ದೇವರ ಪ್ರಿಯ ಶಂಖ ಪುಷ್ಫದಲ್ಲಿದೆ ಹಲವು ಪ್ರಯೋಜನ

Suvarna News   | Asianet News
Published : Oct 21, 2021, 04:18 PM IST

ಬೇಸಿಗೆ ಮತ್ತು ಮಾನ್ಸೂನ್ ಮಧ್ಯಾವಧಿಯಲ್ಲಿ ಅರಳುವ ಏಷ್ಯಾದ ಹೂವು ಶಂಖಪುಷ್ಪ. ಇದನ್ನು ಗಿಡಮೂಲಿಕೆ ಔಷಧದ ಭಾಗವೆಂದು ಪರಿಗಣಿಸಲಾಗುತ್ತದೆ. ಶಂಖಾಕಾರದ ಹೂವು, ಏಷ್ಯನ್ ಪಾರಿವಾಳರೆಕ್ಕೆಗಳು, ಶಂಖಿನಿ, ಕಂಬುಮಾಲಿನಿ, ಸದಾಫುಲಿ ಮತ್ತು ಸಂಖಾಫುಲಿ ಎಂದೂ ಕರೆಯಲ್ಪಡುತ್ತದೆ, ಇದನ್ನು ಮೆಮೊರಿ ಬೂಸ್ಟರ್ ಮತ್ತು ಮೆದುಳಿನ ಟಾನಿಕ್ ಆಗಿ ಜನಪ್ರಿಯವಾಗಿ ಬಳಸಲಾಗುತ್ತದೆ. ಆಯುರ್ವೇದದಲ್ಲಿ, ಈ ಹೂವನ್ನು ಒಬ್ಬರ ಮನಸ್ಸನ್ನು ಶಾಂತಗೊಳಿಸಲು ಬಳಸಲಾಗುತ್ತದೆ.

PREV
112
ದೇವರ ಪ್ರಿಯ ಶಂಖ ಪುಷ್ಫದಲ್ಲಿದೆ ಹಲವು ಪ್ರಯೋಜನ

ಶಂಖ ಪುಷ್ಪ(Shankapushpa) ದೇವರಿಗೆ ಪ್ರಿಯವಾದ ಹೂವು. ಇದನ್ನು ದೇವರ ಪೂಜೆಗೆ ಮಾತ್ರವಲ್ಲದೇ ಶಂಖ ಪುಷ್ಪ ಹೂವು ಔಷಧೀಯ ಗುಣಗಳನ್ನು ಹೊಂದಿದೆ. ಇತ್ತೀಚೆಗೆ ರೈತರು ಶಂಖ ಪುಷ್ಪ ಬೆಳೆಯುವಲ್ಲಿ ಗಮನಹರಿಸುತ್ತಿದ್ದಾರೆ. ಆ ಮೂಲಕ ರೈತರು ಉತ್ತಮ ಆದಾಯವನ್ನು ಪಡೆಯುತ್ತಿದ್ದಾರೆ. ಶಂಖ ಪುಷ್ಪವನ್ನು ವಿಶೇಷವಾಗಿ ದಕ್ಷಿಣ ಮತ್ತು ಪೂರ್ವ ಭಾರತದಲ್ಲಿ ವ್ಯಾಪಕವಾಗಿ ಬೆಳೆಯಲಾಗುತ್ತದೆ. 

212

ಶಂಖ ಪುಷ್ಪ ಹೂವಿನ ಪ್ರಯೋಜನಗಳು(Benefits):

ಈ ಹೂವಿನ ಶಕ್ತಿಯುತ ಆಂಟಿ ಆಕ್ಸಿಡೆಂಟುಗಳು ಏಕಾಗ್ರತೆಗೆ ಸಹಾಯ ಮಾಡುತ್ತದೆ ಮತ್ತು ನಿಮ್ಮ ಮೆದುಳನ್ನು ಶಾಂತಗೊಳಿಸುತ್ತದೆ. ಇದು ವಿದ್ಯಾರ್ಥಿಗಳಿಗೆ ಅವರ ಪರೀಕ್ಷೆಯ ಸಿದ್ಧತೆಯ ಸಮಯದಲ್ಲಿ ಪ್ರಯೋಜನಕಾರಿಯಾಗಬಹುದು.

