್ತದೆ ಮತ್ತು ಫ್ಯಾಟಿ ಲಿವರ್ ಕಾಯಿಲೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ.

56
ಬ್ಲಾಕ್ ಕಾಫಿ (Black coffee)

ನೀವು ಕಾಫಿ ಕುಡಿಯಲು ಇಷ್ಟಪಡುತ್ತಿದ್ದರೆ, ನಿಮಗೊಂದು ಗುಡ್ ನ್ಯೂಸ್ ಇದೆ. ಬ್ಲಾಕ್ ಕಾಫಿಯನ್ನು ಫ್ಯಾಟಿ ಲಿವರ್‌ಗೆ ರಾಮಬಾಣವೆಂದು ಪರಿಗಣಿಸಲಾಗುತ್ತದೆ. ಹಾಲು ಮತ್ತು ಸಕ್ಕರೆ ಇಲ್ಲದೆ ಕಾಫಿಯಲ್ಲಿ ಕ್ಲೋರೊಜೆನಿಕ್ ಆಮ್ಲದಂತಹ ಸಂಯುಕ್ತಗಳು ಕಂಡುಬರುತ್ತವೆ. ಇವು ಉರಿಯೂತ ಮತ್ತು ಉತ್ಕರ್ಷಣ ನಿರೋಧಕ ಗುಣಗಳಿಂದ ಸಮೃದ್ಧವಾಗಿವೆ . ಈ ಸಂಯುಕ್ತಗಳು ಯಕೃತ್ತಿನಲ್ಲಿ ಫೈಬ್ರೋಸಿಸ್ ಅಪಾಯವನ್ನು ಕಡಿಮೆ ಮಾಡುತ್ತದೆ. ಇದು ಉರಿಯೂತವನ್ನು ಕಡಿಮೆ ಮಾಡುವ ಮೂಲಕ ಲಿವರ್‌ ಅನ್ನು ಆರೋಗ್ಯಕರವಾಗಿರಿಸುತ್ತದೆ. ಆದರೆ ದಿನಕ್ಕೆ 1-2 ಕಪ್‌ಗಳಿಗಿಂತ ಹೆಚ್ಚು ಕಪ್ಪು ಕಾಫಿ ಕುಡಿಯಬೇಡಿ.

66
ಮಚ್ಚಾ ಟೀ (Matcha tea)

ಮಚ್ಚಾದಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿದ್ದು, ಇದು ಫ್ಯಾಟಿ ಲಿವರ್ ಕಡಿಮೆ ಮಾಡಲು ಮತ್ತು ಅದರ ಕಾರ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ಲಿವರ್ ಡಿಟಾಕ್ಸಿಫಿಕೇಶನ್‌ಗೂ ಸಹಾಯ ಮಾಡುತ್ತದೆ . ಪ್ರತಿದಿನ ಒಂದು ಕಪ್ ಮಚ್ಚಾ ಚಹಾ ಕುಡಿಯುವುದರಿಂದ ಫ್ಯಾಟಿ ಲಿವರ್‌ನಿಂದ ಪರಿಹಾರ ಸಿಗುತ್ತದೆ.

Read more Photos on
click me!

Recommended Stories