312

ಶಂಖ ಪುಷ್ಪ ಹೂವು, ಎಲೆ (Leaves)ಮತ್ತು ಬೇರುಗಳಿಂದ ಮಾಡಿದ ಪುಡಿಯನ್ನು ಸೇವಿಸಿದರೆ ಬುದ್ಧಿ ಶಕ್ತಿಯನ್ನು ಹೆಚ್ಚಿಸಬಹುದು. ಇದು ವೃಧ್ದಾಪ್ಯದ ಮರೆವಿನ ಕಾಯಿಲೆಯಿಂದ ರಕ್ಷಿಸುತ್ತದೆ ಎಂದು ತಜ್ಞರು ತಿಳಿಸುತ್ತಾರೆ. ಆದುದರಿಂದ ಇದನ್ನು ನಿಯಮಿತವಾಗಿ ಬಳಕೆ ಮಾಡುವುದು ಉತ್ತಮ.

412
kids

ಮೆದುಳಿನ(Brain) ಕಾರ್ಯನಿರ್ವಹಣೆಯನ್ನು ಹೆಚ್ಚಿಸಲು ಶಂಖಪುಷ್ಪ ಸಾಂಪ್ರದಾಯಿಕ ಪರಿಹಾರವಾಗಿದೆ. ಇದರಲ್ಲಿ ಇರುವ ಪ್ರಬಲ ಉತ್ಕರ್ಷಣ ನಿರೋಧಕಗಳು ಮತ್ತು ಫ್ಲೇವನಾಯ್ಡ್ ಗಳು ವ್ಯಕ್ತಿಯ ಸ್ಮರಣೆ ಸಾಮರ್ಥ್ಯ, ಗಮನ, ಏಕಾಗ್ರತೆ, ಶಾಂತತೆ, ಜಾಗರೂಕತೆಯನ್ನು ಸುಧಾರಿಸುತ್ತವೆ. 

512

ಮೆದುಳಿನ ಟಾನಿಕ್(Tonic) ಮತ್ತು ಪ್ರಚೋದಕವಾಗಿರುವುದರಿಂದ, ಶಂಖಪುಷ್ಪಿಯನ್ನು ತೆಗೆದುಕೊಳ್ಳುವ ಜನರು ಸ್ಮರಣೆ, ತಾರ್ಕಿಕತೆ, ಸಮಸ್ಯೆ-ಪರಿಹಾರ ಮತ್ತು ಇತರ ಅರಿವಿನ ಸಾಮರ್ಥ್ಯಗಳನ್ನು ಸುಧಾರಿಸಿದ್ದಾರೆ. ಸಸ್ಯದಲ್ಲಿರುವ ನರರಕ್ಷಣಾತ್ಮಕ ಅಂಶಗಳು ಸ್ಮರಣೆಯ ನಷ್ಟವನ್ನು ತಡೆಯುತ್ತವೆ ಮತ್ತು ಮೆದುಳಿನಿಂದ ಉದ್ವಿಗ್ನತೆಯನ್ನು ನಿವಾರಿಸುತ್ತವೆ.

612

ಶಂಖ ಪುಷ್ಪದಲ್ಲಿ ಕಂಡುಬರುವ ಆರ್ಗನೆಲೋಲಿನ್ ಎಂಬ ವಸ್ತುವು ಮೆದುಳಿನ ಕಾರ್ಯದ ಮೇಲೆ ಕೆಲಸ(Work) ಮಾಡುತ್ತದೆ ಮತ್ತು ಮರೆವು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಲ್ಝಮೈರ್ ಮೊದಲಾದ ಮರೆವಿನ ಸಮಸ್ಯೆಗಳನ್ನು ಶಂಖಪುಷ್ಪ ನಿವಾರಣೆ ಮಾಡುತ್ತದೆ ಎನ್ನಲಾಗುತ್ತದೆ. 

712

ಇತ್ತಿಚಿನ ದಿನಗಳಲ್ಲಿ ಹೆಚ್ಚಿನ ಜನರು ಖಿನ್ನತೆ(Depression) ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದರ ನಿವಾರಣೆಗೆ ಶಂಖಪುಷ್ಪ ಹೂವು ಉತ್ತಮ ಪರಿಹಾರ. ಇದು ನಿದ್ರಾಹೀನತೆ ಮತ್ತು ಖಿನ್ನತೆಯಂತಹ ಸಮಸ್ಯೆಗಳಿಗೆ ಚೆನ್ನಾಗಿ ಕೆಲಸ ಮಾಡುತ್ತದೆ.

812

ಗ್ಯಾಸ್ಟ್ರಿಕ್ (Gastric)ಸಮಸ್ಯೆ ನಿವಾರಣೆ ಮಾಡಲು ಶಂಖಪುಷ್ಪ ಹೂವು ಉತ್ಕರ್ಷಣ ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ. ಇದು ಚರ್ಮವನ್ನು ರಕ್ಷಿಸುತ್ತದೆ. ಅಷ್ಟೇ ಅಲ್ಲ ಈ ಹೂವು ಉಸಿರಾಟದ ಕಾಯಿಲೆ ಮತ್ತು ಹೃದಯ ರೋಗಗಳನ್ನು ಗುಣಪಡಿಸುತ್ತದೆ.

912

ಈ ಸಾಂಪ್ರದಾಯಿಕ ಗಿಡಮೂಲಿಕೆಯಲ್ಲಿ ಕಂಡುಬರುವ ಜೀರ್ಣಕಾರಿ ಗುಣಗಳು ಜೀರ್ಣಕ್ರಿಯೆ(Digestion)ಯನ್ನು ಸುಧಾರಿಸುವಲ್ಲಿ ಅತ್ಯಂತ ಪ್ರಯೋಜನಕಾರಿಎಂದು ಕಂಡುಬಂದಿದೆ. ಇದು ಜೀರ್ಣರಸಗಳ ಸ್ರವಿಸುವಿಕೆಯನ್ನು ಉತ್ತೇಜಿಸುತ್ತದೆ, ಆ ಮೂಲಕ ಅಗತ್ಯ ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ. 

1012

ಶಂಖ ಪುಷ್ಪ ಹೂವಿನ ಗಿಡಮೂಲಿಕ ಸೇವನೆ ಮಾದುವುದರಿಂದ  ಕಿಬ್ಬೊಟ್ಟೆ ನೋವು, ಕಿಬ್ಬೊಟ್ಟೆಯ ಉದ್ವಿಗ್ನತೆ, ಅಲ್ಸರೇಟಿವ್ ಕೊಲೈಟಿಸ್ ಮತ್ತು ಕೆರಳಿಸುವ ಕರುಳಿನ ಸಿಂಡ್ರೋಮ್ ನ ಲಕ್ಷಣಗಳಿಗೆ ಉತ್ತಮ ಚಿಕಿತ್ಸೆ ನೀಡುತ್ತದೆ. ಉತ್ತಮ ಆರೋಗ್ಯ(Health)ವನ್ನೂ ನೀಡುತ್ತದೆ. 

1112

ಗಾಯದ ಸಮಸ್ಯೆಗಳನ್ನು ಪರಿಹರಿಸಲು ಸಹ ಇದು ಉತ್ತಮ ಪರಿಹಾರವಾಗಿದೆ. ಸಾಮಾನ್ಯವಾಗಿ ಮೂಗೇಟುಗಳು ಮತ್ತು ಮೂಳೆ(Bone) ಊದಿಕೊಂಡಾಗ ಶಂಖ ಪುಷ್ಪದ ಎಲೆಯ ರಸವನ್ನು ಹಾಕಿ. ಇದರಿಂದ ಊತ ಕಡಿಮೆಯಾಗುತ್ತದೆ.

 

1212

ಆಯುರ್ವೇದದಲ್ಲಿ(Ayurveda) ಹಲವು ಶತಮಾನಗಳಿಂದ ಇದನ್ನು ವಿವಿಧ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತಿದೆ. ಮೂತ್ರ ವಿಸರ್ಜನೆ ಸಮಸ್ಯೆಗೆ ರಾಮಬಾಣವಾಗಿದೆ. ಈ ಹೂವಿನ ರಸವನ್ನು ಅಥವಾ ಇದರ ಪುಡಿಯನ್ನು ಆಹಾರದಲ್ಲಿ ಬಳಕೆ ಮಾಡುವ ಮೂಲಕ ಮೂತ್ರ ವಿಸರ್ಜನೆ ಸಮಸ್ಯೆ ನಿವಾರಣೆ ಮಾಡಬಹುದು.

click me!

Recommended Stories